Back
Home » ಇತ್ತೀಚಿನ
'ವಿಂಡೊಸ್ 7' ಬಳಕೆದಾರರಿಗೆ ಮೈಕ್ರೋಸಾಫ್ಟ್ ಕೊಡಲಿದೆ ಶಾಕ್!
Gizbot | 17th Jan, 2019 12:12 PM

ಮೈಕ್ರೋಸಾಫ್ಟ್ ಹೆಸರನ್ನು ಯಾರು ಕೇಳಿಲ್ಲ ಹೇಳಿ? ಕಂಪ್ಯೂಟರ್‌ ಬಳಸುವ ಪ್ರತಿಯೊಬ್ಬರಿಗೂ ಮೈಕ್ರೋಸಾಫ್ಟ್ ಹೆಸರು ಚಿರಪರಿಚಿತ. ಕಂಪ್ಯೂಟರ್ ಆಪ್‌ರೇಟಿಂಗ್ ಸಾಫ್ಟ್‌ವೇರ್ ತಯಾರಿಕಾ ಸಂಸ್ಥೆ ಆಗಿರುವ ಮೈಕ್ರೋಸಾಫ್ಟ್ ಸಂಸ್ಥೆಯು ಇದೀಗ ವಿಂಡೋಸ್‌ ಬಳಕೆದಾರರಿಗೆ ಬಿಗ್ ಶಾಕ್ ಕೊಡುವುದು ಗ್ಯಾರಂಟಿ. ಹೌದು, ಮೈಕ್ರೋಸಾಫ್ಟ್ ಕೂಡ ಈ ಶಾಕ್ ನೀಡಲು ತಯಾರಾಗಿದೆ.!

ಮೈಕ್ರೋಸಾಫ್ಟ್ ಸಂಸ್ಥೆ ತನ್ನ ಹಳೆಯ ವಿಂಡೊಸ್ 7 ಆಪ್ರೆಟಿಂಗ್ ಸಿಸ್ಟಮ್‌ಗೆ 14 ಜನವರಿ 2020ಯಲ್ಲಿ ವಿದಾಯ ಹೇಳಲು ರೆಡಿಯಾಗಿದೆ. ಅಂದರೇ ಮುಂದಿನ ವರ್ಷದ ಆರಂಭದಿಂದ ವಿಂಡೋಸ್ 7 ಕಾರ್ಯನಿರ್ವಹಿಸುವುದಿಲ್ಲ ಎಂದು ಕಂಪೆನಿ ತಿಳಿಸಿದೆ. ಹಾಗಾಗಿ, ಯಾರೆಲ್ಲಾ ಇನ್ನೂ ಮೈಕ್ರೋಸಾಫ್ಟ್ ವಿಂಡೊಸ್ 7 ಆಪ್ರೆಟಿಂಗ್ ಸಿಸ್ಟಮ್‌ ಅನ್ನೇ ಬಳಸುತ್ತಿದ್ದಿರೋ ಆದಷ್ಟು ಬೇಗ ಮೈಕ್ರೋಸಾಫ್ಟ್ ವಿಂಡೊಸ್ 10 ವರ್ಷನ್‌ಗೆ ಅಪ್‌ಗ್ರೇಡ್ ಆಗಬೇಕಿದೆ.

ಮೈಕ್ರೋಸಾಫ್ಟ್ ಸಂಸ್ಥೆ ಈ ಹಿಂದೆಯೇ ವಿಂಡೊಸ್ 7 ಅಪ್‌ಗ್ರೇಡ್‌ ಮಾಡಿಕೊಳ್ಳಲು ಮಾಹಿತಿ ನೀಡಿತ್ತು ಮತ್ತು ಅಪ್‌ಗ್ರೇಡ್‌ ಮಾಡಿಕೊಳ್ಳಲು ಅದಕ್ಕೆ ಬಹಳಷ್ಟು ಸಮಯಾವಕಾಶವನ್ನು ನೀಡುತ್ತಾ ಬಂದಿತ್ತು. ಆದರೆ ಇದೀಗ ಕಂಪೆನಿ ಮುಂದಿನ ವರ್ಷದ ಆರಂಭದಿಂದಲೇ ವಿಂಡೊಸ್‌7 ಗೆ ಆಪರೇಟಿಂಗ್‌ಗೆ ಸಿಸ್ಟಮ್‌ಗೆ ಮೈಕ್ರೋಸಾಫ್ಟ್‌ನಿಂದ ಯಾವುದು ಸಪೋರ್ಟ್ ಇರುವುದಿಲ್ಲ ಎಂದು ಅಧಿಕೃತವಾಗಿ ತಿಳಿಸಿದೆ.

ವಿಂಡೊಸ್ 10 ವರ್ಷನ್‌ಗೆ ಅಪ್‌ಗ್ರೇಡ್‌ ಮಾಡಿಕೊಳ್ಳಲೇಬೇಕಿದ್ದು, ಒಂದು ವೇಳೆ ಅಪ್‌ಗ್ರೇಡ್‌ ಮಾಡಿಕೊಳ್ಳದಿದ್ದರೇ ನಿಮ್ಮ ಕಂಪ್ಯೂಟರ್ ಭದ್ರತಾ ದೃಷ್ಠಿಯಿಂದ ಮತ್ತು ಸಂಸ್ಥೆಯ ಮುಂದಿನ ಯಾವುದೇ ಫೀಚರ್‌ಗಳನ್ನು ವಿಂಡೊಸ್ 7 ನಲ್ಲಿ ಇನ್ನು ಮುಂದೆ ಪಡೆಯಲು ಸಾಧ್ಯವಿರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ. ವಿಂಡೊಸ್ 7ನಿಂದ ವಿಂಡೊಸ್ 10 ವರೆಗಿನ ದಾರಿಯ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ ನೋಡೋಣ.

   
 
ಹೆಲ್ತ್