Back
Home » ಇತ್ತೀಚಿನ
ಆಸೂಸ್ ಝೆನ್ ಸ್ಮಾರ್ಟ್‌ಪೋನ್‌ಗಳ ಮೇಲೆ 8000 ರೂ.ವರೆಗೂ ಡಿಸ್ಕೌಂಟ್!
Gizbot | 17th Jan, 2019 01:30 PM
 • ಫ್ಲಿಪ್‌ಕಾರ್ಟ್ ಡಿಸ್ಕೌಂಟ್

  ಫ್ಲಿಪ್‌ಕಾರ್ಟ್‌ನ ಈ ಮೇಳದಲ್ಲಿ ಆಸೂಸ್‌ನ 6GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯದ ಝೆನ್‌ಫೋನ್ 5Z ಬೆಲೆ 32,999ರೂ.ಗಳಿದ್ದು, ಫ್ಲಿಪ್‌ಕಾರ್ಟ್ ನೀಡುವ 8000ರೂ.ಗಳು ಡಿಸ್ಕೌಂಟ್‌ನಿಂದ ಈ ಸ್ಮಾರ್ಟ್‌ಫೋನ್‌ 24,999ರೂ.ಗಳಿಗೆ ಸಿಗಲಿದೆ. ಹಾಗೇ 8GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯದ ಝೆನ್‌ಫೋನ್ 5Z 28,999ರೂಪಾಯಿಗಳಿಗೆ ದೊರೆಯಲಿದೆ. ಇನ್ನೂ ಆಸೂಸ್ ಝೆನ್‌ಫೋನ್ ಮ್ಯಾಕ್ಸ್ M2 ಸ್ಮಾರ್ಟ್‌ಫೋನಿನ ದರ 9,999ರೂ.ಗಳಾಗಿದೆ. ಫಿಪ್‌ಕಾರ್ಟ್‌ ಆಫರ್‌ ಉತ್ಸವದಲ್ಲಿ 8,999ರೂಪಾಯಿಗಳಿಗೆ ಸಿಗಲಿದೆ ಮತ್ತು ಆಸೂಸ್ ಝೆನ್‌ಫೋನ್ ಮ್ಯಾಕ್ಸ್ M1 ಹಾಗೂ ಲೈಟ್ L1, ಸ್ಮಾರ್ಟ್‌ಫೋನಗಳ ಮೇಲೆ ನೀಡಿರುವ 1000ರೂ.ಗಳ ರಿಯಾಯಿತಿ ಲಾಭವನ್ನು ಗ್ರಾಹಕರು ಪಡೆಯಬಹುದಾಗಿದೆ.


 • ಬ್ಯಾಂಕ್‌ ಆಫರ್

  ಈ ಮೇಳದಲ್ಲಿ ಬ್ಯಾಂಕ್‌ ಸಹ ಡಿಸ್ಕೌಂಟ್ ನೀಡಲು ಮುಂದಾಗಿದ್ದು, ಎಸ್.ಬಿ.ಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಬಳಸಿ ಆಸೂಸ್ ಝೆನ್ ಸ್ಮಾರ್ಟ್‌ಫೋನ್ ಖರೀದಿಸಿದರೇ ಶೇ. 10% ಡಿಸ್ಕೌಂಟ್ ನೀಡುವುದಾಗಿ ಬ್ಯಾಂಕ್ ತಿಳಿಸಿದೆ. ಫ್ಲಿಪ್‌ಕಾರ್ಟ್‌ ನೀಡುವ ಡಿಸ್ಕೌಂಟ್ ಜೊತೆಗೆ ಈ 10% ಡಿಸ್ಕೌಂಟ್ ಸಹ ಗ್ರಾಹಕರಿಗೆ ದೊರೆಯಲಿದೆ. ಇದರೊಂದಿಗೆ ನೋ ಕಾಸ್ಟ್‌ ಇಎಮ್ಐ ಅವಕಾಶವನ್ನು ನೀಡಲಾಗಿದೆ.


 • ಆಸೂಸ್ ಝೆನ್‌ಫೋನ್ 5Z, ಫೀಚರ್ಸ್‌ಗಳ ಏನು.

  * 1080 x 2246 ರೆಸಲ್ಯೂಶನೊಂದಿಗೆ 6.2 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ. ಜತೆಗೆ ಗೊರಿಲ್ಲಾ ಗ್ಲಾಸ್ ರಕ್ಷಣೆ ಇದೆ.
  * ಆಕ್ಟಾಕೋರ್‌ಪ್ರೊಸೆಸರ್ ಹೊಂದಿದೆ.
  * 6GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿರುವ ಜತೆಗೆ 2TB ವರೆಗೂ ಎಸ್‌ಡಿ ಕಾರ್ಡ್‌ ವಿಸ್ತರಿಸಬಹುದು.
  * ಹಿಂಭಾಗದಲ್ಲಿ 13 ಮೆಗಾಪಿಕ್ಸಲ್ ಮತ್ತು 8ಮೆಗಾಪಿಕ್ಸಲ್ ಹೊಂದಿರುವ ಎರಡು ಕ್ಯಾಮೆರಾ ಇದ್ದು, ಸೆಲ್ಫೀಗಾಗಿ 8ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ.
  * ಬ್ಯಾಟರಿ ಸಾಮರ್ಥ್ಯ 3300mAh ಇರಲಿದೆ.


 • ಆಸೂಸ್ ಝೆನ್‌ಫೋನ್ M2 ವಿಶೇಷತೆಗಳು

  * 6.2 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ. ಜತೆಗೆ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಪಡೆದಿದೆ.
  * 1.8GHz ಆಕ್ಟಾಕೋರ್‌ ಪ್ರೊಸೆಸರ್ ಹೊಂದಿದೆ.
  * 3GB RAM ಮತ್ತು 32GB ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿರುವ ಜತೆಗೆ 2TB ವರೆಗೂ ಎಸ್‌ಡಿ ಕಾರ್ಡ್‌ ವಿಸ್ತರಿಸಬಹುದು.
  * ಹಿಂಬದಿಯಲ್ಲಿ 13+2 ಮೆಹಾಪಿಕ್ಸಲ್‌ನ ಎರಡು ಕ್ಯಾಮೆರಾ ನೀಡಲಾಗಿದ್ದು, 8 ಮೆಗಾಪಿಕ್ಸಲ್ ಕ್ಯಾಮೆರಾವನ್ನು ಸೆಲ್ಫೀಗೆ ನೀಡಲಾಗಿದೆ.
  * 4000mAh ಸಾಮರ್ಥ್ಯದ ಉತ್ತಮ ಬ್ಯಾಟರಿ ಹೊಂದಿದೆ.
ಜನಪ್ರಿಯ ಆಸೂಸ್ ಕಂಪನಿಯು ಝೆನ್ ಸ್ಮಾರ್ಟ್‌ಫೋನ್ ಖರೀದಿಗೆ ಇದೇ ಸೂಕ್ತ ಸಮವಾಗಿದ್ದು, ಆಸೂಸ್‌ನ ಅತ್ಯುತ್ತಮ ಸ್ಮಾರ್ಟ್‌ಪೋನ್‌ಗಳನ್ನು ಖರೀದಿಸಲು ಫ್ಲಿಪ್‌ಕಾರ್ಟ್ ಆನ್‌ಲೈನ್‌ ತಾಣಕ್ಕೆ ಭೇಟಿ ನೀಡಿರಿ. ಏಕೆಂದರೆ, ಗಣರಾಜ್ಯೋತ್ಸವದ ಅಂಗವಾಗಿ ಫಿಪ್‌ಕಾರ್ಟ್ ಭಾರಿ ಸೇಲ್ ಮೇಳವನ್ನು ಆಯೋಜಿಸಿದ್ದು, ಈ ಮೇಳದಲ್ಲಿ ಆಸೂಸ್ ಝೆನ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡಿದೆ.

ಆಸೂಸ್ ಸಂಸ್ಥೆಯ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಾದ ಆಸೂಸ್ ಝೆನ್‌ಫೋನ್ 5Z, ಝೆನ್‌ಫೋನ್ M2 ಮತ್ತು ಝೆನ್‌ಫೋನ್ L1, ಫೋನ್‌ಗಳ ಮೇಲೆ ಭರ್ಜರಿ ಬೆಲೆ ಕಡಿತದ ಆಫರ್‌ಗಳನ್ನು ಫ್ಲಿಪ್‌ಕಾರ್ಟ್ ನೀಡುತ್ತಿದೆ. ಇದರೊಂದಿಗೆ ನೋ ಕಾಸ್ಟ್ ಇಎಮ್ಐ ಆಫರ್‌ಗಳು ಲಭ್ಯವಿರುತ್ತವೆ ಹಾಗೂ ಪ್ರಮುಖ ಬ್ಯಾಂಕ್‌ಗಳು ಸಹ ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ರಿಯಾಯಿತಿ ನೀಡಲು ಸಜ್ಜಾಗಿವೆ. ಹಾಗಾದರೆ, ಏನಿದು ಭರ್ಜರಿ ಆಫರ್ಸ್ ಎಂಬುದನ್ನು ಮುಂದೆ ಓದಿ ತಿಳಿಯಿರಿ.

   
 
ಹೆಲ್ತ್