Back
Home » ಇತ್ತೀಚಿನ
ಶಾಕಿಂಗ್ ನ್ಯೂಸ್!..ಇನ್ಮುಂದೆ ಅಪರಿಚಿತ ಕರೆಗಳಿಗೆ ಉತ್ತರಿಸಲೇಬೇಡಿ!..ಏಕೆ ಗೊತ್ತಾ?
Gizbot | 17th Jan, 2019 04:07 PM
 • ಐಪಿ (ಇಂಟರ್‌ನೆಟ್‌ ಪ್ರೋಟೊಕಾಲ್‌) ಫೋನ್‌ ವಂಚನೆ!

  ಇತ್ತೀಚಿನ ಸುದಾರಿತ ತಂತ್ರಜ್ಞಾನ ಐಪಿ ಫೋನ್‌ನಿಂದ ಕರೆ ಬಂದಾಗ ಸ್ವೀಕರಿಸಿದರೆ, ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಿರುವ ಬ್ಯಾಂಕಿಂಗ್ ಕಿರು ತಂತ್ರಾಂಶಗಳು, ವಾಲೆಟ್‌ಗಳನ್ನು ತಮ್ಮ ನಿಯಂತ್ರಣಕ್ಕೆ ಪಡೆಯಲು ಕಳ್ಳರಿಗೆ ದಾರಿ ಸಿಗುತ್ತದೆ. ಒಂದು ನಿಮಿಷ ಕರೆ ಚಾಲನೆಯಲ್ಲಿದ್ದರೂ ಸಾಕು, ಸುಲಭವಾಗಿ ಹಣಕ್ಕೆ ಕನ್ನ ಹಾಕಬಹುದು ಎಂದು ಪೊಲೀಸರು ತಿಳಿಸಿದ್ದಾರೆ.


 • ಇದೇ ರೀತಿ 200 ಕೋಟಿ ವಂಚನೆ!

  ಈ ಐಪಿ ಫೋನ್‌ ಮೂಲಕವೇ ಕರೆ ಮಾಡಿ ಬಾಬ್‌ ಆಗಸ್ಟಿನ್ ಎಂಬುವವನು ಸೌರ ವಿದ್ಯುತ್ ಯೋಜನೆ ಹೆಸರಿನಲ್ಲಿ ದೇಶದಾದ್ಯಂತ ಹಲವು ಉದ್ಯಮಿಗಳಿಗೆ ಮಸಿ ಬಳಿದಿದ್ದಾರೆ ಎಂದು ತಿಳಿದುಬಂದಿದೆ. ಇದು ದೊಡ್ಡ ಮೊತ್ತದ ವಂಚನೆಯಾಗಿರುವುದರಿಂದ ಪ್ರಕರಣ ಬೆಳಕಿದೆ ಬಂದಿದೆ. ಆದರೆ, ಇಂತಹ ಹಲವು ಪ್ರಕರಣಗಳು ಈಗಾಗಲೇ ಮುಚ್ಚಿಹೋಗಿವೆ ಎಂದು ಹೇಳಲಾಗಿದೆ.


 • ಏನಿದು ಐಪಿ ಫೋನ್‌

  ಕಂಪ್ಯೂಟರ್‌ಗೆ ಇರುವಂತಹ ಅಂತರ್ಜಾಲ ವಿಳಾಸದ (ಐಪಿ ಅಡ್ರೆಸ್‌) ಮೂಲಕ ಸೈಬರ್ ಕಳ್ಳರು ಇಂಟರ್‌ನೆಟ್ ಪ್ರೋಟೊಕಾಲ್ ಫೋನ್ ಬಳಸುತ್ತಾರೆ. ಲ್ಯಾಂಡ್‌ಲೈನ್‌ ಫೋನ್‌ ಹೋಲುವ ಈ ಫೋನ್‌ ಅನ್ನು ಐಪಿ ಅಡ್ರೆಸ್‌ಗೆ ಜೋಡಿಸುತ್ತಾರೆ. ಇದರಿಂದ ದೇಶವಿದೇಶಗಳಿಗೆ ಸುಲಭವಾಗಿ ಕರೆ ಮಾಡಬಹುದು. ಇದನ್ನು ಪತ್ತೆಹಚ್ಚಲು ಪೊಲೀಸರಿಗೆ ಬಹಳ ಕಷ್ಟವಾಗುತ್ತಿದೆ ಎನ್ನಲಾಗಿದೆ.


 • ಪತ್ತೆ ಮಾಡುವುದು ಏಕೆ ಕಷ್ಟ?

  ಸಾಮಾನ್ಯವಾಗಿ ನಾಲ್ಕು ಅಂಕಿಗಳ ಸಂಖ್ಯೆಯ ಕರೆ ಬಂದರೆ, ವಿದೇಶಗಳಿಂದ ಕರೆ ಬಂದಿರಬಹುದು ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ಐಪಿ ಫೋನ್‌ನಿಂದ ಕರೆ ಮಾಡಿದರೆ ಮೂಡುವ ನಾಲ್ಕು ಅಂಕಿಗಳು, ಇವು ವಿದೇಶಿ ಸಂಖ್ಯೆಗಳಂತೆಯೂ ಕಾಣಿಸದಿರುವುದು ವಿಶೇಷ.ಇನ್ನು ಫೋನ್‌ಗೆ ಸಂಪರ್ಕ ಕಲ್ಪಿಸುವ ನೆಟ್‌ವರ್ಕ್‌ ಪ್ರೊವೈಡರ್ ಸಂಸ್ಥೆಗಳಿಗೂ ಈ ಮಾಹಿತಿ ಸಿಗುವುದಿಲ್ಲ.


 • ಕಾನೂನು ವ್ಯಾಪ್ತಿಯಲ್ಲಿ ಬಳಕೆ ಇದೆ!

  ಐಪಿ ಫೋನ್‌ನಿಂದ ಕರೆ ಮಾಡಿದ ಮತ್ತೆ ಮಾಡಲು ಸಾಧ್ಯವಿಲ್ಲವಾದರೂ ಕಾನೂನು ವ್ಯಾಪ್ತಿಯಲ್ಲಿ ಇವುಗಳನ್ನು ಬಳಸಲು ಭಾರತ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಇಲ್ಲಿರುವ ಸರ್ಕಾರಿ ಮತ್ತು ಖಾಸಗಿ ನೆಟ್‌ವರ್ಕ್‌ ಪ್ರೊವೈಡರ್ ಸಂಸ್ಥೆಗಳು ಐಪಿ ಫೋನ್ ಬಳಕೆಗೆ ನೆಟ್‌ವರ್ಕ್‌ ಸೇವೆ ಒದಗಿಸುತ್ತಿವೆ. ಆದರೆ ಇದನ್ನೇ ಕ್ರಿಮಿನಲ್‌ಗಳು ಹಣ ಕದಿಯಯುವ ಸಲುವಾಗಿ ಬಳಸುತ್ತಿದ್ದಾರೆ.


 • ನೀವು ಮಾಡಬೇಕಿರುವುದೇನು?

  ಪ್ರೈವೇಟ್ ನಂಬರ್‌ ಅಥವಾ ಅಪರಿಚಿತ ಸಂಖ್ಯೆಗಳಿಂದ ಕರೆ ಬಂದರೆ ಸ್ವೀಕರಿಸದೇ ಇರುವುದೊಂದೇ ಈಗ ಕಂಡುಬಂದಿರುವ ಭಯಾನಕ ಸೈಬರ್ ವಂಚನೆ ಒಂದಕ್ಕೆ ಸದ್ಯಕ್ಕಿರುವ ಪರಿಹಾರ. ಸೈಬರ್ ಪೊಲೀಸರ ಕೈಗೆ ಸಿಗದಂತೆ ಜಾರಿಕೊಳ್ಳುವ ಸಲುವಾಗಿ ಕ್ರಿಮಿನಲ್‌ಗಳು ಮಾಡುತ್ತಿರುವ ಈ ಮೋಸಕ್ಕೆ ಬ್ರೇಕ್ ಹಾಕಲು ಇನ್ನೆಷ್ಟು ಸಮಯ ಬೇಕು ಎಂದು ಸುಲಭವಾಗಿ ಹೇಳಲಾಗದು.
ಪ್ರೈವೇಟ್ ನಂಬರ್‌ ಎಂದು ಕಾಣಿಸುವ ಅಥವಾ ಅಪರಿಚಿತ ಸಂಖ್ಯೆಗಳಿಂದ ಕರೆ ಬಂದರೆ ಸ್ವೀಕರಿಸದೇ ಇರುವುದೊಂದೇ ಈಗ ಕಂಡುಬಂದಿರುವ ಭಯಾನಕ ಸೈಬರ್ ವಂಚನೆ ಒಂದಕ್ಕೆ ಸದ್ಯಕ್ಕಿರುವ ಪರಿಹಾರ.! ನೀವು ಅಕಸ್ಮಾತ್ ಆ ಕರೆಯನ್ನು ರಿಸೀವ್ ಮಾಡಿದರೂ ಸಾಕು ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಬಿದ್ದು, ನೀವು ಕೈ ಸುಟ್ಟುಕೊಳ್ಳುವುದು ಅನಿವಾರ್ಯವಾಗುತ್ತದೆ.!

ಹೌದು, ಇನ್ಮುಂದೆ ಯಾವುದೇ ಫೋನ್ ಕರೆ ಬಂದರೂ ಇದನ್ನು ನೆನಪಿನಲ್ಲಿಡಿ. ಇಲ್ಲವಾದರೆ, ನಿಮ್ಮ ಖಾತೆಗೆ ಖಮಡಿತವಾಗಿಯೂ ನಿಮಗೆ ಗೊತ್ತಿಲ್ಲದಂತೆ ಕನ್ನ ಹಾಕುವ ತಂತ್ರಜ್ಞಾನವೊಂದು ಬಂದಿದೆ. ತಂತ್ರಜ್ಞಾನ ಅಭಿವೃದ್ಧಿಯನ್ನೇ ದುರುಪಯೋಗ ಮಾಡಿಕೊಳ್ಳುವ 'ಇ-ಕಳ್ಳರು' ಈಗ ವ್ಯಕ್ತಿಗಳ ಬ್ಯಾಂಕ್‌ ಖಾತೆ ಮತ್ತು ಫೋನ್‌ಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ.

ಈಗ ಸುಧಾರಿತ ತಂತ್ರಜ್ಞಾನದ ಐಪಿ (ಇಂಟರ್‌ನೆಟ್‌ ಪ್ರೋಟೊಕಾಲ್‌) ಫೋನ್‌ ಎಂಬ ಪ್ರಬಲ ಸೈಬರ್ ವಂಚನೆಗೆ ವಂಚಕರು ಇಳಿದಿದ್ದಾರೆ. ಇತ್ತಿಚೀಗೆ ಉದ್ಯಮಿಗಳಿಗೆ 200 ಕೋಟಿವರೆಗೆ ವಂಚಿಸಿರುವ ಘಟನೆ ಕೂಡ ಇದೇ ತಂತ್ರಜ್ಞಾನದ ಕುತಂತ್ರದಿಂದಲೇ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗಾದರೆ, ಏನಿದು ಶಾಕಿಂಗ್ ವರದಿ ಎಂಬುದನ್ನು ಮುಂದೆ ಓದಿ ತಿಳಿಯಿರಿ.

   
 
ಹೆಲ್ತ್