ಗೂಗಲ್ ಸಂಸ್ಥೆಯು ನಿರ್ವಹಿಸುವ ಈ ಗೂಗಲ್ ಪೇ ಆಪ್ ಮೂಲಕ ನೀವು ನಿಮ್ಮ ಬಿಲ್ ಪೇಮೆಂಟ್ಸ್ ಅತಿ ಸುಲಭವಾಗಿ ಮಾಡಬಹುದು. ಹೆಚ್ಚು ಸೆಕ್ಯೂರ್ ಆಗಿರುವ ಈ ಆಪ್ನಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಜೋಡಣೆ ಮಾಡಿ ನಂತರ ವಿದ್ಯುತ್ ಮತ್ತು ನೀರಿನ ಬಿಲ್ ಸಂಖ್ಯೆಯನ್ನು ಒಂದು ಬಾರಿ ನೋಂದಣಿ ಮಾಡಿ ಬಿಲ್ ಪೇಮೆಂಟ್ ಮಾಡಿದರೇ ಸಾಕು. ಮುಂದಿನ ಬಾರಿ ಪೇಮೆಂಟ್ ಮಾಡುವಾಗ ಪುನಃ ಬಿಲ್ ಸಂಖ್ಯೆಯನ್ನು ನಮೂದಿಸುವ ಅಗತ್ಯವಿಲ್ಲ.
ಪೋನ್ ಪೇ ಸಹ ಒಂದು ಉತ್ತಮ ಆನ್ಲೈನ್ ಪೇಮೆಂಟ್ ಮಾಡುವ ಆಪ್ ಆಗಿದ್ದು, ಮೊದಲು ನಿಮ್ಮ ಬ್ಯಾಂಕ್ ಖಾತೆಯನ್ನು ಆಪ್ನಲ್ಲಿ ಲಿಂಕ್ ಮಾಡಿಕೊಂಡು ನಂತರ ನೀವು ಈ ಆಪ್ನಲ್ಲಿ ವಿದ್ಯುತ್ ಬಿಲ್, ನೀರಿನ ಬಿಲ್ ಅನ್ನು ಸರಳ ಮತ್ತು ಸುರಕ್ಷಿತವಾಗಿ ಪಾವತಿಸಬಹುದು. ಪೇಮೆಂಟ್ ನಂತರ ಫೋನ್ ಪೇ ವತಿಯಿಂದ ಗಿಫ್ಟ್ ಕಾರ್ಡ್(ಸ್ಕ್ರಾಚ್ ಕಾರ್ಡ್) ಸಿಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇದರಲ್ಲಿ ಕ್ಯಾಶ್ ಬ್ಯಾಕ್ ಹಣ ಕೂಡ ದೊರೆಯಬಹುದು.
ಪೆಟಿಎಮ್ ಮುಖಾಂತರ ನೀವು ವಿದ್ಯುತ್ ಬಿಲ್, ನೀರಿಲ್ ಬಿಲ್, ಮತ್ತು ಇತರ ಯಾವುದೇ ಬಿಲ್ ಪೇಮೆಂಟ್ ಸಹ ಮಾಡಬಹುದಾಗಿದೆ. ಪ್ರತಿ ಪೇಮೆಂಟ್ ಕಾರ್ಯವೂ ಸುರಕ್ಷಿತವಾಗಿ ನಡೆಯುತ್ತದೆ. ಇದರೊಂದಿಗೆ ಪೇಟಿಎಮ್ ನವರು ಪೇಟಿಎಮ್ ಮಾಲ್ ಎಂಬ ಆನ್ಲೈನ್ ಶಾಪಿಂಗ್ ತಾಣವನ್ನು ಸಹ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿರುವ ಈ ಆಪ್ ಅನ್ನು ಅತ್ಯುತ್ತಮ ಆನ್ಲೈನ್ ಪೇಮೆಂಟ್ ತಾಣ ಎನ್ನಬಹುದು.
ಮೊಬೈಲ್ ಪರ್ಸ್ಎಂದೇ ಕರೆಸಿಕೊಳ್ಳುವ ಈ ಮೋಬಿಕ್ವಿಕ್ ಸಹ ಒಂದು ಸುರಕ್ಷಿತ ಪೇಮೆಂಟ್ ತಾಣ ಆಗಿದ್ದು, ಇದರಲ್ಲಿ ವಿದ್ಯುತ್ ಬಿಲ್, ನೀರಿನ್ ಬಿಲ್, ಸೇರಿದಂತೆ ಇತರೆ ಬಿಲ್ ಪಾವತಿಯನ್ನು ಅತಿ ಸುಲಭವಾಗಿ ಹಾಗೂ ಸುರಕ್ಷಿತವಾಗಿಯು ಮಾಡಬಹುದಾಗಿದೆ. ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬಹುದು ಮತ್ತು ನಿಮ್ಮ ಮೋಬಿಕ್ವಿಕ್ ಆಪ್ ಅಕೌಂಟ್ನಲ್ಲಿ ಹಣವನ್ನು ಜಮಾ ಮಾಡಿಡಬಹುದು ಪೇಮೆಂಟ್ ಮಾಡುವುದಿದ್ದಾಗ ಬಳಸಬಹುದು.
ಗುರಗಾವ್ ಮೂಲದ ಈ ಪೇಯುಮನಿ ಆಪ್ ಕಳೆದ ವರ್ಷದಿಂದ ಪೇಮೆಂಟ್ ಪಾವತಿಸುವ ಸೌಲಭ್ಯವನ್ನು ಮಾಡಿದ್ದು, ಈ ಪೇಯುಮನಿ ಮೂಲಕ ನೀವು ನಿಮ್ಮ ವಿದ್ಯುತ್ ಬಿಲ್ ಹಾಗೂ ನೀರಿನ್ ಬಿಲ್ ಪಾವತಿಸಬಹುದು. ಆನ್ಲೈನ್ನಲ್ಲಿ ಪಾವತಿ ಮಾಡಿರುವುದಕ್ಕೆ ಪುರಾವೆಯು ನಿಮಗೆ ಸಿಗುವುದು ಮತ್ತು ಕ್ಯಾಶ ಬ್ಯಾಕ್ನಂತಹ ವಿಶೇಷ ರಿಯಾಯಿತಿ ಸಹ ನೀಡುತ್ತಿರುತ್ತಾರೆ.
ಇವತ್ತಿನ ಬ್ಯುಸಿ ಲೈಫ್ ನಿಂದಾಗಿ ಮನೆಯ ವಿದ್ಯುತ್ ಬಿಲ್ ಮತ್ತು ವಾಟರ್ ಬಿಲ್ ಗಳನ್ನು ಸೇವಾ ಕೇಂದ್ರಗಳಿಗೆ ತೆರಳಿ ಪೇಮೆಂಟ್ ಮಾಡಲಾಗುತ್ತಿಲ್ಲವೆ?.ಅದಕ್ಕಾಗಿ ಹೆಚ್ಚು ಯೋಚಿಸಬೇಕಾದ ಅವಶ್ಯಕತೆ ಇಲ್ಲ. ನಿಮ್ಮ ಬಳಿ ಇರುವ ಸ್ಮಾರ್ಟ್ಫೋನ್ನಲ್ಲಿ ಈ ಆಪ್ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳಿ, ಆ ನಂತರ ಆಪ್ಗಳ ಮೂಲಕವೇ ಅತೀ ಸುಲಭವಾಗಿ ಪೇಮೆಂಟ್ ಮಾಡಬಹುದು.
ಆನ್ಲೈನ್ ಮೂಲಕ ನಿಮ್ಮ ವಿದ್ಯುತ್ ಬಿಲ್ ಮತ್ತು ನೀರಿನ ಬಿಲ್ಗಳನ್ನು ಈಗ ಅತೀ ಸುಲಭವಾಗಿ ಪಾವತಿ ಮಾಡಬಹುದಾಗಿದ್ದು, ಇದೀಗ ಅತ್ಯಂತ ಸುರಕ್ಷಿತವಾಗಿ ಆ ಕೆಲಸವು ಬೇಗ ಮುಗಿಯುತ್ತದೆ. ಇದರೊಂದಿಗೆ ಆನ್ಲೈನ್ ಪೇಮೆಂಟ್ ಆಪ್ಗಳು ನಿಮ್ಮ ಪೇಮೆಂಟ್ಗೆ ಪ್ರತಿಯಾಗಿ ಭರ್ಜರಿ ಕ್ಯಾಶಬ್ಯಾಕ್ ಹಾಗೂ ಇನ್ನಿತರ ಡಿಸ್ಕೌಂಟ್ಗಳನ್ನು ಸಹ ನೀಡುತ್ತಿರುತ್ತಾರೆ.
ಈಗ ಆನ್ಲೈನಿನಲ್ಲಿ ಬಹುತೇಕ ಎಲ್ಲ ಕೆಲಸಗಳಿಗೂ ಆಪ್ಗಳಿವೆ. ಹಾಗೇಯೇ ಬಿಲ್ ಪೇಮೆಂಟ್ ಮಾಡಲು ಸಾಕಷ್ಟು ಆಪ್ಗಳು ಗೂಗಲ್ ಪ್ಲೇ ಸ್ಟೋರ್ನಲ್ಲಿ ಸಿಗುತ್ತವೆ. ಈ ಆಪ್ಗಳ ಮೂಲಕ ನೀವು ಬಿಲ್ ಪೇಮೆಂಟ್ ಮಾಡಬಹುದಾದರೂ, ಸುರಕ್ಷಿತ ಆಪ್ ಬಳಕೆ ಒಳಿತು. ಹಾಗಾಗಿ, ಕೆಲವು ಸುರಕ್ಷಿತ ಆಯ್ದು ಆಪ್ಗಳನ್ನು ಈ ಕೆಳಗೆ ನೀಡಲಾಗಿದ್ದು, ಅವುಗಳ ಬಗ್ಗೆ ಓದಿ ತಿಳಿಯಿರಿ.