Back
Home » ಇತ್ತೀಚಿನ
ಇನ್‌ಸ್ಟಾಗ್ರಾಂನಲ್ಲಿ ವಿಶ್ವ ದಾಖಲೆಯ ಲೈಕ್ ಪಡೆದ ಈ ಮೊಟ್ಟೆಯಲ್ಲಿ ಏನಿದೆ?
Gizbot | 18th Jan, 2019 06:05 PM

ಹಾಲಿವುಡ್‌ನ ಪ್ರಖ್ಯಾತ ನಟಿ ಕೈಲಿ ಜೆನ್ನರ್ ಹೆಸರಿನಲ್ಲಿದ್ದ ಇನ್‌ಸ್ಟಾಗ್ರಾಂನ ಅಪರೂಪದ ದಾಖಲೆಯೊಂದನ್ನು ಕೋಳಿ ಮೊಟ್ಟೆಯೊಂದು ಮುರಿದಿದೆ.! ಹೌದು, ನೀವಿದ್ದನ್ನು ನಂಬಲೇಬೇಕು. ಪ್ರಖ್ಯಾತ ಚಿತ್ರ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ಸ್​ ಪಡೆದಿದ್ದ ಹಾಲಿವುಡ್‌ನ ಖ್ಯಾತ ನಟಿಕೈಲಿ ಜೆನ್ನರ್ ಅವರ ಚಿತ್ರವೊಂದನ್ನು ಮೊಟ್ಟೆಯ ಫೋಟೊವೊಂದು ಮುರಿದಿದೆ.

ಇಲ್ಲಿಯವರೆಗೂ ಇನ್‌ಸ್ಟಾಗ್ರಾಂನಲ್ಲಿ ಕೈಲಿ ಜೆನ್ನರ್‌ನ ಒಂದು ಫೋಟೋ ದಾಖಲೆಯ ಸುಮಾರು 18 ಮಿಲಿಯನ್ ಲೈಕ್​ ಪಡೆದು ದಾಖಲೆಯನ್ನು ನಿರ್ಮಿಸಿತ್ತು. ಆದರೆ, ಈ ದಾಖಲೆಯನ್ನು ಒಂದು ಮೊಟ್ಟೆಯ ಫೋಟೋ ಮುರಿದು ಹಾಕಿದ್ದು. ಇದೀಗ ಇನ್‌ಸ್ಟಾಗ್ರಾಂನಲ್ಲೇ ಅತಿ ಹೆಚ್ಚು ಲೈಕ್ಸ್​ ಪಡೆದ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

'ವರ್ಲ್ಡ್​​ ರೆಕಾರ್ಡ್​ ಎಗ್' ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆ ತೆರೆದು ಮೊಟ್ಟೆಯೊಂದರ ಫೋಟೋ ಹಾಕಲಾಗಿತ್ತು. ಈ ಫೋಟೋಗೆ ಕೈಲಿ ಜೆನ್ನರ್ ದಾಖಲೆಯನ್ನು ಮುರಿದು ಇನ್ ಸ್ಟಾಗ್ರಾಂನಲ್ಲಿ ಹೊಸ ದಾಖಲೆ ಸೃಷ್ಟಿಸೋಣ ಎಂಬ ಟ್ಯಾಗ್ ಲೈನ್ ಕೂಡ ನೀಡಲಾಗಿತ್ತು. ನಂತರ ಆ ಫೋಟೋ ವೈರಲ್ ಆಗಿ ಇನ್‌ಸ್ಟಾಗ್ರಾಂನಲ್ಲಿ ಕೈಲಿ ಜೆನ್ನರ್‌ ಚಿತ್ರವನ್ನು ಹಿಂದಿಕ್ಕಿ ದಾಖಲೆ ನಿರ್ಮಿಸಿದೆ.

ದಾಖಲೆ ಸೃಷ್ಟಿಸಿರುವ ಮೊಟ್ಟೆಯ ಫೋಟೋ ಇಲ್ಲಿಯವರೆಗೂ 40 ಮಿಲಿಯನ್‌ಗಿಂತ ಹೆಚ್ಚು ಲೈಕ್ ಪಡೆದು ಮುನ್ನುಗ್ಗುತ್ತಿದೆ. ವರ್ಲ್ಡ್​ ರೆಕಾರ್ಡ್ ಎಗ್​ ಹೆಸರಿನ ಈ ಖಾತೆಯ ಮತ್ತೊಂದು ವಿಶೇಷತೆ ಎಂದರೆ, ಆ ಮೊಟ್ಟೆಯ ಫೋಟೋ ಅವರು ಅಪ್ಲೋಡ್​ ಮಾಡಿದ ಮೊದಲ ಚಿತ್ರವಾಗಿದೆ. ಅಲ್ಲದೆ ಈ ಒಂದೇ ಒಂದು ಪೋಸ್ಟ್ನಿಂದ ಖಾತೆಗೆ 7.3 ಕೋಟಿ ಜನರು ಫಾಲೋವರ್ಸ್ ಸಿಕ್ಕಿದ್ದಾರೆ.

View this post on Instagram

Let's set a world record together and get the most liked post on Instagram. Beating the current world record held by Kylie Jenner (18 million)! We got this #LikeTheEgg #EggSoldiers #EggGang

A post shared by EGG GANG (@world_record_egg) on Jan 4, 2019 at 9:05am PST

ಈ ಹಿಂದೆ ನಟಿ ಜೆನ್ನರ್ ತನ್ನ ಮಗಳ ಫೋಟೋವನ್ನು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗೆ 18 ಮಿಲಿಯನ್ ಲೈಕ್ಸ್​ ಸಿಕ್ಕಿತ್ತು. ಇದು ಈವರೆಗಿನ ದಾಖಲೆಯಾಗಿತ್ತು. ಆದರೆ ಈ ದಾಖಲೆಯನ್ನು ಅದ್ಯಾರೋ ಹಾಕಿದ ಒಂದು ಮೊಟ್ಟೆಯ ಫೋಟೋ ಅಳಿಸಿ ಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ಯಾರಿಗಿಂತ ನಾನೂ ಕಡಿಮೆ ಇಲ್ಲ ಎಂದು ಆ ಮೊಟ್ಟೆ ಕೂಗಿ ಹೇಳುತ್ತಿದೆ.

   
 
ಹೆಲ್ತ್