Back
Home » ಆರೋಗ್ಯ
ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಚಿಕ್ಕ ಚಮಚ 'ತುಪ್ಪ' ತಿಂದರೂ ದೇಹದ ತೂಕ ಇಳಿಸಬಹುದು!
Boldsky | 18th Jan, 2019 05:30 PM
 • ಆಯುರ್ವೇದದ ಪ್ರಕಾರ

  "ತುಪ್ಪವನ್ನು ಬೆಣ್ಣೆಯನ್ನು ಕುದಿಸುವ ಮೂಲಕ ತಯಾರಿಸಲಾಗುತ್ತದೆ. ಆಯುರ್ವೇದದ ಪ್ರಕಾರ ತುಪ್ಪ ಆಹಾರದಲ್ಲಿರುವ ಪೋಷಕಾಂಶಗಳನ್ನು ಸಣ್ಣ ಕರುಳು ಹೀರಿ ಕೊಳ್ಳುವ ಕ್ಷಮತೆಯನ್ನು ಹೆಚ್ಚಿಸುತ್ತದೆ ಹಾಗೂ ಜೀರ್ಣಾಂಗಗಳಲ್ಲಿ ಆಮ್ಲೀಯ ಪಿ ಎಚ್ ಮಟ್ಟವನ್ನು ಕಡಿಮೆಗೊಳಿಸುತ್ತದೆ. ತುಪ್ಪದಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಉತ್ತಮ ಪ್ರಮಾಣದಲ್ಲಿದ್ದು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅಥವಾ LDL cholesterol ಅನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ ತುಪ್ಪದಲ್ಲಿ ನೈಸರ್ಗಿಕ ಆಂಟಿ ಆಕ್ಸಿಡೆಂಟುಗಳಿದ್ದು ಇವು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿಗ್ರಹಿಸಿ ಅಮ್ಲಜನೀಕರಣ ಕ್ರಿಯೆಯನ್ನು ಮಿತಗೊಳಿಸುತ್ತದೆ. ಈ ಮೂಲಕ ನಮ್ಮ ಸ್ನಾಯು ಮತ್ತು ಮೂಳೆಗಳಿಗೆ ಎದುರಾಗುವ ಸವೆತವನ್ನು ತಡೆಯುತ್ತದೆ. ಈ ಮೂಲಕ ವೃದ್ದಾಪ್ಯವನ್ನು ದೂರಾಗಿಸುತ್ತದೆ ಹಾಗೂ ಅಲ್ಜೀಮರ್ಸ್ ಕಾಯಿಲೆ ಆವರಿಸುವ ಸಾಧ್ಯತೆಯಿಂದ ರಕ್ಷ್ಣಣೆ ಒದಗಿಸುತ್ತದೆ"


 • ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ

  ತುಪ್ಪ ನಮ್ಮ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ ಹಾಗೂ ಶಕ್ತಿಯನ್ನು ಒದಗಿಸುತ್ತದೆ. "ಇದರಲ್ಲಿರುವ ಬ್ಯೂಟೈರಿಕ್ ಆಮ್ಲ ಹಾಗೂ ವಿಟಮಿನ್ ಎ,ಡಿ, ಇ ಮತ್ತು ಕೆ ಗಳ ಸಂಯೋಜನೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಜೀರ್ಣಾಂಗ ಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ, ಕೂದಲು ಮತ್ತು ತ್ವಚೆಯನ್ನು ಆರೊಗ್ಯಕರವಾಗಿರಿಸುತ್ತದೆ, ಮೂಳೆಸಂದುಗಳಲ್ಲಿ ಜಾರುಕ ದ್ರವ ಹೆಚ್ಚಿಸುತ್ತದೆ ಹಾಗೂ ಮೂಳೆಗಳನ್ನು ದೃಢಗೊಳಿಸುತ್ತದೆ" ಎಂದು ನವದೆಹಲಿಯ ಫೋರ್ಟಿಸ್ ಲಾಫೆಮ್ಮೆ ಸಂಸ್ಥೆಯ ಆಹಾರತಜ್ಞೆ ಡಾ. ಲವ್ನೀತ್ ಬಾತ್ರಾರವರು ತಿಳಿಸುತ್ತಾರೆ.


 • ತುಪ್ಪ ತಿನ್ನುವುದರಿಂದ ದಪ್ಪಗಾಗುತ್ತಾರೆಯೇ?

  ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂದರೆ ತುಪ್ಪ ವಾಸ್ತವವಾಗಿ ತೂಕ ಇಳಿಯಲು ನೆರವಾಗುತ್ತದೆ. "ಇದರಲ್ಲಿರುವ ಬ್ಯೂಟೈರಿಕ್ ಆಮ್ಲ ಮತ್ತು ಮಧ್ಯಮ ಸಂಕಲೆಯ ಟ್ರೈಗ್ಲಿಸರೈಡುಗಳು ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಸಡಿಲಿಸಿ ನಿವಾರಿಸಲು ನೆರವಾಗುತ್ತದೆ. ಅಲ್ಲದೇ ತುಪ್ಪ ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಆದ ಹೆಚ್ ಡಿ ಎಲ್ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ನೆರವಾಗುತ್ತದೆ" ಎಂದು ಬಾತ್ರಾರವರು ತಿಳಿಸುತ್ತಾರೆ.

  Most Read: ಬರೋಬ್ಬರಿ 5 ಲೀಟರ್ ಬಿಯರ್ ಕುಡಿಸಿ ವ್ಯಕ್ತಿಯ ಪ್ರಾಣ ಉಳಿಸಿದ ವೈದ್ಯರು!


 • ಎರಡರಿಂದ ಮೂರು ಚಿಕ್ಕ ಚಮಚ

  ಒಂದು ವೇಳೆ ತುಪ್ಪದ ಸೇವನೆಯನ್ನು ನೀವು ಪ್ರಾರಂಭಿಸ ಬಯಸಿದರೆ ದಿನದಲ್ಲಿ ಸುಮಾರು ಎರಡರಿಂದ ಮೂರು ಚಿಕ್ಕ ಚಮಚ (ಹತ್ತರಿಂದ ಹದಿನೈದು ಮಿಲಿಲೀಟರ್) ನಷ್ಟು ಪ್ರಮಾಣವನ್ನು ಸೇವಿಸಿದರೆ ಬೇಕಾದಷ್ಟಾಯಿತು. ಆದರೆ ತುಪ್ಪದ ಸೇವನೆ ಇದಕ್ಕೂ ಹೆಚ್ಚಾದರೆ ಮಾತ್ರ ಹೆಚ್ಚು ಕೊಬ್ಬು ಸಂಗ್ರಹಗೊಳ್ಳಲು ಆರಂಭವಾಗುತ್ತದೆ ಹಾಗೂ ಇದು ಅನಾರೋಗ್ಯಕರವಾಗಿದೆ. "ಒಂದು ವೇಳೆ ನೀವು ಎಮ್ಮೆಯ ಹಾಲಿನ ತುಪ್ಪವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಇದು ನರಗಳು ಪೆಡಸಾಗಲು, ದೇಹದಲ್ಲಿ ಅತಿ ಹೆಚ್ಚು ಕೊಬ್ಬು ಸಂಗ್ರಹವಾಗಲು ಹಾಗೂ ಜೀವ ರಾಸಾಯನಿಕ ಕ್ರಿಯೆ ಕ್ಷೀಣಗೊಳ್ಳಲು ಸಾಧ್ಯವಾಗುತ್ತದೆ".


 • ಬೆಳಿಗ್ಗೆದ ಬಳಿಕ ಖಾಲಿಹೊಟ್ಟೆಯಲ್ಲಿ

  ಪ್ರತಿದಿನ ಬೆಳಿಗ್ಗೆದ ಬಳಿಕ ಖಾಲಿಹೊಟ್ಟೆಯಲ್ಲಿ ಒಂದು ಚಿಕ್ಕಚಮಚ ತುಪ್ಪವನ್ನು ಸೇವಿಸುವ ಮೂಲಕ ಅಥವಾ ದಿನದ ಒಂದು ಹೊತ್ತಿನ ಆಹಾರವನ್ನು ಎಣ್ಣೆಯ ಬದಲು ತುಪ್ಪದಲ್ಲಿ ತಯಾರಿಸಿ ಸೇವಿಸುವ ಮೂಲಕ ಆರೋಗ್ಯ ವೃದ್ದಿಸುತ್ತದೆ "ತುಪ್ಪವನ್ನು ಬಿಸಿಮಾಡಿದ ಬಳಿಕ ಇದರಿಂದ ಹೊಗೆಯಾಡಲು ಹೆಚ್ಚಿನ ತಾಪಮಾನದ ಅಗತ್ಯವಿರುವ ಕಾರಣ ಹೆಚ್ಚಿನ ಎಲ್ಲಾ ಅಡುಗೆಗಳನ್ನು ತುಪ್ಪದಲ್ಲಿ ತಯಾರಿಸಬಹುದು. ಬಾಡಿಸಲು, ಹುರಿಯಲು ಅಥವಾ ಹಾಗೇ ಸೇವಿಸಲು ತುಪ್ಪ ಸೂಕ್ತವಾಗಿದೆ" ಎಂದು ಬಾತ್ರಾರವರು ವಿವರಿಸುತ್ತಾರೆ.


 • ತುಪ್ಪವನ್ನು ಬಿಸಿಹಾಲಿನೊಂದಿಗೆ ಮಿಶ್ರಣ ಮಾಡಿ

  ಒಂದು ವೇಳೆ ತುಪ್ಪವನ್ನು ಬಿಸಿಹಾಲಿನೊಂದಿಗೆ ಮಿಶ್ರಣ ಮಾಡಿ ಸೇವಿಸುವ ಮೂಲಕ ಮೂಳೆಗಳು ಹೆಚ್ಚು ದೃಢಗೊಳ್ಳುತ್ತವೆ, ಸ್ನಾಯುಗಳು ಮತ್ತು ನರವ್ಯವಸ್ಥೆ ಇನ್ನಷ್ಟು ಬಲಯುತವಾಗುತ್ತವೆ ಎಂದು ಡಾ. ಲೋಟ್ಲಿಕರ್ ವಿವರಿಸುತ್ತಾರೆ. "ತುಪ್ಪವನ್ನು ರೊಟ್ಟಿಯ ಮೇಲೆ ಸವರಿ ಅಥವಾ ಅನ್ನ, ದಾಲ್, ಖಿಚಡಿ ಮೊದಲಾದವುಗಳ ಮೇಲೆ ಸುರಿದುಕೊಂಡು ಸೇವಿಸುವುದರಿಂದ ಆರೋಗ್ಯವೂ ವೃದ್ದಿಗೊಳ್ಳುತ್ತದೆ ಹಾಗೂ ರುಚಿಯೂ ಹೆಚ್ಚುತ್ತದೆ" ಎಂದು ಅವರು ವಿವರಿಸುತ್ತಾರೆ.


 • ತುಪ್ಪವನ್ನು ಸೇವಿಸುವ ಅತ್ಯುತ್ತಮ ವಿಧಾನಗಳು

  ಉಸಿರಾಟದಲ್ಲಿ ತೊಂದರೆ, ಕಫ ಕಟ್ಟಿಕೊಂಡಿದ್ದರೆ, ಒಣಕೆಮ್ಮು ಆವರಿಸಿದ್ದರೆ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ಚಿಕ್ಕ ಚಮಚ ತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಶೀಘ್ರವೇ ಈ ತೊಂದರೆಗಳು ಇಲ್ಲವಾಗುತ್ತವೆ.


 • ತುಪ್ಪವನ್ನು ಸೇವಿಸುವ ಅತ್ಯುತ್ತಮ ವಿಧಾನಗಳು

  ಮೂಗಿನಲ್ಲಿ ನಶ್ಯ ಎಳೆಯುವಂತೆ ಪ್ರತಿ ಹೊಳ್ಳೆಗೂ ಎರಡು ತೊಟ್ಟು ಕರಗಿರುವ ತುಪ್ಪವನ್ನು ಹಾಕಿ ಒಳಗೆಳೆದುಕೊಳ್ಲುವ ಮೂಲಕ ಉಸಿರಾಟದ ವ್ಯವಸ್ಥೆಯ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಧೂಳು, ಹೊಗೆ, ಸುವಾಸನೆ ಸೂಸುವ ತುಂತುರು, ಪರಾಗ ಮೊದಲಾದ ಕಣಗಳ ವಿರುದ್ದ ಅಲರ್ಜಿಯಾಗುವುದನ್ನು ತಪ್ಪಿಸುತ್ತದೆ. ಅಲ್ಲದೇ ಸತತವಾಗಿ ಮರುಕಳಿಸುವ ಮೂಗು, ಎದೆ ಹಾಗೂ ಗಂಟಲ ಸೋಂಕಿನಿಂದ ರಕ್ಷಣೆಯನ್ನೂ ಒದಗಿಸುತ್ತದೆ.

  Most Read: ತಾಯಿಗೆ ಸಿಸಿಟಿವಿಯಲ್ಲಿ ಕಾಣಿಸುತ್ತಿದೆಯಂತೆ ಸತ್ತ ಮಗನ ದೆವ್ವದ ಆಕೃತಿಗಳು


 • ತುಪ್ಪವನ್ನು ಸೇವಿಸುವ ಅತ್ಯುತ್ತಮ ವಿಧಾನಗಳು

  ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದರಿಂದ ಎರಡು ಚಿಕ್ಕ ಚಮಚ ತುಪ್ಪವನ್ನು ಸೇವಿಸುವ ಮೂಲಕ ನರಗಳು ಪೆಡಸಾಗುವುದನ್ನು ತಪ್ಪಿಸಬಹುದು ಹಾಗೂ ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ ಮತ್ತು ದೇಹದ ಜೀವಕೋಶಗಳಲ್ಲಿ ಫ್ರೀ ರ್‍ಯಾಡಿಕಲ್ ಎಂಬ ಹಾನಿಕಾರಕ ಕಣಗಳು ಆವರಿಸುವುದನ್ನು ತಪ್ಪಿಸುತ್ತದೆ.


 • ತುಪ್ಪವನ್ನು ಸೇವಿಸುವ ಅತ್ಯುತ್ತಮ ವಿಧಾನಗಳು

  ನಿತ್ಯವೂ ಸುಮಾರು ಎರಡರಿಂದ ಮುರು ಚಿಕ್ಕಚಮಚದಷ್ಟು ಹಸುವಿನ ತುಪ್ಪವನ್ನು ತೊಟ್ಟೆಯೊಂದಿಗೆ ಸೇವಿಸುವ ಮೂಲಕ ಜೀರ್ಣಕ್ರಿಯೆ ಸುಲಭವಾಗುತ್ತದೆ, ಆಹಾರದಿಂದ ಪೋಷಕಾಂಶ ಗಳನ್ನು ಹೀರಿಕೊಳ್ಳುವ ಕ್ಷಮತೆ ಹೆಚ್ಚುತ್ತದೆ, ದೊಡ್ಡ ಕರುಳಿನಲ್ಲಿ ಕಲ್ಮಶದ ಚಲನೆಗೆ ಜಾರುಕದ್ರವ ಒದಗಿಸಿ ಮಲಬದ್ದತೆಯಾಗದಂತೆ ಕಾಪಾಡುತ್ತದೆ.
ಸಾಮಾನ್ಯವಾಗಿ ತುಪ್ಪ ತಿಂದರೆ ದಪ್ಪಗಾಗುತ್ತಾರೆ ಎಂದು ಹೆಚ್ಚಿನವರ ಅಭಿಪ್ರಾಯವಾಗಿದೆ. ಆದರೆ ವಾಸ್ತವದಲ್ಲಿ ತುಪ್ಪದ ಸೇವನೆಯಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ ಹಾಗೂ ತೂಕ ಇಳಿಸಲು ಮತ್ತು ದೇಹದಿಂದ ಕಲ್ಮಶಗಳನ್ನು ಹೊರಹಾಕಲೂ ನೆರವಾಗುತ್ತದೆ. ಈ ಬಗ್ಗೆ ಆಹಾರತಜ್ಞರು ಏನು ಹೇಳುತ್ತಾರೆ ಹಾಗೂ ದಿನದಲ್ಲಿ ಎಷ್ಟು ಪ್ರಮಾಣದ ತುಪ್ಪದ ಸೇವನೆ ಅಗತ್ಯ ಎಂಬುದನ್ನು ನೋಡೋಣ:

ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ವ್ಯಕ್ತಿಗಳು ತಮ್ಮ ದೇಹದ ತೂಕ ಇಳಿಯಬೇಕಾದರೆ ತಮ್ಮ ಆಹಾರ ಕೊಬ್ಬುರಹಿತವಾಗಿರಬೇಕು ಹಾಗೂ ಸಾಕಷ್ಟು ವ್ಯಾಯಾಮ ಮಾಡಬೇಕೆಂದು ನಂಬಿದ್ದಾರೆ. ಆದರೆ ಎಲ್ಲಾ ಕೊಬ್ಬುಗಳು ಅನಾರೋಗ್ಯಕರವಲ್ಲ. ಅಷ್ಟಲ್ಲದೇ ಕೊಬ್ಬುರಹಿತ ಆಹಾರವೂ ಅನಾರೋಗ್ಯಕರ, ನಮ್ಮ ದೇಹದ ಒಟ್ಟಾರೆ ಆರೋಗ್ಯಕ್ಕೆ ಕೊಬ್ಬು ಸಹಾ ಅವಶ್ಯಕವಾಗಿದೆ. ತುಪ್ಪ ಒಂದು ಆರೋಗ್ಯಕರ ಕೊಬ್ಬು ಆಗಿದೆ.

   
 
ಹೆಲ್ತ್