Back
Home » ಆರೋಗ್ಯ
ಆರೋಗ್ಯದ ಮೇಲೆ ಪ್ರಭಾವ ಬೀರುವ 10 ಬಗೆಯ ಉಪ್ಪುಗಳು
Boldsky | 19th Jan, 2019 08:05 AM
 • ಸಮುದ್ರದ ಉಪ್ಪು

  ಸಮುದ್ರದ ಉಪ್ಪನ್ನು ಸೇವಿಸುವುದರಿಂದ ನಿಮ್ಮ ತ್ವಚೆಯನ್ನು ಸಂರಕ್ಷಿಸಬಹುದು ಮತ್ತು ನಿಮ್ಮ ದಂತ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಜೊತೆಗೆ ಇದು ನಿಮ್ಮ ನಿದ್ದೆ, ದೇಹದಲ್ಲಿರುವ ಎಲೆಕ್ಟ್ರೋಲೈಟಿಕ್ ಸಮತೋಲನವನ್ನು ಕಾಪಾಡಲು ಸಹ ಇದು ನೆರವಾಗುತ್ತದೆ. ಸೋಡಿಯಂ, ಪೊಟಾಶಿಯಂ, ಕ್ಯಾಲ್ಸಿಯಂ, ಮೆಗ್ನಿಷಿಯಂ, ಬ್ರೊಮೈಡ್, ಕ್ಲೋರೈಡ್, ಕಬ್ಬಿಣಾಂಶ, ತಾಮ್ರ ಮತ್ತು ಸತುಗಳು ಈ ಉಪ್ಪಿನಲ್ಲಿ ಯಥೇಚ್ಛವಾಗಿ ಇರುತ್ತವೆ. ಇವೆಲ್ಲವೂ ಸಮುದ್ರದ ಉಪ್ಪಿನಲ್ಲಿ ಸ್ವಾಭಾವಿಕವಾಗಿ ಇರುತ್ತವೆ ಮತ್ತು ನಿಮ್ಮ ಆರೋಗ್ಯದ ಮೇಲೆ ಸಕಾರಾತ್ಮಕವಾಗಿ ಪರಿಣಾಮವನ್ನು ಬೀರುತ್ತವೆ.


 • ಗ್ರೇ ಸೀ ಸಾಲ್ಟ್

  ಈ ಬಗೆಯ ಉಪ್ಪಿನಲ್ಲಿ ಅನೇಕ ಖನಿಜಾಂಶಗಳು ಇರುತ್ತವೆ. ಇದನ್ನು ಥೆರಪಿಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದು ಶ್ವಾಸಕೋಶದ ವ್ಯವಸ್ಥೆ ಮತ್ತು ಎದೆ ಬಡಿತವನ್ನು ಸುಸ್ಥಿತಿಯಲ್ಲಿಡುತ್ತದೆ. ಬಹು ಮುಖ್ಯವಾಗಿ ಇದು ನಿಮ್ಮ ದೇಹದಲ್ಲಿನ ಆ್ಯಸಿಡ್-ಆಲ್ಕಲೈನ್ ಮಟ್ಟವನ್ನು ಸಮತೋಲನದಲ್ಲಿಡುತ್ತದೆ ಮತ್ತು ಈ ಉಪ್ಪನ್ನು ಸೇವಿಸುವುದರಿಂದ ನಿಮ್ಮ ಆಯುಸ್ಸನ್ನು ಸಹ ಹೆಚ್ಚಿಸಿಕೊಳ್ಳಬಹುದು.


 • ಹವಾಯಿಯನ್ ಅಲೇಯಿಯ ರೆಡ್ ಸಾಲ್ಟ್

  ಹವಾಯಿಯನ್ ರೆಡ್ ಸಾಲ್ಟ್‌ನಲ್ಲಿ ಸುಮಾರು 80 ಬಗೆಯ ಖನಿಜಾಂಶಗಳು ಇರುತ್ತವೆ. ಇದು ಒಂದು ಬಗೆಯ ಸಂಸ್ಕರಿಸದ ಸಮುದ್ರದ ಉಪ್ಪಾಗಿರುತ್ತದೆ ಮತ್ತು ಇದು ಒಂದು ಬಗೆಯ ಕಬ್ಬಿಣದ ಆಕ್ಸೈಡ್‌ನಿಂದ ಸಮೃದ್ಧವಾದ ಜ್ವಾಲಾಮುಖಿಯ ಜೇಡಿ ಮಣ್ಣಾಗಿರುತ್ತದೆ. ಈ ಜೇಡಿ ಮಣ್ಣು ಇಟ್ಟಿಗೆಯಂತಹ ಕೆಂಪು ಬಣ್ಣವನ್ನು ಒಳಗೊಂಡಿರುತ್ತದೆ. ನಿಮ್ಮ ಆಹಾರಕ್ಕೆ ಈ ಉಪ್ಪನ್ನು ಒಂದು ಚಿಟಿಕೆ ಪ್ರಮಾಣದಲ್ಲಿ ಹಾಕಿದರೆ ಸಾಕು, ನಿಮ್ಮ ಶ್ವಾಸಕೋಶಗಳು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಜೊತೆಗೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ನಿಮ್ಮ ಲವಲವಿಕೆ ಪ್ರಮಾಣ ಹಾಗೂ ಏಕಾಗ್ರತೆಯ ಮಟ್ಟ ಸಹ ಸುಧಾರಿಸುತ್ತದೆ.

  Most Read: ಬರೋಬ್ಬರಿ 5 ಲೀಟರ್ ಬಿಯರ್ ಕುಡಿಸಿ ವ್ಯಕ್ತಿಯ ಪ್ರಾಣ ಉಳಿಸಿದ ವೈದ್ಯರು!


 • ಕಾಲಾ ನಮಕ್ ಸಾಲ್ಟ್

  ಕಾಲಾ ನಮಕ್ ಸಾಲ್ಟ್ ಅನ್ನು ಸೇವಿಸುವುದರಿಂದ ನಿಮ್ಮ ಜೀರ್ಣ ಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ನೀವು ದೂರ ಮಾಡಿಕೊಳ್ಳಬಹುದು. ಇವು ನಿಮಗೆ ಹೊಟ್ಟೆ ಹಸಿವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಮತ್ತು ಕಿಬ್ಬೊಟ್ಟೆಯಲ್ಲಿನ ಸಮಸ್ಯೆಗಳಿಂದ ಮುಕ್ತಿಯನ್ನು ನೀಡುತ್ತವೆ.


 • ಹಿಮಾಲಯನ್ ಪಿಂಕ್ ಸಾಲ್ಟ್

  ಇದನ್ನು ಸೂಪರ್ ಫುಡ್ ಎಂದು ಸಹ ಕರೆಯುತ್ತಾರೆ. ಹಿಮಾಲಯನ್ ಪಿಂಕ್ ಸಾಲ್ಟ್‌ನಲ್ಲಿ ಯಥೇಚ್ಛವಾಗಿ ಖನಿಜಾಂಶಗಳು ಇರುತ್ತವೆ. ಇದರಲ್ಲಿ ಸುಮಾರು 80 ಸ್ವಾಭಾವಿಕ ಖನಿಜಾಂಶಗಳು ಇರುತ್ತವೆ. ಇವು ನಿಮ್ಮ ದೇಹದಲ್ಲಿರುವ ಪಿಎಚ್ ಮಟ್ಟವನ್ನು ಸಮತೋಲನದಲ್ಲಿಡುತ್ತದೆ. ಜೊತೆಗೆ ಇವು ನಿಮ್ಮ ಸ್ನಾಯುಗಳು ವಿಶ್ರಾಂತಿ ತೆಗೆದುಕೊಳ್ಳಲು, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಹಾಗೂ ಸೋಂಕುಗಳಿಂದ ನಿಮ್ಮನ್ನು ಕಾಪಾಡಲು ಸಹಾಯ ಮಾಡುತ್ತದೆ.


 • ಟ್ರಫ್ಫಲ್ ಸಾಲ್ಟ್

  ಈ ಉಪ್ಪು ಅಫ್ರೊಡಿಸಿಯಾಕ್ ಪರಿಣಾಮಗಳನ್ನು ಹೊಂದಿದ್ದು, ಉರಿಯೂತ ಮತ್ತು ಆ್ಯಂಟಿಮೈಕ್ರೋಬೈಯಲ್ ಪರಿಣಾಮಗಳನ್ನು ಸಹ ಹೊಂದಿರುತ್ತದೆ. ಟ್ರಫ್ಫಲ್ ಸಾಲ್ಟ್‌ನಲ್ಲಿ ಪ್ರೋಟಿನ್ ಯಥೇಚ್ಛ ಪ್ರಮಾಣದಲ್ಲಿರುತ್ತದೆ ಮತ್ತುಇದು ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.


 • ಫ್ಲಿಯುರ್ ಡಿ ಸೆಲ್

  "ಕ್ರೀಮ್ ಆಫ್ ದಿ ಸಾಲ್ಟ್ ಪ್ಯಾನ್" ಎಂದು ಸಹ ಕರೆಯಲ್ಪಡುವ ಈ ಉಪ್ಪಿಗೆ "ಕೇವಿಯರ್ ಆಫ್ ಸೀ ಸಾಲ್ಟ್ಸ್" ಅಥವಾ "ಶಾಂಪೇನ್ ಆಪ್ ಸಾಲ್ಟ್" ಎಂಬ ಇನ್ನಿತರ ಹೆಸರುಗಳು ಸಹ ಇವೆ. ಈ ಉಪ್ಪು ತನ್ನ ಅಧಿಕ ಖನಿಜಾಂಶದಿಂದ ಖ್ಯಾತಿಯನ್ನು ಪಡೆದಿರುವುದಲ್ಲದೆ. ತನ್ನ ಉತ್ತಮವಾದ ರುಚಿಗೆ ಸಹ ಜಗದ್ವಿಖ್ಯಾತಿಯನ್ನು ಗಳಿಸಿದೆ. ಸಮುದ್ರದ ನೀರಿನಲ್ಲಿರುವ ಎಲ್ಲಾ ಅಂಶಗಳು ಈ ಉಪ್ಪಿನಲ್ಲಿ ದೊರೆಯುತ್ತವೆ. ಅಂದರೆ ಐಯೋಡಿನ್, ಸತು, ತಾಮ್ರ, ಮ್ಯಾಂಗನೀಸ್, ಕಬ್ಬಿಣಾಂಶ, ಮೆಗ್ನಿಷಿಯಂ ಮತ್ತು ಪೊಟಾಶಿಯಂ ಈ ಉಪ್ಪಿನಲ್ಲಿ ಇದ್ದು, ಇವು ನಿಮ್ಮ ಆರೋಗ್ಯಕ್ಕೆ ಮತ್ತು ನಾಲಿಗೆಗೆ ಬೇಕಾದ ಎಲ್ಲಾ ಅಂಶಗಳನ್ನು ಒದಗಿಸುತ್ತವೆ.


 • ಸೈಪ್ರಸ್ ಬ್ಲಾಕ್ ಲಾವಾ ಸಾಲ್ಟ್

  ತನ್ನ ಮಣ್ಣಿನ ಸ್ವಾದಕ್ಕೆ ಖ್ಯಾತಿಯನ್ನು ಪಡೆದಿರುವ ಸೈಪ್ರಸ್ ಬ್ಲಾಕ್ ಲಾವಾ ಸಾಲ್ಟ್ ತನ್ನೊಳಗೆ ಒಂದು ಬಗೆಯ ಕಲ್ಲಿದ್ದಲನ್ನು ಹೊಂದಿರುತ್ತದೆ. ಇದನ್ನು ಟೇಬಲ್ ಅಲಂಕಾರಕ್ಕೆ ಬಳಸುತ್ತಾರೆ. ಈ ಉಪ್ಪನ್ನು ಡೀಟಾಕ್ಸ್ ಮಾಡಲು, ಶ್ವಾಸಕೋಶಗಳ ಆರೋಗ್ಯಕ್ಕೆ, ದೇಹದಲ್ಲಿ ನೀರಿನಂಶವನ್ನು ಹೆಚ್ಚಿಸಲು ಮತ್ತು ಸ್ನಾಯು ಸೆಳೆತಕ್ಕೆ ಪರಿಹಾರವಾಗಿ ಬಳಸಲಾಗುತ್ತದೆ.

  Most Read: ತಾಯಿಗೆ ಸಿಸಿಟಿವಿಯಲ್ಲಿ ಕಾಣಿಸುತ್ತಿದೆಯಂತೆ ಸತ್ತ ಮಗನ ದೆವ್ವದ ಆಕೃತಿಗಳು


 • ಹವಾಯಿಯನ್ ಬ್ಲಾಕ್ ಲಾವಾ ಸಾಲ್ಟ್

  ಹವಾಯಿಯನ್ ಬ್ಲಾಕ್ ಲಾವಾ ಸಾಲ್ಟ್ ಎಂಬುದು ಒಂದು ಬಗೆಯ ಅಪರೂಪದ ಉಪ್ಪಾಗಿರುತ್ತದೆ. ಇದು ಒಂದು ಬಗೆಯ ಆರ್ದ್ರತೆಯನ್ನು ಹೊಂದಿರುವ ಉಪ್ಪಾಗಿದ್ದು, ಇದನ್ನು ತೆಂಗಿನಕಾಯಿಯ ಇದ್ದಿಲಿನಿಂದ ಒಣಗಿಸಲಾಗಿರುತ್ತದೆ. ಇದು ಸೈಪ್ರಸ್ ಬ್ಲಾಕ್ ಲಾವಾ ಸಾಲ್ಟ್ ನೀಡುವ ಪ್ರಯೋಜನಗಳನ್ನೇ ನೀಡುತ್ತದೆ. ಇದು ನಕಾರಾತ್ಮಕ ಶಕ್ತಿಗಳನ್ನು ದೂರವಿಡುವ ಗುಣವನ್ನು ತನ್ನೊಳಗೆ ಹೊಂದಿದೆ. ಇದರ ಕಪ್ಪು ಮತ್ತು ಒರಟಾದ ಎಳೆಗಳು, ಮತ್ತು ಕಲಾತ್ಮಕವಾಗಿರುವ ರೂಪವು ನಿಮ್ಮ ಊಟಕ್ಕೆ ಉತ್ತಮ ರುಚಿ ಮತ್ತು ಸೌಂದರ್ಯವನ್ನು ಒದಗಿಸುತ್ತದೆ. ಇದು ಸಾಸ್ ಜೊತೆಗೆ ಉತ್ತಮವಾಗಿ ಬೆರೆಯುತ್ತದೆ.

  Most Read: ಉಪ್ಪು ನೀರು ಬಳಸಿ ನಿಮ್ಮ ಸೌಂದರ್ಯ ವರ್ಧಿಸಿ!


 • ಟೇಬಲ್ ಸಾಲ್ಟ್

  ನೈಜ ರೂಪದ ಟೇಬಲ್ ಸಾಲ್ಟ್ ಜೀರ್ಣಕ್ರಿಯೆಯ ಕಿಣ್ವಗಳನ್ನು ಮತ್ತು ರಸಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಇದು ನಾವು ಸೇವಿಸುವ ಆಹಾರದಲ್ಲಿನ ವಿಟಮಿನ್‌ಗಳು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಆದರೂ ಐಯೋಡಿನ್ ಕೊರತೆಯಿಂದ ಬಳಲುವವರಿಗಾಗಿ ಕೃತಕವಾಗಿ ಐಯೋಡಿನ್ ಅನ್ನು ಸೇರಿಸಿ ಬಳಸಲಾಗುವ ಉಪ್ಪಿನಲ್ಲಿ ಈ ಉಪ್ಪೇ ಅತ್ಯಂತ ಪ್ರಧಾನವಾಗಿರುತ್ತದೆ. ಟೇಬಲ್ ಸಾಲ್ಟ್ ಹಲವಾರು ವಿಧಗಳಲ್ಲಿ ದೊರೆಯುತ್ತವೆ. ಕೋಶರ್ ಸಾಲ್ಟ್, ಪಿಕ್ಲಿಂಗ್ ಸಾಲ್ಟ್ ಮತ್ತು ಗಾರ್ಲಿಕ್ ಸಾಲ್ಟ್, ಆನಿಯನ್ ಸಾಲ್ಟ್‌ನಂತಹ ಕಣಗಳುಳ್ಳ ಉಪ್ಪಾಗಿ ದೊರೆಯುತ್ತದೆ ಮತ್ತು ಸೋಕ್ಡ್ ಸಾಲ್ಟ್ ಎಂದು ಸಹ ದೊರೆಯುತ್ತದೆ. ನಿಮ್ಮ ಉದ್ದೇಶಕ್ಕೆ ತಕ್ಕಂತಹ ರೀತಿಯಲ್ಲಿ ಇದು ಲಭ್ಯವಿರುತ್ತದೆ.


 • ಅಧಿಕವಾಗಿ ಉಪ್ಪನ್ನು ಸೇವಿಸುವುದರಿಂದ ಆಗುವ ದುಷ್ಪರಿಣಾಮಗಳು

  ಅತಿಯಾಗಿ ಉಪ್ಪನ್ನು ಸೇವಿಸುವುದಕ್ಕೂ ಮತ್ತು ನಮ್ಮ ಜೀನ್ಸ್ ಟೈಟ್ ಆಗುವುದಕ್ಕೂ ಹತ್ತಿರದ ಸಂಬಂಧವಿದೆ. ಮುಖ್ಯವಾಗಿ ಇತ್ತೀಚಿನ ಅಧ್ಯಯನಗಳು ನಮ್ಮ ದೇಹದ ತೂಕ ಹೆಚ್ಚಾಗುವುದಕ್ಕೆ ಸೋಡಿಯಂ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದೇ ಕಾರಣ ಎಂದು ತಿಳಿಸಿವೆ. ಅತಿಯಾದರೇ ಎಲ್ಲವೂ ತಪ್ಪಾಗುತ್ತದೆ. ಹಾಗೆಯೇ ಉಪ್ಪು ಒಳ್ಳೆಯದು ಎಂದು ಅತಿಯಾಗಿ ಸೇವಿಸಬೇಡಿ. ದೇಹದಲ್ಲಿ ಸೋಡಿಯಂ ಅಧಿಕಗೊಂಡರೆ, ನಿಮ್ಮ ಮುಖದಲ್ಲಿ ಕೊಬ್ಬು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ಅಧಿಕ ರಕ್ತದೊತ್ತಡವನ್ನು ಉಂಟು ಮಾಡುತ್ತದೆ. ಜೊತೆಗೆ ಆಸ್ಟಿಯೊಪೊರೊಸಿಸ್, ಮೂತ್ರಪಿಂಡದ ಸಮಸ್ಯೆ, ಮೂತ್ರಪಿಂಡದ ಕಲ್ಲುಗಳು ಮತ್ತು ತಲೆನೋವಿಗೆ ಕಾರಣವಾಗುತ್ತದೆ.


 • ಅಧ್ಯಯನದ ಪ್ರಕಾರ

  ಅಧ್ಯಯನದ ಪ್ರಕಾರ ಉಪ್ಪಿನಿಂದ ಸಂರಕ್ಷಿಸಲ್ಪಡುವ ಆಹಾರಗಳನ್ನು (ಉಪ್ಪಿನ ಕಾಯಿ ಮತ್ತು ಒಣ ಮೀನು ಇತ್ಯಾದಿ) ಹೆಚ್ಚಾಗಿ ಸೇವಿಸಿದರೆ, ಅದರಿಂದ ಹೊಟ್ಟೆಯ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗಿರುತ್ತದೆಯಂತೆ. ಮತ್ತೊಂದು ಅಧ್ಯಯನದ ಪ್ರಕಾರ ಈ ಕ್ಯಾನ್ಸರ್ ಹೆಂಗಸರಿಗಿಂತ ಹೆಚ್ಚಾಗಿ ಗಂಡಸರಿಗೆ ಬರುತ್ತದೆಯಂತೆ. ಪ್ರತಿದಿನ 6ಗ್ರಾಂ ಉಪ್ಪು (2,300 ಮಿ.ಗ್ರಾಂ ಸೋಡಿಯಂ) ಅಥವಾ 1½ ಟೇ.ಸ್ಪೂ ಉಪ್ಪನ್ನು ಮಾತ್ರ ಪ್ರತಿದಿನಕ್ಕೆ ಸೇವಿಸಿ. ಉಪ್ಪಿನ ಬದಲಿಗೆ ನೀವು ಮಸಾಲೆ, ನಿಂಬೆ ಹಣ್ಣಿನ ರಸ ಅಥವಾ ಗಿಡಮೂಲಿಕೆಗಳ ಸ್ವಾದವನ್ನು ಆಹಾರಕ್ಕೆ ಬಳಸಬಹುದು.
"ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂಗ ರುಚಿಯಿಲ್ಲ" ಎಂಬ ಗಾದೆಯನ್ನು ನೀವು ಕೇಳಿಯೇ ಇರುತ್ತೀರಿ. ಆಹಾರ ಪದಾರ್ಥಗಳಲ್ಲಿ ಬಹುತೇಕವು ಒಂದು ಚಿಟಿಕೆ ಉಪ್ಪಿನಿಂದ ಇನ್ನಷ್ಟು ರುಚಿಕರವಾಗಿರುತ್ತವೆ. ಬರೀ ತರಕಾರಿ, ಹಣ್ಣು ಮತ್ತು ಮಾಂಸಗಳಷ್ಟೇ ಅಲ್ಲ. ಐಸ್ ಕ್ರೀಮ್ ಮತ್ತು ಚಾಕೊಲೇಟ್ ಸಹ ಉಪ್ಪಿನ ಜೊತೆಗೆ ಸರಿಯಾಗಿ ಹೊಂದಿಕೊಳ್ಳುತ್ತವೆ. ಅಕ್ಯಾಡೆಮಿ ಆಫ್ ನ್ಯೂಟ್ರಿಷನ್ ಅಂಡ್ ಡಯೆಟಿಕ್ಸ್ ಪ್ರಕಾರ ಪ್ರತಿದಿನ 1,500 ಮಿ.ಗ್ರಾಂ.ನಿಂದ 2,300 ಮಿ.ಗ್ರಾಂ ಉಪ್ಪನ್ನು (ಅಂದಾಜು 1 ಟೇ.ಸ್ಪೂ) ಸೇವಿಸುವುದು ಒಳ್ಳೆಯದು.

ಉಪ್ಪನ್ನು ಅದರ ರುಚಿ, ತಯಾರಿಸುವ ವಿಧಾನ, ಅದರಲ್ಲಿರುವ ಕಲುಷಿತ ವಸ್ತುಗಳು ಮತ್ತು ಬಳಕೆಯ ಉದ್ದೇಶದ ಆಧಾರದ ಮೇಲೆ ವಿಂಗಡಿಸಲಾಗುತ್ತದೆ. ಉಪ್ಪು ನಮ್ಮ ಜೀವನದ ಅವಿಭಾಜ್ಯ ಅಂಗ. ಇದನ್ನು ನಾವು ಆಹಾರ ತಯಾರಿಸಲು ಮಾತ್ರ ಬಳಸುವುದಿಲ್ಲ. ಆರೋಗ್ಯ ಸುಧಾರಿಸಲು ಸಹ ಬಳಸಲಾಗುತ್ತದೆ. ನಿಮ್ಮ ಆರೋಗ್ಯ ಮತ್ತು ಅದರ ಸುಧಾರಣೆಗೆ ಹಿತವೆನಿಸುವ ಉಪ್ಪನ್ನು ಆಯ್ಕೆ ಮಾಡಿಕೊಂಡು ಬಳಸಲು, ನಿಮಗೆ ಸಹಾಯ ಮಾಡುವುದಕ್ಕಾಗಿ ನಾವು ಈ ಲೇಖನವನ್ನು ತಂದಿದ್ದೇವೆ, ಮುಂದೆ ಓದಿ...

   
 
ಹೆಲ್ತ್