ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ತರಹ ಗೂಗಲ್ ಕಾಲಿಡದ ಕ್ಷೇತ್ರವಿಲ್ಲ ಎನ್ನಬಹುದು. ಏಕೆಂದರೆ, ಗೂಗಲ್ ಸಂಸ್ಥೆ ಇದೀಗ ಮತ್ತೊಂದು ಹೊಸ ಪ್ರಯತ್ನದಲ್ಲಿದ್ದು, ಅತೀ ಶೀಘ್ರದಲ್ಲಿಯೇ ಮತ್ತೊಂದು ಪ್ರಮುಖ ತಂತ್ರಜ್ಞಾನ ಕಂಪನಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ತಯಾರಾಗಿದೆ. ಹೌದು, ಗೂಗಲ್ ಬರೋಬ್ಬರಿ 280 ಕೋಟಿ ಮೊತ್ತಕ್ಕೆ ಒಂದು ಪ್ರಮುಖ ಕಂಪನಿಯ ತಂತ್ರಜ್ಞಾನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ರೆಡಿಯಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.
ಕ್ಯಾಲಿಫೊರ್ನಿಯಾದ ಪ್ರಸಿದ್ಢ ಸ್ಮಾರ್ಟ್ವಾಚ್ ತಯಾರಿಕಾ ಕಂಪನಿ ಫ್ಯಾಶನ್ ಮತ್ತು ಆಕ್ಸೆಸರಿ ಸಮೂಹಕ್ಕೆ ಸೇರಿದ 'ಪೊಸಿಲ್' ಒಂದು ಪ್ರಸಿದ್ಢ ಸ್ಮಾರ್ಟ್ವಾಚ್ ಬ್ರ್ಯಾಂಡ್ ಆಗಿದ್ದು, .ಈ ಸ್ಮಾರ್ಟ್ವಾಚ್ನ ತಂತ್ರಜ್ಞಾನವನ್ನು ಗೂಗಲ್ 280 ಕೋಟಿ ಮೊತ್ತಕ್ಕೆ ಖರೀದಿಸಲು ಮುಂದಾಗಿದೆ ಎಂದು ಹೇಳಲಾಗಿದೆ. ಈ ಮೂಲಕ ಸ್ಮಾರ್ಟ್ವಾಚ್ ಮಾರುಕಟ್ಟೆಯಲ್ಲಿಯೂ ಸಹ ಗೂಗಲ್ ತನ್ನ ಅಧಿಪತ್ಯವನ್ನು ಸ್ಥಾಪಿಸಲು ಸಜ್ಜಾಗಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಜನಪ್ರಿಯವಿರುವ ಪೊಸಿಲ್ ಸ್ಮಾರ್ಟ್ವಾಚ್ನ ಪಾಲುದಾರಿಕೆ ಪಡೆಯುವ ಮೂಲಕ, ಜನಪ್ರಿಯ ಸ್ಮಾರ್ಟ್ವಾಚ್ ಸಂಸ್ಥೆಗಳಾದ ಆಪಲ್, ಫಿಟ್ಬಿಟ್ ಮತ್ತು ಇತರೆ ಕೆಲವು ಪ್ರಮುಖ ಸ್ಮಾರ್ಟ್ವಾಚ್ ಕಂಪನಿಗಳಿಗೆ ಭಾರಿ ಪೈಪೋಟಿ ನೀಡಲು ಗೂಗಲ್ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪೊಸಿಲ್ ಸ್ಮಾರ್ಟ್ವಾಚ್ ಜನರಿಗೆ ಉತ್ತಮ ಉತ್ಪನ್ನವು ಹಾಗೂ ತ್ವರಿತವಾಗಿ ಮಾಹಿತಿ ನೀಡುವ ಸಾಧನಗಳಾಗಿವೆ ಎಂದು ಗೂಗಲ್ ಹೇಳಿದೆ.
ಪೊಸಿಲ್ ಸ್ಮಾರ್ಟ್ವಾಚಿನ ಅತ್ಯುತ್ತಮ ತಂತ್ರಜ್ಞಾನದೊಂದಿಗೆ ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ನಾವು ಈಗ ಹೊಸ ಪಾಲುದಾರ ಆಗಿರುವ ಗೂಗಲ್ ಸಂಸ್ಥೆಯ ಜತೆಗೂಡಿ ತಂತ್ರಜ್ಞಾನವನ್ನು ಇನ್ನಷ್ಟು ಉತ್ತಮಗೊಳಿಸಿ ಮಾರುಕಟ್ಟೆಯಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತೆವೆ ಎಂದು ಪೊಸಿಲ್ ಸ್ಮಾರ್ಟ್ವಾಚಿನ ತಾಂತ್ರಿಕ ಅಧಿಕಾರಿ ಗ್ರೇಗ್ ಮೆಕ್ವೆವ್ ತಿಳಿಸಿದ್ದಾರೆ. ಈ ಕೆಳಗೆ ಕೆಲವು ಪ್ರಸಿದ್ಢ ಸ್ಮಾರ್ಟ್ವಾಚ್ಗಳ ಬಗ್ಗೆ ಕಿರು ಮಾಹಿತಿ ನೀಡಿದ್ದೇವೆ, ಅವುಗಳ ಬಗ್ಗೆ ಸ್ವಲ್ಪ ತಿಳಿಯಿರಿ.