Back
Home » ಇತ್ತೀಚಿನ
ಏಕಕಾಲಕ್ಕೆ ಲಾಂಚ್ ಆಗಲಿವೆ ಮೊಟೊರೊಲಾದ ಈ ನಾಲ್ಕು ಸ್ಮಾರ್ಟ್‌ಫೋನ್‌ಗಳು!
Gizbot | 19th Jan, 2019 04:20 PM
 • ಮೊಟೊ G7

  ಮೊಟೊ ಜಿ7 ಸ್ಮಾರ್ಟ್‌ಫೋನ್‌ 6.2 ಇಂಚಿನೊಂದಿದೆ ಉತ್ತಮ ಕ್ವಾಲ್ಕಂ ಸ್ನಾಪ್‌ಡ್ರಾಗನ್ 660 SoC ಪ್ರೊಸೆಸರ್ ಅನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಅತ್ಯುತ್ತಮ ಬ್ಯಾಟರಿ ಬಾಳಿಕೆ ಮತ್ತು ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಲಾಗುತ್ತದೆ ಎನ್ನುತ್ತಿವೆ ಮಾಹಿತಿಗಳು. ಈ ಸ್ಮಾರ್ಟ್‌ಫೋನ್ ಎರಡು ವೇರಿಯಂಟ್ ನಲ್ಲಿ ಬರುವ ಸಾಧ್ಯತೆಗಳಿದ್ದು, ಕಪ್ಪು ಮತ್ತು ಬಿಳಿ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯಲಿದೆ ಎನ್ನಲಾಗುತ್ತಿದೆ.


 • ಮೊಟೊ G7 ಪ್ಲಸ್

  1080 x 2340 ಪಿಕ್ಸಲ್ ರೆಸಲ್ಯೂಶನ್‌ನೊಂದಿಗೆ 6.4 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಮೊಟೊ G7 ಪ್ಲಸ್ ಹೊಂದಿರಬಹುದಾದ ಸಾಧ್ಯತೆಗಳು ಅಧಿಕವಾಗಿವೆ. ಕೆಂಪು ಮತ್ತು ನೀಲಿ ಬಣ್ಣಗಳಲ್ಲಿ ಈ ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಪೋನ್ ವಾಟರ್ ಡ್ರಾಪ್ ನಾಚ್ ಸಹ ಹೊಂದಿರುವುದು ಎಂದು ಹೇಳಲಾಗುತ್ತಿದೆ.


 • ಮೊಟೊ G7 ಪ್ಲೇ

  ಮೊಟೊ G7 ಪ್ಲೇ ಸ್ಮಾರ್ಟ್‌ಫೋನ್‌ 6.4 ಇಂಚನ್ ಫುಲ್ ಹೆಚ್‌ಡಿ ಸ್ಕ್ರೀನ್ ಹೊಂದಿರುವುದು ಮತ್ತು ಕ್ವಾಲ್ಕಂ ಸ್ನಾಪ್‌ಡ್ರಾಗನ್ 632 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸುವುದು ಎನ್ನಲಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ ಗೋಲ್ಡ ಮತ್ತು ಕಪ್ಪು ಕಲರ್‌ಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಡಿಸೈನ್ ವಿನ್ಯಾಸದಲ್ಲಿ ತುಂಬಾ ಆಕರ್ಷಕವಾಗಿರಲಿದೆ ಎನ್ನಲಾಗುತ್ತಿದೆ ಮತ್ತು ಇದರ ಬೆಲೆಯು ಮಧ್ಯಮ ಶ್ರೇಣಿಯಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.


 • ಮೊಟೊ G7 ಪವರ್‌

  ಮೊಟೊ G7 ಸರಣಿಯಲ್ಲಿಯೇ, G7 ಪವರ್ ಸ್ಮಾರ್ಟ್‌ಫೋನ್‌ ಹೈ ಎಂಡ್ ಮಾದರಿ ಎನ್ನಲಾಗುತ್ತಿದ್ದು, ಕ್ವಾಲ್ಕಂ ಸ್ನಾಪ್‌ಡ್ರಾಗನ್ 625 ಪ್ರೊಸೆಸರ್ ಹೊಂದಿರಲಿದೆ. ಇದರೊಂದಿಗೆ 5000mAh ಸಾಮರ್ಥ್ಯದ ಅತ್ಯುತ್ತಮ ಬ್ಯಾಟರಿ ಮತ್ತು ಫಾಸ್ಟ್ ಚಾರ್ಜರ್ ನೀಡಲಾಗುವುದು ಎನ್ನಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಎರಡು ಬಣ್ಣಗಳ ಆಯ್ಕೆಯನ್ನು ಹೊಂದಿದ್ದು, ನೀಲಿ ಮತ್ತು ನೆರಳೆ ಕಲರ್‌ಗಳಲ್ಲಿ ಗ್ರಾಹಕರಿಗೆ ಲಭ್ಯವಾಗುವುದು ಎಂದು ಹೇಳಲಾಗುತ್ತಿದೆ.


 • ಲಭ್ಯತೆ ಮತ್ತು ಬೆಲೆ?

  ಮೊಟೊರೊಲಾ ಬಿಡುಗಡೆ ಮಾಡಲಿರುವ G7 ಸರಣಿಯ ಮೊಟೊ G7, ಮೊಟೊ G7 ಪ್ಲಸ್, ಮೊಟೊ G7 ಪ್ಲೇ, ಮತ್ತು ಮೊಟೊ G7 ಪವರ್‌ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಮಾರುಕಟ್ಟೆಗೆ ಶೀಘ್ರದಲ್ಲಿಯೇ ಲಭ್ಯವಾಗಲಿವೆ ಎಂದು ಹೇಳಲಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ಗಳ ಬೆಲೆ ನಿಖರವಾಗಿ ಲಭ್ಯವಿಲ್ಲ ಆದರೆ ಮಧ್ಯಮ ಶ್ರೇಣಿಯಲ್ಲಿ ಬೆಲೆ ಹೊಂದಿರಲಿವೆ ಎನ್ನಲಾಗುತ್ತಿದೆ.
ಮೊಟೊ ಎಂದೇ ಜನಪ್ರಿಯವಾಗಿರುವ ಮೊಟೊರೊಲಾ ಸಂಸ್ಥೆ ಪ್ರತಿ ಬಾರಿ ವಿನೂತನ ಫೀಚರ್‌ಗಳನ್ನು ತನ್ನ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರಿಗೆ ಪರಿಚಯಿಸುತ್ತಲೇ ಬಂದಿದ್ದು, ಇದೀಗ ಮತ್ತೊಂದು ವಿಶೇಷ ಅಚ್ಚರಿಯ ಸರಣಿಯೊಂದಿಗೆ ಸ್ಮಾರ್ಟ್‌ಫೋನ್ ಪ್ರಿಯರ ಮನಗೆಲ್ಲಲೂ ತಯಾರಾಗಿದೆ. ಹಾಗಾದರೇ ಮೊಟೊರೊಲಾ ಸಂಸ್ಥೆ ಮಾರುಕಟ್ಟೆಗೆ ಪರಿಚಯಿಸಲಿರುವ ಆ ಹೊಸ ಅಚ್ಚರಿ ಏನೀರಬಹುದು?

ಗುಣಮಟ್ಟದ ಸ್ಮಾರ್ಟ್‌ಫೋನ್ ತಯಾರಿಕೆಗೆ ಹೆಸರಾಗಿರುವ ಮೊಟೊರೊಲಾ ಸಂಸ್ಥೆ ಈಗಾಗಲೇ ತನ್ನ ಜನಪ್ರಿಯ ಸ್ಮಾರ್ಟ್‌ಫೋನ್‌ ಮಾದರಿಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಹೊಂದಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಮುಂದುವರಿದು ಗ್ರಾಹಕರಿಗೆ ನೂತನ G7 ಹೆಸರಿನ ಸ್ಮಾರ್ಟ್‌ಫೋನ್‌ ಸರಣಿಯೊಂದನ್ನು ಮೊಟೊರೊಲಾ ಕಂಪನಿ ಬಿಡುಗಡೆ ಮಾಡಲಿರುವ ಮಾಹಿತಿ ಈಗ ಬಹಿರಂಗವಾಗಿದೆ.

ಮೊಟೊರೊಲಾ ಸಂಸ್ಥೆಯ ಅಚ್ಚರಿಯ ಸರಣಿ ಎನ್ನಲಾಗಿರುವ G7 ಸ್ಮಾರ್ಟ್‌ಫೋನ್‌ ಸರಣಿಯು ಮೊಟೊ G7, ಮೊಟೊ G7 ಪ್ಲಸ್, ಮೊಟೊ G7 ಪ್ಲೇ ಮತ್ತು ಮೊಟೊ G7 ಪವರ್ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಈ ನಾಲ್ಕು ಸ್ಮಾರ್ಟ್‌ಫೋನ್‌ಗಳನ್ನು ಮೊಟೊ ಒಟ್ಟಿಗೆ ಮಾರುಕಟ್ಟೆಗೆ ಪರಿಚಯಿಸುವುದಾಗಿ ಹೇಳಲಾಗುತ್ತಿದ್ದು, ಇದು ಗ್ರಾಹಕರ ನಿರೀಕ್ಷೆ ಹೆಚ್ಚಿಸಿದೆ.

ಮೊಟೊ ಸಂಸ್ಥೆಯ G7 ಸರಣಿಯ ಸ್ಮಾರ್ಟ್‌ಫೋನ್‌ಗಳು ಮಧ್ಯಮ ಶ್ರೇಣಿಯ ಬೆಲೆ ಹೊಂದಿರುವುದು ಬಹುತೇಕ ಖಚಿತ ಎನ್ನುತ್ತಿವೆ ಮಾಹಿತಿಗಳು. ಮೊಟೊ G7 ಸ್ಮಾರ್ಟ್‌ಫೋನ್‌ಗಳು, ಇತರೆ ಕಂಪನಿಗಳ ಮಧ್ಯಮ ಶ್ರೇಣಿ ಬೆಲೆ ಹೊಂದಿರುವ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಪೈಪೋಟಿ ನೀಡಲಿವೆ ಎನ್ನಲಾಗುತ್ತಿದೆ. ಹಾಗಾದರೇ G7 ಸರಣಿಯ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಹೇಗಿವೆ ನೋಡೋಣ ಬನ್ನಿ.

   
 
ಹೆಲ್ತ್