Back
Home » ಇತ್ತೀಚಿನ
ಎಲ್‌ಜಿ ಕಂಪನಿಯ ಈ ನ್ಯೂ ಸ್ಮಾರ್ಟ್‌ಫೋನ್‌ ಭಾರತದಲ್ಲಿಗ ಲಭ್ಯ!
Gizbot | 20th Jan, 2019 05:05 AM
 • ಸ್ಪೆಷಲ್ ಕ್ಯಾಮೆರಾ

  ಎಲ್‌ಜಿಯ ವಿ40 ThinQ' ಸ್ಮಾರ್ಟ್‌ಫೋನ್ ಒಟ್ಟು ಐದು ಕ್ಯಾಮೆರಾಗಳನ್ನು ಹೊಂದಿದ್ದು, ಹಿಂಭಾಗದಲ್ಲಿ 12+16+12 ಮೆಗಾಪಿಕ್ಸಲ್ ಇರುವ ಮೂರು ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8+5 ಮೆಗಾಪಿಕ್ಸಲ್ ಒಳಗೊಂಡ ಎರಡು ಕ್ಯಾಮೆರಾಗಳನ್ನು ಹೊಂದಿದೆ. ಎಲ್‌ಜಿಯ ಈ ಕ್ಯಾಮೆರಾ ಫೀಚರ್ ಫೋಟೋಗ್ರಾಫಿಯಲ್ಲಿ ಆಸಕ್ತಿ ಇರುವ ಗ್ರಾಹಕರಿಗೆ ಅತ್ಯುತ್ತಮವಾಗಿದೆ ಎನ್ನಬಹುದು.


 • ಸ್ಕ್ರೀನ್ ವಿಶೇಷತೆ

  1440 x 2960 ಪಿಕ್ಸಲ್ ಒಳಗೊಂಡ 6.3 ಇಂಚಿನ P-OLED ಡಿಸ್‌ಪ್ಲೇ ಹೊಂದಿದ್ದು, 522ppi ಪಿಕ್ಸಲ್ ಸಾಂದ್ರತೆಯನ್ನು ಹೊಂದಿದೆ. ಇದರೊಂದಿಗೆ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿದೆ. ಎಲ್‌ಜಿಯ 'ವಿ40 ThinQ' ಸ್ಮಾರ್ಟ್‌ಫೋನ್ ಅಂದವಾದ ಡಿಸೈನ್‌ ನೊಂದಿಗೆ ವಾಟರ್‌ ರೆಸಿಸ್ಟನ್ಸ ಮತ್ತು ದೂಳಿನಿಂದ ರಕ್ಷಣೆ ನೀಡುವ ರಚನೆ ಇದೆ. ಎಲ್‌ಜಿ ಸಂಸ್ಥೆ OLED ಡಿಸ್‌ಪ್ಲೇಯನ್ನು ಈ ಮೊದಲು ತನ್ನ ಸ್ಮಾರ್ಟ್‌ಟಿವಿಗಳಲ್ಲಿ ಪರಿಚಯಿಸಿತ್ತು.


 • ಪ್ರೊಸೆಸರ್ ಹೇಗಿದೆ?

  ಈ ಸ್ಮಾರ್ಟ್‌ಫೋನ್‌ ಅಂಡ್ರಾಯ್ಡ್ 8.1 ನೊಂದಿಗೆ ಸ್ನಾಪ್‌ಡ್ರಾಗನ್ 845 SoC ಆಕ್ಟಾಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವುದು. ಇದರೊಂದಿಗೆ 6GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ನೀಡಲಾಗಿದ್ದು, ಗ್ರಾಹಕರಿಗೆ 2TB ವರೆಗೂ ಬಾಹ್ಯ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆಂಡ್ರಾಯ್ಡ್ ಅಪ್‌ಗ್ರೇಡ್‌ ಮಾಡಿಕೊಳ್ಳಲು ಅವಕಾಶವಿದೆ.


 • ಬ್ಯಾಟರಿ ಮತ್ತು ಮಲ್ಟಿಮೀಡಿಯಾ

  ವಿ40 ThinQ ಸ್ಮಾರ್ಟ್‌ಫೋನ್‌ಗೆ 3,300mAh ಸಾಮರ್ಥ್ಯ ಹೊಂದಿದ ಬ್ಯಾಟರಿಯನ್ನು ನೀಡಲಾಗಿದ್ದು, ಬ್ಯಾಟರಿ ಬಾಳಿಕೆ ಉತ್ತಮವಾಗಿದೆ. ಇದರೊಂದಿಗೆ ಫಾಸ್ಟ್ ಚಾರ್ಜಿರ್ ನೀಡಲಾಗಿದ್ದು, ಇದರಿಂದ ಸಹಾಯದಿಂದ ಪೋನ್ ವೇಗವಾಗಿ ಬ್ಯಾಟರಿ ಚಾರ್ಜಿಂಗ್ ಪಡೆದುಕೊಳ್ಳುತ್ತದೆ. ಮಲ್ಟಿಮೀಡಿಯಾಗಾಗಿ 3.5 mm ಆಡಿಯೋ ಜಾಕ್‌ ನೀಡಿದ್ದು, ಇದರ ಮ್ಯೂಸಿಕ್ ಔಟ್‌ಪುಟ್ ಸಹ ಉತ್ತಮವಾಗಿದೆ.


 • ಬೆಲೆ ಎಷ್ಟು?

  ಅಮೆಜಾನ್ ಜಾಲತಾಣದಲ್ಲಿ ಈ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿರುವ ಎಲ್‌ಜಿ ವಿ40 ThinQ ಸ್ಮಾರ್ಟ್‌ಫೋನ್‌ಗೆ ಭಾರತದಲ್ಲಿ ನಿಗದಿಯಾದ ಬೆಲೆ 60,000 ರೂಪಾಯಿಗಳು ಆದರೆ ಅಮೆಜಾನ್‌ ಡಿಸ್ಕೌಂಟ್ ಆಫರ್‌ನಲ್ಲಿ ಇದರ ಬೆಲೆ Rs. 49,990 ರೂಪಾಯಿಗಳು. ಗ್ರೇ ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯ.
ತನ್ನ ಗುಣಮಟ್ಟದ ಉತ್ಪನ್ನಗಳಿಂದ ಮನೆ ಮಾತಾಗಿರುವ ಎಲ್‌ಜಿ ಸಂಸ್ಥೆಯು ಅತ್ಯುತ್ತಮ ಸಾರ್ಟ್‌ಫೋನ್‌ಗಳನ್ನು ಪರಿಚಯಿಸುವುದರ ಮೂಲಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿಯೂ ಸಹ ತನ್ನನ್ನು ಗುರುತಿಸಿಕೊಂಡಿದೆ. ಇದೀಗ ಎಲ್‌ಜಿ ವತಿಯಿಂದ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಸಂತಸದ ಸುದ್ದಿಯೊಂದು ಹೊರಬಂದಿದ್ದು, ಅದೇನೆಂದರೇ ಎಲ್‌ಜಿಯ ಬಹುನಿರೀಕ್ಷಿತ 'ವಿ40 ThinQ' ಸ್ಮಾರ್ಟ್‌ಫೋನ್ ಭಾರತಕ್ಕೆ ಕಾಲಿಟ್ಟಿದೆ.

ಹೌದು, ಈಗಾಗಲೇ ತನ್ನ ವಿಶೇಷ ಫೀಚರ್ಸ್‌ಗಳಿಂದ ಗ್ರಾಹಕರ ಕೂತುಹಲ ಹೆಚ್ಚಿಸಿದ್ದ, ಎಲ್‌ಜಿಯ ವಿ40 ThinQ' ಸ್ಮಾರ್ಟ್‌ಫೋನ್, ಇದೀಗ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪ್ರವೇಶ ಪಡೆದಿದೆ. ಅಮೆಜಾನ್ ಆನ್‌ಲೈನ್ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್‌ ಖರೀದಿಗೆ ಲಭ್ಯವಿದ್ದು, ಗ್ರಾಹಕರು ಅಮೆಜಾನ್ ಜಾಲತಾಣದಲ್ಲಿ V40 ThinQ ಸ್ಮಾರ್ಟ್‌ಫೋನ್‌ ಅನ್ನು ಆರ್ಡರ್ ಮಾಡಬಹುದಾಗಿದೆ. ಹಾಗಾದರೇ ಎಲ್‌ಜಿಯ ಈ ಸ್ಮಾರ್ಟ್‌ಫೋನ್‌ ಹೊಂದಿರುವ ಫೀಚರ್‌ಗಳನ್ನು ನೋಡೋಣ ಬನ್ನಿ.

   
 
ಹೆಲ್ತ್