Back
Home » ಇತ್ತೀಚಿನ
ತೆಂಗಿನ ಕಾಯಿ ಚಿಪ್ಪಿಗೆ 1400 ರುಪಾಯಿ! ಭಾರತೀಯರಿಗೆ ಶಾಕ್ ನೀಡಿದ ಅಮೇಜಾನ್
Gizbot | 20th Jan, 2019 07:05 AM
 • 1400 ರುಪಾಯಿಗೆ ತೆಂಗಿನ ಕಾಯಿ ಚಿಪ್ಪು!

  ತೆಂಗಿನ ಕಾಯಿ ಕರಟ ನಮ್ಮ ಪ್ರಕಾರ ವೇಸ್ಟು ಅಲ್ವಾ? ಅಡುಗೆಗೆ ಕಾಯಿ ಹೆರೆದ ಮೇಲೆ ಕರಟವನ್ನು ನಾವು ಕಸಕ್ಕೆ ಎಸಿಯೋದು. ಇದು ಸಾಮಾನ್ಯವಾಗಿ ಭಾರತೀಯರೆಲ್ಲರ ಮನೆಯಲ್ಲಿ ನಡೆಯುವ ದಿನಂಪ್ರತಿ ಕಾಯಕ. ಆದರೆ ಈ ಕರಟಕ್ಕೆ ಬೆಲೆ ಇದೆ ಅಂದರೆ ನಂಬ್ತೀರಾ? ಅದು ಒಂದೆರಡು ರುಪಾಯಿ ಅಲ್ಲ ಬದಲಾಗಿ 1400 ರುಪಾಯಿ!


 • ಅಮೇಜಾನ್ ಬೆಲೆ:

  ನಿಮಗೇನು ತಲೆಕೆಟ್ಟಿದ್ಯಾ? ಒಂದು ಕರಟಕ್ಕೆ 1400 ರುಪಾಯಿಯಾ ಅಂತ ನೀವು ನಮಗೆ ಬೈಯುತ್ತಿದ್ದರೆ ಒಮ್ಮೆ ಅಮೇಜಾನ್ ಇಂಡಿಯಾಕ್ಕೆ ಲಾಗಿನ್ ಆಗಿ "ನ್ಯಾಚುರಲ್ ಕೋಕೋನಟ್ ಶೆಲ್ ಕಪ್ " ಹುಡುಕಿ ನೋಡಿ. ಆಗ ನಿಮಗೇ ಗೊತ್ತಾಗುತ್ತೆ.


 • ಇಎಂಐ ಆಯ್ಕೆಯೂ ಲಭ್ಯ:

  ಬರೀ ಇದಿಷ್ಟೇ ಆಗಿದ್ರೆ ಪರವಾಗಿಲ್ಲ. ಒಂದು ವೇಳೆ ನಿಮಗೆ 1400 ರುಪಾಯಿಯನ್ನು ಒಂದೇ ಸಲ ಪಾವತಿಸಿ ತೆಂಗಿನಕಾಯಿ ಚಿಪ್ಪು ಖರೀದಿಸೋಕೆ ಆಗಿಲ್ಲ ಅನ್ಕೊಳಿ ಅದನ್ನು ಇಎಂಐ ಆಯ್ಕೆಯಲ್ಲೂ ಖರೀದಿಸಲು ಅಮೇಜಾನ್ ಅವಕಾಶ ನೀಡುತ್ತದೆ.


 • ನೈಸರ್ಗಿಕ ಮತ್ತು ಸಾವಯವದ ಹಣೆಪಟ್ಟಿ:

  ಸದ್ಯ ಮಾರುಕಟ್ಟೆಯಲ್ಲಿ ಯಾವುದೇ ವಸ್ತುವನ್ನು ಮಾರಾಟ ಮಾಡಲು ಇರುವ ಅತ್ಯುತ್ತಮ ವಿಧಾನ ಅಂದರೆ ನೈಸರ್ಗಿಕ ಮತ್ತು ಸಾವಯವ ಅನ್ನೋ ಹಣೆಪಟ್ಟಿಯನ್ನು ವಸ್ತುವಿಗೆ ಅಂಟಿಸುವುದು. ಹೌದು ಈಗಿನ ಕಾಲದ ಜನ ನೈಸರ್ಗಿಕ ಮತ್ತು ಸಾವಯವ ವಸ್ತು ಎಂದು ಹೇಳಿದರೆ ಸಾಕು ಮುಗಿಬಿದ್ದುಬಿಡುತ್ತಾರೆ. ಅಮೇಜಾನ್ ಕೂಡ ಅದನ್ನೇ ಮಾಡುತ್ತಿದೆ. ಅರ್ಧ ಕರಟವನ್ನು ಮಾರಾಟಕ್ಕೆ ಇಟ್ಟು ನ್ಯಾಚುರಲ್ ಬೌಲ್ ಎಂದು ಹೇಳಿದೆ.


 • ಒಡಕುಗಳಿರುವ ಬಗ್ಗೆ ಮೊದಲೇ ತಿಳಿಸಲಾಗಿರುತ್ತದೆ:

  ಅಷ್ಟೇ ಅಲ್ಲ ಇದು ನೈಸರ್ಗಿಕ ವಸ್ತುವಾಗಿರುವುದರಿಂದಾಗಿ ಸಣ್ಣಪುಟ್ಟ ಕ್ರ್ಯಾಕ್ ಗಳು ಮತ್ತು ಡೆಂಟ್ಸ್ ಗಳು ಇರುವ ಸಾಧ್ಯತೆ ಇದೆ ಎಂದು ಕೂಡ ತಿಳಿಸಿದೆ. ಅಲ್ಲಾ ನೀವೇ ಹೇಳಿ ತೆಂಗಿನ ಕಾಯಿ ಚಿಪ್ಪು ಇನ್ನೆಷ್ಟು ಗಟ್ಟಿ ಇರುತ್ತೆ? ಇದು ನಿಜವಾದ ತೆಂಗಿನಕಾಯಿಯ ಚಿಪ್ಪಾಗಿರುವುದರಿಂದ ಇದರಲ್ಲಿ ಒಡಕುಗಳಿರುವುದು ಸರ್ವೇಸಾಮಾನ್ಯ. ಅದೂ ಅಲ್ಲದೆ ಅಮೇಜಾನ್ ಕೊರಿಯರ್ ನಲ್ಲಿ ಕಳಿಸುವಾಗ ಚಿಪ್ಪು ಒಡೆದು ಹೋದ್ರು ಆಶ್ಚರ್ಯವಿಲ್ಲ ಬಿಡಿ.

  ಮಾರಾಟ ಸಂಸ್ಥೆಯ ಹೆಸರು ಸೆಂಚುರಿ ನೊವೆಲ್ಟಿ:

  ಸೆಂಚುರಿ ನೊವೆಲ್ಟಿ ಅನ್ನುವವರು ಇದರ ಮಾರಾಟಗಾರರಾಗಿದ್ದು ಇದರ ನಿಜವಾದ ಬೆಲೆ 3000 ರುಪಾಯಿಗಳಾಗಿದ್ದು ನೀವು ಅಷ್ಟು ಪಾವತಿಸುವ ಅಗತ್ಯವಿಲ್ಲ. ಆಫರ್ ನಲ್ಲಿ ಅಂದರೆ 1365 ರುಪಾಯಿಗೆ ಈ ತೆಂಗಿನ ಕಾಯಿ ಚಿಪ್ಪನ್ನು ಖರೀದಿಸುವ ಸುವರ್ಣಾವಕಾಶವಿದೆ ಎಂದು ಅಮೇಜಾನ್ ನಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲ ಇಎಂಐ ಆಯ್ಕೆ ಕೂಡ ಇದೆ ಎಂದು ತಿಳಿಸಲಾಗಿದೆ.ಅಂದರೆ ಕಂತಿನ ರೂಪದಲ್ಲೂ ತೆಂಗಿನ ಕಾಯಿ ಚಿಪ್ಪನ್ನ ಕೊಂಡುಕೊಬಹುದು.

  ವಾಟ್ಸ್ ಆಪ್ ನಲ್ಲಿ ಹರಿದಾಡಿದ ಸುದ್ದಿ:

  ಭಾರತೀಯರು ಹೆಚ್ಚಂದ್ರೆ 40 ರುಪಾಯಿವರೆಗೆ ಒಂದು ತೆಂಗಿನಕಾಯಿಯನ್ನು ಖರೀದಿಸುತ್ತಾರೆ. ಹಾಗಿರುವಾಗ ಇದರ ರೇಟ್ ಕೇಳಿ ದಂಗಾಗಿದ್ದಾರೆ ಮತ್ತು ವಾಟ್ಸ್ ಆಪ್ ನಲ್ಲಿ ಈ ಸುದ್ದಿ ಹರಿದಾಡುತ್ತಲೇ ಇದೆ.

  ಪಾರ್ಟಿ, ಫಂಕ್ಷನ್ ಗೆ ಡೆಕೊರೇಷನ್ ಐಡಿಯಾ:

  ಪಾರ್ಟಿ, ಫಂಕ್ಷನ್ ಮತ್ತು ಸೆಲೆಬ್ರೇಷನ್ ಮಾಡುವಾಗ ಡ್ರಿಂಕ್ಸ್ ಸರ್ವ್ ಮಾಡುವುದಕ್ಕೆ ಇದನ್ನು ಬಳಸಿ ನೈಸರ್ಗಿಕವಾಗಿರಿ ಎಂದು ಈ ಪ್ರೊಡಕ್ಟಿನ ವಿವರಣೆಯಲ್ಲಿ ತಿಳಿಸಲಾಗಿದೆ. ಟೇಬಲ್ ಡೆಕೋರೇಷನ್ ಗೂ ಇದು ಕ್ರಿಯೇಟೀವ್ ಆಗಿರುತ್ತದೆ ಎಂದು ಹೇಳಲಾಗಿದೆ. ಐಡಿಯಾ ಏನೋ ಓಕೆ ಆದರೆ ರೇಟ್ ಮಾತ್ರ ಬರೋಬ್ಬರಿ ಅಲ್ವಾ? ಆದರೆ ಅಮೇಜಾನ್ ನಲ್ಲಿ ಇಷ್ಟು ಹಣ ಕೊಟ್ಟು ತೆಂಗಿನಕಾಯಿ ಚಿಪ್ಪು ಖರೀದಿ ಮಾಡುವವರು ಇದ್ದಾರಾ ಅನ್ನೋದು ಪ್ರಶ್ನೆ?
ಈ ಸುದ್ದಿ ಕೇಳಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತೀರಿ, ಆಶ್ಚರ್ಯದಿಂದ ಕಣ್ಣರಳಿಸಿಕೊಳ್ಳುತ್ತೀರಿ. ಇಂತಹ ಬೆಲೆ ರೈತರಿಗೆ ಸಿಕ್ಕಿದ್ದರೆ ಈ ಭಾರತದ ರೈತರೆಲ್ಲ ಕೋಟಿಲಿ ಅಲ್ಲ ಬದಲಾಗಿ ಎಣಿಸೋಕೆ ಆಗದ ಸೊನ್ನೆಗಳಿರುವ ಮೊತ್ತದಷ್ಟು ದೊಡ್ಡ ಶ್ರೀಮಂತರಾಗಿರುತ್ತಿದ್ದರೇನೋ! ಇನ್ನು ಮುಂದೆ ಅವನನ್ನು ನಂಬಿದ್ರೆ ತೆಂಗಿನಕಾಯಿ ಚಿಪ್ಪೇ ಗತಿ ಅಂತ ಮಾತ್ರ ಬೈಯ್ಕೊಬೇಡಿ.

   
 
ಹೆಲ್ತ್