Back
Home » ಇತ್ತೀಚಿನ
ವಿವೋ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿ!
Gizbot | 21st Jan, 2019 12:00 PM
 • ವಿವೋ ನೆಕ್ಸ್

  * 1080X2316 ಪಿಕ್ಸಲ್‌ಗಳನ್ನು ಹೊಂದಿದ 6.5 ಇಂಚಿನ ಡಿಸ್‌ಪ್ಲೇ.
  * 2.2GHz ಆಕ್ಟಾಕೋರ್ ಪ್ರೊಸೆಸರ್ ಮತ್ತು 6GB RAM ಹಾಗೂ 128GB ಆಂತರಿಕ ಶೇಖರಣಾ ಸಾಮರ್ಥ್ಯ.
  * ಹಿಂಭಾಗದಲ್ಲಿ 12+5MP ಕ್ಯಾಮೆರಾ ಮತ್ತು 8MP ಸೆಲ್ಫೀ .
  * 4000mAh ಬ್ಯಾಟರಿ ಸಾಮರ್ಥ್ಯ ಇದೆ.
  * ದರ 39,990 ರೂ.ಗಳು ಆಗಿದ್ದು, 5,000 ರೂ.ಗಳ ವರೆಗೂ ಎಕ್ಸಚೇಂಜ್ ರಿಯಾಯಿತಿ ದೊರೆಯಲಿದೆ.


 • ವಿವೋ ವಿ11 ಪ್ರೋ

  * 1080X2340 ಪಿಕ್ಸಲ್‌ಗಳೊಂದಿಗೆ 6.4 ಇಂಚಿನ ಡಿಸ್‌ಪ್ಲೇ.
  * ಆಕ್ಟಾಕೋರ್ ಪ್ರೊಸೆಸರ್ ಮತ್ತು 6GB RAM ಹಾಗೂ 64GB ಆಂತರಿಕ ಸಂಗ್ರಹ ಸಾಮರ್ಥ್ಯವಿದೆ.
  * ಫೋನ್ ಹಿಂಭಾಗದಲ್ಲಿ 12+5MP ಪ್ರಾಥಮಿಕ ಕ್ಯಾಮೆರಾ ಮತ್ತು ಸೆಲ್ಫೀಗಾಗಿ 25MP ಕ್ಯಾಮೆರಾ ನೀಡಲಾಗಿದೆ.
  * ಬ್ಯಾಟರಿಯು 3400mAh ಶಕ್ತಿ ಹೊಂದಿದೆ.
  * ರಿಯಾಯಿತಿ ದರ 25,990 ರೂ.ಗಳು


 • ವಿವೋ ವಿ9 ಪ್ರೋ

  * 1080X2280 ಪಿಕ್ಸಲ್‌ಗಳನ್ನು ಹೊಂದಿರುವ 6.3 ಇಂಚಿನ ಡಿಸ್‌ಪ್ಲೇ ಇದೆ.
  * ಆಂಡ್ರಾಯ್ಡ್ 8.1 ನೊಂದಿಗೆ, ಆಕ್ಟಾಕೋರ್ ಪ್ರೊಸೆಸರ್ ಮತ್ತು 6GB RAM ಹಾಗೂ 64GB ಆಂತರಿಕ ಸಂಗ್ರಹ ಸಾಮರ್ಥ್ಯವಿದೆ.
  * ಫೋನ್ ಹಿಂಭಾಗದಲ್ಲಿ 13+2MP ಪ್ರಾಥಮಿಕ ಕ್ಯಾಮೆರಾ ಮತ್ತು ಸೆಲ್ಫೀಗಾಗಿ 16MP ಕ್ಯಾಮೆರಾ ನೀಡಲಾಗಿದೆ.
  * ಬ್ಯಾಟರಿಯು 3260mAh ಸಾಮರ್ಥ್ಯವನ್ನು ಹೊಂದಿದೆ.
  * ಆಫರ್ ಬೆಲೆ 13,990 ರೂ.ಗಳು


 • ವಿವೋ ವೈ83 ಪ್ರೋ

  * 720X1520 ಪಿಕ್ಸಲ್‌ಗಳನ್ನು ಹೊಂದಿರುವ 6.2 ಇಂಚಿನ ಡಿಸ್‌ಪ್ಲೇ ಇರಲಿದೆ.
  * ಆಂಡ್ರಾಯ್ಡ್ 8.1 ಓರಿಯೋ ನೊಂದಿಗೆ, ಆಕ್ಟಾಕೋರ್ ಪ್ರೊಸೆಸರ್ ಮತ್ತು 4GB RAM ಹಾಗೂ 64GB ಆಂತರಿಕ ಸಂಗ್ರಹ ಸಾಮರ್ಥ್ಯವಿದೆ.
  * ಫೋನ್ ಹಿಂಭಾಗದಲ್ಲಿ 13+2MP ಪ್ರಾಥಮಿಕ ಕ್ಯಾಮೆರಾ ಮತ್ತು ಸೆಲ್ಫೀಗಾಗಿ 8MP ಕ್ಯಾಮೆರಾ ನೀಡಲಾಗಿದೆ.
  * ಈ ಫೋನಿನ್ ಬ್ಯಾಟರಿ ಸಹ 3260mAh ಸಾಮರ್ಥ್ಯವನ್ನು ಹೊಂದಿದೆ.
  * ಆಫರ್ ಬೆಲೆ- 13,990 ರೂ.ಗಳು


 • ವಿವೋ ವೈ95

  * 6.2 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಇರಲಿದೆ.
  * ಆಕ್ಟಾಕೋರ್ ಪ್ರೊಸೆಸರ್ ಮತ್ತು 4GB RAM ಹಾಗೂ 64GB ಆಂತರಿಕ ಸಂಗ್ರಹ ಸಾಮರ್ಥ್ಯವಿದೆ.
  * ಫೋನ್ ಹಿಂಭಾಗದಲ್ಲಿ 13+2MP ಪ್ರಾಥಮಿಕ ಕ್ಯಾಮೆರಾ ಮತ್ತು ಸೆಲ್ಫೀಗಾಗಿ 20MP ಕ್ಯಾಮೆರಾ ನೀಡಲಾಗಿದೆ.
  * ಬ್ಯಾಟರಿ 4030mAh ಸಾಮರ್ಥ್ಯವನ್ನು ಹೊಂದಿದೆ.
  * ಆಫರ್ ಬೆಲೆ- 15,990 ರೂ.ಗಳು
ಜನಪ್ರಿಯ ಇ ಕಾಮರ್ಸ್ ಶಾಪಿಂಗ್ ಜಾಲತಾಣ ಫ್ಲಿಪ್‌ಕಾರ್ಟ್ ಗಣರಾಜ್ಯೋತ್ಸವದ ಅಂಗವಾಗಿ ಮತ್ತೊಂದು ಆನ್‌ಲೈನ್‌ ಸೇಲ್ ಮೇಳವನ್ನು ಆಯೋಜಿಸಿದೆ. ಈ ಸೇಲ್‌ನಲ್ಲಿ ಗ್ಯಾಜೆಟ್ ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿಗಳ ಸುರಿಮಳೆ ಗೈಯುತ್ತಿದ್ದು, ಫ್ಲಿಪ್‌ಕಾರ್ಟ್ ಎಲ್ಲಾ ಕಂಪನಿಯ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಕೊಡುಗೆ ನೀಡಿದೆ. ಅದರಲ್ಲೂ ವಿವೋ ಕಂಪನಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡಲಾಗಿದೆ.

ಜನವರಿ 20 ರಿಂದ ಆರಂಭವಾಗಿರುವ ಈ ಫ್ಲಿಪ್‌ಕಾರ್ಟ್ ಗಣರಾಜ್ಯೋತ್ಸವ ಸೇಲ್ ಮೇಳದಲ್ಲಿ, ಚೀನಾ ಮೂಲದ ವಿವೋ ಕಂಪನಿಯ ಸ್ಮಾರ್ಟ್‌ಫೋನ್‌ಗಳಾದ ವಿವೋ ನೆಕ್ಸ್, ವಿವೋ ವಿ11 ಪ್ರೋ, ವಿ9 ಪ್ರೋ, ವೈ83 ಪ್ರೋ, ಸೇರಿದಂತೆ ವಿವೋನ್ ಇತರ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ಕ್ಯಾಶ್ ಡಿಸ್ಕೌಂಟ್ ಆಫರ್ ನೀಡಲಾಗುತ್ತಿದೆ. ಮೂರು ದಿನಗಳ ಈ ಸೇಲ್ ಮೇಳ ಇದೇ ಜನವರಿ 22 ಕ್ಕೆ ಮುಕ್ತಾಯವಾಗಲಿದೆ.

ವಿವೋ ಸ್ಮಾರ್ಟ್‌ಫೋನ್‌ಗಳ ಮೇಲೆ ಎಕ್ಸ್‌ಚೇಂಜ್ ಆಫರ್ ಸಹ ಇದ್ದು, ಹಳೇಯ ಸ್ಮಾರ್ಟ್‌ಫೋನ್ ನೀಡಿ ಖರೀದಿಸುವ ಹೊಸ ಫೋನ್ ಮೇಲೆ 3000ರೂ.ಗಳ ವರೆಗೂ ಡಿಸ್ಕೌಂಟ್ ಪಡೆಯಬಹುದು. ಇದರೊಂದಿಗೆ 18 ತಿಂಗಳ ವರೆಗೆ ನೋ ಕಾಸ್ಟ್ ಇಎಮ್ಐ ಸೌಲಭ್ಯ ಸಹ ನೀಡಲಾಗಿದ್ದು, ಗ್ರಾಹಕರಿಗೆ ಸಂತಸದ ಸುದ್ದಿ ಎನ್ನಬಹುದು. ಹಾಗಾದರೇ ವಿವೋ ಸ್ಮಾರ್ಟ್‌ಫೋನ್‌ಗಳ ಪ್ರಮುಖ ಫೀಚರ್‌ಗಳನ್ನು ನೋಡೋಣ.

   
 
ಹೆಲ್ತ್