Back
Home » ಆರೋಗ್ಯ
ಚಿಕನ್ ತಿಂದರೆ ದೇಹದ ತೂಕ ಕಡಿಮೆ ಆಗುತ್ತದೆಯೇ? ಖಂಡಿತವಾಗಿಯೂ ಹೌದು!
Boldsky | 21st Jan, 2019 02:52 PM
 • ಇದರಲ್ಲಿರುವ ಪ್ರೋಟೀನ್ ಕೂಡ ತೂಕ ಇಳಿಸುವಲ್ಲಿ ಸಹಾಯಮಾಡುತ್ತದೆ

  ಪ್ರಕೃತಿ ನಮಗೆ ಹಲವಾರು ರೀತಿಯ ಆಹಾರಗಳನ್ನು ನೀಡಿದೆ. ಪ್ರತಿಯೊಂದು ಆಹಾರದಲ್ಲೂ ನಮ್ಮ ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳು ಇದ್ದೇ ಇರುತ್ತದೆ. ಸಸ್ಯಹಾರಿಗಳಾಗಿರಲಿ ಅಥವಾ ಮಾಂಸಹಾರಿಗಳಾಗಿರಲಿ ಪ್ರತಿಯೊಬ್ಬರಿಗೂ ಅವರು ತಿನ್ನುವಂತಹ ಆಹಾರದಲ್ಲಿ ಪೋಷಕಾಂಶಗಳು ಇದ್ದೇ ಇರುತ್ತದೆ. ಆದರೆ ನಾನ್ ವೆಜ್ ಪ್ರಿಯರಿಗೆ ಮಾತ್ರ ಸಿಹಿ ಸುದ್ದಿ ಏನಪ್ಪಾ ಅಂದ್ರೆ, ದೇಹಕ್ಕೆ ಅಗತ್ಯವಾದ ಪ್ರೋಟೀನುಗಳು ಕೋಳಿ ಮಾಂಸದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೆಯಂತೆ. ಅಲ್ಲದೇ ಇದು ಸುಲಭವಾಗಿ ಜೀರ್ಣವಾಗುತ್ತದೆ. ಜೊತೆಗೆ ದೇಹದ ತೂಕವನ್ನು ಇಳಿಸುವಲ್ಲಿ ಯೂ ಸಹಾಯ ಮಾಡುತ್ತದೆ. ಇದರೊಂದಿಗೆ ಹಲವು ಅಮೈನೋ ಆಮ್ಲಗಳು ಸಹಾ ಇವೆ. ಇವು ದೇಹಕ್ಕೆ ಹೆಚ್ಚಿನ ಶಕ್ತಿ ಹಾಗೂ ಪೋಷಕಾಂಶಗಳನ್ನು ನೀಡುತ್ತವೆ. ಪೋಷಕಾಂಶಗಳ ಕೊರತೆಯಿಂದ ದೇಹ ಬಳಲಿದ್ದರೆ ಶೀಘ್ರವೇ ಪುನಃಶ್ಚೇತನ ಗೊಳ್ಳುತ್ತದೆ.


 • ತೂಕ ಇಳಿಸಲು

  ನಮಗೆಲ್ಲಾ ಗೊತ್ತಿರುವ ಹಾಗೆ ಬೊಜ್ಜು ತುಂಬಿದ ದೇಹ, ಅತಿಯಾದ ತೂಕ ಇದೆಲ್ಲವೂ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಇರುವಂತಹ ಸಮಸ್ಯೆಯಾಗಿದೆ. ದೇಹಕ್ಕೆ ಹೆಚ್ಚು ಶ್ರಮ ನೀಡದೆ ಮಾಡುವಂತಹ ಕೆಲಸಗಳಿಂದ ಇಂತಹ ಸಮಸ್ಯೆಗಳು ಬರುತ್ತದೆ. ಇಷ್ಟು ಮಾತ್ರವಲ್ಲದೆ ವ್ಯಾಯಾಮದ ಕೊರತೆ ಕೂಡ ಪ್ರಮುಖ ಕಾರಣವಾಗಿದೆ. ಒಂದು ಸಲ ದೇಹದ ತೂಕ ಹೆಚ್ಚಾದರೆ ಅದನ್ನು ಮತ್ತೆ ಇಳಿಸುವುದು ತುಂಬಾ ಕಷ್ಟದ ಕೆಲಸವಾಗುತ್ತದೆ. ಆಹಾರ ಪಥ್ಯ, ಕಠಿಣ ವ್ಯಾಯಾಮ ಮತ್ತು ಸರಿಯಾದ ಜೀವನ ಕ್ರಮದಿಂದ ತೂಕವನ್ನು ಇಳಿಸಿಕೊಳ್ಳಬಹುದು. ಆದರೆ ಇದಕ್ಕೆ ಶ್ರದ್ಧೆ ತುಂಬಾ ಮುಖ್ಯ. ಒಂದು ದಿನ ಆಹಾರ ಕ್ರಮವನ್ನು ಪಾಲಿಸಿಕೊಂಡು ವ್ಯಾಯಾಮ ಮಾಡಿ ಮರುದಿನ ಮತ್ತೆ ಸಿಕ್ಕಿದೆಲ್ಲವನ್ನೂ ತಿಂದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ತೂಕ ಇಳಿಸಿಕೊಳ್ಳಲು ಉದಾಸೀನ ಬಿಟ್ಟು ಶ್ರಮ ವಹಿಸಬೇಕು.. ಆದರೆ ಈಗ ನಾವು ತಿಳಿಸಲಿಕ್ಕೆ ಹೊರಟಿರುವುದು ಚಿಕನ್ ಬಗ್ಗೆ! ಹೌದು, ಚಿಕನ್‌ನ ಮಾಂಸ ತುಂಬಾನೇ ತೆಳುವಾಗಿರುವುದರಿಂದ ಹಾಗೂ ಇದರಲ್ಲಿ ಕೊಬ್ಬಿನಾಂಶವೂ ಅಧಿಕವಾಗಿಲ್ಲವಾಗಿರುವುದರಿಂದ ಚಿಕನ್ ತಿಂದ್ರೆ ಸುಲಭವಾಗಿ ತೂಕ ಇಳಿಸಬಹುದಂತೆ! ಆದರೆ ನೆನಪಿಡಿ ನಿಯಮಿತವಾಗಿ ಸೇವಿಸಿ.

  Most Read: ಚಿಕನ್ ಕಾಲಿನ ರಸಭರಿತ ಮಾಂಸ ಆರೋಗ್ಯಕ್ಕೆ ಬಹಳ ಒಳ್ಳೆಯದು! ಚಪ್ಪರಿಸಿ ತಿನ್ನಿ


 • ತೂಕ ಕಳೆದುಕೊಳ್ಳಲು ಸಹಾಯ ಮಾಡುವ ಸೆಲೆನಿಯಂ ಇದರಲ್ಲಿ ಅಧಿಕವಾಗಿದೆ

  ಕೋಳಿಮಾಂಸದಲ್ಲಿ ಉತ್ತಮ ಪ್ರಮಾಣದ ಸೆಲೆನಿಯಂ ಸಹಾ ಇದೆ. ಸೆಲೆನಿಯಂ ಅಂದರೇನು ಎಂದು ಅಚ್ಚರಿಯಾಯಿತೇ? ನಮ್ಮ ದೇಹದ ಜೀವರಾಸಾಯನಿಕ ಕ್ರಿಯೆಗಳು ಸುಲಲಿತವಾಗಿ ನಡೆಯಲು ಈ ಖನಿಜದ ಅವಶ್ಯಕತೆ ಇದೆ. ಅಷ್ಟೇ ಅಲ್ಲ, ಥೈರಾಯ್ಡ್ ಗ್ರಂಥಿಗಳ ಕ್ಷಮತೆಯನ್ನೂ ಹೆಚ್ಚಿಸುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಸೆಲೆನಿಯಂ ಪ್ರಮಾಣ ದೇಹದಲ್ಲಿ ಸೂಕ್ತವಾಗಿದ್ದರೆ ತೂಕ ಕಳೆದುಕೊಳ್ಳಲೂ ನೆರವಾಗುತ್ತದೆ ಹಾಗೂ ಹಲವಾರು ರೋಗಗಳಿಂದ ರಕ್ಷಣೆಯನ್ನೂ ಪಡೆಯುತ್ತದೆ. ಆದ್ದರಿಂದ ಮುಂದಿನ ಬಾರಿ ಕೋಳಿ ಮಾಂಸದ ಸೇವನೆಯಿಂದ ತೂಕ ಹೆಚ್ಚುತ್ತದೆ ಎಂಬ ಭಯ ಬೇಡ, ಬದಲಿಗೆ ಆರೋಗ್ಯಕರ ಎಂದು ನೆನಪಿನಲ್ಲಿರಲಿ. ಅಷ್ಟೇ ಅಲ್ಲದೆ ಚಿಕನ್ ತಿನ್ನುವುದರಿಂದ ಇನ್ನಷ್ಟು ಪ್ರಯೋಜನಗಳನ್ನೂ ಪಡೆಯಬಹುದು.. ಮುಂದೆ ಓದಿ


 • ತ್ವಚೆಯ ಸಮಸ್ಯೆಗೂ ಬಹಳ ಒಳ್ಳೆಯದು

  ನಮ್ಮಲ್ಲಿ ಹಲವರಿಗೆ ತುಟಿಗಳು ಒಡೆಯುವುದು, ಒಡೆಯುವ ಚರ್ಮ ಮೊದಲಾದವುಗಳು ಸತತವಾಗಿ ಕಾಡುತ್ತಿದ್ದು ಇದಕ್ಕಾಗಿ ಎಷ್ಟೋ ಬಗೆಯ ಔಷಧಿಗಳನ್ನು ಹಚ್ಚಿದರೂ ಶಾಶ್ವತ ಪರಿಹಾರ ದೊರಕಿರುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ರೈಬೋಫ್ಲೋವಿನ್ ಎಂಬ ಪೋಷಕಾಂಶದ ಕೊರತೆ. ಕೋಳಿಮಾಂಸದಲ್ಲಿ, ವಿಶೇಷವಾಗಿ ಕೋಳಿಯ ಯಕೃತ್‌ನಲ್ಲಿ ಈ ಪೋಷಕಾಂಶ ವಿಫುಲವಾಗಿದ್ದು ಪರಿಣಾಮವಾಗಿ ಘಾಸಿಗೊಂಡಿದ್ದ ಅಂಗಾಂಶಗಳು ಶೀಘ್ರವಾಗಿ ಪುನಃಶ್ಚೇತನಗೊಳ್ಳುತ್ತದೆ ಹಾಗೂ ಕಲೆರಹಿತ ಹಾಗೂ ಕೋಮಲ ತ್ವಚೆ ಪಡೆಯಲು ನೆರವಾಗುತ್ತದೆ. ಕೋಳಿ ಮಾಂಸದ ಪ್ರಯೋಜನಗಳು ಇನ್ನೂ ಹಲವಾರಿದ್ದು ಇವು ಕೆಲವು ಪ್ರಮುಖವಾದವು ಮಾತ್ರವಾಗಿದೆ.

  Most Read: ಪುರುಷರಲ್ಲಿ ಕಾಣಿಸಿಕೊಳ್ಳುವ 10 ಆರೋಗ್ಯ ಸಮಸ್ಯೆಗಳು-ಅಪ್ಪಿತಪ್ಪಿಯೂ ಇದನ್ನು ನಿರ್ಲಕ್ಷಿಸಬೇಡಿ


 • ನಾಟಿ ಕೋಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ

  ಬ್ರಾಯ್ಲರ್ ಕೊಳ್ಳುವುದಾದರೆ ಕೊಂಚ ದುಬಾರಿಯಾದರೂ ತೊಂದರೆಯಿಲ್ಲ, ಉತ್ತಮ ಗುಣಮಟ್ಟದ ಕೋಳಿಯನ್ನೇ ಕೊಳ್ಳಿ. ಕೊಂಡ ಬಳಿಕ ಪ್ಲಾಸ್ಟಿಕ್ ಚೀಲದಲ್ಲಿಯೇ ತನ್ನಿ ಹಾಗೂ ಪ್ರತಿ ಬಾರಿ ತಾಜಾ ಕೋಳಿಯ ಮಾಂಸವನ್ನೇ ಬಯಸಿ. ಸಾಧ್ಯವಾದಷ್ಟು ಕಡಿಮೆ ತೂಕದ ಕೋಳಿಗಳನ್ನು ಕೊಳ್ಳುವುದು ಇನ್ನೂ ಉತ್ತಮ.
  ಕೋಳಿಗಳಿಗೆ ಬೇಗನೇ ತೂಕ ಬರಲು ತಿನ್ನಿಸುವ ಹಾರ್ಮೋನುಗಳು, ಆಂಟಿಬಯೋಟಿಕ್ ಮತ್ತಿತರ ಔಷಧಿಗಳಿಂದ ಇದರ ದೇಹದಲ್ಲಿ ಆರ್ಸೆನಿಕ್ ಒಂದು ಉಪ ಉತ್ಪನ್ನವಾಗಿ ಬಿಡುಗಡೆಯಾಗುತ್ತದೆ. ವಿಚಿತ್ರವೆಂದರೆ ಈ ವಿಷ ಕೋಳಿಯ ದೇಹದಲ್ಲಿದ್ದರೂ ಕೋಳಿ ಈ ವಿಷಕ್ಕೆ ಸಾಯುವುದಿಲ್ಲ. ಬದಲಿಗೆ ಇದರ ಮಾಂಸವನ್ನು ಸೇವಿಸಿದವರಿಗೆ ಪ್ರಾಣಾಪಾಯ ಉಂಟುಮಾಡುತ್ತದೆ.


 • ನೆನಪಿನ ಶಕ್ತಿ ಕಡಿಮೆ ಆಗುವ ಕಾಯಿಲೆ ಇದ್ದವರಿಗೆ ಬಹಳ ಒಳ್ಳೆಯದು

  ಅಲ್ಝೈಮರ್ ಕಾಯಿಲೆಯು ನರ ಅವನತಿಯ ಕಾಯಿಲೆಯಾಗಿದ್ದು, ಇದು ನಿಧಾನವಾಗಿ ಬಂದು, ಸಮಯ ಕಳೆದಂತೆ ಮತ್ತಷ್ಟು ಕೆಟ್ಟದಾಗುವುದು. ಅಲ್ಝೈಮರ್ ಕಾಯಿಲೆ ಅಥವಾ ನೆನಪಿನ ಶಕ್ತಿ ಕಡಿಮೆ ಆಗುವ ಕಾಯಿಲೆ ಬಂದಿರುವ ರೋಗಿಗಳಿಗೆ ನೆನಪಿನ ಶಕ್ತಿಯು ತುಂಬಾ ಕಡಿಮೆಯಿರುವುದು. ಇದು ಕೆಲವು ಸಾಮಾನ್ಯ ಲಕ್ಷಣವಾಗಿದೆ. ಭಾಷೆಯ ಸಮಸ್ಯೆ, ದಿಗ್ಭ್ರಮೆ, ಪ್ರೇರಣೆ ಕೊರತೆ ಇತ್ಯಾದಿಗಳು ಬರಬಹುದು. ಇಂತಹ ಕಾಯಿಲೆಗಳಿಂದ ಬಳಲುತ್ತಿರುವವರು, ಚಿಕನ್ ಹಾಗೂ ಚಿಕನ್ ಲಿವರ್ ಸೇವಿಸುವುದರಿಂದ ಬಹಳ ಬೇಗನೇ ಈ ಕಾಯಿಲೆಯನ್ನು ನಿಯಂತ್ರಿಸಬಹುದು.
ನಾನ್ ವೆಜ್ ಪ್ರಿಯರಿಗೆ ಕೋಳಿಯ ಪದಾರ್ಥಗಳನ್ನು ತಿನ್ನುವುದು ಎಂದರೆ ಪಂಚಪ್ರಾಣ! ಕೋಳಿಯಿಂದ ತಯಾರಿಸಿದ ಯಾವುದೇ ಪದಾರ್ಥಗಳನ್ನು ಇಷ್ಟಪಡದವರು ಇಲ್ಲವೆನ್ನಬಹುದು. ಈಗೀಗ ತಂದೂರಿ ಚಿಕನ್, ತಿಕ್ಕಾದಂತಹ ವಿವಿಧ ರೀತಿಯ ರುಚಿಕರ ಕೋಳಿ ಖಾದ್ಯಗಳು ಸಖತ್ ಫೇಮಸ್ ಕೂಡ ಆಗುತ್ತಿದೆ. ಅದರಲ್ಲೂ ಇಂದಿನ ದಿನಗಳಲ್ಲಿ ಹೋಟೆಲ್‌ಗೆ ಹೋದರೆ, ನಮಗೆ ಬೇಕಾಗುವ ಯಾವುದೇ ಬಗೆ ಬಗೆಯ ಚಿಕನ್ ಖಾದ್ಯಗಳು ಸಿಗುವುದು. ಇದರಿಂದಲೇ ಇಂದು ಚಿಕನ್ ಎನ್ನುವುದು ವಿಶ್ವದೆಲ್ಲೆಡೆಯಲ್ಲಿ ತುಂಬಾ ಜನಪ್ರಿಯವಾಗಿದೆ.

ಚಿಕನ್ ನಲ್ಲಿ ಇರುವಂತ ಕೆಲವೊಂದು ಪೋಷಕಾಂಶಗಳು ಕೂಡ ದೇಹಕ್ಕೆ ತುಂಬಾ ಒಳ್ಳೆಯದು. ಈ ಎಲ್ಲಾ ಕಾರಣಗಳಿಂದಾಗಿ ಚಿಕನ್ ಅನ್ನು ಪ್ರತಿಯೊಬ್ಬರು ಇಷ್ಟಪಡುವರು. ಚಿಕನ್ ಆರೋಗ್ಯಕ್ಕೆ ಒಳ್ಳೆಯದಾ ಎನ್ನುವ ಪ್ರಶ್ನೆಯು ಕಾಡುವುದು. ಹೌದು, ಖಂಡಿತವಾಗಿಯೂ. ಒಳ್ಳೆಯ ರುಚಿಯನ್ನು ಹೊಂದಿರುವಂತಹ ಕೋಳಿ ಮಾಂಸವು ತನ್ನಲ್ಲಿ ವಿವಿಧ ಬಗೆಯ ಪೋಷಕಾಂಶಗಳನ್ನು ಕೂಡ ಹೊಂದಿದೆ.

ಇದರಿಂದಾಗಿಯೇ ಚಿಕನ್ ಎಂದರೆ ಸಾಕು ಪ್ರತಿಯೊಬ್ಬರ ಬಾಯಿಯಲ್ಲೂ ನೀರು ಬರುವುದು. ಆದರೆ ಇಂದಿನ ದಿನಗಳಲ್ಲಿ ಚಿಕಿನ್ ಬಗ್ಗೆ ಕೇಳಿ ಬರುತ್ತಿರುವಂತಹ ವಿಚಾರವೇನೆಂದರೆ ಅದನ್ನು ತುಂಬಾ ರಾಸಾಯನಿಕ ಕೊಟ್ಟು ಬೆಳೆಸಲಾಗುತ್ತಿದೆ ಎಂದು. ಆದರೆ ಚಿಕನ್ ನ್ನು ಸಾವಯವಾಗಿ ಬೆಳೆಸಿದಾಗ ಅದರಿಂದ ಹೆಚ್ಚಿನ ಪೋಷಕಾಂಶಗಳು ನಮ್ಮ ದೇಹಕ್ಕೆ ಸಿಗುವುದು ಮತ್ತು ಯಾವುದೇ ರೀತಿಯ ಅಡ್ಡಪರಿಣಾಮಗಳು ಕೂಡ ಇರುವುದಿಲ್ಲ. ಚಿಕನ್ ತಿಂದರೆ ದೇಹದ ತೂಕ ಇಳಿಸಿಕೊಳ್ಳುವುದು ಹೇಗೆ? ಜೊತೆಗೆ ಇದರಿಂದ ಸಿಗುವ ಆರೋಗ್ಯಕಾರಿ ಪ್ರಯೋಜನಗಳೇನು ಎಂಬುದನ್ನು ಮುಂದೆ ಓದಿ

   
 
ಹೆಲ್ತ್