Back
Home » ಇತ್ತೀಚಿನ
ಇಂದು 22,999 ರೂ.ಗೆ 43 ಇಂಚಿನ 'Mi TV 4A Pro' ಸ್ಮಾರ್ಟ್‌ಟಿವಿ ಮಾರಾಟ!!
Gizbot | 22nd Jan, 2019 12:27 PM
 • ಡಿಸ್​ಪ್ಲೇ

  43 ಇಂಚು ಮೊನಿಟರ್​ ಸೈಜ್‌ನ ಈ ಟಿವಿ ಅಲ್ಟ್ರಾ ಬ್ರೈಟ್​ ಎಲ್​ಇಡಿ ಡಿಸ್​ಪ್ಲೇ ಹೊಂದಿದೆ.


 • ಪ್ರೊಸೆಸರ್​:

  64-ಬಿಟ್​ ಕ್ವಾಡ್​​ ಕೋರ್​ ಪ್ರೊಸೆಸರ್, ಶೇಖರಣಾ​ ಸಾಮರ್ಥ್ಯ: 1GB RAM + 8GB ಸ್ಟೋರೇಜ್


 • ಓನ್​ ರಿಮೋಟ್​:

  ಟಿವಿ ಕಂಟ್ರೋಲ್, ಸೆಟಪ್​ ಬಾಕ್ಸ್​ ಹಾಗೂ ಎಲ್ಲದಕ್ಕೂ ಒಂದೇ ರಿಮೋಟ್


 • ವಾಯ್ಸ್​ ಕಂಟ್ರೋಲ್:

  AR11 ಬ್ಲೂಟೂತ್ ಧ್ವನಿ ನಿಯಂತ್ರಕದ ಮೂಲಕ ಟಿವಿಯನ್ನು ನಿಂಯತ್ರಿಸಬಹುದು


 • ಸ್ಪೀಕರ್:

  20W ದೊಡ್ಡ ಸ್ಪೀಕರ್ ನೀಡಲಾಗಿದೆ.


 • ಕನೆಕ್ಟಿವಿಟಿ:

  3 USB ಪೋರ್ಟ್​ಗಳು, 3 HDMI ಪೋರ್ಟ್​ಗಳು, ಬ್ಲೂಟೂತ್ ಮತ್ತು ವೈ-ಫೈ ಜೊತೆಗೆ 1 AV ಕನೆಕ್ಟಿವಿಟಿ ಈ ಟಿವಿಯಲ್ಲಿ ನೀಡಲಾಗಿದೆ.
ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲೇ ಬದಲಾವಣೆ ತರುತ್ತದೆ ಎಂದು ಹೇಳಲಾಗುತ್ತಿರುವ ಶಿಯೋಮಿಯ 43 ಇಂಚಿನ 'Mi TV 4A Pro' ಸ್ಮಾರ್ಟ್‌ಟಿವಿ ಇಂದು ಫ್ಲಾಶ್‌ಸೇಲ್‌ನಲ್ಲಿ ಮಾರಾಟಕ್ಕಿದೆ. ಕಂಪೆನಿಯ ಅಧಿಕೃತ ವೆಬ್​ಸೈಟ್​ mi.com ನಲ್ಲಿ ಹೊಸ ವಿನ್ಯಾಸದ ಸ್ಮಾರ್ಟ್​ ಟಿವಿಯನ್ನು ಗ್ರಾಹಕರು ಫ್ಲಾಶ್‌ಸೇಲ್‌ನಲ್ಲಿ ಖರೀದಿಸಬಹುದು ಎಂದು ಶಿಯೋಮಿ ತಿಳಿಸಿದೆ.

43 ಇಂಚಿನ ಸ್ಮಾರ್ಟ್‌ಟಿವಿಗಳಲ್ಲೇ ಅತ್ಯಂತ ಕಡಿಮೆ ಬೆಲೆಯನ್ನು ಹೊಂದಿರುವ ಸ್ಮಾರ್ಟ್‌ಟಿವಿ ಎಂದು ಪ್ರಖ್ಯಾತಿ ಪಡೆದಿರುವ ಹೊಸ 'Mi TV 4A Pro' ಸ್ಮಾರ್ಟ್‌ಟಿವಿ ಬೆಲೆ ಕೇವಲ 22,999 ರೂ.ಗಳಾಗಿದ್ದು, ಅಲ್ಟ್ರಾ ಬ್ರೈಟ್​ ಎಲ್​ಇಡಿ ಡಿಸ್​ಪ್ಲೇ , ಓನ್​ ರಿಮೋಟ್ ಮತ್ತು 3 HDMI ಪೋರ್ಟ್​ಗಳಂತಹ ಹಲವು ವಿಶೇಷತೆಗಳನ್ನು ಹೊಂದಿರುವುದು ಈಗ ಟಿವಿ ಗ್ರಾಹಕರ ನಿದ್ದೆಗೆಡಿಸಿದೆ.

ಇನ್ನು ಈ ಸ್ಮಾರ್ಟ್‌ಟಿವಿಯೊಂದಿಗೆ 7 ಲಕ್ಷಕ್ಕೂ ಹೆಚ್ಚಿನ ಗಂಟೆಗಳ ಕಂಟೆಂಟ್​ ನೀಡಲಾಗಿದ್ದು, ಇದರ ಮನರಂಜನಾ ಕಾರ್ಯಕ್ರಮಗಳನ್ನು ಸತತ 80 ವರ್ಷಗಳ ಕಾಲ ವೀಕ್ಷಿಸಿದರೂ ಕೊನೆಯಾಗುವುದಿಲ್ಲ ಎಂದು ಶಿಯೋಮಿ ತಿಳಿಸಿದೆ. ಹಾಗಾದರೆ, 43 ಇಂಚಿನ 'Mi TV 4A Pro' ಟಿವಿ ಫೀಚರ್ಸ್ ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

   
 
ಹೆಲ್ತ್