* 1440x2960 ಪಿಕ್ಸಲ್ ರೆಸಲ್ಯೂಶನೊಂದಿಗೆ 5.8 ಇಂಚಿನ ಫುಲ್ ಹೆಚ್ಡಿ ಡಿಸ್ಪ್ಲೇ ಹೊಂದಿರಲಿದೆ.
* ಆಕ್ಟಾ ಕೋರ್ ಸ್ನಾಪ್ಡ್ರಾಗನ್ 855 ಪ್ರೊಸೆಸರ್ ಹೊಂದಿರಲಿದೆ ಮತ್ತು 6GB RAM ಜತೆಗೆ 64GB ಆಂತರಿಕ ಸ್ಟೋರೆಜ್ ಇರಲಿದೆ.
* 12+12+5 ಮೆಗಾಪಿಕ್ಸಲ್ ಹಿಂಬದಿ ಕ್ಯಾಮೆರಾ ಸಾಮರ್ಥ್ಯ ಮತ್ತು ಸೆಲ್ಫೀಗಾಗಿ 8 ಮೆಗಾಪಿಕ್ಸಲ್ ಕ್ಯಾಮೆರಾ ಹೊಂದಿರುವುದು.
* 3100mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಫಾಸ್ಟ್ ಚಾರ್ಜರ್ ಸೌಲಭ್ಯ ಇರುವುದು.
* ಬೆಲೆ ಅಂದಾಜು -63,100ರೂ.ಗಳು
* 1440x2960 ಪಿಕ್ಸಲ್ ರೆಸಲ್ಯೂಶನೊಂದಿಗೆ 6.1 ಇಂಚಿನ ಫುಲ್ ಹೆಚ್ಡಿ ಡಿಸ್ಪ್ಲೇ ಹೊಂದಿರಲಿದೆ.
* ಆಕ್ಟಾ ಕೋರ್ ಕಾರ್ಟೆಕ್ಸ್A75, ಸ್ನಾಪ್ಡ್ರಾಗನ್ 855 ಪ್ರೊಸೆಸರ್ ಇರಲಿದೆ.
* 6GB/8GB RAM ಮತ್ತು 128/512GB ಆಂತರಿಕ ಸ್ಟೋರೆಜ್ ಇರುವ ಆಯ್ಕೆಗಳಿರಲಿವೆ.
* 12+12+5 ಮೆಗಾಪಿಕ್ಸಲ್ ಹಿಂಬದಿ ಕ್ಯಾಮೆರಾ ಸಾಮರ್ಥ್ಯ ಮತ್ತು ಸೆಲ್ಫೀಗಾಗಿ ಹೈ ರೆಸಲ್ಯೂಶನ್ ಇರುವ 8 ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗುವುದು.
* 3500mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಫಾಸ್ಟ್ ಚಾರ್ಜರ್ ಸೌಲಭ್ಯ ಸಹ ಇರುವುದು.
* ಬೆಲೆ ಅಂದಾಜು -6GB RAM-75,300 ರೂ.ಗಳು ಮತ್ತು 8GB RAM-95,500 ರೂ.ಗಳು
* 1440 x 2960 ಪಿಕ್ಸಲ್ ರೆಸಲ್ಯೂಶನೊಂದಿಗೆ 6.4 ಇಂಚಿನ ಫುಲ್ ಹೆಚ್ಡಿ ಡಿಸ್ಪ್ಲೇ ಇರಲಿದೆ.
* ಇದು ಸಹ ಆಕ್ಟಾ ಕೋರ್ ಸ್ನಾಪ್ಡ್ರಾಗನ್ 855 ಪ್ರೊಸೆಸರ್ ಹೊಂದಿರಲಿದೆ.
* 6GB/8GB/12GB RAM ಮತ್ತು 128/512GB/1TB ಆಂತರಿಕ ಸ್ಟೋರೆಜ್ ಇರುವ ಮೂರು ಆಯ್ಕೆಗಳಿರಲಿವೆ.
* 16+16+13 ಮೆಗಾಪಿಕ್ಸಲ್ ಹಿಂಬದಿ ಕ್ಯಾಮೆರಾ ಸಾಮರ್ಥ್ಯ ಮತ್ತು ಸೆಲ್ಫೀಗಾಗಿ ಎರಡು ಹೈ ರೆಸಲ್ಯೂಶನ್ ಇರುವ 8+5 ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗುವುದು.
* 4000mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಕ್ವಿಕ್ ಚಾರ್ಜರ್ ಸೌಲಭ್ಯ ಸಹ ಇರುವುದು.
* ಬೆಲೆ ಅಂದಾಜು -6GB RAM-85000ರೂ.ಗಳು, 8GB RAM-1,05,000ರೂ.ಗಳು ಮತ್ತು 12GB RAM-1.29,600 ರೂ.ಗಳು
ಗುಣಮಟ್ಟದ ಸ್ಮಾರ್ಟ್ಫೋನ್ಗಳ ಮೂಲಕ ಮನೆ ಮಾತಾಗಿರುವ ಸಾಮ್ಸಂಗ್ ಕಂಪನಿ ತನ್ನ ಗ್ಯಾಲ್ಯಾಕ್ಸಿ ಸ್ಮಾರ್ಟ್ಫೋನ್ ಸರಣಿಯ ಮೂಲಕ ಆರಂಭದಿಂದಲೂ ಹೊಸ ಫೀಚರ್ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಲೇ ಬಂದಿದೆ. ಇದೀಗ ಮತ್ತೆ ಸಾಮ್ಸಂಗ್ ಕಂಪನಿ ಸ್ಮಾರ್ಟ್ಫೋನ್ ಪ್ರಿಯರಿಗೆ ಸಿಹಿ ಸಮಾಚಾರವನ್ನು ನೀಡಲು ತಯಾರಾಗಿದ್ದು, ಸಾಮ್ಸಂಗ್ ಗ್ಯಾಲ್ಯಾಕ್ಸಿ 'ಎಸ್10' ಸರಣಿಯ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲಿದೆ.
ಸಾಮ್ಸಂಗ್ ಕಂಪನಿಯು ಬಹುನಿರೀಕ್ಷಿತ ಸ್ಮಾರ್ಟ್ಫೋನ್ ಸರಣಿ ಗ್ಯಾಲ್ಯಾಕ್ಸಿ "ಎಸ್ 10" ಅನ್ನು ಮಾರುಕಟ್ಟೆಗೆ ಪರಿಚಯಿಸಲು ಉತ್ಸುಕವಾಗಿದ್ದು, ಇದೇ ಫಬ್ರವರಿ ತಿಂಗಳ ಅಂತ್ಯದೊಳಗೆ ಗ್ಯಾಲ್ಯಾಕ್ಸಿ ಎಸ್ 10 ಸರಣಿಯ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಸಾಮ್ಸಂಗ್ನ ಗ್ಯಾಲ್ಯಾಕ್ಸಿ ಎಸ್ 10 ಸರಣಿಯಲ್ಲಿ 'ಎಸ್ ಲೈಟ್', 'ಎಸ್10' ಮತ್ತು 'ಎಸ್10 ಪ್ಲಸ್' ಸ್ಮಾರ್ಟ್ಫೋನ್ಗಳ ಮಾದರಿಗಳಿರಲಿವೆ.
ಸ್ಮಾರ್ಟ್ಫೋನ್ ಪ್ರಿಯರಲ್ಲಿ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಸಾಮ್ಸಂಗ್ ಗ್ಯಾಲ್ಯಾಕ್ಸಿ ಎಸ್ 10 ಸರಣಿಯ ಸ್ಮಾರ್ಟ್ಫೋನ್ಗಳು ಅತೀ ವಿನೂತನ ಫೀಚರ್ಗಳನ್ನು ಹೊಂದಿರಲಿದ್ದು ಮತ್ತು ಹೈ ರೇಂಜ್ನ ಸ್ಮಾರ್ಟ್ಫೋನ್ಗಳಾಗಿರಲಿವೆ ಎನ್ನಲಾಗುತ್ತಿದೆ. ಹಾಗಾದರೇ ಸಾಮ್ಸಂಗ್ ಗ್ಯಾಲ್ಯಾಕ್ಸಿ ಎಸ್ 10 ಸರಣಿಯ ಸ್ಮಾರ್ಟ್ಫೋನ್ಗಳು ಹೊಂದಿರುವ ಸ್ಪೆಷಲ್ ಫೀಚರ್ಸ್ ಮತ್ತು ಬೆಲೆಯ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.