Back
Home » ಆರೋಗ್ಯ
ಆಯುರ್ವೇದ ಪ್ರಕಾರ ಕ್ಯಾನ್ಸರ್ ತಡೆಯುವ ಆರು ಗಿಡಮೂಲಿಕೆಗಳು
Boldsky | 5th Feb, 2019 12:09 PM
 • ನೆಲ್ಲಿಕಾಯಿ

  ನೆಲ್ಲಿಕಾಯಿಯು ಆಯುರ್ವೇದ ಅದ್ಭುತ ಆಹಾರವಾಗಿದೆ. ಇದರಲ್ಲಿ ವಿಟಮಿನ್ ಸಿಯು ಸಮೃದ್ಧವಾಗಿದೆ ಮತ್ತು ಅದರೊಂದಿಗೆ ಕ್ವೆರ್ಸೆಟಿನ್, ಫೈಲೆಬೆಬ್ಲಿಕ್ ಕಾಂಪೌಂಡ್ಸ್, ಗ್ಯಾಲಿಕ್ ಆಸಿಡ್, ಟ್ಯಾನಿನ್ ಗಳು, ಫ್ಲೇವನಾಯಿಡ್ ಗಳು, ಪೆಕ್ಟಿನ್ ಮತ್ತು ವಿವಿಧ ಪಾಲಿಫೆನೊಲಿಕ್ ಸಂಯುಕ್ತಗಳು ನವಯೌವನ ಪಡೆಯುವಂತೆ ಮಾಡುವುದು. ಮೂರು ದಶಕಗಳಿಂದ ವೈಜ್ಞಾನಿಕವಾಗಿ ನಡೆದಿರುವಂತಹ ಅಧ್ಯಯನಗಳ ಪ್ರಕಾರ ಸಾಂಪ್ರದಾಯಿಕವಾಗಿ ನೆಲ್ಲಿಕಾಯಿ ಬಳಕೆ ಮಾಡುವುದು ಸರಿ ಎಂದು ಕಂಡುಬಂದಿದೆ. ನೆಲ್ಲಿಕಾಯಿಯು ಕ್ಯಾನ್ಸರ್ ಕೋಶಗಳನ್ನು ಕೊಲ್ಲುವುದು ಮತ್ತು ಬರದಂತೆ ತಡೆಯುವ ಶಕ್ತಿ ಹೊಂದಿದೆ ಎಂದು ಪ್ರಯೋಗಾಲಯದ ವರದಿಗಳು ಹೇಳಿವೆ. ಇದು ದೇಹದಲ್ಲಿನ ಆರೋಗ್ಯಕಾರಿ ಕೋಶಗಳಿಗೆ ಹಾನಿ ಮಾಡದೆ ಈ ರೀತಿ ಮಾಡುವುದು.


 • ಬೆಳ್ಳುಳ್ಳಿ

  ಸಲ್ಫರ್, ಅರ್ಜಿನೈನ್, ಫ್ಲಾವನಾಯ್ಡ್ ಮತ್ತು ಸೆಲೆನಿಯಂ ಹೊಂದಿದೆ. ಬೆಳ್ಳುಳ್ಳಿಯಲ್ಲಿ ಇರುವಂತಹ ಅಲಿಸಿನ್ ಎನ್ನುವ ಅಂಶದಿಂದ ಪಡೆದುಕೊಂಡಿರುವ ಜೈವಿಕ ಸಕ್ರಿಯ ಅಂಶವನ್ನು ಅದನ್ನು ಜಜ್ಜಿದಾಗ ಅಥವಾ ಕತ್ತರಿಸಿದಾಗ ಪಡೆಯಬಹುದು. ದ ಯುರೋಪಿಯನ್ ಪ್ರೊಸ್ಪೆಕ್ಟಿವ್ ಇನ್ವೆಸ್ಟಿಗೇಷನ್ ಇನ್ ಟು ಕ್ಯಾನ್ಸರ್ ಆ್ಯಂಡ್ ನ್ಯುಟ್ರಿಷನ್(ಎಪಿಕ್) ನಡೆಸಿರುವ ಬಹುರಾಷ್ಟ್ರೀಯ ಅಧ್ಯಯನದಂತೆ ಸುಮಾರು 10 ರಾಷ್ಟ್ರಗಳಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇವನೆಯಿಂದಾಗಿ ಕ್ಯಾನ್ಸರ್ ನ ಅಪಾಯವು ಅಪಾರ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಅಮೆರಿಕಾ, ಚೀನಾ ಮತ್ತು ಫ್ರಾನ್ಸ್ ನಲ್ಲಿ ನಡೆಸಿರುವಂತಹ ಅಧ್ಯಯನದಲ್ಲಿ ಬೆಳ್ಳುಳ್ಳಿ ಸೇವನೆ ಮಾಡುವ ಕಾರಣ ಕ್ಯಾನ್ಸರ್ ಅಪಾಯವು ಕಡಿಮೆಯಾಗಿದೆ. ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದ್ದು, ಇದು ಕ್ಯಾನ್ಸರ್ ಕಾರಕವಾಗಿರುವ ಅಂಶಗಳು ಜಮೆಯಾಗುವುದು ಮತ್ತು ಕ್ರಿಯಾಶೀಲವಾಗುವುದನ್ನು ತಡೆಯುತ್ತದೆ.

  Most Read: ಬಾಯಿಯ ಕ್ಯಾನ್ಸರ್‌ ನಿಯಂತ್ರಿಸುವ ಪವರ್ ಇಂತಹ ಆಹಾರಗಳಲ್ಲಿದೆ!


 • ಅರಿಶಿನ

  ಕ್ಯಾನ್ಸರ್ ವಿರೋಧಿ ಗುಣ ಹೊಂದಿರುವಂತಹ ಅತೀ ಹೆಚ್ಚು ಸಂಶೋಧನೆ ಮಾಡಲ್ಪಟ್ಟಿರುವ ಗಿಡಮೂಲಿಕೆ ಎಂದರೆ ಅರಶಿನ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್, ನೋವು ನಿವಾರಕ, ಉರಿಯೂತ ಶಮನಕಾರಿ ಮತ್ತು ನಂಜುನಿರೋಧಕ ಗುಣಗಳು ಇವೆ. ಇದರಲ್ಲಿ ಇರುವಂತಹ ಕರ್ಕ್ಯುಮಿನ್ ಎನ್ನುವಂತಹ ಆ್ಯಂಟಿಆಕ್ಸಿಡೆಂಟ್ ಅಂಶವು ಫ್ರೀರ್ಯಾಡಿಕಲ್ ನ್ನು ಕ್ಷೀಣವಾಗುವಂತೆ ಮಾಡುವುದು ಮತ್ತು ಕ್ಯಾನ್ಸರ್ ಕೋಶಗಳು ಬೆಳೆದಂತೆ ತಡೆಯುವುದು. ಸುಮಾರು 2000ರಷ್ಟು ಪ್ರಕಟಗೊಂಡಿರುವ ವೈಜ್ಞಾನಿಕ ವರದಿಗಳ ಪ್ರಕಾರ ಕರ್ಕ್ಯುಮಿನ್ ನಲ್ಲಿ ಕ್ಯಾನ್ಸರ್ ನ್ನು ಕೊಲ್ಲುವಂತಹ ಶಕ್ತಿಯಿದೆ ಎಂದು ತಿಳಿದುಬಂದಿದೆ. ಇದು ಆರೋಗ್ಯವಂತ ಕೋಶಗಳಿಗೆ ಯಾವುದೇ ಹಾನಿ ಮಾಡದು. ಅರಿಶಿನದಲ್ಲಿರುವ ಕುರ್ಕುಮಿನ್ ಕ್ಯಾನ್ಸರ್ ವಿಕರ್ಷಕ ಗುಣವನ್ನು ಹೊಂದಿದೆ. ಅಲ್ಲದೇ ಇದು ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಗುಣವನ್ನೂ ಹೊಂದಿದೆ. ಅಲ್ಲದೇ ಅಹಾರದಲ್ಲಿರುವ ವಿಷಕಾರಿ ವಸ್ತುಗಳು ನಮ್ಮ ದೇಹದ ಪ್ರಮುಖ ಅಂಗಗಳನ್ನು ಬಾಧಿಸುವುದನ್ನು ತಡೆಯಲೂ ಅರಿಶಿನ ನೆರವಾಗುತ್ತದೆ. ತನ್ಮೂಲಕ ಹಲವಾರು ಬಗೆಯ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಇಲ್ಲವಾಗಿಸುತ್ತದೆ. ಅರಿಶಿನ ತನ್ನ ಉರಿಯೂತ ನಿವಾರಕ ಗುಣಕ್ಕೆ ಖ್ಯಾತಿ ಪಡೆದಿದೆ. ನಿಮ್ಮ ನಿತ್ಯದ ಆಹಾರದಲ್ಲಿ ಅರಿಶಿನವನ್ನು ಬೆರೆಸಿ ಸೇವಿಸುವ ಮೂಲಕ ದೇಹದ ವಿವಿಧ ಭಾಗಗಳಲ್ಲಿ ಎದುರಾಗುವ ಉರಿಯೂತವನ್ನು ಇಲ್ಲವಾಗಿಸಲು, ತನ್ಮೂಲಕ ಎದುರಾಗಬಹುದಾದ ಕ್ಯಾನ್ಸರ್ ಅನ್ನೂ ಇಲ್ಲವಾಗಿಸಲು ಸಾಧ್ಯವಾಗುತ್ತದೆ. ವಿಶೇಷವಾಗಿ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆಯಾಗಿಸುವಲ್ಲಿ ಅರಿಶಿನ ಪ್ರಮುಖ ಪಾತ್ರ ವಹಿಸುತ್ತದೆ.


 • ಅಶ್ವಗಂಧ

  ಭಾರತದಲ್ಲಿ ಜಿನ್ ಸೆಂಗ್ ಎಂದು ಕರೆಯಲ್ಪಡುವಂತಹ ಈ ಗಿಡಮೂಲಿಕೆಯು ದೇಹದಲ್ಲಿ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಇದರಲ್ಲಿ ಇರುವಂತಹ ಕ್ಯಾನ್ಸರ್ ವಿರೋಧಿ ಗುಣಗಳನ್ನು ಸುಮಾರು 40 ವರ್ಷಗಳ ಹಿಂದಿಯೇ ಸಂಶೋಧನೆಗಳು ಕಂಡುಕೊಂಡಿವೆ. ಈ ಗಿಡಮೂಲಿಕೆಯಲ್ಲಿ ಸ್ಪಟಿಕದಂತಹ ಸ್ಟಿರಾಯಡ್ ಅಂಶವು ಕಂಡುಬಂದಿದೆ. ಇದರ ಮೇಲೆ ಮತ್ತಷ್ಟು ಸಂಶೋಧನೆಗಳನ್ನು ನಡೆಸಿದ ವೇಳೆ ಅಶ್ವಗಂಧದ ಎಲೆಗಳಲ್ಲಿ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವಂತಹ ಶಕ್ತಿಯು ಇದೆ ಎಂದು ತಿಳಿದುಬಂದಿದೆ.

  Most Read: ಕರಿಮೆಣಸಿನ ಪುಡಿ ಬೆರೆಸಿದ ಬಿಸಿನೀರು- ಆಯಸ್ಸು ನೂರು!


 • ತುಳಸಿ

  ಪ್ರತಿಯೊಂದು ಪೂಜೆ ಪುನಸ್ಕಾರಗಳಲ್ಲಿ ಶುದ್ಧತೆಯ ಸಂಕೇತವಾಗಿ ತುಳಸಿಯನ್ನು ಹೆಚ್ಚಾಗಿಯೇ ಬಳಸುತ್ತಾರೆ. ತುಳಸಿ ದೇವಿಯನ್ನು ಮುಟ್ಟಿದೊಡನೆಯೇ ನಾವು ಶುದ್ಧರಾಗುತ್ತೇವೆ ಹಾಗೂ ಪ್ರಾರ್ಥಿಸುವುದರಿಂದ ಎಲ್ಲಾ ಕಾಯಿಲೆಗಳು ಹೇಳಹೆಸರಿಲ್ಲದಂತೆ ಮಾಯವಾಗಿ ನೆಮ್ಮದಿ ಸಿಗುತ್ತದೆ ಹಾಗೆಯೇ ಒಮ್ಮೆ ತುಳಸಿಯನ್ನು ನೀರಿನಿಂದ ತೋಯಿಸಿದರೆ ಯಮರಾಜನ ಭಯವು ಮರೆಯಾಗುತ್ತದೆ ಎಂದು ಸ್ಕಂದ ಪುರಾಣವು ಹೇಳುತ್ತದೆ. ವಾಸ್ತು ಕೂಡ ತುಳಸಿಗೆ ಪೂಜನೀಯ ಸ್ಥಾನವನ್ನು ನೀಡಿದೆ. ಈ ಗಿಡವನ್ನು ಮನೆಯ ಮುಂದುಗಡೆ ಬೆಳೆಸುವುದರಿಂದ ಮನೆಯವರೆಲ್ಲರಿಗೂ ಒಳಿತಾಗುತ್ತದೆ ಎಂಬ ವಿಶ್ವಾಸ ಕೂಡ ನಮ್ಮಲ್ಲಿದೆ. ವೈದ್ಯಕೀಯ ಕ್ಷೇತ್ರದಲ್ಲೂ ತುಳಸಿಯು ಹಲವಾರು ಅದ್ಭುತಗಳನ್ನು ಮಾಡಿದೆ. ನಮ್ಮ ಭಾರತೀಯ ಪರಂಪರೆಯು ಸಾವಿರಾರು ವರ್ಷಗಳಿಂದ ತುಳಸಿಯನ್ನು ಬಳಸಿಕೊಂಡು ಬರುತ್ತಿದೆ. ಇದು ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಎಂಬ ನಂಬಿಕೆಯೂ ಇದೆ.

  Most Read: ಕಣ್ಣಿನ ಕ್ಯಾನ್ಸರ್‌ನ ಕೆಲವೊಂದು ಅಪಾಯಕಾರಿ ಸಂಗತಿಗಳು


 • ತುಳಸಿ

  ಹಿಂದೂ ಧರ್ಮದಲ್ಲಿ ತುಂಬಾ ಪೂಜ್ಯನೀಯ ಸ್ಥಾನ ಹೊಂದಿರುವ ತುಳಸಿಯಲ್ಲಿ ಶಮನಕಾರಿ ಗುಣಗಳು ಇವೆ. ಇದು ಪ್ರತಿರೋಧಕ ಶಕ್ತಿ ಹೆಚ್ಚು ಮಾಡುವುದು ಮತ್ತು ಒತ್ತಡದ ವಿರುದ್ಧ ಹೋರಾಡುವುದು. ಉರಿಯೂತ, ಮಧುಮೇಹ ವಿರೋಧಿ ಮತ್ತು ಒತ್ತಡ ವಿರೋಧಿ ಗುಣಗಳು ಇದರಲ್ಲಿ ಇವೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ಅಧ್ಯಯನಗಳು ಕಂಡುಕೊಂಡಿರುವ ವಿಚಾರವೆಂದರೆ ತುಳಸಿಯಲ್ಲಿ ಇರುವಂತಹ ಪೈಥೋಕೆಮಿಕಲ್ ಯಕೃತ್, ಶ್ವಾಸಕೋಶ, ಬಾಯಿ ಮತ್ತು ಚರ್ಮದ ಕ್ಯಾನ್ಸರ್ ನ್ನು ತಡೆಯುವುದು. ಇದು ದೇಹದಲ್ಲಿ ಆ್ಯಂಟಿಆಕ್ಸಿಡೆಂಟ್ ಚಟುವಟಿಕೆ ಹೆಚ್ಚು ಮಾಡುವುದು, ಜಿನ್ ಅಭಿವ್ಯಕ್ತಿ ಪರಿವರ್ತಿಸುವ, ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಮತ್ತು ಅದು ಬೇರೆ ಆರೋಗ್ಯವಂತೆ ಕೋಶಗಳಿಗೆ ಹರಡದಂತೆ ತಡೆಯುವಂತಹ ಶಕ್ತಿಯು ಇದರಲ್ಲಿ ಇದೆ.


 • ಶುಂಠಿ

  ಶುಂಠಿಯನ್ನು ಸುಮಾರು 2000 ವರ್ಷಗಳಿಂದಲೂ ವೈದ್ಯಕೀಯ ಗಿಡಮೂಲಿಕೆಯಾಗಿ ಬಳಸಿಕೊಳ್ಳುತ್ತಾ ಬರಲಾಗುತ್ತಿದೆ. ಶುಂಠಿಯಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಕ್ಯಾನ್ಸರ್ ಬರದಂತೆ ತಡೆಯುವಂತಹ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇಂದಿನ ದಿನಗಳಲ್ಲಿ ನಡೆಸಿರುವಂತಹ ಹಲವಾರು ಅಧ್ಯಯನಗಳು ಶುಂಠಿಯು ಕ್ಯಾನ್ಸರ್ ನ್ನು ತಡೆಯುವಂತಹ ಶಕ್ತಿಯನ್ನು ಹೊಂದಿದೆ ಎಂದು ಕಂಡುಕೊಳ್ಳಲಾಗಿದೆ.
ಆಯುರ್ವೇದ ಎನ್ನುವುದು ಸುಮಾರು ಐದು ಸಾವಿರ ವರ್ಷಗಳಿಗಿಂತಲೂ ಮೊದಲು ಭಾರತದಲ್ಲಿ ಒಂದು ಚಿಕಿತ್ಸಾ ಪದ್ಧತಿಯಾಗಿತ್ತು. ಆಗ ಯಾವುದೇ ದೊಡ್ಡ ಆಸ್ಪತ್ರೆಗಳು ಇಲ್ಲದೆ ಇರುವಂತಹ ಸಮಯದಲ್ಲಿ ಆಯುರ್ವೇದದ ಮೂಲವೇ ಹಲವಾರು ಚಿಕಿತ್ಸೆಗಳನ್ನು ನೀಡಿ ರೋಗ ಗುಣಪಡಿಸಲಾಗುತ್ತಲಿತ್ತು. ತುಂಬಾ ಕಡಿಮೆ ಖರ್ಚಿಗೆ ಅಂದು ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ರೋಗವನ್ನು ಕೂಡ ವಾಣ್ಯೀಜ್ಯೀಕರಣ ಮಾಡಿಕೊಂಡು ಹಲವಾರು ದೊಡ್ಡ ದೊಡ್ಡ ಆಸ್ಪತ್ರೆಗಳು ಕೋಟಿಗಟ್ಟಲೆ ವ್ಯವಹಾರ ಮಾಡುತ್ತಲಿದೆ. ಇದೇ ಕಾರಣದಿಂದಾಗಿ ಅಲೋಪತಿಗಳಿಂದಾಗಿ ಆಯುರ್ವೇದವು ಕಡೆಗಣಿಸಲ್ಪಟ್ಟಿದೆ.

ಆಯುರ್ವೇದ ಎನ್ನುವುದು ಹಿಂದಿನ ಕಾಲದಲ್ಲಿ ಒಂದು ರೀತಿಯ ಜೀವನ ಕ್ರಮವಾಗಿತ್ತು. ಯಾಕೆಂದರೆ ರೋಗ ಬಂದ ಬಳಿಕ ಅದಕ್ಕೆ ಚಿಕಿತ್ಸೆ ನೀಡುವ ಬದಲು ರೋಗ ಬರದಂತೆ ತಡೆಯುವುದು ಒಳ್ಳೆಯದು ಎನ್ನುವ ಮಾತಿದೆ. ಅದೇ ರೀತಿಯಾಗಿ ಆಯುರ್ವೇದ ಕೂಡ ಹಲವಾರು ಗಿಡಮೂಲಿಕೆಗಳನ್ನು ಬಳಸಿಕೊಂಡು ರೋಗ ಬರದಂತೆ ತಡೆಯುವುದು. ದೇಹ, ಮನಸ್ಸು ಮತ್ತು ಪ್ರಜ್ಞೆಯು ಸಮತೋಲನದಲ್ಲಿದ್ದರೆ ಆಗ ಆರೋಗ್ಯ ಪಡೆಯಬಹುದು ಎಂದು ಆಯುರ್ವೇದವು ಹೇಳುತ್ತದೆ.

ಇದನ್ನು ಪಡೆಯುವ ಸಲುವಾಗಿ ದಿನನಿತ್ಯ ವ್ಯಾಐಆಮ, ಭಾವನಾತ್ಮಕ ಸಮತೋಲನ ಮತ್ತು ಆರೋಗ್ಯಕರ ಆಹಾರ ಸೇವನೆಯು ಅತೀ ಅಗತ್ಯವಾಗಿರುವುದು. ಕ್ಯಾನ್ಸರ್ ಬರದಂತೆ ತಡೆಯಲು ಆಯುರ್ವೇದದಲ್ಲಿ ಹಲವಾರು ರೀತಿಯ ಗಿಡಮೂಲಿಕೆಗಳು ಇವೆ ಮತ್ತು ಈ ಪುರಾತನ ಜ್ಞಾನವನ್ನು ವಿಜ್ಞಾನದ ಸಂಶೋಧನೆಗಳು ಕೂಡ ದೃಢಪಡಿಸಿವೆ. ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿರುವಂತಹ ಕೆಲವೊಂದು ಗಿಡಮೂಲಿಕೆಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಆಹಾರ ಕ್ರಮದಲ್ಲಿ ಬಳಸಿಕೊಂಡು ಹೋಗಿ.

   
 
ಹೆಲ್ತ್