Back
Home » ಆರೋಗ್ಯ
ಸಡನ್ ಆಗಿ ಎದೆ ನೋವು ಬಂದರೆ- ಇದು ಹಾರ್ಟ್ ಅಟ್ಯಾಕ್‪ ಆಗುವ ಲಕ್ಷಣವೇ?
Boldsky | 5th Feb, 2019 03:32 PM
 • ಒಂದೇ ಭಾಗದಲ್ಲಿ ನೋವು

  ತುಂಬಾ ತೀವ್ರವಾಗಿ ಇರುವಂತಹ ನೋವು ಒಂದೇ ಭಾಗದಿಂದ ಬರುತ್ತಲಿದ್ದರೆ ಆಗ ಇದನ್ನು ನೀವು ಎದೆ ನೋವು ಎಂದು ಪರಿಗಣಿಸಬೇಕಾಗಿ ಇಲ್ಲ. ಹೃದಯಾಘಾತದ ನೋವು ತುಂಬಾ ಹಗುರವಾಗಿ ಇರುವುದು ಮತ್ತು ಅದು ಎದೆಯ ಎಲ್ಲಾ ಭಾಗದಲ್ಲಿ ಇರುವುದು.ಎದೆಯ ನೋವು ಎಲ್ಲಾ ಭಾಗದಲ್ಲಿಯೂ ಕಾಣಿಸಿಕೊಳ್ಳುವುದು. ಉದಾಹರಣೆಗೆ: ಒಂದು ದಿನ ನಿಮಗೆ ಎದೆಯ ಬಲ ಭಾಗದಲ್ಲಿ ನೋವು ಕಾಣಿಸಬಹುದು ಮತ್ತು ಮರುದಿನ ನಿಮಗೆ ಎದೆಯ ಎಡಭಾಗದಲ್ಲಿ ನೋವು ಕಂಡುಬರಬಹುದು. ಹೃದಯದ ನೋವು ಕೈಗಳು, ದವಡೆ ಮತ್ತು ಭುಜಗಳ ಮಧ್ಯಕ್ಕೆ ಪಸರಿಸುವುದು. ಆದರೆ ಇದು ಒಂದೇ ದಿನದಲ್ಲಿ ಬೇರೆ ಬೇರೆ ಭಾಗಗಳಿಗೆ ಹೋಗುವುದು ತುಂಬಾ ಕಡಿಮೆ. ನೀವು ಉಸಿರಾಡುವ ವೇಳೆ ಎದೆ ನೋವು ತೀವ್ರವಾಗಿ ಕಾಡಬಹುದು. ಇದು ಒಂದು ರೀತಿಯಲ್ಲಿ ಪೆರಿಕಾರ್ಡಿಟಿಸ್(ಹೃದಯದ ಸುತ್ತಲಿನ ಅಂಗಾಂಶಗಳಲ್ಲಿ ಉಂಟಾಗಿರುವಂತಹ ಊತ) ಅಥವಾ ಪಕ್ಕೆಲುಬುಗಳಿಗೆ ಹಾನಿಯಾಗಿರಬಹುದು. ನಿಮಗೆ ಈ ರೀತಿಯ ಎದೆ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಅವರಿಂದ ಚಿಕಿತ್ಸೆ ಪಡೆಯುವುದು ಸೂಕ್ತವಾಗಿದೆ. ಎದೆ ನೋವು ಹೃದಯಾಘಾತಕ್ಕೆ ಸಂಬಂಧಿಸಿದ್ದು ಅಲ್ಲದೆ ಇರಬಹುದು. ಆದರೆ ಇದು ಹೃದಯದ ಸಮಸ್ಯೆ ಅಥವಾ ಹೃದಯಕ್ಕೆ ಸಂಬಂಧವೇ ಇಲ್ಲದೆ ಇರುವ ವಿಚಾರವು ಆಗಿರಬಹುದು.


 • ಹೃದಯಕ್ಕೆ ಸಂಬಂಧಿಸದೆ ಇಲ್ಲದೆ ಇರುವ ಎದೆ ನೋವಿಗೆ ಪ್ರಮುಖ ಕಾರಣಗಳು

  *ಜಠರಗರುಳಿನ ನೋವು
  *ಹೃದಯಕ್ಕೆ ಸಂಬಂಧಿಸದೆ ಇಲ್ಲದೆ ಇರುವ ಎದೆ ನೋವುಗಳಲ್ಲಿ ಈ ನೋವು ಸಾಮಾನ್ಯವಾಗಿರುವುದು. ಆಮ್ಲೀಯ ಹಿಮ್ಮುಖ ಹರಿವು.
  *ಅನ್ನನಾಳದ ಸೆಳೆತ ಮತ್ತು ಅಸಿಡಿಟಿ ಇದಕ್ಕೆ ಕಾರಣಗಳು ಆಗಿರಬಹುದು.

  Most Read: ನಂಬಿಕೆಯೇ ಬರುತ್ತಿಲ್ಲ!! ಅವಲಕ್ಕಿಯಲ್ಲಿ ಇಷ್ಟೊಂದು ಪ್ರಯೋಜನಗಳಿವೆಯೇ?


 • ಸ್ನಾಯುಗಳ/ಎದೆಗೂಡಿನ ನೋವು

  ಸ್ನಾಯುಗಳಲ್ಲಿ ಸೆಳೆತ ಉಂಟಾದಾಗ ಅಥವಾ ಮೂಳೆಗಳಲ್ಲಿ ಬಿರುಕು ಕಾಣಿಸಿಕೊಂಡಾಗ ಈ ರೀತಿಯ ನೋವು ಕಂಡುಬರುವುದು. ರೋಗಿಯು ಯಾವುದೇ ರೀತಿಯ ದೈಹಿಕ ಕಾರ್ಯಗಳನ್ನು ಮಾಡಿದಂತಹ ವೇಳೆ ಈ ರೀತಿಯ ನೋವುಗಳು ಕಾಣಿಸಿಕೊಳ್ಳುವುದು.


 • ಶ್ವಾಸಕೋಶದ ನೋವು

  ನ್ಯುಮೋನಿಯಾ ಅಥವಾ ಪಾರ್ಶ್ವಶೂಲೆ ಪರಿಸ್ಥಿತಿಯಿಂದಾಗಿ ಶ್ವಾಸಕೋಶದ ಸುತ್ತಲಿನ ಅಂಗಾಂಶಗಳು ಉರಿಯೂತಕ್ಕೆ ಒಳಗಾಗುವುದು. ಇದರಿಂದಾಗಿ ಕೆಲವೊಂದು ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಳ್ಳಬಹುದು. ಇದನ್ನು ತಪ್ಪಾಗಿ ಹೃದಯಾಘಾತ ಎಂದು ತಿಳಿದುಕೊಳ್ಳಲಾಗುತ್ತದೆ.

  Most Read: 28ರ ಹರೆಯದ ಕಾಮುಕನಿಂದಾಗಿ ಮೂಕ ಪ್ರಾಣಿ ಆಡು ಬಲಿ ಆಯಿತು


 • ಹೃದಯಾಘಾತ ಅಲ್ಲದೆ ಇರುವ ಎದೆನೋವು

  ಎದೆನೋವು ಅಥವಾ ಗಂಟಲೂತವು ಎದೆಯಲ್ಲಿನ ಅಸ್ವಸ್ಥತೆಯ ಲಕ್ಷಣ ವಾಗಿರುವುದು. ಯಾಕೆಂದರೆ ಹೃದಯದಲ್ಲಿ ಏನೋ ನಡೆಯುತ್ತಾ ಇರುವ ಕಾರಣ ಹೀಗೆ ಆಗುವುದು. ಎದೆ ನೋವು ಕಾಣಿಸಿಕೊಂಡ ರೋಗಿಯಲ್ಲಿ ಹೃದಯತಜ್ಞರು ಮೊದಲಾಗಿ ಇದನ್ನು ಪತ್ತೆ ಮಾಡಲು ಪ್ರಯತ್ನಿಸುವರು. ಇದು ಸಾಮಾನ್ಯ ನೋವೇ ಅಥವಾ ಹೃದಯನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಯಿಂದ ಆಗಿರುವಂತಹದ್ದೇ ಎಂದು ತಿಳಿಯುವರು. ಹೃದಯದ ಕೆಲವೊಂದು ಪರಿಸ್ಥಿತಿಯು ಎದೆ ನೋವು ಉಂಟು ಮಾಡಬಹುದು. ಆದರೆ ಇದು ಹೃದಯನಾಳದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸದೆ ಇರಬಹುದು. ಇದರಲ್ಲಿ ಮುಖ್ಯವಾಗಿ ಈ ರೀತಿಯಾಗಿ ಇರುವುದು.


 • ಪೆರಿಕಾರ್ಡಿಟಿಸ್

  ಹೃದಯವನ್ನು ಸುತ್ತುವರಿದಿರುವ ಕೆಲವೊಂದು ಅಂಗಾಂಶಗಳ ಪದರಲ್ಲಿ ಕಾಣಿಸಿಕೊಳ್ಳುವಂತಹ ಉರಿಯೂತ.
  ಛೇದನ: ಮಹಾಪಧಮನಿಯ ವಿಭಜನೆಗಳು ಮತ್ತು ತೀವ್ರ ಎದೆ ಮತ್ತು ಬೆನ್ನುನೋವಿಗೆ ಕಾರಣವಾಗುತ್ತದೆ.
  ಮಯೋಕಾರ್ಡಿಟಿಸ್: ಹೃದಯ ಸ್ನಾಯುವಿನ ಉರಿಯೂತ.
  ಕಾರ್ಡಿಯೊಮಿಯೊಪತಿ: ಹೃದಯ ಸ್ನಾಯುವಿನ ರೋಗಗಳು.


 • ಹೃದಯಾಘಾತ ಅಂದರೆ ಏನು ಎಂದು ತಿಳಿಯಿರಿ

  ಹೃದಯಾಘಾತ ಆದರೆ ಆಗ ತುರ್ತು ಚಿಕಿತ್ಸೆ ನೀಡಬೇಕಾದ ಅಗತ್ಯವು ಇರುವುದು. ಇವುಗಳಲ್ಲಿ ಕೆಲವೊಂದು ಲಕ್ಷಣಗಳು ಈ ರೀತಿಯಾಗಿ ಇರುವುದು. ಅಸ್ವಸ್ಥತೆ ಉಸಿರು ಕಟ್ಟುವಿಕೆ, ಒತ್ತಡ ಹೆಚ್ಚಾಗುವುದು ಅಥವಾ ಎದೆಯಲ್ಲಿ ಉರಿಯುವ ಅನುಭವ ಉಂಟಾಗುವುದು.ನೋವು ಎದೆಯಿಂದ ಭುಜಗಳು, ಕೈಗಳು, ಕುತ್ತಿಗೆ, ದವಡೆ ಮತ್ತು ಬೆನ್ನಿಗೆ ತಲುಪುವುದು.


 • ಸತತ ಕೆಮ್ಮು ಮತ್ತು ಉಸಿರಾಟ ಕಷ್ಟಕರವಾಗುವುದು

  ಒಂದು ವೇಳೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡರೆ ಆಗ ಉಸಿರಾಟ ಕಷ್ಟಕರ ಹಾಗೂ ಸತತವಾಗಿ ಕೆಮ್ಮು ಆವರಿಸುತ್ತದೆ. ಇದು ಸಹಾ ಹೃದಯ ಸ್ತಂಭನದ ಸಾಧ್ಯತೆಯ ಸೂಚನೆಯಾಗಿದೆ.

  Most Read: ಮುಖ ನೋಡಿದ ತಕ್ಷಣ ನಿಮ್ಮ ಮದುವೆ ಬಗ್ಗೆ ಹೇಳಬಹುದು!


 • ಪಾದಗಳು ಊದಿಕೊಳ್ಳುವುದು

  ರಕ್ತಸಂಚಾರ ಬಾಧೆಗೊಂಡರೆ ದೇಹದ ತುದಿಭಾಗಗಳು ಅತಿ ಹೆಚ್ಚು ಪ್ರಭಾವ ಕ್ಕೊಳಗಾಗುತ್ತವೆ. ಮುಖ್ಯವಾಗಿ ಪಾದಗಳಿಗೆ ರಕ್ತ ಸಿಗದೇ ಇರುವ ಕಾರಣ ಅಲ್ಲಿನ ಜೀವಕೋಶಗಳಲ್ಲಿ ನೀರು ತುಂಬಿಕೊಳ್ಳಲು ಪ್ರಾರಂಭಿಸುತ್ತದೆ. ಇದರಿಂದ ಪಾದಗಳು ಊದಿಕೊಳ್ಳತೊಡಗುತ್ತವೆ. ನಿಧಾನವಾಗಿ ಇದು ಮೇಲೇರುತ್ತಾ ಕಾಲುಗಳು ಮತ್ತು ಹೊಟ್ಟೆಯವರೆಗೂ ತುಂಬಿಕೊಳ್ಳುವಂತೆ ಮಾಡುತ್ತದೆ. ಸೊಂಟದ ಮೇಲೇರಿದ ಊತ ಪ್ರಾಣಾಂತಿಕವಾಗಿದೆ.


 • ಸುಸ್ತು ಮತ್ತು ಬಳಲಿಕೆ ಎದುರಾಗುತ್ತದೆ

  ಯಾವಾಗ ಹೃದಯ ತನ್ನ ಕ್ಷಮತೆಯನ್ನು ಕಡಿಮೆ ಮಾಡಿ ಕೊಂಡಿತೋ ಆಗ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಪೂರೈಸಲು ಸಾಧ್ಯವಾಗದೇ ಎಲ್ಲಾ ಭಾಗಗಳು ತಮ್ಮ ಪಾಲಿನ ಕರ್ತವ್ಯವನ್ನು ಪೂರೈಸಲು ಹೆಣಗಾಡುತ್ತವೆ. ಇದು ಸುಸ್ತು ಮತ್ತು ಬಳಲಿಕೆಗೆ ಕಾರಣವಾಗುತ್ತದೆ. ಇದು ಸಹಾ ಹೃದಯ ಸ್ತಂಭನದ ಸಾಧ್ಯತೆಯನ್ನು ಸೂಚಿಸುತ್ತದೆ. ಒಂದು ಬೆರಳಿನಿಂದ ನಿಖರವಾಗಿ ಪತ್ತೆ ಹಚ್ಚಲು ಸಾಧ್ಯವಾಗದೆ ಇರುವ ನೋವು.
  ಬೆವರುವಿಎಕ
  ವಾಕರಿಕೆ
  ನಿಶ್ಯಕ್ತಿ ಅಥವಾ ಬಳಲಿಕೆ
  ಉಸಿರು ಗಟ್ಟುವಿಕೆ.
ಎದೆ ನೋವು ಸಾಮಾನ್ಯವಾಗಿ ಎಲ್ಲರಿಗು ಕಾಣಿಸಿಕೊಳ್ಳುತ್ತದೆ. ಭುಜದಿಂದ ಕೆಳಗೆ, ಹೊಟ್ಟೆಯ ಭಾಗದಿಂದ ಮೇಲೆ ಕಂಡು ಬರುವ ಈ ನೋವಿಗೆ ಎದೆ ನೋವು ಎಂದು ನಾವು ಕರೆಯುತ್ತೇವೆ. ಬಹಳಷ್ಟು ಸಲ ಇದಕ್ಕೆ ನಿಖರ ಕಾರಣವನ್ನು ನಮ್ಮಿಂದ ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ. ಆದರೂ ಕೆಲವೊಮ್ಮೆ ಇದು ಗಂಭೀರವಾದಾಗ, ಇದು ಹೃದಯಕ್ಕೆ ಅಪಾಯವನ್ನುಂಟು ಮಾಡಬಹುದು! ಕೆಲವೊಮ್ಮೆ ಎದೆ ನೋವು ಹೃದ್ರೋಗ, ಹೃದಯಾಘಾತ, ಆಸಿಡಿಟಿ ಮತ್ತು ಶ್ವಾಸಕೋಶದ ಸಮಸ್ಯೆಗಳಿಗೆ ಸಂಬಂಧಿಸಿದ್ದಾಗಿರಬಹುದು.

ಅದರಲ್ಲೂ ಎದೆ ನೋವು ಮುಖ್ಯವಾಗಿ ಕುತ್ತಿಗೆ, ದವಡೆ ಹಾಗೂ ಕೈಗಳಿಗೂ ಪಸರಿಸಿದೆ ಮತ್ತು ಉಸಿರಾಟದಲ್ಲಿನ ತೊಂದರೆ, ನಿಶ್ಯಕ್ತಿ ಮತ್ತು ಬೆವರುವಿಕೆ ಕಂಡುಬಂದರೆ, ಕೂಡಲೇ ವೈದ್ಯರ ಸಲಹೆ ಪಡೆದುಕೊಂಡು ಆಸ್ಪತ್ರೆಗೆ ದಾಖಲಾಗಿ. ಸಾಮಾನ್ಯವಾಗಿ ಕೆಲವು ಜನರಿಗೆ(ಅದರಲ್ಲೂ ಮಹಿಳೆಯರು, ಮಧುಮೇಹಿಗಳು ಮತ್ತು ವಯಸ್ಸಾದವರು) ಹೃದಯಾಘಾತದ ವೇಳೆ ಎದೆ ನೋವು ಕಂಡುಬರುವುದಿಲ್ಲ. ಆದರೆ ಇವರಿಗೆ ಬೇರೆ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಆದರೆ ಕೆಲವೊಂದು ಸಲ ಎದೆ ನೋವು ಹೃದಯಾಘಾತವೇ ಆಗಬೇಕು ಎಂದೇನಿಲ್ಲ. ಇದು ಬೇರೆ ಹೃದಯ ಸಂಬಂಧಿ ಸಮಸ್ಯೆ ಅಥವಾ ಹೃದಯಕ್ಕೆ ಸಂಬಂಧ ಪಡದೇ ಇರುವಂತಹ ವಿಚಾರವು ಆಗಿರಬಹುದು. ಹೃದಯಾಘಾತ ಅಲ್ಲ ಎನ್ನುವುದಕ್ಕೆ ನೀವು ಈ ಅಂಶಗಳಿಂದ ತಿಳಿಯಬಹುದು.

   
 
ಹೆಲ್ತ್