Back
Home » ಆರೋಗ್ಯ
ದಿನಕ್ಕೊಂದು ಸೇಬು ಆರೋಗ್ಯಕರ ಹೌದು, ಆದರೆ ಈ ಸಮಯದಲ್ಲಿ ಸೇವಿಸಿದಾಗ ಮಾತ್ರ!!
Boldsky | 6th Feb, 2019 12:32 PM
 • ಬೆಳಗ್ಗಿನ ಸಮಯ

  ಅಧ್ಯಯನಗಳ ಪ್ರಕಾರ ಸೇಬು ಹಣ್ಣನ್ನು ಸೇವಿಸಲು ಪ್ರಶಸ್ತ ಸಮಯವೆಂದರೆ ಬೆಳಗ್ಗಿನ ಹೊತ್ತು. ಏಕೆಂದರೆ ಸೇಬು ಹಣ್ಣಿನಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದರ ಸಿಪ್ಪೆಯಲ್ಲಿದೆ. ಇಂದಿನ ಆಹಾರಕ್ರಮದ ಕಾರಣ ಹಲವರಲ್ಲಿ ಸರಿಯಾಗಿ ನಿದ್ದೆ ಮಾಡದೇ ಇರುವುದು, ತಡವಾಗಿ ರಾತ್ರಿಯೂಟ ಮಾಡುವುದು ಇತ್ಯಾದಿಗಳ ಕಾರಣ ಅಜೀರ್ಣತೆ ಹಾಗೂ ಇತರ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು ಆವರಿಸಿರುತ್ತವೆ. ಈ ವ್ಯಕ್ತಿಗಳಿಗೆ ಸೇಬು ಹಣ್ಣು ತಿನ್ನಲು ಬೆಳಗ್ಗಿನ ಸಮಯವೇ ಪ್ರಶಸ್ತವಾಗಿದೆ. ಅದರಲ್ಲೂ ಬೆಳಿಗ್ಗೆದ್ದ ಬಳಿಕ ಪ್ರಥಮ ಆಹಾರವಾಗಿ ಬೇರಾವುದೇ ಹಣ್ಣುಗಳಿಗಿಂತ ಸೇಬನ್ನೇ ಸೇವಿಸಿದರೆ ಇನ್ನೂ ಒಳ್ಳೆಯದು. ಈ ಮೂಲಕ ಜೀರ್ಣಾಂಗಗಳ ಕ್ಷಮತೆ ಹೆಚ್ಚುತ್ತದೆ ಹಾಗೂ ಈ ತೊಂದರೆಗಳು ಇಲ್ಲವಾಗುತ್ತವೆ.

  Most Read: ಸೇಬಿನ ಸಿಪ್ಪೆಯೂ ಕೂಡ ಆರೋಗ್ಯಕ್ಕೆ ಉಪಕಾರಿ ಕಣ್ರೀ


 • ಪೆಕ್ಟಿನ್

  ಎರಡನೆಯದಾಗಿ, ಇದರಲ್ಲಿರುವ ಪೆಕ್ಟಿನ್ ಎಂಬ ಪೋಷಕಾಂಶ ಜೀರ್ಣಾಂಗದಲ್ಲಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳು ಇನ್ನಷ್ಟು ವೃದ್ಧಿಯಾಗಲು ನೆರವಾಗುತ್ತದೆ. ತನ್ಮೂಲಕ ಜೀರ್ಣಶಕ್ತಿ ಇನ್ನಷ್ಟು ಉತ್ತಮಗೊಳ್ಳುತ್ತದೆ. ಅಲ್ಲದೇ ಜೀರ್ಣಾಂಗಗಳಲ್ಲಿ ಸಂಗ್ರಹಗೊಂಡಿದ್ದ ಕಲ್ಮಶಗಳನ್ನು ನಿವಾರಿಸಲೂ ಈ ಪೆಕ್ಟಿನ್ ನೆರವಾಗುತ್ತದೆ. ಈ ಮೂಲಕ ಕ್ಯಾನ್ಸರ್ ಉಂಟುಮಾಡುವ ಕಣಗಳ ಉತ್ಪಾದನೆಗೆ ಕಡಿವಾಣ ಹಾಕಿದಂತಾಗಿ ಹಲವಾರು ಬಗೆಯ ಕ್ಯಾನ್ಸರ್ ಗಳಿಂದ ರಕ್ಷಣೆ ಒದಗುತ್ತದೆ.


 • ಹಾಗಾದರೆ ಸಂಜೆಯ ವೇಳೆ ತಿಂದರೇನಾಗುತ್ತದೆ?

  ಸಂಜೆಯ ಬಳಿಕ ಯಾವುದೇ ಸಮಯ ಅಂದರೆ ರಾತ್ರಿಯ ಸಮಯದಲ್ಲಿಯೂ ಸರಿ, ಜೀರ್ಣಶಕ್ತಿಗೆ ಪೂರಕವಾದ ಸೇಬು ನಮ್ಮ ಜೀರ್ಣವ್ಯವಸ್ಥೆಗೆ ವಿರುದ್ದವಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ಸಂಜೆ ಅಥವಾ ಅದಕ್ಕೂ ನಂತರ ಸೇವಿಸಿದ ಸೇಬು ಹಣ್ಣಿನಿಂದ ಜೀರ್ಣಾಂಗಗಳಲ್ಲಿ ವಾಯು ಉತ್ಪಾದನೆಯಾಗತೊಡಗುತ್ತದೆ ಹಾಗೂ ತಡರಾತ್ರಿ ಹೊಟ್ಟೆಯಲ್ಲಿ ಗುಡುಗುಡು, ವಾಯುಪ್ರಕೋಪ, ಹೊಟ್ಟೆಯುರಿ ಮೊದಲಾದವು ಕಾಣಿಸಿಕೊಳ್ಳುತ್ತವೆ.


 • ಸಾವಯವ ಆಮ್ಲ

  ಅಲ್ಲದೇ ಸೇಬಿನಲ್ಲಿರುವ ಸಾವಯವ ಆಮ್ಲ ಜಠರರಸದ ಆಮ್ಲತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸಂಜೆಯ ಹೊತ್ತಿನಲ್ಲಿ ಸೇವಿಸಿದ ಸೇಬಿನಿಂದ ಪಡೆದ ಈ ಆಮ್ಲೀಯತೆಯಿಂದ ಜಠರರಸ ರಾತ್ರಿಯ ಹೊತ್ತು ಅನಗತ್ಯ ಕ್ರಿಯೆಗಳನ್ನು ನಡೆಸಬೇಕಾಗುತ್ತದೆ ಹಾಗೂ ಜೀರ್ಣಾಂಗಗಳಲ್ಲಿ ಆಹಾರದ ಚಲನೆಗೆ ಅಡ್ಡಿಯಾಗುತ್ತದೆ.

  Most Read: ಸಡನ್ ಆಗಿ ಎದೆ ನೋವು ಬಂದರೆ- ಇದು ಹಾರ್ಟ್ ಅಟ್ಯಾಕ್‪ ಆಗುವ ಲಕ್ಷಣವೇ?


 • ಪ್ರಥಮ ಆಹಾರವಾಗಿ ಸೇಬುಹಣ್ಣಿನ ಸೇವನೆಯ ಪ್ರಯೋಜನಗಳು

  ಹಾಗಾಗಿ, ಸೇಬು ಹಣ್ಣನ್ನು ತಿನ್ನಲು ಬೆಳಿಗ್ಗೆಯೇ ಉತ್ತಮ ಸಮಯವಾಗಿದೆ ಹಾಗೂ ಪ್ರಥಮ ಆಹಾರವಾಗಿ ಸೇವಿಸಿದರೆ ಇನ್ನೂ ಉತ್ತಮವಾಗಿದೆ. ಇದು ಸಾಧ್ಯವಾಗದೇ ಇದ್ದರೆ ಉಪಾಹಾರ ಮತ್ತು ಮಧ್ಯಾಹ್ನದ ಊಟದ ನಡುವಣ ಅವಧಿಯಲ್ಲಿ ಸೇವಿಸಲು ಸೂಕ್ತವಾಗಿದೆ. ಸೇಬಿನಲ್ಲಿರುವ ಪೋಷಕಾಂಶಗಳು ಆರೋಗ್ಯವೃದ್ದಿಯೂ ಹೌದು. ನಿಯಮಿತ ಸೇವನೆಯಿಂದ ತೂಕ ಇಳಿಸಲು, ತ್ವಚೆಯ ಕಾಂತಿ ಹೆಚ್ಚಿಸಲು, ಜೀರ್ಣಶಕ್ತಿ ಉತ್ತಮಪಡಿಸಲು ಹಾಗೂ ದೀರ್ಘಾವಧಿಯ ಸೇವನೆಯಿಂದ ದೇಹವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಲೂ ನೆರವಾಗುತ್ತದೆ.
ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುತ್ತದೆ-ಇದೊಂದು ಸುಪ್ರಸಿದ್ಧ ಎಂಬುದೊಂದು ಆಂಗ್ಲ ಸುಭಾಷಿತ. ಈ ಮಾತನ್ನು ವಿಶ್ವದ ಜನತೆ ಎಷ್ಟು ಬಲವಾಗಿ ನಂಬಿದ್ದಾರೆ ಎಂದರೆ ಬಲವಂತವಾಗಿಯಾದರೂ ತಾಯಂದಿರು ತಮ್ಮ ಮಕ್ಕಳಿಗೆ ಸೇಬನ್ನು ತಿನ್ನಿಸುತ್ತಾರೆ. ಈ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಉತ್ತಮಗೊಂಡು ಹಲವಾರು ಕಾಯಿಲೆಗಳನ್ನು ದೂರವಿರಿಸುವುದೇ ವೈದ್ಯರನ್ನು ದೂರವಿಡುವ ಗುಟ್ಟು.

ಆದರೆ ಈ ಶಕ್ತಿಯನ್ನು ಪಡೆಯಲು ದಿನದಲ್ಲಿ ನಮಗೆ ಇಷ್ಟವಾದಾಗ ತಿನ್ನುವಂತಿಲ್ಲ. ಏಕೆಂದರೆ ಆಯುರ್ವೇದದ ಪ್ರಕಾರ ಯಾವುದೇ ಆಹಾರವನ್ನು ಸೇವಿಸಲು ದಿನದ ಕೆಲವು ಸಮಯ ಪ್ರಶಸ್ತವಾಗಿದ್ದು ಗರಿಷ್ಟ ಪ್ರಯೋಜನವನ್ನು ಪಡೆಯಬಹುದು. ಅಂತೆಯೇ ಸೇಬು ಹಣ್ಣನ್ನು ತಿನ್ನಲೂ ಉತ್ತಮ ಸಮಯವನ್ನು ಆಯುರ್ವೇದ ಸೂಚಿಸಿದ್ದು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ

   
 
ಹೆಲ್ತ್