Back
Home » ಆರೋಗ್ಯ
ದೇಹದ ತೂಕ ಇಳಿಸಿಕೊಳ್ಳಲು ಬಯಸುವಿರಾ? ಅನ್ನ ಸೇವಿಸುವಾಗ ಈ ಸಂಗತಿಗಳು ನೆನಪಿರಲಿ
Boldsky | 7th Feb, 2019 03:14 PM
 • ಅನ್ನ ಸೇವಿಸುವ ಸರಿಯಾದ ಸಮಯ

  ಅಧ್ಯಯನಗಳ ಪ್ರಕಾರ ಮಧ್ಯಾಹ್ನದ ಊಟದಲ್ಲಿ ಅನ್ನ ಸೇವಿಸುವುದು ಉತ್ತಮ ಎನ್ನಲಾಗಿದೆ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ದಿನದ ಅವಧಿಯಲ್ಲಿ ದೇಹದ ಜೀರ್ಣಶಕ್ತಿ ಸಾಮರ್ಥ್ಯ ಉನ್ನತ ಪ್ರಮಾಣದಲ್ಲಿರುವುದರಿಂದ ಅನ್ನ ಸೇವಿಸಿದರೂ ಅದು ಬೇಗ ಜೀರ್ಣವಾಗುತ್ತದೆ. ಇನ್ನು ಬೆಳಗಿನ ಉಪಹಾರದ ನಂತರ ಮಧ್ಯಾಹ್ನ ಸಾಕಷ್ಟು ಹಸಿವಾಗಿರುತ್ತದೆ. ಈ ಸಮಯದಲ್ಲಿ ಅನ್ನ ಸೇವಿಸಿದಲ್ಲಿ ಮುಂದಿನ 8 ರಿಂದ 10 ಗಂಟೆಗಳ ಕಾಲ ದೇಹಕ್ಕೆ ಬೇಕಾದ ಚೈತನ್ಯ ನೀಡಲು ಸಹಕಾರಿಯಾಗುತ್ತದೆ.


 • ಅನ್ನದಲ್ಲಿನ ಕಾರ್ಬೊಹೈಡ್ರೇಟ್‌ಗಳು ಅಗತ್ಯ

  ದಿನದ ಅವಧಿಯಲ್ಲಿ ಸಾಮಾನ್ಯವಾಗಿ ನಾವು ಹೆಚ್ಚು ದೈಹಿಕ ಶ್ರಮದ ಕೆಲಸ ಮಾಡುತ್ತಿರುತ್ತೇವೆ. ಹೀಗಾಗಿ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸಬೇಕಾಗುತ್ತದೆ. ಅನ್ನದಲ್ಲಿರುವ ಕಾರ್ಬೊಹೈಡ್ರೇಟ್‌ಗಳು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ನೀಡಿ ಉಲ್ಲಾಸದಿಂದಿರುವಂತೆ ಮಾಡುತ್ತವೆ.

  Most Read: ಪದೇ ಪದೇ ಶೀತ ಕಾಡುತ್ತಲೇ ಇರುತ್ತದೆಯೇ? ಹಾಗಾದರೆ ಇದೇ ಸಮಸ್ಯೆ ಇರಬಹುದು!


 • ಬಿಳಿ ಅಕ್ಕಿ ಹಾಗೂ ಕಂದು ಅಕ್ಕಿ ಯಾವುದು ಉತ್ತಮ?

  ಒಟ್ಟಾರೆಯಾಗಿ ಅಕ್ಕಿಯು ದೇಹದ ಆರೋಗ್ಯಕ್ಕೆ ಉತ್ತಮ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬಿಳಿ ಅಕ್ಕಿಯ ಅನ್ನ ಹಾಗೂ ಕಂದು ಅಕ್ಕಿಯ ಅನ್ನದಲ್ಲಿ ಒಂದು ಪ್ರಮುಖ ವ್ಯತ್ಯಾಸವಿದೆ. ಅದೆಂದರೆ ಕಂದು ಬಣ್ಣದ ಅಕ್ಕಿಯ ಅನ್ನವು ಜೀರ್ಣವಾಗಲು ಬಿಳಿ ಅಕ್ಕಿಯ ಅನ್ನಕ್ಕಿಂತಲೂ ತುಸು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇಷ್ಟು ಬಿಟ್ಟರೆ ಯಾವುದೇ ರೀತಿಯ ಅಕ್ಕಿ ಸೇವಿಸಿದರೂ ಅಂಥ ಹೇಳಿಕೊಳ್ಳುವಂಥ ವ್ಯತ್ಯಾಸಗಳೇನೂ ಆಗವು. ಆದರೂ ತಾವಿರುವ ಪ್ರದೇಶದಲ್ಲಿ ಬೆಳೆಯುವ ಸ್ಥಳೀಯ ಅಕ್ಕಿಯನ್ನೇ ನಿಯಮಿತವಾಗಿ ಬಳಸುವುದು ಸೂಕ್ತ ಎಂಬುದು ತಜ್ಞರ ಅಭಿಪ್ರಾಯವಾಗಿದೆ.


 • ಅನ್ನವನ್ನು ಸೇವಿಸುವ ವಿಧಾನಗಳು

  ಅಕ್ಕಿಯನ್ನು ಅನ್ನದ ರೂಪದಲ್ಲಿ ನೇರವಾಗಿ ಸೇವಿಸಬಹುದು ಅಥವಾ ಅಕ್ಕಿಯಿಂದ ತಯಾರಿಸಿದ ಇಡ್ಲಿ, ರೊಟ್ಟಿ ಅಥವಾ ಖಿಚಡಿಗಳನ್ನು ಸಹ ಸೇವಿಸಬಹುದು. ಆದರೆ ಅಕ್ಕಿಯನ್ನು ಯಾವುದೇ ರೂಪದಲ್ಲಿ ಸೇವಿಸಿದರೂ ಹಿತ ಮಿತವಾಗಿ ಸೇವಿಸುವುದು ಸೂಕ್ತ. ಅತಿಯಾಗಿ ತಿನ್ನುವುದು ಸರಿಯಲ್ಲ.


 • ಅನ್ನ ಸೇವಿಸುವಾಗ ಈ ಅಂಶಗಳು ಗಮನದಲ್ಲಿರಲಿ

  *ಹೊರಗಡೆ ಊಟಕ್ಕೆ ಹೋದಾಗ ಆದಷ್ಟೂ ಸಾದಾ ಬಿಳಿ ಅನ್ನ ಸೇವಿಸುವುದು ಸೂಕ್ತ. ಫ್ರೈಡ್ ರೈಸ್ ತಿನ್ನುವುದು ಬೇಡ.ಅನ್ನವು ಅಸಂಪೂರ್ಣ ಪೌಷ್ಟಿಕತೆಯ ಆಹಾರವಾಗಿದೆ. ಹೀಗಾಗಿ ಇದರೊಂದಿಗೆ ಮಾಂಸಜನ್ಯ ಪದಾರ್ಥ ಅಥವಾ ಸಸ್ಯಜನ್ಯ ಪದಾರ್ಥಗಳಾದ ಬೇಳೆ (ದಾಲ್), ತರಕಾರಿ ಸಾರು ಸೇವನೆ ಮಾಡಬೇಕು.
  *ಅನ್ನ ಮಾಡುವ ಮುಂಚೆ ಕೆಲ ಹೊತ್ತು ಅಕ್ಕಿಯನ್ನು ನೆನೆಸಿ ಇಡಬೇಕು. ನಂತರ 3 ರಿಂದ 4 ಬಾರಿ ಚೆನ್ನಾಗಿ ತೊಳೆದು ಅದರಲ್ಲಿರುವ ಸ್ಟಾರ್ಚ್
  ಹೋಗಲಾಡಿಸಬೇಕು. ಹೆಚ್ಚು ಪ್ರಮಾಣದ ನೀರಿನಲ್ಲಿ ಅನ್ನ ಮಾಡುವುದರಿಂದಲೂ ಸ್ಟಾರ್ಚ್ ಪ್ರಮಾಣವನ್ನು ಕಡಿಮೆ ಮಾಡಬಹುದು.
  *ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಅನ್ನದೊಂದಿಗೆ ನಾರಿನ ಅಂಶವುಳ್ಳ ತರಕಾರಿಗಳನ್ನು ಸೇವಿಸಬೇಕು. ಕಂದು ಬಣ್ಣದ ಅಕ್ಕಿಯ ಅನ್ನವನ್ನು ಸಾದಾ ನೀರಿಗಿಂತ ತೆಂಗಿನ ನೀರಿನಲ್ಲಿ ಮಾಡಿದರೆ ಹೆಚ್ಚು ರುಚಿಕರವಾಗಿರುತ್ತದೆ.

  Most Read: ದಿನಕ್ಕೊಂದು ಸೇಬು ಆರೋಗ್ಯಕರ ಹೌದು, ಆದರೆ ಈ ಸಮಯದಲ್ಲಿ ಸೇವಿಸಿದಾಗ ಮಾತ್ರ!!


 • ಕಡಿಮೆ ಪಾಲಿಷ್ ಅಕ್ಕಿಯ ಅನ್ನ ಆರೋಗ್ಯಕ್ಕೆ ಉತ್ತಮ

  ಪೌಷ್ಟಿಕಾಂಶ ತಜ್ಞರ ಪ್ರಕಾರ ಎಲ್ಲ ಬಗೆಯ ಅಕ್ಕಿಗಳು ಹೆಚ್ಚು ಕಡಿಮೆ ಒಂದೇ ರೀತಿಯ ಕ್ಯಾಲೊರಿ ಹೊಂದಿರುತ್ತವೆ. ಆದರೂ ಬಿಳಿ ಅಕ್ಕಿಗೆ ಹೋಲಿಸಿದರೆ ಕಂದು ಮತ್ತು ಕೈಯಿಂದ ಕುಟ್ಟಿದ ಅಕ್ಕಿಗಳು ಪಾಲಿಷ್ ಮಾಡದೆ ಇರುವುದರಿಂದ ಇವುಗಳ ಮೇಲ್ಮೈ ಹಾಗೆಯೇ ಉಳಿದು ನಾರಿನಂಶ ಹೆಚ್ಚಾಗಿರುತ್ತದೆ. ಇವುಗಳ ಸೇವನೆಯಿಂದ ಬೇಗನೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ದೇಹದ ತೂಕ ಇಳಿಸಿಕೊಳ್ಳುವ ದೃಷ್ಟಿಯಿಂದ ನೋಡಿದಲ್ಲಿ ಕಂದು ಬಣ್ಣದ ಅಕ್ಕಿಯ ಅನ್ನ ಸೇವನೆ ಉತ್ತಮ. ಆದಾಗ್ಯೂ ಯಾವುದೇ ರೀತಿಯ ಅಕ್ಕಿಯ ಅನ್ನವಾದರೂ ಮಿತ ಪ್ರಮಾಣದಲ್ಲಿ ಸೇವಿಸುವ ಕಡೆಗೆ ಗಮನವಿಡಬೇಕಾಗುತ್ತದೆ. ಅತಿಯಾಗಿ ಅನ್ನ ಸೇವಿಸಿ ತೂಕ ಹೆಚ್ಚಿಸಿಕೊಳ್ಳದೆ ಹೋದರೆ ಅಕ್ಕಿಗೆ ಬಂದಿರುವ ಅಪವಾದವನ್ನು ಹೋಗಲಾಡಿಸಬಹುದು.
ಅಕ್ಕಿಯು ಭಾರತದ ಬಹುತೇಕ ಪ್ರದೇಶಗಳ ಜನರ ದಿನನಿತ್ಯದ ಪ್ರಮುಖ ಆಹಾರವಾಗಿದೆ. ದಿನದ ಮೂರು ಹೊತ್ತಿನ ಊಟದಲ್ಲಿ ಕನಿಷ್ಠ ಎರಡು ಬಾರಿಯಾದರೂ ಅನ್ನ ಇದ್ದೇ ಇರುತ್ತದೆ. ಆದರೆ ಕಳೆದ ಒಂದೆರಡು ದಶಕಗಳಿಂದ ಅನ್ನದ ಸೇವನೆಯ ಬಗ್ಗೆ ಕೆಲ ವಿಚಾರಗಳು ಗಂಭೀರ ಚರ್ಚೆಗೆ ಒಳಗಾಗಿವೆ. ಅತಿಯಾದ ಬೊಜ್ಜಿನಿಂದ ಬಳಲುತ್ತ ತೂಕ ಇಳಿಸಿಕೊಳ್ಳಲು ಯತ್ನಿಸುತ್ತಿರುವವರಿಂದ ಹಿಡಿದು ಪೌಷ್ಟಿಕಾಂಶ ತಜ್ಞರವರೆಗೆ ಎಲ್ಲರೂ ಅನ್ನ ಸೇವಿಸುವ ಬಗ್ಗೆ ಒಂದಿಲ್ಲೊಂದು ರೀತಿಯ ಅಭಿಪ್ರಾಯಗಳನ್ನು ಹೊಂದಿದ್ದಾರೆ.

ಅನ್ನದ ಸೇವನೆಯಿಂದ ತೂಕ ಹೆಚ್ಚಾಗುತ್ತದೆ ಎಂಬ ಭಾವನೆಯಿಂದ ಬೊಜ್ಜಿನ ಸಮಸ್ಯೆ ಇರುವ ಅನೇಕರು ಅದರ ಸೇವನೆಯನ್ನೇ ನಿಲ್ಲಿಸಿದ್ದಾರೆ. ಇನ್ನು ಕೆಲವರು ವಾರಕ್ಕೆ ಕೆಲವು ಬಾರಿ ಮಾತ್ರ ಅನ್ನ ಊಟ ಮಾಡುವುದನ್ನು ವ್ರತದಂತೆ ಪಾಲಿಸುತ್ತಿದ್ದಾರೆ. ಆದರೆ ಯಾವ ಸಂದರ್ಭ ಅಥವಾ ಸಮಯದಲ್ಲಿ ಅನ್ನ ಸೇವನೆ ಉತ್ತಮ ಎಂಬ ಬಗ್ಗೆ ಗೊಂದಲಗಳು ಮುಂದುವರಿದಿವೆ. ಹೀಗಾಗಿಯೇ ಅನ್ನದ ಸೇವನೆಯ ಕುರಿತು ಕೈಗೊಳ್ಳಲಾದ ಸಂಶೋಧನೆ ಯೊಂದರ ಅಂಶಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ನೀವೂ ಓದಿ ತಿಳಿದುಕೊಳ್ಳಿ....

   
 
ಹೆಲ್ತ್