Back
Home » ಆರೋಗ್ಯ
ಪುರುಷರೇ ನಿಮಿರು ದೌರ್ಬಲ್ಯ ಸಮಸ್ಯೆ ಇದ್ದರೆ ಹೊಟ್ಟೆ ತುಂಬಾ ಕಲ್ಲಂಗಡಿ ಹಣ್ಣು ತಿನ್ನಿ!
Boldsky | 7th Feb, 2019 08:01 PM
 • ಸಂಶೋಧನೆ

  ಕಲ್ಲಂಗಡಿ ಹಣ್ಣಿನಲ್ಲಿ ಉನ್ನತ ಮಟ್ಟದ ಎಲ್-ಸಿಟ್ರುಲ್ಲೈನ್ ಅಂಶವಿದೆ. ಇದು ಒಂದು ರೀತಿಯ ಅಮಿನೋ ಆಮ್ಲವಾಗಿ ಇರುವುದು. ದೇಹದಲ್ಲಿ ಇರುವಂತಹ ನೈಟ್ರಿಕ್ ಆಕ್ಸೈಡ್ ವ್ಯವಸ್ಥೆಯು ಇದನ್ನು ಸ್ವೀಕರಿಸಿದ ವೇಳೆ ಅದು ರಕ್ತ ಸಂಚಾರವನ್ನು ಹೆಚ್ಚಿಸುವುದು. ಇದರ ಪರಿಣಾಮವಾಗಿ ರಕ್ತದ ಒತ್ತಡವು ಹೆಚ್ಚುವುದು. ರಕ್ತದ ಹರಿವು ಕೂಡ ಸುಧಾರಣೆ ಆಗುವುದು. ಎಲ್-ಸಿಟ್ರುಲ್ಲೈನ್ ಜಿಎಂಪಿಎಸ್ ಎನ್ನುವಂತಹ ಕಿಣ್ವಗಳನ್ನು ಉತ್ತೇಜಿಸಲು ತುಂಬಾ ನೆರವಾಗುವುದು. ಇದು ರಕ್ತದ ಹರಿವಿನಲ್ಲಿ ಪ್ರಮುಖ ಪಾತ್ರ ವಹಿಸುವುದು. ಹೆಚ್ಚು ಎಲ್-ಸಿಟ್ರುಲ್ಲೈನ್ ಸೇವನೆ ಮಾಡುವ ಮೂಲಕವಾಗಿ ನಿಮಿರು ದೌರ್ಬಲ್ಯ ಸಮಸ್ಯೆ ಕಡಿಮೆ ಮಾಡಿಕೊಳ್ಳಬಹುದು. ಎಲ್-ಸಿಟ್ರುಲ್ಲೈನ್ ಬಗ್ಗೆ ಇಂಟರ್ನೆಟ್ ನಲ್ಲಿ ನಿಮಗೆ ಹಲವಾರು ಅವೈಜ್ಞಾನಿಕವಾದ ಮಾಹಿತಿಗಳು ಇರುವುದು. ಅದರಲ್ಲೂ ಪ್ರಮುಖವಾಗಿ ಸಪ್ಲಿಮೆಂಟ್ ನ ತಯಾರಕರಿಂದ.


 • ನಿಮಿರು ದೌರ್ಬಲ್ಯಕ್ಕೆ

  ನಿಮಿರು ದೌರ್ಬಲ್ಯಕ್ಕೆ ಎಲ್-ಸಿಟ್ರುಲ್ಲೈನ್ ನೆರವಾಗುತ್ತದೆ ಎನ್ನುವ ಬಗ್ಗೆ ಕೆಲವೊಂದು ಅಧ್ಯಯನಗಳು ಮಾತ್ರ ವೈಜ್ಞಾನಿಕವಾಗಿ ವರದಿಯನ್ನು ನೀಡಿವೆ. ಯುರೋಲಾಜಿಯಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯ ಪ್ರಕಾರ, ಒಂದು ತಿಂಗಳ ಕಾಲ ಸುಮಾರು 24 ಮಂದಿ ಪುರುಷರು ಎಲ್-ಸಿಟ್ರುಲ್ಲೈನ್ ಸಪ್ಲಿಮೆಂಟ್ ಸೇವೆನೆ ಮಾಡಿದ ವೇಳೆ ಅವರಲ್ಲಿ ನಿಮಿರು ದೌರ್ಬಲ್ಯ ಸಮಸ್ಯೆಯಲ್ಲಿ ಲಘುವಾದ ಸುಧಾರಣೆ ಕಂಡುಬಂದಿದೆ. ಗಂಡು ಇಲಿಗಳ ಮೇಲೆ ಕಲ್ಲಂಗಡಿ ಹಣ್ಣನ್ನು ಪ್ರಯೋಗ ಮಾಡಿದ ವೇಳೆಯಲ್ಲಿ ಅವುಗಳ ಲೈಂಗಿಕ ಚಟುವಟಿಕೆಯಲ್ಲಿ ಸುಧಾರಣೆ ಆಗಿರುವುದು ಕಂಡು ಬಂದಿದೆ. ಎಲ್-ಸಿಟ್ರುಲ್ಲೈನ್ ಸೇವನೆ ಮಾಡುವುದು ಎಷ್ಟು ಸುರಕ್ಷಿತ ಎನ್ನುವ ಬಗ್ಗೆ ದೀರ್ಘ ಕಾಲದ ಅಧ್ಯಯನವನ್ನು ನಡೆಸಬೇಕಾಗಿದೆ.

  Most Read: ಜನನಾಂಗ ನಿಮಿರುವಿಕೆ ಸಮಸ್ಯೆಗೆ 15 ಪ್ರಾಕೃತಿಕ ಪರಿಹಾರಗಳು


 • ಎಲ್-ಸಿಟ್ರುಲ್ಲೈನ್ ಸಪ್ಲಿಮೆಂಟ್ ಗಳು

  ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆದ ಬಳಿಕ ನೀವು ಎಲ್-ಸಿಟ್ರುಲ್ಲೈನ್ ಸಪ್ಲಿಮೆಂಟ್ ನ್ನು ಪಡೆಯಬಹುದಾಗಿದೆ. ಇದರಿಂದ ಯಾವ ರೀತಿಯ ಅಡ್ಡ ಪರಿಣಾಮ ಆಗುತ್ತದೆ ಎಂದು ತಿಳಿದಿಲ್ಲ. ಆದರೆ ನೀವು ಈಗಾಗಲೇ ನಿಮಿರು ದೌರ್ಬಲ್ಯಕ್ಕಾಗಿ ವಯಾಗ್ರ ಸೇವನೆ ಮಾಡುತ್ತಲಿದ್ದರೆ ಆಗ ಇದು ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹುದು. ಮಧ್ಯಮ ಪ್ರಮಾಣದ ನಿಮಿರು ದೌರ್ಬಲ್ಯ ಸಮಸ್ಯೆಗೆ ಈ ಸಪ್ಲಿಮೆಂಟ್ ನೆರವಾಗುವುದು ಎಂದು ನೀವು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿರುವುದು. ಸಪ್ಲಿಮೆಂಟ್ ನ್ನು ಸುರಕ್ಷತೆ ಹಾಗೂ ಶುದ್ಧತೆ ದೃಷ್ಟಿಯೀಂದ ಎಫ್ ಡಿ ಎ ನಿಗಾ ಇರಿಸುತ್ತದೆ. ನೀವು ಈ ಸಪ್ಲಿಮೆಂಟ್ ನ್ನು ಪ್ರಮಾಣೀಕೃತ ಮೂಲಗಳಿಂದ ಖರೀದಿ ಮಾಡಿ.


 • ಎಲ್-ಸಿಟ್ರುಲ್ಲೈನ್ ನ ಇತರ ಮೂಲಗಳು

  ಸಪ್ಲಿಮೆಂಟ್ ನಲ್ಲಿ ಕಂಡುಬರುವಂತಹ ಎಲ್-ಸಿಟ್ರುಲ್ಲೈನ್ ಅಂಶವನ್ನು ನೀವು ಸರಿದೂಗಿಸಬೇಕಾದರೆ ಆಗ ನೀವು ದಿನಕ್ಕೆ ಸುಮಾರು 3.1/2 ಕಪ್ ನಷ್ಟು ಕಲ್ಲಂಗಡಿ ಹಣ್ಣು ಸೇವನೆ ಮಾಡಬೇಕು. ಕಿತ್ತಳೆ ಮತ್ತು ಹಳದಿ ಬಣ್ಣದ ಕಲ್ಲಂಗಡಿಯಲ್ಲಿ ಇದರ ಪ್ರಮಾಣವು ಸ್ವಲ್ಪ ಮಟ್ಟಿಗೆ ಹೆಚ್ಚಾಗಿರುವುದು. ಇದರಿಂದ ಸಾಂಪ್ರದಾಯಿಕ ಕೆಂಪು ಕಲ್ಲಂಗಡಿ ಬದಲು ನೀವು ಇವುಗಳನ್ನು ಸೇವನೆ ಮಾಡಿದರೆ ಆಗ ಸ್ವಲ್ಪ ಕಡಿಮೆ ಪ್ರಮಾಣ ಸೇವನೆ ಮಾಡಬೇಕಾಗಬಹುದು. ಎಲ್-ಸಿಟ್ರುಲ್ಲೈನ್ ಕೆಲವೊಂದು ಆಹಾರಗಳನ್ನು ನೈಸರ್ಗಿಕವಾಗಿ ನಿಮಗೆ ಲಭ್ಯವಾಗುವುದು. ಇದರಲ್ಲಿ ಮುಖ್ಯವಾಗಿ ಬೆಳ್ಳುಳ್ಳಿ, ಮೀನು ಮತ್ತು ದ್ವಿದಳ ಧಾನ್ಯಗಳು


 • ಕಲ್ಲಂಗಡಿ ಹಣ್ಣಿನ ಲಾಭಗಳು ಮತ್ತು ಅಪಾಯಗಳು

  ಮಧ್ಯಮ ಪ್ರಮಾಣದ ನಿಮಿರು ದೌರ್ಬಲ್ಯ ಸಮಸ್ಯೆ ಇರುವಂತಹ ಪುರುಷರು ಕಲ್ಲಂಗಡಿ ಹಣ್ಣು ಅಥವಾ ಸಪ್ಲಿಮೆಂಟ್ ಮೂಲಕ ಎಲ್-ಸಿಟ್ರುಲ್ಲೈನ್ ಸೇವನೆ ಮಾಡಬಹುದು. ನೀವು ಕಲ್ಲಂಗಡಿ ಹಣ್ಣಿನ ಸೇವನೆ ಮಾಡುವ ಕಾರಣ ನಿಮಗೆ ಎಲ್-ಸಿಟ್ರುಲ್ಲೈನ್ ಅಲ್ಲದೆ ಇತರ ಕೆಲವು ಪೋಷಕಾಂಶಗಳು ಕೂಡ ಸಿಗುವುದು. ಕಲ್ಲಂಗಡಿ ಹಣ್ಣಿನಲ್ಲಿ ಉನ್ನತ ಮಟ್ಟದ ವಿಟಮಿನ್ ಎ ಮತ್ತು ಸಿ, ಅದೇ ರೀತಿಯಾಗಿ ನಾರಿನಾಂಶ ಮತ್ತು ಪೊಟಾಶಿಯಂ ಇದೆ.


 • ಆ್ಯಂಟಿಆಕ್ಸಿಡೆಂಟ್‌ಗಳು

  ಆ್ಯಂಟಿಆಕ್ಸಿಡೆಂಟ್ ನಮ್ಮ ಸಂಪೂರ್ಣ ಆರೋಗ್ಯ ಮತ್ತು ದೀರ್ಘಾವಧಿಗೆ ಒಳ್ಳೆಯದು. ಆದರೆ ಇದು ಮಿತ ಪ್ರಮಾಣದಲ್ಲಿ ಸೇವಿಸಬೇಕು. ನ್ಯಾಶನಲ್ ಸೆಂಟರ್ ಫಾರ್ ಕಾಂಪ್ಲಿಮೆಂಟರಿ ಮತ್ತು ಇಂಟೆಗ್ರೇಟಿವ್ ಹೆಲ್ತ್ ಪ್ರಕಾರ, ಅಧಿಕ ಮಟ್ಟದ ಆ್ಯಂಟಿಆಕ್ಸಿಡೆಂಟ್ ಕೂಡ ಹಾನಿ ಕಾರಕ. ತಾಜಾ ಹಣ್ಣುಗಳಲ್ಲಿ ಸಿಗುವಂತಹ ಆ್ಯಂಟಿಆಕ್ಸಿಡೆಂಟ್ ಗಳಿಗೆ ಸಪ್ಲಿಮೆಂಟ್ ಗಳಲ್ಲಿ ಸಿಗುವಂತಹ ಆ್ಯಂಟಿಆಕ್ಸಿಡೆಂಟ್ ಸರಿಯಾದ ಪರ್ಯಾಯವಲ್ಲ. ಸಪ್ಲಿಮೆಂಟ್ ಗಳಲ್ಲಿ ಸಿಗುವಂತಹ ಆ್ಯಂಟಿಆಕ್ಸಿಡೆಂಟ್ ನ್ನು ದೇಹವು ಒಂದೇ ರೀತಿಯಾಗಿ ಸಂಸ್ಕರಿಸುವುದಿಲ್ಲ.
  ನಿಜವಾಗಿಯೂ ಹಣ್ಣುಗಳು ಯಾವುದೇ ಅಪಾಯವನ್ನು ಉಂಟು ಮಾಡುವುದಿಲ್ಲ. ಆದರೆ ನಿಮಗೆ ಪರಾಗದ ಅಲರ್ಜಿಯು ಇದ್ದರೆ ಆಗ ನೀವು ಎಚ್ಚರಿಕೆ ವಹಿಸಿಕೊಳ್ಳುವುದು ಅತೀ ಅಗತ್ಯವಾಗಿರುವುದು.


 • ಅಸ್ತಮಾ ಸಮಸ್ಯೆಯಿದ್ದರೆ

  ಹುಲ್ಲಿನ ಪರಾಗದ ಅಲರ್ಜಿ ಹೊಂದಿರುವಂತಹ ವ್ಯಕ್ತಿಗಳು ತಾಜಾ ಹಣ್ಣುಗಳು ಹಾಗೂ ತರಕಾರಿಗಳ ಅಲರ್ಜಿಗೆ ಒಳಗಾಗುವರು. ಇದನ್ನು ಒರಲ್ ಅಲರ್ಜಿ ಸಿಂಡ್ರೋಮ್(ಒಎಎಸ್) ಎಂದು ಕರೆಯಲಾಗುತ್ತದೆ. ಒಎಎಸ್ ಮಿತ ಲಕ್ಷಣಗಳನ್ನು ಉಂಟು ಮಾಡುವುದು. ಇದರಲ್ಲಿ ಮುಖ್ಯವಾಗಿ ಚರ್ಮದ ದದ್ದು. ಇದು ಉಸಿರಾಟದ ಸಮಸ್ಯೆಯಂತಹ ಅಲರ್ಜಿ ಉಂಟು ಮಾಡುವುದು ತುಂಬಾ ಅಪರೂಪ. ನೀವು ಇಂತಹ ಪ್ರತಿಕ್ರಿಯೆ ತಪ್ಪಿಸಲು ಹುಲ್ಲಿನ ಅಲರ್ಜಿ ಋತುವಿನಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು. ನಿಮಗೆ ಅಸ್ತಮಾ ಸಮಸ್ಯೆಯಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆದ ಬಳಿಕ ಸಪ್ಲಿಮೆಂಟ್ ಸೇವನೆ ಮಾಡಿ.

  Most Read: ಪುರುಷರ ನಿಮಿರು ದೌರ್ಬಲ್ಯ ಸಮಸ್ಯೆಗೆ ಪವರ್ ಫುಲ್ ಮನೆಮದ್ದುಗಳು


 • ಎಲ್-ಸಿಟ್ರುಲ್ಲೈನ್ ಈ ಆರೋಗ್ಯ ಸಮಸ್ಯೆಗೆ ಔಷಧಿಯಿದ್ದರೆ ವ್ಯತಿರಿಕ್ತವಾಗಬಹುದು

  *ನಿಮಿರು ದೌರ್ಬಲ್ಯ
  *ಅಧಿಕ ರಕ್ತದೊತ್ತಡ
  *ಅಪಧಮನಿ ಕಾಯಿಲೆ
  *ನರವ್ಯವಸ್ಥೆ ಕಾಯಿಲೆ


 • ವೈದ್ಯರಲ್ಲಿ ಮಾತನಾಡಿ

  ಎಲ್-ಸಿಟ್ರುಲ್ಲೈನ್ ಸಪ್ಲಿಮೆಂಟ್ ಸೇವನೆ ಮಾಡಲು ನೀವು ಬಯಸುತ್ತಾ ಇದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಅವರ ಸಲಹೆ ಪಡೆದುಕೊಳ್ಳಿ. ನೀವು ಈಗಾಗಲೇ ಯಾವುದೇ ರೀತಿಯ ಮಾತ್ರೆಗಳು ಅಥವಾ ಔಷಧಿ ತೆಗೆದುಕೊಳ್ಳುತ್ತಾ ಇದ್ದರೆ ಆಗ ಇದು ತುಂಬಾ ಅಗತ್ಯವಾಗಿರುವುದು. ಎಲ್-ಸಿಟ್ರುಲ್ಲೈನ್ ಜನನೇಂದ್ರೀಯದ ಆರೋಗ್ಯದ ಒಂದು ಭಾಗವಾಗಬೇಕು ಮತ್ತು ನೀವು ತೆಗೆದುಕೊಳ್ಳುತ್ತಿರುವಂತಹ ಔಷಧಿಗೆ ಇದು ಪರ್ಯಾಯವಾಗಬಾರದು. ನೀವು ವೈದ್ಯರೊಂದಿಗೆ ಎಲ್ಲಾ ಆಯ್ಕೆಯ ಬಗ್ಗೆ ಮಾತನಾಡಿ ನೋಡಿ. ನಿಮಿರು ದೌರ್ಬಲ್ಯವನ್ನು ನೈಸರ್ಗಿಕವಾಗಿ ನಿವಾರಣೆ ಮಾಡಲು ಕಲ್ಲಂಗಡಿ ಹಣ್ಣು ಒಂದು ವಿಧಾನವಾಗಿದೆ. ಆದರೆ ಕೇವಲ ಕಲ್ಲಂಗಡಿ ಹಣ್ಣನ್ನು ಮಾತ್ರ ಸೇವನೆ ಮಾಡುವ ಕಾರಣದಿಂದಾಗಿ ದೀರ್ಘಾವಧಿಗೆ ಈ ಸಮಸ್ಯೆಯು ಬಗೆಹರಿಯದು.

  Most Read: ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಚಿಕ್ಕ ಚಮಚ 'ತುಪ್ಪ' ತಿಂದರೂ ದೇಹದ ತೂಕ ಇಳಿಸಬಹುದು!


 • ವೈದ್ಯರಲ್ಲಿ ಮಾತನಾಡಿ

  ಯಾಕೆಂದರೆ ನಿಮಿರು ದೌರ್ಬಲ್ಯ ಎನ್ನುವುದು ಮತ್ತೊಂದು ಸಮಸ್ಯೆಯಿಂದಾಗಿ ಬರುವುದು. ಇದರಲ್ಲಿ ಅಧಿಕ ಕೊಲೆಸ್ಟ್ರಾಲ್ ನಿಂದಾಗಿ ನಿಮಿರು ದೌರ್ಬಲ್ಯ ಬರುವುದು. ನಿಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯು ಕಾಡುತ್ತಲಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆಯುವುದು ಅತೀ ಅಗತ್ಯವಾಗಿರುವುದು. ಇದನ್ನು ನಿವಾರಣೆ ಮಾಡಿದರೆ ಆಗ ನಿಮಿರು ದೌರ್ಬಲ್ಯ ಸಮಸ್ಯೆಗೆ ಪರಿಹಾರ ಸಿಗಬಹುದು. ಇದರಿಂದ ನಿಮ್ಮ ಕಾಮಾಸಕ್ತಿಯು ಹೆಚ್ಚಾಗುವುದು ಮಾತ್ರವಲ್ಲದೆ, ಆ್ಯಂಟಿಆಕ್ಸಿಡೆಂಟ್ ನ ಲಾಭವು ಸಿಗುವುದು. ಕಲ್ಲಂಗಡಿಯಲ್ಲಿ ವಿಟಮಿನ್ ಸಿ ಮತ್ತು ಎ ಕೂಡ ಇದೆ. ಎಲ್-ಸಿಟ್ರುಲ್ಲೈನ್ ಸಪ್ಲಿಮೆಂಟ್ ಗಳು ನಿಮಿರು ದೌರ್ಬಲ್ಯ ಸಮಸ್ಯೆಗೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರದೆ ಇರಬಹುದು. ವಯಾಗ್ರದಂತೆ ಇದರ ಬಗ್ಗೆ ಹೆಚ್ಚಿನ ಅಧ್ಯಯನಗಳು ಕೂಡ ನಡೆದಿಲ್ಲ.
ಪುರುಷರಲ್ಲಿ ನಿಮಿರು ದೌರ್ಬಲ್ಯ ಸಮಸ್ಯೆಯು ತುಂಬಾ ಸಾಮಾನ್ಯವಾಗಿರುವುದು. ಅದರಲ್ಲೂ ವಯಸ್ಸಾಗುತ್ತಾ ಹೋದಂತೆ ಇದು ಹೆಚ್ಚಾಗುವುದು. ಕೆಲವೊಂದು ಔಷಧಿಗಳಾಗಿರುವ ಸಿಲ್ಡೆನಾಫಿಲ್(ವಯಾಗ್ರ)ವು ರಕ್ತದ ಹರಿವನ್ನು ಉತ್ತೇಜಿಸುವುದು ಮತ್ತು ನಿಮಿರು ದೌರ್ಬಲ್ಯದ ಸಮಸ್ಯೆ ನಿವಾರಣೆ ಮಾಡಲು ನೆರವಾಗುವುದು. ನಿಮಿರು ದೌರ್ಬಲ್ಯ ಸಮಸ್ಯೆ ನಿವಾರಣೆ ಮಾಡಲು ಇನ್ನು ಕಲೆವೊಂದು ರೀತಿಯ ಗಿಡಮೂಲಿಕೆ ಸಪ್ಲಿಮೆಂಟ್ ಗಳು ಮತ್ತು ನೈಸರ್ಗಿಕ ಔಷಧಿಗಳು ಕೂಡ ಇವೆ. ಇದರಲ್ಲಿ ಒಂದು ಉತ್ಪನ್ನವೆಂದರೆ ಅದು ಬೇಸಿಗೆಯಲ್ಲಿ ಉರಿ ಬಿಸಿಲಿನಲ್ಲೂ ದೇಹಕ್ಕೆ ತಂಪು ನೀಡುವಂತಹ ಕಲ್ಲಂಗಡಿ ಹಣ್ಣು.

ಕಲ್ಲಂಗಡಿ ಹಣ್ಣಿನಲ್ಲಿ ಇರುವಂತಹ ಅಮಿನೋ ಆಮ್ಲವನ್ನು ಎಲ್-ಸಿಟ್ರುಲ್ಲೈನ್ ಎಂದು ಕರೆಯಲಾಗುತ್ತದೆ. ಇದು ಜನನೇಂದ್ರೀಯಕ್ಕೆ ರಕ್ತ ಸಂಚಾರವನ್ನು ಉತ್ತೇಜಿಸುವುದು. ಎಲ್-ಸಿಟ್ರುಲ್ಲೈನ್ ಬಗ್ಗೆ ನಡೆಸಿರುವಂತಹ ಅಧ್ಯಯನದ ಪ್ರಕಾರ ನಿಮಿರು ದೌರ್ಬಲ್ಯ ಸಮಸ್ಯೆ ನಿವಾರಣೆ ಮಾಡಲು ನೀವು ಕಲ್ಲಂಗಡಿ ಹಣ್ಣಿನ ಜತೆಗೆ ಚಿಕಿತ್ಸೆ ಕೂಡ ಮಾಡಬೇಕು. ಕಲ್ಲಂಗಡಿ, ಎಲ್-ಸಿಟ್ರುಲ್ಲೈನ್ ಮತ್ತು ನಿಮಿರು ದೌರ್ಬಲ್ಯದ ಬಗ್ಗೆ ತಿಳಿಯಲು ನೀವು ಮುಂದೆ ಓದುತ್ತಾ ಸಾಗಿ...

   
 
ಹೆಲ್ತ್