Back
Home » ಆರೋಗ್ಯ
ಹಾಗಲಕಾಯಿ ಕಹಿ ಎಂದು ದೂರದಿರಿ-ಇದು ತೂಕ ಇಳಿಸುವಲ್ಲಿ ಎತ್ತಿದ ಕೈ!
Boldsky | 8th Feb, 2019 03:22 PM
 • ದೇಹದ ಕೊಬ್ಬನ್ನು ವಿಘಟಿಸುವುದು

  ದೇಹದಲ್ಲಿರುವ ಕೊಬ್ಬು ಅಥವಾ ಅಂಗಾಂಶವು ಕೊಬ್ಬಿನಾಮ್ಲಗಳನ್ನು ಸಂಪರ್ಕಿಸುವತಹ ರಾಸಾಯನಿಕಯುಕ್ತ ಅಂಶವಾಗಿದೆ. ಹಾಗಲಕಾಯಿ ಯಲ್ಲಿ ಇರುವಂತಹ ಕಿಣ್ವಗಳು ಕೊಬ್ಬನ್ನು ವಿಘಟಿಸಿ ಫ್ರೀ ಕೊಬ್ಬಿನಾಮ್ಲವಾಗಿ ಮಾಡುವುದು. ಇದರಿಂದ ದೇಹದಲ್ಲಿನ ಕೊಬ್ಬು ಕಡಿಮೆ ಆಗುವುದು. ಇದು ಕೊಬ್ಬಿನಾಮ್ಲದ ಸಂಶ್ಲೇಷಣೆಗೆ ಬೇಕಾಗಿರುವ ಕಿಣ್ವಗಳ ಮಟ್ಟವನ್ನು ಕೂಡ ಕಡಿಮೆ ಮಾಡುವುದು. ಇದರಿಂದಾಗಿ ಕೊಬ್ಬಿನ ಉತ್ಪತ್ತಿಯು ತಗ್ಗುವುದು.


 • ಇನ್ಸುಲಿನ್ ಮಟ್ಟವನ್ನು ಸ್ಥಿರಗೊಳಿಸುವುದು

  ಹಾಗಲಕಾಯಿಯು ಪಿತ್ತಕೋಶದಲ್ಲಿರುವ ಬೆಟಾ ಕೋಶಗಳನ್ನು ರಕ್ಷಿಸುವುದು. ಇದು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುವ ಹಾರ್ಮೋನು ಆಗಿರುವತಹ ಇನ್ಸುಲಿನ್ ನ ಸಂಗ್ರಹಣೆ ಮತ್ತು ಬಿಡುಗಡೆಗೆ ಕಾರಣವಾಗುವುದು. ಹಾಗಲಕಾಯಿಯಲ್ಲಿ ಮಧುಮಹೇ ವಿರೋಧಿಯಾಗಿರುವಂತಹ ಚರಾಂಟಿನ್, ವಸಿನ್, ಮತ್ತು ಪಾಲಿಪೆಪ್ಟೈಡ್- ಪಿ ಎನ್ನುವ ಮೂರು ಅಂಶಗಳು ಇವೆ. ಇದು ಇನ್ಸುಲಿನ್ ತಡೆ ಮತ್ತು ದೇಹದಲ್ಲಿನ ಗ್ಲೂಕೋಸ್ ಮಟ್ಟವನ್ನು ತಗ್ಗಿಸುವುದು. ಅತೀ ಕಡಿಮೆ ಇನ್ಸುಲಿನ್ ಅಂಶವಿದ್ದರೆ ಆಗ ಅದು ಗ್ಲೂಕೋಸ್ ನ ಕೆಟ್ಟ ಬಳಕೆಗೆ ಕಾರಣವಾಗುವುದು. ಅದೇ ರೀತಿಯಾಗಿ ಅತಿಯಾಗಿ ಇನ್ಸುಲಿನ್ ಅಂಶವಿದ್ದರೆ ಆಗ ಅದರಿಂದ ಹಸಿವಿನಲ್ಲಿ ಹೆಚ್ಚಳ ಮತ್ತು ಆಹಾರ ಸೇವನೆಯಲ್ಲಿ ಹೆಚ್ಚಳವಾಗುವುದು. ಇದರಿಂದಾಗಿ ಬೊಜ್ಜು ಆವರಿಸುವುದು.

  Most Read: ದೇಹದ ತೂಕ ಇಳಿಸಿಕೊಳ್ಳಲು ಬಯಸುವಿರಾ? ಅನ್ನ ಸೇವಿಸುವಾಗ ಈ ಸಂಗತಿಗಳು ನೆನಪಿರಲಿ


 • ಕೊಬ್ಬಿನ ಚಯಾಪಚಯಕ್ಕೆ ನೆರವಾಗುವುದು

  ಹಾಗಲಕಾಯಿಯು ಯಕೃತ್ ಪಿತ್ತರಸದ ಸ್ರವಿಸುವಿಕೆಯನ್ನು ಉತ್ತೇಜಿಸುವಂತೆ ಮಾಡುವುದು. ಇದರಿಂದಾಗಿ ಕೊಬ್ಬಿ ಚಯಾಪಚಯವು ಆಗುವುದು. ಬೊಜ್ಜು ಅಥವಾ ಅಧಿಕ ತೂಕ ಹೊಂದಿರುವಂತಹ ವ್ಯಕ್ತಿಗಳಲ್ಲಿ ಈ ಕ್ರಿಯೆಯು ತಡೆ ಹಿಡಿಯಲ್ಪಟ್ಟಿರುವುದು. ಇದು ಎಎಂಪಿಕೆ ಎನ್ನುವಂತಹ ಪ್ರೋಟೀನ್ ನ್ನು ಕ್ರಿಯಾತ್ಮಕವಾಗಿಸುವುದು. ಇದರಿಂದ ಇನ್ಸುಲಿನ್ ನ ಬಿಡುಗಡೆಯು ಬದಲಾವಣೆ ಆಗುವುದು. ಇದರಿಂದ ಎಲ್ಲಾ ಕೋಶಗಳು ಗ್ಲೋಕೋಸ್ ನ್ನು ಹೀರಿಕೊಳ್ಳುವಂತೆ ಮಾಡುವುದು. ಸ್ನಾಯುಗಳು ಸೇರಿದಂತೆ ಕೊಲೆಸ್ಟ್ರಾಲ್ ನ ಸಂಶ್ಲೇಷಣೆ ಕೂಡ ಆಗುವುದು


 • ಕೊಬ್ಬು ಕರಗಿಸುವುದು

  ಬೊಜ್ಜಿಗೆ ಕಾರಣವಾಗುವಂತಹ ಮೂಲವನ್ನು ಅದು ನಿವಾರಣೆ ಮಾಡುವುದು.


 • ವಿಷಕಾರಿ ಅಂಶ ಹೊರಹಾಕುವುದು

  ಹಾಗಲಕಾಯಿಯಲ್ಲಿ ಶೇ. 90ರಷ್ಟು ನೀರಿನಾಂಶವಿದೆ. ಇದು ಹಸಿವನ್ನು ಕಡಿಮೆ ಮಾಡುವುದು. ಇದರಿಂದಾಗಿ ದೇಹಕ್ಕೆ ಬೇಕಾಗುವಂತಹ ತೇವಾಂಶವು ಸಿಗುವುದು ಮತ್ತು ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳನ್ನು ಹೊರಹಾಕಲು ಇದು ನೆರವಾಗುವುದು. ದೇಹದಲ್ಲಿರುವಂತಹ ವಿಷಕಾರಿ ಅಂಶಗಳಿಂದಾಗಿ ಬೊಜ್ಜು ಬೆಳೆಯುವುದು. ದೇಹದಲ್ಲಿ ಅತಿಯಾಗಿ ವಿಷಕಾರಿ ಅಂಶವು ಜಮೆಯಾದರೆ ಆಗ ಯಕೃತ್ ಗೆ ಕೆಲಸ ಮಾಡಲು ಸಾಧ್ಯವಾಗದು ಮತ್ತು ಅದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸದು.


 • ಕ್ಯಾಲರಿ ಕಡಿಮೆ ಇದೆ

  ಯುಎಸ್ ಡಿಎ ಪ್ರಕಾರ 100 ಗ್ರಾಂ ಹಾಗಲಕಾಯಿಯಲ್ಲಿ 34 ಕ್ಯಾಲರಿ ಮಾತ್ರ ಇದೆ. ಹಾಗಲಕಾಯಿಯಲ್ಲಿ ಇರುವಂತಹ ಲ್ಯಾಕ್ಟಿನ್ ಎನ್ನುವ ಅಂಶವು ಹಸಿವನ್ನು ನಿಯಂತ್ರಿಸುವುದು. ನೀವು ಊಟದದೊಂದಿಗೆ ಹಾಗಲಕಾಯಿ ಖಾದ್ಯ ತಿಂದರೆ ಆಗ ಅತಿಯಾಗಿ ತಿನ್ನುವುದು ಕಡಿಮೆ ಆಗುವುದು.


 • ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

  ಹಾಗಲಕಾಯಿ ರಸದಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣ ಹಲವಾರು ಬ್ಯಾಕ್ಟೀರಿಯಾ ಮತ್ತು ವೈರಸ್ ನಿರೋಧಕ ಗುಣ ಹೊಂದಿದ್ದು ಅಲರ್ಜಿಗಳನ್ನು ಗುಣಪಡಿಸುತ್ತದೆ ಹಾಗೂ ಕಣ್ಣಿನ ದೃಷ್ಟಿಯನ್ನೂ ಉತ್ತಮಗೊಳಿಸುತ್ತದೆ. ಅಲ್ಲದೇ ಇದರ ಪ್ರಬಲ ಆಂಟಿ ಆಕ್ಸಿಡೆಂಟ್ ಗಳು ಡಿಎನ್ಎ ಹಾನಿ ಎಸಗುವ ಆಕ್ಸಿಜನ್ ರ್‍ಯಾಡಿಕಲ್ ಎಂಬ ಕಣಗಳ ಮೂಲಕ ಆಗುವ ಹಾನಿಯನ್ನು ತಡೆಯುತ್ತವೆ ಹಾಗೂ ಜೀವಕೋಶಗಳು ಸೂಕ್ತವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಈ ರಸದಲ್ಲಿರುವ ಕ್ಯಾನ್ಸರ್ ನಿರೋಧಕ ಮತ್ತು ಗಡ್ಡೆಯಾಗುವುದನ್ನು ತಡೆಯುವ ಗುಣಗಳು ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಹಾಗೂ ಗರ್ಭಕಂಠದ ಕ್ಯಾನ್ಸರ್ ಆವರಿಸುವುದರಿಂದ ತಡೆಯುತ್ತದೆ.

  Most Read: ಪದೇ ಪದೇ ಶೀತ ಕಾಡುತ್ತಲೇ ಇರುತ್ತದೆಯೇ? ಹಾಗಾದರೆ ಇದೇ ಸಮಸ್ಯೆ ಇರಬಹುದು!


 • ನೀವು ಎಷ್ಟು ಪ್ರಮಾಣದಲ್ಲಿ ಹಾಗಲಕಾಯಿ ಸೇವಿಸಬೇಕು?

  ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ಜ್ಯೂಸ್ ಸೇವನೆ ಮಾಡಿದರೆ ಅದರಿಂದ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು. ಇದು ಕುಡಿಯಲು ಅಸಾಧ್ಯವಾಗಿರುವಷ್ಟು ಕಹಿಯಾಗಿದ್ದರೆ ಆಗ ನೀವು ಜೇನುತುಪ್ಪ, ಕ್ಯಾರೆಟ್, ಅಥವಾ ಸೇಬಿನ ಜ್ಯೂಸ್ ನ್ನು ಮಿಶ್ರಣ ಮಾಡಿಕೊಂಡು ಕುಡಿಯಿರಿ. ಮಧುಮೇಹಿಯಾಗಿದ್ದರೆ ಆಗ ನೀವು ಈ ಜ್ಯೂಸ್ ನ ಜತೆಗೆ ಹಸಿರು ಸೇಬಿನ ಜ್ಯೂಸ್ ಮಿಶ್ರಣ ಮಾಡಿ ಕುಡಿಯಿರಿ. ಈ ಜ್ಯೂಸ್ ಕುಡಿದ ಬಳಿಕ ಒಂದು ಗಂಟೆ ಕಾಲ ನೀವು ಏನೂ ತಿನ್ನಬಾರದು. ಇದರೊಂದಿಗೆ ನೀವು ಪ್ರತಿನಿತ್ಯ 30 ನಿಮಿಷ ಕಾಲ ವ್ಯಾಯಾಮ ಮಾಡಬೇಕು ಮತ್ತು ಸಮತೋಲಿತ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಆಗ ಫಲಿತಾಂಶವು ಸಿಗುವುದು.


 • ಇದನ್ನು ಯಾರು ಕಡೆಗಣಿಸಬೇಕು?

  ಗರ್ಭಿಣಿಯರು ಮತ್ತು ಬಾಣಂತಿಯರು
  ಹಾಗಲಕಾಯಿ ಸೇವನೆಯು ಗರ್ಭಧಾರಣೆ ವೇಳೆ ತುಂಬಾ ಅಸುರಕ್ಷಿತವಾಗಿರುವುದು. ಇದರಲ್ಲಿ ಇರುವಂತಹ ಕೆಲವೊಂದು ರೀತಿಯ ರಾಸಾಯನಿಕಗಳು ಋತುಚಕ್ರದ ರಕ್ತಸ್ರಾವಕ್ಕೆ ಕಾರಣವಾಗಬಹುದು. ಬಾಣಂತಿಯರು ಇದನ್ನು ಕಡೆಗಣಿಸಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ ಇದಕ್ಕೆ ಹೆಚ್ಚಿನ ಪುರಾವೆಗಳು ಸಿಕ್ಕಿಲ್ಲ.


 • ಮಧುಮೇಹಕ್ಕೆ ಔಷಧಿ ತೆಗೆದುಕೊಳ್ಳುವ ಮಧುಮೇಹಿಗಳು

  ಹಾಗಲಕಾಯಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು ಎಂದು ನಮಗೆ ತಿಳಿದೇ ಇದೆ. ಹೀಗಾಗಿ ಮಧುಮೇಹದ ಔಷಧಿ ತೆಗೆದುಕೊಳ್ಳುತ್ತಾ ಇರುವವರಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವು ಸಾಮಾನ್ಯಕ್ಕಿಂತಲೂ ಕಡಿಮೆಯಾಗುವುದು. ನಿಮಗೆ ನಿಶ್ಯಕ್ತಿ ಮತ್ತು ಬಳಲಿಕೆ ಕಂಡುಬಂದರೆ ಆಗ ನೀವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷೆ ಮಾಡಿಕೊಳ್ಳಿ.


 • ಶಸ್ತ್ರ ಚಿಕಿತ್ಸೆಗೆ ಒಳಗಾಗಲು ಇರುವವರು

  ಹಾಗಲಕಾಯಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಶಸ್ತ್ರ ಚಿಕಿತ್ಸೆ ಮೊದಲು ಮತ್ತು ಬಳಿಕ ಸಮಸ್ಯೆಗೆ ಸಿಲುಕಿಸಬಹುದು. ನೀವು ಯಾವುದೇ ರೀತಿಯ ಶಸ್ತ್ರ ಚಿಕಿತ್ಸೆಗೆ ಒಳಗಾಗಲು ಇದ್ದರೆ ಆಗ ನೀವು ಎರಡು ವಾರಕ್ಕೆ ಮೊದಲು ಹಾಗಲಕಾಯಿ ಸೇವನೆಯನ್ನು ನಿಲ್ಲಿಸಿಬಿಡಿ.


 • ಎಚ್ಚರಿಕೆ

  ಈ ರಸದ ಪ್ರಮಾಣ ಮಿತವಾಗಿ ಸೇವಿಸಬೇಕು. ಅಧಿಕ ಪ್ರಮಾಣದ ಸೇವನೆಯಿಂದ ಹೊಟ್ಟೆಯಲ್ಲಿ ನೋವು ಮತ್ತು ಅತಿಸಾರ ಎದುರಾಗಬಹುದು. ಗರ್ಭವತಿಯರು ಅತಿ ಕಡಿಮೆ ಪ್ರಮಾಣದಲ್ಲಿ ಮಾತ್ರವೇ ಸೇವಿಸಬೇಕು, ಏಕೆಂದರೆ ಇದು ಗರ್ಭಕೋಶಕ್ಕೆ ಪ್ರಚೋದನೆ ನೀಡುವ ಮೂಲಕ ಅವಧಿಪೂರ್ವ ಪ್ರಸವವಾಗುವ ಸಂಭವವಿದೆ. ಒಂದು ವೇಳೆ ನಿಮಗೆ ಈ ಲೇಖನ ಇಷ್ಟವಾದರೆ ನಿಮ್ಮ ಆಪ್ತರು, ಸ್ನೇಹಿತರೊಂದಿಗೆ ಲೇಖನದ ಕೊಂಡಿಯನ್ನು ಹಂಚಿಕೊಳ್ಳಿ.
ಮೊಮೊರ್ಡಿಕಾ ಚಾರಂತಿಯಾ ಎನ್ನುವ ಹೆಸರಿನಿಂದ ಕರೆಲ್ಪಡುವಂತಹ ಹಾಗಲಕಾಯಿಯನ್ನು ಇಂದಿನ ದಿನಗಳಲ್ಲಿ ಹಲವಾರು ಚಿಕಿತ್ಸೆಗಳಿಗಾಗಿ ವಿಶ್ವದೆಲ್ಲೆಡೆಯಲ್ಲಿ ಬಳಸಲಾಗುತ್ತದೆ. ಹಾಗಲಕಾಯಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಇಂತಹ ಪೋಷಕಾಂಶಗಳು ಒಂದೇ ರೀತಿಯ ಆಹಾರದಲ್ಲಿ ಸಿಗುವುದು ತುಂಬಾ ಕಡಿಮೆ.

ಇದರಲ್ಲಿ ಕಾರ್ಬ್ಸ್ ಮತ್ತು ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಇದೆ. ಹಾಗಲಕಾಯಿಯು ತುಂಬಾ ಕಹಿಯಾಗಿರುವ ಕಾರಣದಿಂದಾಗಿ ಹೆಚ್ಚಿನ ಜನರು ಇದನ್ನು ತಮ್ಮ ಆಹಾರ ಕ್ರಮದಿಂದ ದೂರವೇ ಇಡುವರು. ಆದರೆ ಇದು ದೇಹದಲ್ಲಿ ಇರುವಂತಹ ಕೊಬ್ಬನ್ನು ಕರಗಿಸುವುದು ಎಂದು ನಮಗೆ ತಿಳಿದಿದರೆ ಆಗಲೂ ನಾವು ಇದನ್ನು ದೂರವಿಡುತ್ತೇವೆಯಾ? ತೂಕ ಕಳೆದುಕೊಳ್ಳಲು ಹಾಗಲಕಾಯಿಯು ಯಾವ ರೀತಿಯಲ್ಲಿ ನೆರವಾಗಲಿದೆ ಎಂದು ನಾವು ಇಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

   
 
ಹೆಲ್ತ್