Back
Home » ಆರೋಗ್ಯ
ಮಸಾಲೆ ಭರಿತ ಆಹಾರ ಇಷ್ಟ ಪಡುವವರ ಸೆಕ್ಸ್ ಲೈಫ್ ಹೇಗಿರುತ್ತದೆ ಗೊತ್ತಾ?
Boldsky | 12th Feb, 2019 10:44 AM
 • ಖಾರ ಅಥವಾ ನೋ ಖಾರ?

  ನಿಮ್ಮ ನಾಲಿಗೆಗೆ ಒಂಚೂರು ಖಾರ ತಗುಲಿದರೆ ಸಾಕು ಕಣ್ಣಲ್ಲಿ ನೀರು ಸುರಿಯುವವರಾಗಿರಬಹುದು ಅಥವಾ ಚಿಲ್ಲಿ ಸಾಸ್ ಅನ್ನು ಎತ್ತಿ ಗಂಟಲಿಗೆ ಇಳಿಸುವವರಾಗಿರಬಹುದು, ನಿಮ್ಮ ಬಗ್ಗೆ ಒಂದಿಷ್ಟು ಇಂಟರೆಸ್ಟಿಂಗ್ ಮಾಹಿತಿಗಳನ್ನು ನಾವು ನೀಡುತ್ತೇವೆ.


 • ಅಧ್ಯಯನ ಏನು ಹೇಳುತ್ತದೆ?

  ನೀವು ಖಾರ, ಮಸಾಲೆಯುಕ್ತ ಆಹಾರಗಳನ್ನು ಇಷ್ಟಪಡುವ ವರ್ಗಕ್ಕೆ ಸೇರಿದವರಾಗಿದ್ದಲ್ಲಿ ನಿಮ್ಮ ಬೆಡ್‌ರೂಂನಲ್ಲಿ ನೀವು ಕೊಂಚ ಹೆಚ್ಚಾಗಿಯೇ ರಸಿಕರಾಗಿರುವ ಸಾಧ್ಯತೆಯಿದೆ.

  Most Read: ನೋಡಿ ಇದೆಲ್ಲಾ ಕಾರಣದಿಂದಲೂ ಎದೆಯ ಎಡಭಾಗದಲ್ಲಿ ನೋವು ಬರಬಹುದು!!


 • ಮಸಾಲೆ ಆಹಾರಕ್ಕೂ ಸೆಕ್ಸ್ ಜೀವನಕ್ಕೂ ಏನು ಸಂಬಂಧ?

  ತೀರಾ ಖಾರವಿರುವ ಸಾಸ್ ಕಂಪನಿಯೊಂದರ ಪರವಾಗಿ ಪ್ರಸಿದ್ಧ ವಿಶ್ಲೇಷಣಾ ಸಂಸ್ಥೆಯು ಸರ್ವೆಯೊಂದನ್ನು ನಡೆಸಿತ್ತು. ನೂರಾರು ಜನರನ್ನು ಸಂದರ್ಶಿಸಿ ತಯಾರಿಸಲಾದ ಈ ಸರ್ವೆಯ ವರದಿಯ ಪ್ರಕಾರ ಮಸಾಲೆ ಆಹಾರಗಳನ್ನು ಹೆಚ್ಚು ಇಷ್ಟಪಡುವವರು ಸೆಕ್ಸ್‌ನಲ್ಲಿಯೂ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಎಂಬ ಆಸಕ್ತಿಕರ ವಿಷಯ ಬೆಳಕಿಗೆ ಬಂದಿದೆ.


 • ಈ ಪ್ರಶ್ನೆಗಳನ್ನು ಕೇಳಲಾಗಿತ್ತು

  ಸರ್ವೆಯಲ್ಲಿ ಸುಮಾರು ೨೦೦೦ ಜನರನ್ನು ಸಂದರ್ಶಿಸಿ ಅವರ ಆಹಾರ ಶೈಲಿ, ವ್ಯಕ್ತಿತ್ವ, ಸೆಕ್ಸ್ ಜೀವನ ಮುಂತಾದ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಅಲ್ಲದೆ ಅವರು ಮಸಾಲೆ ಭರಿತ ಆಹಾರ ಇಷ್ಟಪಡುತ್ತಾರಾ ಎಂಬ ಬಗ್ಗೆ ಕೇಳಲಾಗಿತ್ತು. ಮಸಾಲೆ ಆಹಾರ ಎಷ್ಟು ಇಷ್ಟ ಎಂಬ ಕುರಿತು 1 ರಿಂದ 4 ರವರೆಗೆ ಅಂಕಿ ನೀಡಲು ಹೇಳಲಾಗಿತ್ತು. (1 ಅಂದರೆ ಒಂಚೂರೂ ಮಸಾಲೆ ಇಲ್ಲದಿರುವುದು ಹಾಗೂ 4 ಅಂದರೆ ತೀರಾ ಮಸಾಲೆ ಇರುವ ಆಹಾರ)


 • ಅವರಿಗೆ ಬೇಕು ಹೆಚ್ಚು ಸೆಕ್ಸ್ !

  ಅತಿ ಮಸಾಲೆ ಹಾಗೂ ಖಾರದ ಆಹಾರ ಸೇವಿಸುವವರು ತಿಂಗಳಿಗೆ ಸರಾಸರಿ ೫.೩ ಬಾರಿ ಸೆಕ್ಸ್‌ನಲ್ಲಿ ತೊಡಗಿಕೊಂಡಿದ್ದರಂತೆ. ಇನ್ನು ಸಪ್ಪನೆಯ ಆಹಾರ ಪ್ರಿಯರು ತಿಂಗಳಿಗೆ ಕೇವಲ ೩.೨ ಬಾರಿ ಮಾತ್ರ ಮಿಲನ ಸುಖ ಅನುಭವಿಸಿದ್ದರಂತೆ.


 • ಇನ್ನೂ ಕೆಲ ಕತೂಹಲಕಾರಿ ಸಂಗತಿಗಳಿವೆ

  ಸಪ್ಪನೆಯ ಆಹಾರ ಪ್ರೇಮಿಗಳಿಗಿಂತಲೂ ಮಸಾಲೆ ಪ್ರೇಮಿಗಳು ಬೆಡ್‌ರೂಂನಲ್ಲಿ ಡಬಲ್ ಕ್ರಿಯಾಶೀಲರಾಗಿದ್ದು ಸಂಶೋಧನೆಯಲ್ಲಿ ತಿಳಿದ ಸಂಗತಿಯೇ ಆಗಿದೆ. ಆದರೆ ಮಸಾಲೆ ಆಹಾರ ಪ್ರೇಮಿಗಳು ಜೀವನದಲ್ಲಿ ಹೆಚ್ಚು ಸಾಹಸ ಪ್ರಿಯರೂ ಆಗಿರುತ್ತಾರಂತೆ.

  Most Read: ಪುರುಷರು ದಿನಕ್ಕೆ ಒಂದಾದರೂ ಬಾಳೆಹಣ್ಣು ತಿನ್ನಬೇಕಂತೆ! ಇದರಿಂದ ಅವರ ವೀರ್ಯದ ಗುಣಮಟ್ಟ ಹೆಚ್ಚಾಗುತ್ತದೆಯಂತೆ


 • ಸುತ್ತಾಟವೂ ಇವರಿಗೆ ಇಷ್ಟವಂತೆ

  ಮಸಾಲೆಯುಕ್ತ ಆಹಾರದ ಮೇಲಿನ ಪ್ರೀತಿಗೂ ಹಾಗೂ ಅಂಥವರು ಹೆಚ್ಚು ಪ್ರಯಾಣಿಸಲು ಇಷ್ಟಪಡುವುದಕ್ಕೂ ಸಂಬಂಧವಿದೆ. ಮಸಾಲೆ ಪ್ರೇಮಿಗಳು ಇತರ ಆಹಾರ ಪ್ರೇಮಿಗಳಿಗಿಂತ ಶೇ.೪೫ ರಷ್ಟು ಹೆಚ್ಚು ವಿದೇಶ ಪ್ರಯಾಣ ಮಾಡಿರುತ್ತಾರಂತೆ. ಅಲ್ಲದೆ ಮಸಾಲೆ ಹಾಗೂ ಖಾರದ ಪ್ರೇಮಿಗಳು ಆಗಾಗ ವ್ಯಾಯಾಮ ಮಾಡುತ್ತ ಜನರೊಂದಿಗೆ ಹೆಚ್ಚು ಬೆರೆಯುತ್ತ ಖುಷಿಯಾಗಿ ಜೀವನ ಕಳೆಯುತ್ತಾರಂತೆ.


 • ಇದು ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬವಲ್ಲ

  ಮಸಾಲೆಯುಕ್ತ ಆಹಾರ ಸೇವಿಸುತ್ತ ಖುಷಿಯಾಗಿರುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಮಸಾಲೆ ಪ್ರಿಯರಾದ ಮಾತ್ರಕ್ಕೆ ಅದೊಂದೇ ನಿಮ್ಮ ವ್ಯಕ್ತಿತ್ವದ ಮಾನದಂಡವಲ್ಲ. ಇದು ಕೇವಲ ಕೆಲ ಅಂಶಗಳನ್ನು ಮಾತ್ರ ಬಹಿರಂಗ ಪಡಿಸುತ್ತದೆ.

  Most Read: ಪುರುಷರು ಇಂತಹ ಆಹಾರಗಳಿಂದ ದೂರವಿರಬೇಕು! ಇಲ್ಲಾಂದ್ರೆ ವೀರ್ಯದ ಗುಣಮಟ್ಟ ಕಡಿಮೆಯಾಗಬಹುದು!


 • ಅಲ್ಲಿ ಹೆಚ್ಚು ಸಮಯ ಕಳೆಯಬೇಕಾಗುತ್ತದೆ

  ಮಸಾಲೆ ಭರಿತ ಆಹಾರ ಸೇವಿಸುವಾಗ ಅದರ ಆನಂದವೇ ಬೇರೆ. ಆದರೆ ಮರುದಿನ ಬೆಳಗ್ಗೆ ಟಾಯ್ಲೆಟ್‌ನಲ್ಲಿ ಒಂದರ್ಧ ಗಂಟೆ ಹೆಚ್ಚು ಕೂರುವುದು ಸಹ ಅನಿವಾರ್ಯ. ಅದೇನೆ ಇದ್ದರೂ ಖಾರ, ಮಸಾಲೆ ಆಹಾರ ಬಿಟ್ಟು ಬದುಕುವುದುಂಟೆ?
ಪ್ರತಿಯೊಬ್ಬರೂ ಒಂದೊಂದು ರೀತಿಯ ಆಹಾರ ಇಷ್ಟಪಡುತ್ತಾರೆ. ಕೆಲವರಿಗೆ ಖಾರ ಹಾಗೂ ಮಸಾಲೆಯುಕ್ತ ಆಹಾರ ಇಷ್ಟವಾದರೆ ಇನ್ನು ಕೆಲವರಿಗೆ ಸಾದಾ ಊಟ ಇಷ್ಟವಾಗುತ್ತದೆ. ಆದರೆ ಖಾರ ಹಾಗೂ ಮಸಾಲೆ ಭರಿತ ಆಹಾರ ಇಷ್ಟಪಡುವವರು ನೀವಾಗಿದ್ದಲ್ಲಿ ಅದು ನಿಮ್ಮ ಸೆಕ್ಸ್ ಜೀವನದ ಬಗ್ಗೆ ಕೆಲ ಕುತೂಹಲಕಾರಿ ಮಾಹಿತಿಗಳನ್ನು ಹೊರಹಾಕುತ್ತದೆ.

   
 
ಹೆಲ್ತ್