Back
Home » ಆರೋಗ್ಯ
ಆಯುರ್ವೇದದ ಪ್ರಕಾರ ಖಾಲಿ ಹೊಟ್ಟೆಯಲ್ಲಿ ಕೇವಲ ಹಾಲನ್ನು ಕುಡಿಯುವುದು ಅಷ್ಟು ಒಳ್ಳೆಯದಲ್ಲವಂತೆ
Boldsky | 13th Feb, 2019 10:20 AM
 • ಹಾಲು, ಹಲವರ ಪ್ರಥಮ ಆಹಾರವಾಗಿದೆ

  "ಹಾಲು ಒಂದು ಪರಿಪೂರ್ಣ ಆಹಾರವಾಗಿದೆ. ನಮ್ಮ ಸಂಸ್ಕೃತಿಯಲ್ಲಿಯೂ ಹಾಲಿನ ಸೇವನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದ್ದು ಲ್ಯಾಕ್ಟೋಸ್ ಸಹಿಸಲು ಸಾಧ್ಯವಿರುವ ಪ್ರತಿಯೊಬ್ಬರೂ ಬೆಳಗ್ಗಿನ ಆಹಾರದ ರೂಪದಲ್ಲಿ ಒಂದು ಲೋಟ ತಾಜಾ ಹಾಲನ್ನು ಕುಡಿಯಬಹುದು. ವಿಶೇಷವಾಗಿ ಖಾಲಿಹೊಟ್ಟೆಯಲ್ಲಿ ಹಾಲನ್ನು ಕುಡಿಯುವುದರಿಂದ ಯಾವುದೇ ತೊಂದರೆಯಾಗುತ್ತದೆ ಎಂದು ನನಗೆ ಅನಿಸಿಲ್ಲ. ಆದರೆ ಜೀರ್ಣವ್ಯವಸ್ಥೆ ಕುಂಠಿತವಾಗಿರುವ, ವಾಯುಪ್ರಕೋಪ ತೊಂದರೆ ಇರುವ ಅಥವಾ ಹಾಲಿನಲ್ಲಿರುವ ಲ್ಯಾಕ್ಟೋಸ್ ಅಂಶವನ್ನು ಸಹಿಸಲು ಸಾಧ್ಯವಿಲ್ಲದಿರುವ ವ್ಯಕ್ತಿಗಳಿಗೆ ಮಾತ್ರ ಹಾಲು ಕುಡಿಯಲು ಸಾಧ್ಯವಾಗದೇ ಹೋಗಬಹುದು"

  Most Read: ಹಾಲು-ಅರಿಶಿನದ ಜೋಡಿ ಮಾಡಲಿದೆ ಕಮಾಲಿನ ಮೋಡಿ!


 • ಪ್ರಥಮ ಆಹಾರವಾಗಿ ಸೇವಿಸಬಹುದೇ?

  ಮ್ಯಾಕ್ರೋಬಯೋಟಿಕ್ ಅಥವಾ ಆಯಸ್ಸುವೃದ್ದಿ ಆಹಾರತಜ್ಞೆ ಮತ್ತು ವೈದ್ಯಕೀಯ ಸೇವಾವೃತ್ತಿ ನಡೆಸುತ್ತಿರುವ ಡಾ. ಶಿಲ್ಪಾ ಅರೋರಾ ಎನ್.ಡಿ. ರವರ ಪ್ರಕಾರ "ಬೆಳಗ್ಗಿನ ಪ್ರಥಮ ಆಹಾರವಾಗಿ ಹಾಲನ್ನು ಕುಡಿಯುವುದರಿಂದ ಯಾವುದೇ ತೊಂದರೆ ಇದೆ ಎಂದು ನನಗೆ ಅನ್ನಿಸುವುದಿಲ್ಲ. ಆದರೆ ಹಾಲಿಗಿಂತಲೂ ಲಿಂಬೆರಸ ಬೆರೆಸಿದ ನೀರು, ಸೇಬಿನ ಶಿರ್ಕಾ ಬೆರೆಸಿದ ನೀರನ್ನು ಕುಡಿಯುವುದು ಇನ್ನೂ ಉತ್ತಮ ಆಯ್ಕೆಗಳಾಗಿವೆ. ನಿಮ್ಮ ನಿತ್ಯದ ಉಪಾಹಾರದೊಂದಿಗೆ ಹಾಲನ್ನು ಬೆರೆಸಿ ಸೇವಿಸುವುದು ಸಹಾ ಒಳ್ಳೆಯದು. ನನ್ನ ಅಭಿಪ್ರಾಯದ ಪ್ರಕಾರ ಖಾಲಿ ಹೊಟ್ಟೆಯಲ್ಲಿ ಸೇವಿಸಲು ಹೊಟ್ಟೆ ಮತ್ತು ಜೀರ್ಣಾಂಗಗಳನ್ನು ಸ್ವಚ್ಛಗೊಳಿಸುವ ಗುಣವುಳ್ಳ ಆಹಾರಗಳನ್ನು ಸೇವಿಸುವುದೇ ಉತ್ತಮ. ಛಾಂಛ್ (ಲಿಂಬೆ, ಬೆಳ್ಳುಳ್ಳಿ, ಹಸಿಮೆಣಸು ಬೆರೆಸಿದ ಮಜ್ಜಿಗೆ) ಅಥವಾ ಮೊಸರು ಮೊದಲಾದ ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸುವುದು ಇನ್ನೂ ಉತ್ತಮವಾಗಿದ್ದು ಜೀರ್ಣಕ್ರಿಯೆಗೆ ನೆರವಾಗುತ್ತದೆ"


 • ಈ ಬಗ್ಗೆ ಆಯುರ್ವೇದ ಏನು ಹೇಳುತ್ತದೆ?

  ಆಯುರ್ವೇದದ ಪ್ರಕಾರ "ಖಾಲಿಹೊಟ್ಟೆಯಲ್ಲಿ ಕೇವಲ ಹಾಲನ್ನು ಕುಡಿಯುವುದು ಅಷ್ಟು ಒಳ್ಳೆಯದಲ್ಲ. ಆದರೆ ಇದು ಪ್ರತಿಯೊಬ್ಬರ ದೇಹ ಪ್ರಕೃತಿಯನ್ನು ಅವಲಂಬಿಸಿದೆ. ಒಂದು ವೇಳೆ ನೀವು ವಾತ (ವಾಯು) ಅಥವಾ ಕಫ (ನೀರು) ಪ್ರಕೃತಿಯವರಾಗಿದ್ದರೆ ನೀವೆಂದೂ ಖಾಲಿಹೊಟ್ಟೆಯಲ್ಲಿ ಹಾಲು ಸೇವಿಸಬಾರದು. ಸುಲಭವಾಗಿ ಶೀತ ಜ್ವರಕ್ಕೆ ತುತ್ತಾಗುವ ವ್ಯಕ್ತಿಗಳಿಗೂ ಈ ಅಭ್ಯಾಸ ಸಲ್ಲದು. ಆದರೆ ಅತಿಯಾದ ಆಮ್ಲೀಯತೆ ಇರುವ ವ್ಯಕ್ತಿಗಳಿಗೆ ಮುಂಜಾನೆಯ ತಣ್ಣನೆಯ ಹಾಲು ಉತ್ತಮವಾಗಿದೆ. ಏಕೆಂದರೆ ಹಾಲಿನಲ್ಲಿರುವ ಕ್ಯಾಲ್ಸಿಯಂ ಈ ಆಮ್ಲದೊಂದಿಗೆ ಬೆರೆತು ಉಪ್ಪಾಗಿ ಪರಿವರ್ತಿತವಾಗುವ ಮೂಲಕ ಆಮ್ಲೀಯತೆಯ ಪ್ರಾಬಲ್ಯವನ್ನು ಕಡಿಮೆಗೊಳಿಸುತ್ತದೆ. ವಾತ ಪ್ರಕೃತಿಯವರು ಹಾಲನ್ನು ದಿನದ ಇತರ ಸಮಯಗಳಲ್ಲಿ ಸೇವಿಸುವ ಮೂಲಕ ಹಾಲಿನ ಪ್ರಯೋಜನಗಳನ್ನು ಪಡೆಯಬಹುದು. ವಿಶೇಷವಾಗಿ ಬೆಲ್ಲ ಬೆರೆಸಿದ ಹಾಲು ಹೆಚ್ಚಿನ ಪ್ರಯೋಜನ ಒದಗಿಸುತ್ತದೆ"

  Most Read: ತಣ್ಣಗಿರುವ ಹಾಲಿಗಿಂತ ಬಿಸಿಬಿಸಿ ಹಾಲೇ ಆರೋಗ್ಯಕಾರಿ ಕಣ್ರೀ


 • ಅಭಿಪ್ರಾಯ

  ಪ್ರತಿಯೊಬ್ಬರ ದೇಹದ ಪ್ರಕೃತಿಯೂ ಭಿನ್ನವಾಗಿದ್ದು ಎಲ್ಲರಿಗೂ ಒಂದೇ ಬಗೆಯ ಆಹಾರ ಸೂಕ್ತವಾಗದೇ ಹೋಗಬಹುದು. ಅದರಲ್ಲೂ ವಿವಿಧ ಆಹಾರಗಳಿಗೆ ಅಲರ್ಜಿ ಹೊಂದಿರುವ ವ್ಯಕ್ತಿಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ನಿಮ್ಮ ದೇಹಪ್ರಕೃತಿಯನ್ನು ಅನುಸರಿಸಿ ನಿಮಗೆ ಅತಿ ಸೂಕ್ತವಾದ ಅಹಾರಗಳನ್ನೇ ದಿನದ ವಿವಿಧ ಹೊತ್ತುಗಳಲ್ಲಿ ಸೇವಿಸಬೇಕು. ನಿಮ್ಮ ದೇಹದ ಪ್ರತಿಕ್ರಿಯೆಯನ್ನು ಗಮನಿಸಿ, ಯಾವ ಆಹಾರವನ್ನು ಸೇವಿಸಿದ ಬಳಿಕ ದೇಹ ಹೇಗೆ ಪ್ರತಿಕ್ರಿಯಿಸಿತು, ಯಾವ ಆಹಾರ ನಿಮಗೆ ಹೆಚ್ಚು ಒಗ್ಗುತ್ತದೆ ಎಂಬುದನ್ನು ಗಮನಿಸಿ ಮನದಟ್ಟು ಮಾಡಿಕೊಳ್ಳಿ. ಆ ಪ್ರಕಾರ ಖಾಲಿಹೊಟ್ಟೆಯಲ್ಲಿ ಸೇವಿಸುವ ಆಹಾರದಲ್ಲಿರುವ ಒಂದು ಅಂಶ ನಿಮ್ಮ ಚೈತನ್ಯವನ್ನು ಹೆಚ್ಚಿಸಿತೋ ಅಥವಾ ಮೈಭಾರವಾಗುವಂತಹ ಅನುಭವವಾಯಿತೋ ಎಂಬ ಅಂಶಗಳನ್ನು ಪರಿಗಣಿಸುವ ಮೂಲಕ ನಿಮಗೆ ಯಾವ ಆಹಾರ ಸೂಕ್ತ ಎಂಬುದನ್ನು ನೀವೇ ಕಂಡುಕೊಳ್ಳಬಹುದು ಎಂದು ತಜ್ಞರು ತಿಳಿಸುತ್ತಾರೆ.
ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ 'ಯಾವ ಆಹಾರವನ್ನು'ಸೇವಿಸುತ್ತೇವೆ ಎಂಬ ಅಂಶ ಎಷ್ಟು ಮುಖ್ಯವೋ ಅಷ್ಟೇ 'ಯಾವಾಗ ಸೇವಿಸುತ್ತೇವೆ' ಎಂಬ ಅಂಶವೂ ಮುಖ್ಯವಾಗಿದೆ. ನಮ್ಮ ದೇಹಕ್ಕೆ ಹಲವು ಬಗೆಯ ಪೋಷಕಾಂಶಗಳ ಅಗತ್ಯವಿರುವ ಕಾರಣ ಪ್ರತಿ ಹೊತ್ತಿನಲ್ಲಿಯೂ ಬೇರೆ ಬೇರೆ ವಿಧದ ಆಹಾರಗಳು ಅಗತ್ಯವಾಗಿವೆ. ಅಲ್ಲದೇ ನಮ್ಮ ದೇಹ ದಿನದ ವಿವಿಧ ಸಮಯಗಳಲ್ಲಿ ಭಿನ್ನಭಿನ್ನವಾದ ಕಾರ್ಯಗಳನ್ನು ನಿರ್ವಹಿಸುವ ಕಾರಣ ಯಾವ ಹೊತ್ತಿನಲ್ಲಿ ಯಾವ ಆಹಾರ ಸೇವಿಸಬೇಕೆಂದು ಗೊತ್ತಿರುವುದೂ ಅಗತ್ಯವಾಗಿದೆ. ಇದನ್ನೇ ಆಹಾರಕ್ರಮ ಅಥವಾ Diet planning ಎಂದು ಕರೆಯುತ್ತೇವೆ.

ನಮ್ಮ ಆಹಾರಕ್ರಮ ದಿನವಿಡೀ ನಮ್ಮ ದೇಹದಲ್ಲಿ ಜರುಗುವ ಹಲವಾರು ವ್ಯವಸ್ಥೆಗಳಿಗೆ ಪೂರಕವಾಗಿದ್ದು ಇವುಗಳ ಕ್ಷಮತೆಯನ್ನು ಹೆಚ್ಚಿಸುವಂತಿರಬೇಕು. ಹಾಗಾಗಿ ಅಗತ್ಯವಿರುವ ಸಮಯದಲ್ಲಿ ಸೂಕ್ತವಾದ ಪೋಷಕಾಂಶ ಲಭಿಸುವಂತೆ ನಮ್ಮ ಆಹಾರಕ್ರಮವೂ ಇರಬೇಕು. ಹಿಂದಿನಿಂದಲೂ ನಮ್ಮ ಹಿರಿಯರು ತಮ್ಮ ಅನುಭವದಿಂದ ಕಂಡುಕೊಂಡಿದ್ದ ಆಹಾರಕ್ರಮಗಳನ್ನು ನಾವು ಅನುಸರಿಸುತ್ತಾ ಬಂದಿದ್ದರೂ ಇವುಗಳಲ್ಲಿ ಕೆಲವು ಅಷ್ಟೊಂದು ಆರೋಗ್ಯಕರವಲ್ಲ ಎಂದು ವೈದ್ಯಕೀಯ ವರದಿಗಳು ಸಾಬೀತುಪಡಿಸಿವೆ.

ಉದಾಹರಣೆಗೆ ರಾತ್ರಿ ಮಲಗುವ ಕೆಲವೇ ಕ್ಷಣಗಳ ಮುನ್ನ ಕುಡಿಯುವ ಬಿಸಿ ಹಾಲು ಅಷ್ಟೊಂದು ಆರೋಗ್ಯಕರವಲ್ಲ ಎಂದು ವರದಿಗಳು ತಿಳಿಸಿದರೆ ನಮ್ಮ ಹಿರಿಯರು ಇದೇ ನಿಯಮವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. "ಹಾಲು ಒಂದು ಪರಿಪೂರ್ಣವಾದ ಆಹಾರವೇ ಆಗಿದ್ದು ರಾತ್ರಿ ಮಲಗುವ ಮುನ್ನ ಸೇವಿಸಿದರೆ ಇದನ್ನು ಜೀರ್ಣಿಸಿಕೊಳ್ಳಲು ನಮ್ಮ ಜೀರ್ಣಾಂಗಗಳು ತಮ್ಮ ಕಾರ್ಯವ್ಯವಸ್ಥೆಯನ್ನು ಬದಲಿಸಿಕೊಳ್ಳಬೇಕಾಗುತ್ತದೆ ಹಾಗಾಗಿ ಇದು ಜೀರ್ಣಕ್ರಿಯೆಯ ಮೇಲೆ ಪ್ರಭಾವವುಂಟುಮಾಡಬಹುದು ಹಾಗೂ ಕೆಲವರಲ್ಲಿ ಜೀರ್ಣವ್ಯವಸ್ಥೆಯ ತೊಂದರೆಗೂ ಕಾರಣವಾಗಬಹುದು. ಒಂದು ತರಹದಲ್ಲಿ ಹಾಲು ಕುಡಿಯುವುದು ಎರಡು ಊಟಗಳನ್ನು ಮಾಡಿದಂತಾಗುತ್ತದೆ" ಈ ಮಾಹಿತಿ ವೈದ್ಯಕೀಯವಾಗಿ ಸರಿ, ಆದರೆ ಮುಂಜಾನೆ ಎದ್ದ ಬಳಿಕ ಪ್ರಥಮ ಆಹಾರವಾಗಿ ಸೇವಿಸಿದರೆ? ಕೆಲವರಿಗೆ ಬೆಳಿಗ್ಗೆದ್ದ ಬಳಿಕ ಹಾಲು ಅಥವಾ ತಣ್ಣನೆಯ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಈ ಅಭ್ಯಾಸ ಒಳ್ಳೆಯದೇ? ವಿಶೇಷವಾಗಿ ಖಾಲಿಹೊಟ್ಟೆಯಲ್ಲಿ ತೆಗೆದುಕೊಂಡಾಗ ಯಾವ ರೀತಿಯ ಪ್ರಭಾವ ಬೀರುತ್ತದೆ? ಈ ಪ್ರಶ್ನೆಗಳನ್ನು ತಜ್ಞರಲ್ಲಿ ಕೇಳಿದಾಗ ಅವರು ನೀಡುವ ಉತ್ತರ ಈ ಕೆಳಗಿನಂತಿದೆ..

Most Read: ಹಾಲು ಮತ್ತು ಬಾಳೆಹಣ್ಣನ್ನು ಒಟ್ಟಿಗೆ ಸೇವಿಸಲೇಬಾರದು! ಯಾಕೆ ಗೊತ್ತೇ?

   
 
ಹೆಲ್ತ್