Back
Home » ಇತ್ತೀಚಿನ
ಟಿವಿ ವೀಕ್ಷಕರಿಗೆ ಸಿಹಿ ಸುದ್ದಿ- ಚಾನಲ್ ಆಯ್ಕೆ ಮಾರ್ಚ್ 31 ಕೊನೆಯ ದಿನಾಂಕ
Gizbot | 15th Feb, 2019 03:01 PM
 • ಗುಪ್ತಾ ಹೇಳಿಕೆ:

  ಟ್ರಾಯ್ ಸ್ಪಷ್ಟವಾಗಿ ಡಿಸ್ಟ್ರಿಬ್ಯೂಷನ್ ಪ್ಲಾಟ್ ಫಾರ್ಮ್ ಮಾಲೀಕರು(DPOs ) ಗ್ರಾಹಕರ ಬಳಿ ಮಾಸಿಕ ಹೆಚ್ಚುವರಿ ಶುಲ್ಕವನ್ನು ಈ ಸದ್ಯವಿರುವ ಪ್ಲಾನ್ ನ ಅಡಿಯಲ್ಲಿ ಪಡೆದುಕೊಳ್ಳುವಂತಿಲ್ಲ ಎಂದು ಟ್ರಾಯ್ ನ ಕಾರ್ಯದರ್ಶಿ ಆಗಿರುವ ಎಸ್.ಕೆ ಗುಪ್ತಾ ಅವರು ತಿಳಿಸಿದ್ದಾರೆ.


 • ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ:

  ಟ್ರಾಯ್ ಎಲ್ಲಾ ಸಂದರ್ಬವನ್ನು ವೀಕ್ಷಿಸುತ್ತಿದ್ದು ಒಂದು ವೇಳೆ ಯಾವುದೇ ಗ್ರಾಹಕರಿಂದ ಹೆಚ್ಚುವರಿ ಶುಲ್ಕ ಪಡೆದುಕೊಳ್ಳುತ್ತಿರುವುದರ ಬಗ್ಗೆ ದೂರು ಬಂದರೆ ಕೂಡಲೇ ಆ ಸಮಸ್ಯೆ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಗುಪ್ತಾ ತಿಳಿಸಿದ್ದಾರೆ.


 • ಬೆಸ್ಟ್ ಫಿಟ್ ಪ್ಲಾನ್:

  ಡಿಪಿಓ ಗಳಿಗೆ ಟ್ರಾಯ್ ಸದ್ಯ ಬೆಸ್ಟ್ ಫಿಟ್ ಪ್ಲಾನ್ ನ್ನು ಗ್ರಾಹಕರಿಗೆ ನೀಡಲು ನಿರ್ದೇಶಿಸಿದೆ. ಅಂದರೆ ಯಾವ ಗ್ರಾಹಕರು ತಮ್ಮ ಆಯ್ಕೆಯನ್ನು ಇನ್ನು ಖಚಿತಪಡಿಸಿಕೊಂಡಿಲ್ಲವೋ ಅಂತವರಿಗೆ ಈ ಆಯ್ಕೆ ನೀಡಲಾಗುತ್ತಿದೆ. ಯಾಕೆಂದರೆ ಗ್ರಾಹಕರು ಯಾವುದೇ ರೀತಿಯ ಸಮಸ್ಯೆಯನ್ನು ಈ ಬದಲಾವಣೆಯಿಂದಾಗಿ ಎದುರಿಸಬಾರದು ಎಂಬುದು ಟ್ರಾಯ್ ನ ಉದ್ದೇಶವಾಗಿದೆ.


 • ಗ್ರಾಹಕರ ಅನುಕೂಲತೆಗಾಗಿ ಅವಕಾಶ:

  ರೆಗ್ಯುಲೇಟರ್ ಸದ್ಯ ನೀಡಲಾಗಿರುವ ಟೈಮ್ ಲೈನ್ ನ್ನು ಗ್ರಾಹಕರ ಅನುಕೂಲತೆಯ ದೃಷ್ಟಿಯಿಂದ ಮುಂದುವರಿಸಿದ್ದು ಮಾರ್ಚ್ 31,2019 ರ ವರೆಗೂ ಕೂಡ ಆಯ್ದ ಚಾನಲ್ ಗಳ ಆಯ್ಕೆಗೆ ಅವಕಾಶವನ್ನು ನೀಡುತ್ತಿದೆ.


 • ಭಾಷೆಗೆ ಆದ್ಯತೆ:

  ಟ್ರಾಯ್ ತಿಳಿಸಿರುವಂತೆ ಈ ಬೆಸ್ಟ್ ಫಿಟ್ ಪ್ಲಾನ್ ನ್ನು ಗ್ರಾಹಕರು ಬೇಡಿಕೆ ಮತ್ತು ಅವರು ಮಾತನಾಡುವ ಭಾಷೆಯ ಆಧಾರದಲ್ಲಿ ಮಾಡಲಾಗಿದೆ ಎಂದು ಹೇಳಿದೆ.


 • 72 ತಾಸುಗಳಲ್ಲಿ ಬದಲಾವಣೆ:

  ಮಾರ್ಚ್ 31,2019 ಕ್ಕೂ ಮುಂಚೆ ಯಾವುದೇ ಸಮಯದಲ್ಲಿ ಚಂದಾದಾದರು ತಮ್ಮ ಬೆಸ್ಟ್ ಫಿಟ್ ಪ್ಲಾನ್ ನ್ನು ಬದಲಾಯಿಸಿಕೊಳ್ಳಬಹುದು ಎಂದು ರೆಗ್ಯುಲೇಟರ್ ಗಳು ತಿಳಿಸಿದ್ದಾರೆ ಮತ್ತು ಡಿಪಿಓ ಗ್ರಾಹಕರು ಆಯ್ಕೆ ಮಾಡಿದ ಪ್ಯಾಕ್ ಅಥವಾ ಚಾನಲ್ ಗಳನ್ನು ಮಾತ್ರವೇ ಲಭ್ಯವಾಗುವಂತೆ ಮಾಡುತ್ತದೆ. ಇದಕ್ಕಾಗಿ 72 ತಾಸುಗಳ ಸಮಯವನ್ನು ರೆಗ್ಯುಲೇಟರ್ ಗಳು ತೆಗೆದುಕೊಳ್ಳುತ್ತಾರೆ. ಅಂದರೆ ಒಮ್ಮೆ ಚಂದಾದಾರರು ಚಾನಲ್ ಆಯ್ಕೆ ಮಾಡಿದ 72 ತಾಸುಗಳಲ್ಲಿ ಬದಲಾವಣೆಯನ್ನು ಗಮನಿಸಲು ಸಾಧ್ಯವಾಗುತ್ತದೆ.
ಟೆಲಿಕಾಂ ರೆಗ್ಯುಲೇಟರ್ ಟ್ರಾಯ್ ಟಿವಿ ವೀಕ್ಷಕರಿಗೆ ಮಾಸಿಕ ಬೆಸ್ಟ್ ಫಿಟ್ ಪ್ಲಾನ್ ನ ಅಡಿಯಲ್ಲಿ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ತಾಕೀತು ಮಾಡಿದೆ ಮತ್ತು ಒಂದು ವೇಳೆ ಅಂತಹ ದೂರುಗಳು ಕೇಳಿಬಂದಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದೆ.

   
 
ಹೆಲ್ತ್