Back
Home » ಆರೋಗ್ಯ
ಆಸ್ತಿಕರಿಗಿಂತ ನಾಸ್ತಿಕರೇ ಹೆಚ್ಚು ಸುಖಿಗಳಂತೆ - ಹೀಗೆನ್ನುತ್ತದೆ ಒಂದು ಅಧ್ಯಯನ!
Boldsky | 15th Feb, 2019 05:00 PM
 • ಏನೀ ಅಧ್ಯಯನ?

  ಪ್ಯೂ ರೀಸರ್ಚ್ ಎಂಬ ಸಂಸ್ಥೆ ಸುಮಾರು ಇಪ್ಪತ್ತನಾಲ್ಕು ದೇಶಗಳ ಸಾವಿರಾರು ವ್ಯಕ್ತಿಗಳ ಜೀವನಕ್ರಮ ಮತ್ತು ಇವರೆಷ್ಟು ಸಂತೋಷದಿಂದಿದ್ದಾರೆ ಎಂಬ ವಿಷಯದ ವಿವರಗಳನ್ನು ಕಲೆಹಾಕಿ ವಿಶ್ಲೇಷಿಸಿತು. ಇದಕ್ಕಾಗಿ ಇವರು ಒಂದು ಧರ್ಮದ ಎಲ್ಲಾ ಕಟ್ಟುಪಾಡುಗಳನ್ನು ಪಾಲಿಸುವ ನಾಸ್ತಿಕರು, ನಾಸ್ತಿಕರಾಗಿದ್ದರೂ ಧರ್ಮದ ಕೆಲವು ಕಟ್ಟುಪಾಡುಗಳನ್ನು ಮಾತ್ರವೇ ಅನುಸರಿಸುವ ಮತ್ತು ದೇವರನ್ನು ನಂಬದ ಆಸ್ತಿಕರು ಎಂಬ ಮೂರು ವಿಭಾಗಗಳನ್ನಾಗಿ ವಿಂಗಡಿಸಿ ವಿವರಗಳನ್ನು ಹೋಲಿಸಲಾಗಿತ್ತು. ಜೊತೆಗೇ ಇವರ ಆರೋಗ್ಯದ ವಿವರಗಳನ್ನೂ ಕಲೆಹಾಕಲಾಗಿತ್ತು. ಅಚ್ಚರಿಯ ವಿಷಯವೆಂದರೆ ಈ ಮೂರೂ ವಿಭಾಗಗಳ ವ್ಯಕ್ತಿಗಳಲ್ಲಿ ಆರೋಗ್ಯ ಸಂಬಂಧಿ ವಿವರಗಳಲ್ಲಿ ಯಾವುದೇ ತಾಳಮೇಳವಾಗಲೀ ಹೋಲಿಕೆಯಾಗಲೀ ಕಂಡುಬಂದಿರಲಿಲ್ಲ. (ಉದಹಾರಣೆಗೆ ಸ್ಥೂಲಕಾಯ, ಬಿ ಎಂ ಐ, ಆನಾರೋಗ್ಯ ಬಾಧಿಸುವ ಸಾಧ್ಯತೆ ಇತ್ಯಾದಿ).


 • ಏನೀ ಅಧ್ಯಯನ?

  ಆದರೆ ಭಾವನಾತ್ಮಕವಾಗಿ ಆಸ್ತಿಕ ವ್ಯಕ್ತಿಗಳು ಹೆಚ್ಚು ಸಂತೋಷದಿಂದ ಇರುವುದು ಮತ್ತು ಜೀವನದಲ್ಲಿ ಧನಾತ್ಮಕ ಧೋರಣೆ ತಳೆದಿರುವುದು ಮಾತ್ರ ಸ್ಪಷ್ಟವಾಗಿ ಕಂಡುಬಂದಿತ್ತು. ತನ್ಮೂಲಕ ಇವರಲ್ಲಿ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಂಡುಬಂದಿತ್ತು. ಒಟ್ಟಾರೆಯಾಗಿ ಹೇಳಬೇಕೆಂದರೆ ಆಸ್ತಿಕರಲ್ಲಿ ಸುಮಾರು ಮುಕ್ಕಾಲು ಪಾಲು ಜನರು ತಾವು ಸಂತೋಷದಿದ್ದೇವೆ ಮತ್ತು ಜೀವನವನ್ನು ಸುಖವಾಗಿ ಅನುಭವಿಸುತ್ತೇವೆ ಎಂದು ತಿಳಿಸಿದ್ದಾರೆ. ವಿಜ್ಞಾನಕ್ಕೆ ಈ ವ್ಯಕ್ತಿಗಳ ಧಾರ್ಮಿಕ ಭಾವನೆಗೂ ಸಂತೋಷದಿಂದಿರುವುದಕ್ಕೂ ನೇರವಾದ ಯಾವುದೇ ಸಂಬಂಧವನ್ನು ವಿವರಿಸಲು ಸಾಧ್ಯವಾಗಿಲ್ಲ. ಆದರೆ ಈ ಸಮೀಕ್ಷೆಯ ವಿವರಗಳು ಮಾತ್ರ ಈ ವಿಷಯವನ್ನೇ ಸಾಕ್ಷಿ ಸಮೇತ ಸ್ಪಷ್ಟಪಡಿಸುತ್ತಿವೆ. ಈ ವಿವರಗಳು ಎಲ್ಲಾ ಇಪ್ಪತ್ತನಾಲ್ಕು ದೇಶಗಳ ವ್ಯಕ್ತಿಗಳಲ್ಲಿಯೂ ಹೆಚ಼್ಚೂ ಕಡಿಮೆ ಏಕಪ್ರಕಾರವಾಗಿದ್ದುದೂ ಇನ್ನೊಂದು ಅಚ್ಚರಿಯಾಗಿದೆ.


 • ಇದೇಕೆ ಹೀಗೆ?

  ಮಾನವರ ಮನಸ್ಸಿನ ಮೇಲೆ ನೇರವಾದ ಪ್ರಭಾವವನ್ನು ಬೀರಬಲ್ಲ ಅಂಶಗಳಲ್ಲಿ ಧರ್ಮ ಪ್ರಮುಖವಾಗಿದೆ. ಕೆಲವು ಕಾರ್ಯಗಳನ್ನು ನಿರ್ವಹಿಸಲು ಮತ್ತು ನಿರ್ವಹಿಸದೇ ಇರಲು ಧರ್ಮ ವಿಧಿಸಿದ ಕಟ್ಟುಪಾಡುಗಳು ಈ ವ್ಯಕ್ತಿಗಳು ತಮಗೊಂದು ಮಿತಿಯನ್ನು ಹೇರಿಕೊಂಡು ಗುರಿಯೊಂದನ್ನು ಸಾಧಿಸಲು ನೆರವಾಗುತ್ತದೆ ಹಾಗೂ ಕಟ್ಟುಪಾಡುಗಳನ್ನು ಮೀರದೇ ಜೀವನ ನಡೆಸುವ ಬಗ್ಗೆ ಸಂತೋಷದಿಂದಿರಲು ಸಾಧ್ಯವಾಗುತ್ತದೆ. ಅಲ್ಲದೇ ತಾನು ಪಾಲಿಸುತ್ತಿರುವ ಧರ್ಮವನ್ನು ಇತರ ವ್ಯಕ್ತಿಗಳೂ ಅನುಸರಿಸುವ ಕಾರಣ ಇವರ ಸಹಚರನಾಗಿರುವ ಭಾವನೆ ಒಬ್ಬಂಟಿತನ ಮತ್ತು ಖಿನ್ನತೆಯಿಂದ ಕಾಪಾಡುತ್ತದೆ. ಅಧ್ಯಯನದ ಪ್ರಕಾರ ಧಾರ್ಮಿಕ ಭಾವನೆಯನ್ನು ಒಂದು ಶಕ್ತಿಯ ಅಥವಾ ನಂಬಿಕೆಗೆ ಕೇಂದ್ರೀಕರಿಸುವ ಮೂಲಕ ವ್ಯಕ್ತಿಗಳಿಗೆ ಜೀವನದಲ್ಲಿ ಮಾನವ ಸಂಗಾತಿಯ ಕೊರತೆಯುಂಟಾಗುವುದು ತಪ್ಪುತ್ತದೆ. ಅಲ್ಲದೇ ಧರ್ಮ ವಿಧಿಸುವ ನೈತಿಕ ಮೌಲ್ಯಗಳನ್ನು ಪಾಲಿಸುವುದರಿಂತಲೂ ಸಂತೋಷ ಹೆಚ್ಚುತ್ತದೆ.


 • ಇದೇಕೆ ಹೀಗೆ?

  ಧರ್ಮಕ್ಕೆ ಹೆಚ್ಚಿನ ಮಹತ್ವ ನೀಡಲು ಇನ್ನೊಂದು ಕಾರಣವೆಂದರೆ ಧರ್ಮದ ಪಾಲನೆಯಿಂದ ಪಡೆಯುವ 'ತೃಪ್ತಿಯ ಭಾವನೆ'. ದೇವರಲ್ಲಿ ಪ್ರಾರ್ಥಿಸುವ ವೇಳೆಯಲ್ಲಿ ಅನುಭವಿಸುವ ತನ್ಮಯತೆ, ತಪಸ್ಸು ಮನಸ್ಸಿಗೆ ಉಪಶಮನಕಾರಕ ಅಥವಾ tranquilizer ನಂತಹ ಪರಿಣಾಮವನ್ನು ಬೀರುತ್ತದೆ ಎಂದು ತಜ್ಞರು ಗಮನಿಸಿದ್ದಾರೆ. ಧಾರ್ಮಿಕ ಕಾರಣಗಳಿಂದಲೇ ಆಗಲಿ, ಸಮಾಜದ ಇತರ ವ್ಯಕ್ತಿಗಳಿಗೆ ನೆರವಾಗುವ ಅಥವಾ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಪಡೆಯುವ ಧನ್ಯತಾ ಭಾವನೆ ಮೆದುಳಿನ ಒಂದು ಭಾಗದಲ್ಲಿ ಪ್ರಚೋದನೆ ಒದಗಿಸುತ್ತದೆ ಹಾಗೂ ಈ ಪ್ರಚೋದನೆ ಡೋಪಮೈನ್ ಎಂಬ ಮುದಗೊಳಿಸುವ ರಸದೂತವನ್ನು ಹೆಚ್ಚು ಉತ್ಪಾದಿಸಲು ಕಾರಣವಾಗುತ್ತದೆ. ಪರಿಣಾಮವಾಗಿ ನೆಮ್ಮದಿ ಹಾಗೂ ಸಂತೋಷ ಮನದಲ್ಲಿ ನೆಲೆಸುತ್ತದೆ. ಅಲ್ಲದೇ ಧಾರ್ಮಿಕ ವ್ಯಕ್ತಿಗಳು ಇತರರಿಗಿಂತ ಉತ್ತಮ ಆರೋಗ್ಯ ಹೊಂದಿರುತ್ತಾರೆ ಮತ್ತು ಹೆಚ್ಚಿನ ಆಯ್ಕೆಗಳನ್ನು ಪಡೆದಿರುತ್ತಾರೆ ಎಂದೂ ಈ ವರದಿ ತಿಳಿಸುತ್ತದೆ.


 • ಉದ್ವೇಗ, ಮಾನಸಿಕ ಉನ್ಮಾದ,

  ಉದ್ವೇಗ, ಮಾನಸಿಕ ಉನ್ಮಾದ, ಜೀವನದ ತೊಂದರೆ, ಹೊಸ ಸವಾಲುಗಳು, ಮಾನಸಿಕ ಒತ್ತಡ ಮೊದಲಾದ ಹಲವಾರು ತೊಂದರೆಗಳಿಗೆ ಧಾರ್ಮಿಕ ಶರಣಾಗತಿ, ಅಥವಾ ದೇವರಲ್ಲಿ ಮೊರೆ ಹೊಕ್ಕು ಸಹಾಯವನ್ನು ಯಾಚಿಸುವ ಮೂಲಕ ಹೆಚ್ಚು ಹೆಚ್ಚಾಗಿ ಮಾನಸಿಕರಾಗಿ ದೃಢರಾಗಲು ನೆರವಾಗುತ್ತದೆ. ಈ ಸತ್ಯವನ್ನು ಕಂಡುಕೊಂಡ ಎಷ್ಟೋ ಮನಃಶಾಸ್ತ್ರಜ್ಞರು ಮತ್ತು ಚಿಕಿತ್ಸಕರು ದೇವರನ್ನು ನಂಬಿ ಎಂಬ ಸಲಹೆಯನ್ನೂ ತಮ್ಮ ಚಿಕಿತ್ಸೆಯ ಜೊತೆಗೇ ನೀಡುತ್ತಾರೆ. ಈ ಮೂಲಕ ಹೃದಯದ ಮೇಲಿನ ಭಾರವನ್ನು ಇಳಿಸಿ ಮಾನಸಿಕ ಉದ್ವೇಗವನ್ನೂ ತಗ್ಗಿಸಿ ಶೀಘ್ರವೇ ಗುಣಮುಖರಾಗಲೂ ಕಾರಣವಾಗುತ್ತದೆ.
ಸಂತೋಷವಾಗಿರಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಪ್ರತಿ ವ್ಯಕ್ತಿಯಿಂದ ಭಿನ್ನವಾದ ಉತ್ತರ ದೊರಕುತ್ತದೆ. ಹಾಗಾಗಿ ಸಂತೋಷಕ್ಕೆ ಸ್ಪಷ್ಟವಾದ ಮೂಲವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ, ಆದರೆ ಹೆಚ್ಚಿನ ಜನರ ನಂಬುಗೆಯನ್ನು ಕ್ರೋಢೀಕರಿಸಿದರೆ ಇವರು ಹೆಚ್ಚಾಗಿ ನಂಬುವ ಧಾರ್ಮಿಕ ಭಾವನೆಗಳು ಎಂದು ಸ್ಪಷ್ಟವಾಗಿ ಹೇಳಬಹುದು. ಇತ್ತೀಚೆಗೆ ನಡೆದ ಅಧ್ಯಯನವೊಂದರಲ್ಲಿ ಧಾರ್ಮಿಕ ನಂಬಿಕೆಗಳಿಗೆ ಬದ್ದರಾಗಿ ಅದರಂತೆಯೇ ನಡೆದು ಧರ್ಮದ ಕಟ್ಟುಪಾಡುಗಳ ಮಿತಿಯಲ್ಲಿಯೇ ಜೀವಿಸುವ ವ್ಯಕ್ತಿಗಳು ಆಸ್ತಿಕರಿಗಿಂತಲೂ ಹೆಚ್ಚು ಸುಖಿಗಳು ಮತ್ತು ಸಂತೋಷದಿಂದ ಜೀವನ ನಡೆಸುತ್ತಾರೆ ಎಂದು ಕಂಡುಕೊಳ್ಳಲಾಗಿದೆ. ಆ ಪ್ರಕಾರ ಧಾರ್ಮಿಕ ಭಾವನೆಯೊಡನೆ ಜೀವಿಸುವ ವ್ಯಕ್ತಿಗಳು ಜೀವನವಿಡೀ ಸುಖಿಗಳಾಗಿರುತ್ತಾರೆ ಎಂದು ಈ ವರದಿ ತಿಳಿಸುತ್ತದೆ.

   
 
ಹೆಲ್ತ್