Back
Home » ಇತ್ತೀಚಿನ
ನಿಮ್ಮ ವಾಟ್ಸ್ ಆಪ್ ಚಾಟ್ ನ್ನು ಹೈಡ್ ಮಾಡಲು ಬಳಸಿ ಸಿಂಪಲ್ ಟ್ರಿಕ್ಸ್
Gizbot | 15th Feb, 2019 07:30 PM
 • ಆಂಡ್ರಾಯ್ಡ್ ನಲ್ಲಿ ಆರ್ಕೈವ್ ಚಾಟ್ ಮಾಡುವುದು ಹೇಗೆ?

  1.ವಾಟ್ಸ್ ಆಪ್ ನ್ನು ತೆರೆಯಿರಿ.

  2.ಚಾಟ್ ಸ್ಕ್ರೀನ್ ನಲ್ಲಿ ನೀವು ಹೈಡ್ ಮಾಡಲು ಇಚ್ಛಿಸುವ ಚಾಟ್ ನ್ನು ಟ್ಯಾಪ್ ಮಾಡಿ ಮತ್ತು ಹೋಲ್ಡ್ ಮಾಡಿ.

  3.ಮೇಲಿನ ಬಾರ್ ನಲ್ಲಿ ಆರ್ಕೈವ್ ಐಕಾನ್ ನ್ನು ಸೆಲೆಕ್ಟ್ ಮಾಡಿ.


  ಇದು ನಿಮ್ಮ ಚಾಟ್ ನ್ನು ಆರ್ಕೈವ್ ಮಾಡುತ್ತದೆ ಮತ್ತು ನಿಮ್ಮ ಚಾಟ್ ಸ್ಕ್ರೀನ್ ನಲ್ಲಿ ಇನ್ನು ಮುಂದೆ ನೀವು ಇದನ್ನು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ.

  ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ನಿಮ್ಮ ಎಲ್ಲಾ ಅರ್ಕೈವ್ಡ್ ಚಾಟ್ ಗಳನ್ನು ಸ್ಕ್ರೀನಿನ ಕೆಳಭಾಗದಲ್ಲಿ ಕಾಣಬಹುದಾಗಿರುತ್ತದೆ.


 • ಐಫೋನ್ ನಲ್ಲಿ ಆರ್ಕೈವ್ ಚಾಟ್ ಮಾಡುವುದು ಹೇಗೆ ?

  1.ವಾಟ್ಸ್ ಆಪ್ ನ್ನು ತೆರೆಯಿರಿ.

  2.ಚಾಟ್ ಸ್ಕ್ರೀನ್ ನಲ್ಲಿ ನೀವು ಆರ್ಕೈವ್ ಮಾಡಲು ಇಚ್ಛಿಸುವ ಚಾಟ್ ನಲ್ಲಿ ನಿಮ್ಮ ಕೈಬೆರಳನ್ನು ಬಲಭಾಗದಿಂದ ಎಡಭಾಗದ್ಕೆ ಸ್ಲೈಡ್ ಮಾಡಿ.

  3.ಆರ್ಕೈವ್ ನ್ನು ಟ್ಯಾಪ್ ಮಾಡಿ.

  ಆರ್ಕೈವ್ ಆಗಿರುವ ಚಾಟ್ ನ್ನು ಐಫೋನ್ ನಲ್ಲಿ ನೋಡುವುದಕ್ಕಾಗಿ ಮೇಲ್ಬಾಗದಲ್ಲಿ ಸ್ಕ್ರೋಲ್ ಮಾಡಿ ಮತ್ತು ಕೆಳಗಡೆ ಪುಲ್ ಮಾಡಿ.

  ಒಂದು ವೇಳೆ ನಂತರ ನೀವು ಈ ಚಾಟ್ ಗಳನ್ನು ಹೈಡ್ ಮಾಡುವುದರ ವಿಚಾರದಲ್ಲಿ ನೀವು ಮನಸ್ಸು ಬದಲಾಯಿಸಿದ್ದರೆ, ಚಾಟ್ ನ್ನು ಅನ್ ಆರ್ಕೈವ್ ಮಾಡುವುದಕ್ಕೂ ಕೂಡ ಅವಕಾಶವಿರುತ್ತದೆ.


 • ಆಂಡ್ರಾಯ್ಡ್ ನಲ್ಲಿ ಚಾಟ್ ಅನ್ ಆರ್ಕೈವ್ ಮಾಡುವುದು ಹೇಗೆ?

  1.ಚಾಟ್ ಸ್ಕ್ರೀನ್ ನಲ್ಲಿ ಕೆಳಭಾಗಕ್ಕೆ ಸ್ಕ್ರೋಲ್ ಮಾಡಿ.

  2.ಆರ್ಕೈವ್ಡ್ ಚಾಟ್ ನ್ನು ಟ್ಯಾಪ್ ಮಾಡಿ.

  3.ಅನ್ ಆರ್ಕೈವ್ ಮಾಡಲು ಇಚ್ಛಿಸುವ ಚಾಟ್ ನ್ನ ಟ್ಯಾಪ್ ಮಾಡಿ ಮತ್ತು ಹೋಲ್ಡ್ ಮಾಡಿ.

  4.ಮೇಲ್ಬಾಗದ ಬಾರ್ ನಲ್ಲಿ ಅನ್ ಆರ್ಕೈವ್ ಐಕಾನ್ ನ್ನು ಸೆಲೆಕ್ಟ್ ಮಾಡಿ.

  ಐಫೋನ್ ನಲ್ಲಿ ಅನ್ ಆರ್ಕೈವ್ ಚಾಟ್ ಮಾಡುವುದು ಹೇಗೆ?

  1.ಆರ್ಕೈವ್ಡ್ ಚಾಟ್ ಸ್ಕ್ರೀನ್ ನಲ್ಲಿ ಚಾಟ್ ನಲ್ಲಿ ಬೆರಳನ್ನು ಬಲದಿಂದ ಎಡಕ್ಕೆ ಸ್ಲೈಡ್ ಮಾಡಿ.

  2.ಆನ್ ಆರ್ಕೈವ್ ನ್ನು ಟ್ಯಾಪ್ ಮಾಡಿ.
ಇತ್ತೀಚೆಗೆ ವಾಟ್ಸ್ ಆಪ್ ಹೊಸದಾಗಿ ಸೆಕ್ಯುರಿಟಿ ಫೀಚರ್ ನ್ನು ಪರಿಚಯಿಸಿದ್ದು ಅದು ನಿಮ್ಮ ಚಾಟ್ ಗಳನ್ನು ಸುಭದ್ರವಾಗಿ ಇಡುತ್ತದೆ.ಇದು ಫೇಸ್ ಐಡಿ ಮತ್ತು ಪಾಸ್ ಕೋಡ್ ಗಳ ಮೂಲಕ ನಿಮ್ಮ ವಾಟ್ಸ್ ಆಪ್ ಚಾಟ್ ಗಳನ್ನು ಇತರೆ ಕಣ್ಣುಗಳಿಂದ ರಕ್ಷಿಸುತ್ತದೆ. ಸದ್ಯಕ್ಕೆ ಈ ಫೀಚರ್ ಐಫೋನ್ ಬಳಕೆದಾರರಿಗೆ ಮಾತ್ರವೇ ಲಭ್ಯವಿದೆ. ಇನ್ನು ಆಂಡ್ರಾಯ್ಡ್ ಬಳಕೆದಾರರು ಇದನ್ನು ಬಳಸುವುದಕ್ಕಾಗಿ ಕೆಲವು ಸರಳ ಟ್ರಿಕ್ಸ್ ಗಳನ್ನು ಬಳಸಬೇಕಾಗುತ್ತದೆ. ಆಗ ಮಾತ್ರವೇ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಬ್ಬರೂ ಕೂಡ ತಮ್ಮ ಚಾಟ್ ಹೈಡ್ ಮಾಡಿಕೊಳ್ಳುವುದಕ್ಕೆ ಸಾಧ್ಯವಿದೆ.

ಆರ್ಕೈವ್ ಚಾಟ್ ಫೀಚರ್ ನಿಮಗೆ ನಿಮ್ಮ ಸಂಭಾಷಣೆಯನ್ನು ಚಾಟ್ ಸ್ಕ್ರೀನ್ ನಿಂದ ಹೈಡ್ ಮಾಡುವುದಕ್ಕೆ ಅವಕಾಶ ನೀಡುತ್ತದೆ ಮತ್ತು ಅದನ್ನು ನಂತರ ಆಕ್ಸಿಸ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಇದರಲ್ಲಿ ನೀವು ಗ್ರೂಪ್ ಚಾಟ್ ಮತ್ತು ವಯಕ್ತಿಕ ಚಾಟ್ ಎರಡನ್ನೂ ಕೂಡ ಆರ್ಕೈವ್ ಮಾಡಿ ಇಡುವುದಕ್ಕೆ ಅವಕಾಶವಿರುತ್ತದೆ. ಆರ್ಕೈವ್ ಚಾಟ್ ನಿಮ್ಮ ಚಾಟ್ ನ್ನು ಡಿಲೀಟ್ ಮಾಡುವುದಿಲ್ಲ ಅಥವಾ ಎಸ್ ಡಿ ಕಾರ್ಡ್ ನಲ್ಲಿ ಬ್ಯಾಕ್ ಅಪ್ ಮಾಡಿ ಇಡುವುದಿಲ್ಲ.

ಹಾಗಾದ್ರೆ ಈ ಫೀಚರ್ ಬಳಕೆ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಹಂತಹಂತವಾಗಿರುವ ಮಾಹಿತಿ.

   
 
ಹೆಲ್ತ್