Back
Home » ಇತ್ತೀಚಿನ
ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಟಿವಿ ಖರೀದಿಗೆ ನಾಲ್ಕು ದಿನ ಭರ್ಜರಿ ಆಫರ್ಸ್!!
Gizbot | 16th Feb, 2019 11:11 AM
  • ಮಿ ಎಲ್ಇಡಿ ಸ್ಮಾರ್ಟ್‌ಟಿವಿ 4ಎ

    ಫ್ಲಿಪ್‌ಕಾರ್ಟ್ ಟಿವಿ ಮಾರಾಟ ಮೇಳದಲ್ಲಿ ಶಿಯೋಮಿ ಕಂಪೆನಿಯ ಜನಪ್ರಿಯ ಮಿ ಎಲ್ಇಡಿ ಸ್ಮಾರ್ಟ್‌ಟಿವಿ 4ಎ 80 ಸೆಂ (32) ಕೇವಲ 12,499 ರೂಪಾಯಿಗಳಿಗೆ ಲಭ್ಯವಿದೆ. 20W ಔಟ್‌ಪುಟ್ ಸ್ಪೀಕರ್ 1366 x 768 HD ರೆಡಿ ಡಿಸ್‌ಪ್ಲೇ, 3 x ಹೆಚ್‌ಡಿಎಂಐ ಮತ್ತು 2 x ಯುಎಸ್‌ಬಿ ಕನೆಕ್ಟರ್‌ಗಳನ್ನು ಹೊಂದಿರುವ ಈ ಸ್ಮಾರ್ಟ್‌ಟಿವಿ ಮೇಲೆ 13 ಪರ್ಸೆಂಟ್ ಡಿಸ್ಕೌಂಟ್ಸ್ ನಿಡಲಾಗಿದೆ.


  • LG 43 ಇಂಚಿನ ಸ್ಮಾರ್ಟ್​ LED ಟಿವಿ

    LG ಕಂಪೆನಿಯ 43 ಇಂಚಿನ ಸ್ಮಾರ್ಟ್​ಟಿವಿ ಫ್ಲಿಪ್‌ಕಾರ್ಟ್​ ತಾಣದಲ್ಲಿ ರಿಯಾಯಿತಿ ದರದಲ್ಲಿ ದೊರಕುತ್ತಿದೆ. Full HD ಮತ್ತು ​ LED ಸ್ಮಾರ್ಟ್​ ಟಿ.ವಿ ನೈಜ ಮುಖ ಬೆಲೆ 49,490 ರೂ ಆಗಿದ್ದು ರಿಯಾಯಿತಿ ಮೂಲಕ 34,999 ರೂ ಬೆಲೆಗೆ ದೊರಕುತ್ತಿದೆ. ಇನ್ನೂ ಎಕ್ಸ್​ಚೇಂಜ್​ ಮಾಡುವುದಾದರೆ 8,000 ರೂ ಆಫರ್​ ನೀಡುತ್ತಿದ್ದು, ಆಕ್ಸಿಸ್​ ಬ್ಯಾಂಕ್​ ಶೇ.10 ರಷ್ಟು ಡಿಸ್ಕೌಂಟ್​​ ಒದಗಿಸಿದೆ.


  • 'ವಿಯು ಪ್ಲೇ' (43S6575 REV PL/43S6575)

    43 ಇಂಚಿನ ಫುಲ್‌ ಹೆಚ್‌ಡಿ ಎಲ್‌ಇಡಿ ಟಿವಿ 'ವಿಯು ಪ್ಲೇ' ಸ್ಮಾರ್ಟ್‌ಟಿವಿ ಫ್ಲಿಪ್‌ಕಾರ್ಟ್​ ತಾಣದಲ್ಲಿ ಕೇವಲ 17,499 ರೂ.ಗಳ ರಿಯಾಯಿತಿ ದರದಲ್ಲಿ ದೊರಕುತ್ತಿದೆ. ಈ ಮೊದಲ 27,000 ರೂ ಬೆಲೆ ಹೊಂದಿದ್ದ ಈ ಟಿವಿ ಮೇಲೆ 35 ಪರ್ಸೆಂಟ್ ಡಿಸ್ಕೌಂಟ್ ನಿಡಲಾಗಿದ್ದು, ಗ್ರಾಹಕರು ಈ ವಿಯು ಫ್ಲೇ ಸ್ಮಾರ್ಟ್‌ಟಿವಿಯ ಮೇಲೆ 8,000 ರೂ ಎಕ್ಸ್​ಚೇಂಜ್ ಡಿಸ್ಕೌಂಟ್ ಪಡೆಯಬಹುದಾಗಿದೆ.


  • ಸ್ಯಾಮ್‌ಸಂಗ್ 80CM (2018)

    32 ಇಂಚಿನ ಸ್ಯಾಮ್‌ಸಂಗ್ ಹೆಚ್‌ಡಿ ರೆಡಿ ಎಲ್‌ಇಡಿ ಟಿವಿ ಇದೀಗ ಕೇವಲ 14,999 ರೂ.ಗಳಿಗೆ ಲಭ್ಯವಿದೆ. 2018ರಲ್ಲಿ ಬಿಡುಗಡೆಯಾದ ಈ ನೂತನ ಎಡಿಷನ್ ಟಿವಿಯ ಮೇಲೆ 31 ಪರ್ಸೆಂಟ್ ಡಿಸ್ಕೌಂಟ್ಸ್ ನೀಡಲಾಗಿದ್ದು, 20 W ಔಟ್‌ಪುಟ್ ಸ್ಪೀಕರ್ ಮತ್ತು 1366 x 768 HD ರೆಡಿ ಡಿಸ್‌ಪ್ಲೇ ಹೊಂದಿರುವ ಈ ಟಿವಿಯ ಮೇಲೆ 5,000 ರೂ.ವರೆಗೂ ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ.


  • ಮಿ 49 ಇಂಚಿನ FHD ಸ್ಮಾರ್ಟ್‌ಟಿವಿ

    ಶಿಯೋಮಿ ಕಂಪೆನಿಯ ರೆಡ್‌ಮಿ ಬ್ರ್ಯಾಂಡ್‌ನ 49 ಇಂಚಿನ ಮಿ ಸ್ಮಾರ್ಟ್‌ಟಿವಿ ಇದೀಗ ಡಿಸ್ಕೌಂಟ್​ ಮೂಲಕ ಕೇವಲ 29,999 ರೂ.ಗಳಿಗೆ ಲಭ್ಯವಿದೆ. ಟಿ.ವಿ ಕ್ರೊಮೊಕಾಸ್ಟ್​ , 1920 x 1080 ಪಿಕ್ಸೆಲ್ಸ್ ಸಾಮರ್ಥ್ಯ, 3 x HDMI ಮತ್ತು 2 x ಯುಎಸ್‌ಬಿ ಕನೆಕ್ಟರ್‌ಗಳನ್ನು ಹೊಂದಿರುವ ಈ ಟಿವಿ ಮೇಲೆ 9 ಪರ್ಸೆಂಟ್ ಡಿಸ್ಕೌಂಟ್ಸ್ ಮತ್ತು 15,000 ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ.


  • ಮೈಕ್ರೋಮ್ಯಾಕ್ಸ್ HD ರೆಡಿ ಎಲ್ಇಡಿ ಟಿವಿ

    ಫ್ಲಿಪ್‌ಕಾರ್ಟ್ ಟಿವಿ ಮಾರಾಟ ಮೇಳದಲ್ಲಿ 32 ಇಂಚಿನ ಮೈಕ್ರೋಮ್ಯಾಕ್ಸ್ HD ರೆಡಿ ಎಲ್ಇಡಿ ಟಿವಿ ಕೇವಲ 9,999 ರೂ.ಗಳಿಗೆ ಲಭ್ಯವಿದೆ. 24W ಔಟ್ಪುಟ್ ಸ್ಪೀಕರ್, 1366 x 768 HD ರೆಡಿ ಡಿಸ್‌ಪ್ಲೇ, 2 x HDMI ಮತ್ತು 2 x ಯುಎಸ್‌ಬಿ ಕನೆಕ್ಟರ್‌ಗಳನ್ನು ಹೊಂದಿರುವ ಈ ಟಿವಿ ಮೇಲೆ ಶೇ. 49 ಪರ್ಸೆಂಟ್ ಆಫರ್ ನಿಡಲಾಗಿದ್ದು, 5 ಸಾವಿರದ ವರೆಗೂ ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ.


  • ಥಾಮ್ಸನ್ B9 ಪ್ರೊ 80cm

    ಟಿವಿ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಥಾಮ್ಸನ್ ಕಂಪೆನಿಯ 32 ಇಂಚಿನ ಥಾಮ್ಸನ್ B9 ಪ್ರೊ ಸ್ಮಾರ್ಟ್‌ಟಿವಿ ಇದೀಗ ಕೇವಲ 11,499 ರೂ.ಗಳಿಗೆ ಲಭ್ಯವಿದೆ. 20W ಔಟ್ಪುಟ್ ಸ್ಪೀಕರ್, 1366 x 768 HD ರೆಡಿ ಡಿಸ್‌ಪ್ಲೇ, 3 x HDMI ಮತ್ತು 2 x ಯುಎಸ್‌ಬಿ ಕನೆಕ್ಟರ್‌ಗಳನ್ನು ಹೊಂದಿರುವ ಈ ಟಿವಿ ಮೇಲೆ 5000 ರೂ.ಗಳ ವರೆಗೂ ಎಕ್ಸ್‌ಚೇಂಜ್ ಆಫರ್ ಕೂಡ ಲಭ್ಯವಿದೆ.




ಭಾರತದ ಪ್ರಖ್ಯಾತ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಹೊಸ ಸ್ಮಾರ್ಟ್‌ಟಿವಿ ಖರೀದಿದಾರರಿಗಾಗಿ ಭರ್ಜರಿ ಸೇಲ್ ಒಂದನ್ನು ಆರಂಭಿಸಿದೆ. ಆನ್​ಲೈನ್​ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗಳಿಗೆ ಉತ್ತಮ ಸ್ಮಾರ್ಟ್‌ಟಿವಿಗಳು ಲಭ್ಯವಾಗುವಂತೆ ಮಾಡಲು ಟಿವಿ ಮಾರಾಟ ಮೇಳವನ್ನು ಆಯೋಜಿಸಿರುವ ಸಂಸ್ಥೆ, ಭಾರೀ ಡಿಸ್ಕೌಂಟ್​ ಮತ್ತು ಎಕ್ಸ್​ಚೇಂಜ್​ ಮೂಲಕ ಉತ್ತಮ ಸ್ಮಾರ್ಟ್‌ಟಿವಿಗಳನ್ನು ಖರೀದಿಸುವ ಅವಕಾಶವನ್ನು ಮಾಡಿಕೊಟ್ಟಿದೆ.

ಇದೇ ತಿಂಗಳ ಫೆಬ್ರವರಿ 14 ರಿಂದ ಒಟ್ಟು ನಾಲ್ಕು ದಿನಗಳ ಕಾಲ ಫ್ಲಿಪ್‌ಕಾರ್ಟ್ ಮೂಲಕ ರಿಯಾಯಿತಿ ದರದಲ್ಲಿ ಸ್ಮಾರ್ಟ್‌ಟಿವಿಗಳನ್ನು ಖರೀದಿಸಬಹುದಾಗಿದ್ದು, ಈ ಸೇಲ್‌ನಲ್ಲಿ ಎಲ್‌ಜಿ, ಥಾಮ್ಸನ್ ಮತ್ತು ಶಿಯೋಮಿ ಟಿವಿಗಳು ಸೇರಿದಂತೆ ಬಹುತೇಕ ಎಲ್ಲಾ ಜನಪ್ರಿಯ ಕಂಪೆನಿಗಳ ಸ್ಮಾರ್ಟ್‌ಟಿವಿಗಳು ಅತ್ಯಂತ ಕಡಿಮೆ ಬೆಲೆಗೆ ಗ್ರಾಹಕರಿಗೆ ಲಭ್ಯವಿದೆ. ಜೊತೆಗೆ ಆಕ್ಸಿಸ್​ ಬ್ಯಾಂಕ್ ಬಳಕೆದಾರರು​ ಶೇ.10 ರಷ್ಟು ಡಿಸ್ಕೌಂಟ್​ ಪಡೆಯಬಹುದಾಗಿದೆ.

ಫೆಬ್ರವರಿ 14 ರಿಂದಲೇ ಆರಂಭವಾಗಿರುವ ಈ ಸೇಲ್ ಫೆಬ್ರವರಿ 17ರಂದು ಕೊನೆಯಾಗಲಿದ್ದು, ಸ್ಮಾರ್ಟ್‌ಟಿವಿ ಖರೀದಿದಾರರಿಗೆ ಇದೊಮದು ಉತ್ತಮ ಅವಕಾಶವಾಗಿದೆ. ಹಾಗಾದರೆ, ಫ್ಲಿಪ್‌ಕಾರ್ಟ್ ಆಯೋಜಿಸಿರುವ ಈ ಟಿವಿ ಮಾರಾಟ ಮೇಳದಲ್ಲಿ ಯಾವೆಲ್ಲಾ ಸ್ಮಾರ್ಟ್‌ಟಿವಿಗಳ ಮೇಲೆ ಎಷ್ಟೆಷ್ಟು ಡಿಸ್ಕೌಂಟ್ಸ್ ನೀಡಲಾಗಿದೆ?, ಖರೀದಿಗೆ ಯಾವ ಸ್ಮಾರ್ಟ್‌ಟಿವಿ ಬೆಸ್ಟ್ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

   
 
ಹೆಲ್ತ್