Back
Home » ಇತ್ತೀಚಿನ
ಟ್ರಾಯ್ ನಿಯಾಮವಳಿಗಳ ಎಫೆಕ್ಟ್ – ಟಿವಿ ಬಿಲ್ ನಲ್ಲಿ ಕಡಿತ
Gizbot | 16th Feb, 2019 03:01 PM
 • ಮಾಸಿಕ ಡಿಟಿಹೆಚ್ ಬಿಲ್

  ಇದೇ ಕಾರಣಕ್ಕೆ ಗ್ರಾಹಕರಿಗೆ ಕಷ್ಟವಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಟಾಟಾ ಸ್ಕೈ ಮತ್ತು ಸನ್ ಡೈರೆಕ್ಟ್ ನೆಟ್ ವರ್ಕ್ ಚಾರ್ಜಸ್ ನ್ನು ಹಾಕುವುದಿಲ್ಲ ಹಾಗಾಗಿ ಮಾಸಿಕ ಡಿಟಿಹೆಚ್ ಬಿಲ್ ನ ಮೊತ್ತ ಕಡಿಮೆಯಾಗುತ್ತದೆ. ಸನ್ ಡೈರೆಕ್ಟ್ ತನ್ನೆಲ್ಲಾ ಚಾನಲ್ ಗಳಿಗೆ NCF ಚಾರ್ಜಸ್ ನ್ನು ಬಿಡುತ್ತಿದೆ. ಅಂದರೆ ಚಂದಾದಾರರಿಗೆ ಎಲ್ಲಾ ಫ್ರೀ ಟು ಏರ್ (free to air (FTA)) ಚಾನಲ್ ಗಳು ಕೇವಲ Rs 153 (Rs 130 fee + 18 % GST) ಕ್ಕೆ ಲಭ್ಯವಾಗುತ್ತದೆ ಎಂದು ಟೆಲಿಕಾಂಟಾಕ್ ನ ವರದಿಯೊಂದು ತಿಳಿಸಿದೆ.


 • ಡಿಟಿಹೆಚ್ ಆಪರೇಟರ್

  ಇತರೆ ಡಿಟಿಹೆಚ್ ಆಪರೇಟರ್ ಗಳು 25 ಚಾನಲ್ ಗಳಿಗೆ 20 ರುಪಾಯಿಯನ್ನು ಚಾರ್ಜ್ ಮಾಡುತ್ತದೆ ಮತ್ತು ಸನ್ ಡೈರೆಕ್ಟ್ ನಲ್ಲಿ ನೀವು 100 FTA ಚಾನಲ್ ಗಳನ್ನು ಆಯ್ಕೆ ಮಾಡಿಕೊಂಡರೆ 10 ಪಾವತಿ ಚಾನಲ್ ಗಳು ಕೇವಲ 5 ರುಪಾಯಿ ಗೆ ಸಿಗುತ್ತದೆ. ಅಂದರೆ ಒಟ್ಟಾರೆ 203 ರುಪಾಯಿಗೆ ಲಭ್ಯವಾಗುತ್ತದೆ.

  ಅಂದರೆ ರುಪಾಯಿ 153 ರ FTA ಚಾನಲ್ ಗಳು ಮತ್ತು 10 ಪಾವತಿ ಚಾನಲ್ ಗಳಿಗೆ 50 ರುಪಾಯಿ ಪಾವತಿ ಇರುತ್ತದೆ. ಈ ಮೊದಲು ಇದೇ ಚಾನಲ್ ಗಳನ್ನು ನೀವು 223 ರುಪಾಯಿಗೆ ಖರೀದಿಸಬೇಕಾಗುತ್ತಿತ್ತು.


 • ಚಾನಲ್ ಗಳ ಬೆಲೆ

  ಕೆಲವು ಚಾನಲ್ ಗಳ ಬೆಲೆ 2 ರುಪಾಯಿ ಆದರೆ ಇನ್ನು ಕೆಲವು ಚಾನಲ್ ಗಳ ಬೆಲೆ ಕೇವಲ 5 ರುಪಾಯಿ ಇದೆ. ಕೆಲವು ಚಾನಲ್ ಗಳನ್ನು ನೀವು ವೀಕ್ಷಿಸಬೇಕು ಎಂದರೆ 19 ರುಪಾಯಿವರೆಗೂ ಕೂಡ ಪಾವತಿ ಮಾಡಬೇಕಾಗುತ್ತದೆ. ಸನ್ ಡೈರೆಕ್ಟ್ ನಲ್ಲಿ ಈ ಪ್ಯಾಕ್ ಗಳು ಕೂಡ ಬದಲಾಗುತ್ತಿದೆ. ಕನ್ನಡ DPO ಪ್ಯಾಕ್ 2 207 ಚಾನಲ್ ಗಳನ್ನು ಕೇವಲ 224 ರುಪಾಯಿ ಮಾಸಿಕ ಪಾವತಿಯಲ್ಲಿ ನೀಡುತ್ತದೆ ಜೊತೆಗೆ ಟ್ಯಾಕ್ಸ್ ಇರುತ್ತದೆ. ಇದೇ ರಾತಿ ಇತರೆ ಪ್ಯಾಕ್ ಗಳನ್ನೂ ಕೂಡ ನೀವು ಆಯ್ಕೆ ಮಾಡಿಕೊಳ್ಳಬಹುದು.

  ಇದೇ ರೀತಿ ಟಾಟಾ ಸ್ಕೈ ಕೂಡ ಆಫರ್ ನೀಡಿದೆ ಆದರೆ ಸನ್ ಡೈರೆಕ್ಟ್ ನಂತಲ್ಲ ಸ್ವಲ್ಪ ವಿಭಿನ್ನವಾಗಿದೆ. ಇದು ಆಯ್ಕೆ ಮಾಡಿದ ಚಾನಲ್ ಗಳ NCF ಪಡೆಯುವುದಿಲ್ಲ. 213 ಚಾನಲ್ ಗಳು 882 ರುಪಾಯಿಗೆ ಲಭ್ಯವಾಗುತ್ತಿತ್ತು ಆದರೆ ಇದೀಗ ಕೇವಲ 867 ರುಪಾಯಿಗೆ ಸಿಗುತ್ತದೆ. ಆದರೆ ಇದೊಂದು ದೊಡ್ಡ ವ್ಯತ್ಯಾಸದಂತೆ ಕಾಣಿಸದೇ ಇದ್ದರೂ ಸ್ವಲ್ಪ ಹಣ ಉಳಿತಾಯಕ್ಕೆ ನೆರವಾಗುತ್ತದೆ ಅಷ್ಟೇ.

  ಡಿಟಿಹೆಚ್ ಆಪರೇಟರ್ ಗಳು ಕೆಲವು ಕೋಂಬೋ ಆಫರ್ ಮತ್ತು ಆಡ್-ಆನ್ ಪ್ಯಾಕ್ ಗಳನ್ನು ಕೂಡ ಅತೀ ಕಡಿಮೆ ಬೆಲೆಗೆ ಅಂದರೆ ಕೇವಲ 5 ರುಪಾಯಿಗೆ ಆರಂಭಿಸಿದೆ. ಅದರಲ್ಲಿ ನಿಮಗೆ 9 SD ಚಾನಲ್ ಗಳು ಸಿಗುತ್ತದೆ. ರುಪಾಯಿ 87 ಕ್ಕೆ 7 ಪ್ರೀಮಿಂ HD ಚಾನಲ್ ಗಳು ಸಿಗುತ್ತದೆ.
ಟ್ರಾಯ್ ಇತ್ತೀಚೆಗೆ ಹೊಸದಾಗಿ ಕೇಬಲ್ ಮತ್ತು ಡಿಟಿಹೆಚ್ ಆಪರೇಟರ್ ಗಳಿಗೆ ಫ್ರೇಮ್ ವರ್ಕ್ ನ್ನು ಪರಿಚಯಿಸಿದೆ. ಇದಾದ ನಂತರ ಚಂದಾದಾರರು ತಾವು ನೋಡಲು ಇಚ್ಛಿಸುವ ಚಾನಲ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಅವರು ಆಯ್ಕೆ ಮಾಡಿಕೊಂಡ ಚಾನಲ್ ಗಳಿಗೆ ಮಾತ್ರವೇ ಪಾವತಿ ಮಾಡಬೇಕಾಗುತ್ತದೆ.

ಖಂಡಿತ ಈ ಐಡಿಯಾ ಉತ್ತಮವಾದದ್ದೇ. ಆದರೆ ಅದನ್ನು ಜಾರಿಗೆ ತರುವ ವಿಚಾರದಲ್ಲಿ ಹಲವು ಮಂದಿಗೆ ಇನ್ನೂ ಕೂಡ ಕೆಲವು ಗೊಂದಲಗಳಿವೆ. ಹೊಸದಾಗಿ ಪರಿಚಯಿಸಲಾಗಿರುವ ಡಿಟಿಹೆಚ್ ನಿಯಮಾವಳಿಗಳ ನಂತರ ಮಾಸಿಕ ಬಿಲ್ ಪಾವತಿ ಇಲ್ಲವಾಗುತ್ತದೆ ಮತ್ತು NCF (network capacity fee) ಇರುತ್ತದೆ. ಆದರೆ ಇದರ ಒಟ್ಟಾರೆ ಮೊತ್ತ ಸದ್ಯದ ಪಾವತಿ ಮೊತ್ತಕ್ಕಿಂತ ಹೆಚ್ಚಾಗುತ್ತದೆ.

   
 
ಹೆಲ್ತ್