Back
Home » ಇತ್ತೀಚಿನ
ಪ್ರಮುಖ ದತ್ತಾಂಶ ಸಂಗ್ರಹಕ್ಕೆ 'ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್‌'ಗಳೇ ಬೆಸ್ಟ್!
Gizbot | 17th Feb, 2019 12:05 PM

ಪ್ರಸ್ತುತ ಎಲ್ಲ ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯುತ್ತಮ ಆಂತರೀಕ ಸಂಗ್ರಹ ಸಾಮರ್ಥ್ಯದ ನೀಡುತ್ತಿದ್ದರು ಕೆಲವೊಮ್ಮೆ ಇನ್ನೂ ಹೆಚ್ಚಿನ ಆಂತರಿಕ ಸಂಗ್ರಹ ಸಾಮರ್ಥ್ಯದ ಅಗತ್ಯತೆ ಕಂಡು ಬರುತ್ತದೆ. ಅದಕ್ಕಾಗಿ ಎಸ್‌ಡಿ ಕಾರ್ಡ್‌ ಮೂಲಕ ‌ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶವನ್ನು ನೀಡಲಾಗುತ್ತದೆ. ಆದರೆ ಈ ಎಸ್‌ಡಿ ಕಾರ್ಡ್‌ನಲ್ಲಿ ಪ್ರಮುಖ ದತ್ತಾಂಶಗಳ ಸಂಗ್ರಹ ಸುರಕ್ಷಿತವಲ್ಲ ಎಂದು ಬಹುತೇಕರು ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್‌ ಬಳಸುತ್ತಾರೆ.

ಹೌದು, ಎಸ್‌ಡಿ ಕಾರ್ಡ್‌ನಲ್ಲಿ ಶೇಖರಿಸುವ ಪ್ರಮುಖ ದತ್ತಾಂಶಗಳು ಅನೇಕ ಕಾರಣಗಳಿಗಾಗಿ ನಾಶವಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್ ನಲ್ಲಿ ದತ್ತಾಂಶಗಳನ್ನು ಸಂಗ್ರಹಿಸಿಡುತ್ತಾರೆ. ಈ ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್‌ಗಳು ದತ್ತಾಂಶ ಸಂಗ್ರಹಕ ಸಾಧನವಾಗಳಾಗಿದ್ದು, ವಿವಿಧ ಶೇಖರಣಾ ಸಾಮರ್ಥ್ಯದಲ್ಲಿ ಮತ್ತು ತರಹೇವಾರಿ ಮಾದರಿಗಳಲ್ಲಿ ದೊರೆಯುತ್ತವೆ. ಇವುಗಳಲ್ಲಿ ಮುಖ್ಯವಾದ ದತ್ತಾಂಶಗಳನ್ನು ಸಂಗ್ರಹಿಸಿ ಇಡಬಹುದಾಗಿದೆ.

ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್ ಶೇಖರಣಾ ಸಾಧನಗಳು ಫೋಟೋ, ಸಿನಿಮಾ, jpg, pdf, word, excell, documents, ಸೇರಿದಂತೆ ಎಲ್ಲ ಮಾದರಿಯ ದತ್ತಾಂಶಗಳನ್ನು ಸುರಕ್ಷಿತವಾಗಿ ಶೇಖರಿಸಬಹುದಾಗಿದೆ. ಹಾರ್ಡ್‌ಡಿಸ್ಕ್‌ಗಳು ಹಗುರವಾಗಿದ್ದು, ನಿಮ್ಮೊಂದಿಗೆ ಕೊಂಡೊಯ್ಯಬಹುದು. ಹಾಗಾದರೇ ನಾವು ಈ ಕೆಳಗೆ ಕೆಲವು 1TB ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್‌ ಸಾಧನಗಳ ಬಗ್ಗೆ ಕಿರು ಮಾಹಿತಿ ನೀಡಲಾಗಿದ್ದು, ಅವುಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

   
 
ಹೆಲ್ತ್