Back
Home » ಇತ್ತೀಚಿನ
ಪಾಕಿಸ್ತಾನಕ್ಕೆ ನರಕ ತೋರಿಸುತ್ತಿರುವ ಟೆಕ್ಕಿ 'ಅಂಶುಲ್' ಈಗ ಭಾರತದ ರಿಯಲ್ ಹೀರೋ!
Gizbot | 18th Feb, 2019 06:19 PM
 • ಯಾರು ಈ 'ಅಂಶುಲ್ ಸಕ್ಸೇನಾ'?

  ಭಾರತೀಯ ಸೈನಿಕರ ಮೇಲೆ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುತ್ತಿರುವ 'ಅಂಶುಲ್ ಸಕ್ಸೇನಾ' ಅವರು ಭಾರತದ ಹೆಮ್ಮೆಯ ಎಥಿಕಲ್ ಹ್ಯಾಕರ್ ಆಗಿದ್ದಾರೆ. ಅಂದರೆ, ಕಂಪ್ಯೂಟರ್ ಮತ್ತು ನೆಟ್‌ವರ್ಕಿಂಗ್ ತಂತ್ರಜ್ಞಾನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಇವರು ಸೈನಿಕರ ದಾಳಿಯ ನಂತರ ಪಾಕ್ ವಿರುದ್ಧ ಸೈಬರ್ ಯುದ್ಧ ನಡೆಸುತ್ತಿದ್ದಾರೆ. ಗುರುವಾರದಿಂದಲೇ ಇವರು ಕಾರ್ಯಪ್ರವೃತ್ತನಾಗಿದ್ದು, ಪಾಕಿಸ್ತಾನ ಸರಕಾರಕ್ಕೆ ಸಂಬಂಧಪಟ್ಟ ಕೆಲವು ಪ್ರಮುಖ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿದ್ದಾರೆ.


 • ಪಾಕಿಸ್ತಾನದ ವೆಬ್‌ಸೈಟ್‌ಗಳು ಹ್ಯಾಕ್

  ಪಾಕಿಸ್ತಾನದ ಇಂಟರ್‌ನೆಟ್ ಸುರಕ್ಷತೆಯನ್ನು ಭೇದಿಸುತ್ತಿರುವ 'ಅಂಶುಲ್ ಸಕ್ಸೇನಾ' ಅವರು, ಪಾಕಿಸ್ತಾನದ ಹಲವು ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿದ್ದಾರೆ. ಪಾಕಿಸ್ತಾನದ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವ ಜತೆಗೆ ಸರಕಾರಕ್ಕೆ ಸಂಬಂಧಪಟ್ಟ ಕೆಲವೊಂದು ಪ್ರಮುಖ ದಾಖಲೆಗಳು ಕೂಡ ಅಂಶುಲ್ ಕೈಸೇರಿವೆ. 'ಅಂಶುಲ್ ಸಕ್ಸೇನಾ' ಹ್ಯಾಕಿಂಗ್‌ಗೆ ಬೆಚ್ಚಿಬಿದ್ದಿರುವ ಆಗಿರುವ ವೆಬ್‌ಸೈಟ್ ಸರಿಪಡಿಸಲು ಪಾಕಿಸ್ತಾನ ಹೆಣಗಾಡುತ್ತಿದೆ.


 • ವಿದೇಶಾಂಗ ಸಚಿವಾಲಯದ ವೆಬ್‌ಸೈಟ್ ಕೂಡ ಹ್ಯಾಕ್!

  ಪಾಕಿಸ್ತಾನದ ಇಂಟರ್‌ನೆಟ್ ಸುರಕ್ಷತೆಯನ್ನು ಭೇದಿಸುತ್ತಿರುವ 'ಅಂಶುಲ್ ಸಕ್ಸೇನಾ' ಅವರು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಅಧಿಕೃತ ವೆಬ್ಸೈಟ್ ಶನಿವಾರದಂದು ಹ್ಯಾಕ್ ಮಾಡಿದ್ದಾರೆ. ಇದನ್ನು ಖಚಿತಪಡಿಸಿರುವ ಪಾಕಿಸ್ತಾನ ದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಲ್, ಹಲವಾರು ರಾಷ್ಟ್ರಗಳ ಬಳಕೆದಾರರಿಂದ ಪ್ರವೇಶಿಸಲಾಗದ ಸೈಟ್ ಬಗ್ಗೆ ದೂರುಗಳನ್ನು ಸ್ವೀಕರಿಸಲಾಗಿದೆ ಎಂದಿದ್ದಾನೆ. ಈ ಸೈಬರ್ ದಾಳಿಯು ಭಾರತದಿಂದ ಆಗಿದೆ ಎಂದು ಪತ್ರಿಕೆಗಳಿಗೆ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.


 • ದೇಶದ್ರೋಹಿಗಳಿಗೆ ಚಳಿಬಿಡಿಸಿದ 'ಅಂಶುಲ್ ಸಕ್ಸೇನಾ'

  ಪಾಕಿಸ್ತಾನಕ್ಕೆ ನರಕ ತೋರಿಸುತ್ತಿರುವ 'ಅಂಶುಲ್ ಸಕ್ಸೇನಾ' ಅವರು, ಅಷ್ಟೇ ಅಲ್ಲದೆ ನಮ್ಮ ಯೋಧರ ಸಾವನ್ನು ಸಂಭ್ರಮಿಸಿ ಫೇಸ್‌ಬುಕ್ ಪೋಸ್ಟ್‌ ಮತ್ತು ಟ್ವೀಟ್ ಮಾಡಿದವರ ಖಾತೆಯನ್ನು ಹ್ಯಾಕ್ ಮಾಡುತ್ತಿದ್ದಾರೆ. ಯೋಧರ ಸಾವನ್ನು ಸಂಭ್ರಮಿಸಿದ ದ್ರೋಹಿಗಳ ಜಾಲತಾಣಗಳ ಖಾತೆ ವಿವರವನ್ನು ಪೊಲೀಸ್ ಮತ್ತು ಸಂಬಂಧಿತ ಇಲಾಖೆಗೆ ನೀಡುತ್ತಿದ್ದಾರೆ. ಇದರಿಂದ ಖಾತೆದಾರರ ಮಾಹಿತಿ ಸುಲಭದಲ್ಲಿ ದೊರೆತಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.


 • ಬೀದಿಗೆ ಬಂದ ದೇಶದ್ರೀಹಿಗಳು!

  ಯೋಧರ ಸಾವನ್ನು ಸಂಭ್ರಮಿಸಿದ ದೇಶ ದ್ರೋಹಿಗಳ ಜಾಲತಾಣಗಳ ಖಾತೆ ವಿವರವನ್ನು ಪೊಲೀಸ್ ಮತ್ತು ಸಂಬಂಧಿತ ಇಲಾಖೆಗೆ ನೀಡುತ್ತಿರುವುರಿಂದ ಹಲವು ದೇಶ ದ್ರೋಹಿಗಳು ಈಗ ಬೀದಿಗೆ ಬಂದಿದ್ದಾರೆ. 'ಅಂಶುಲ್ ಸಕ್ಸೇನಾ' ಅವರ ಕಾರ್ಯಚರಣೆಯಿಂದ 15 ಕ್ಕೂ ಹೆಚ್ಚು ದೇಶ ದ್ರೋಹಿಗಳು ಕೆಲಸಕಳೆದುಕೊಂಡಿದ್ದಾರೆ. ಕಾಲೇಜುಗಳಲ್ಲಿ ಓದುತ್ತಿದ್ದವರಿಗೂ ಸಸ್ಪೆಂಡ್ ಆಗುವಂತೆ ಮಾಡಿದ್ದಾರೆ. ಮೂರು ದಿನಗಳಿಮದ ಒಂದು ಕ್ಷಣವೂ ಬಿಡುವಿಲ್ಲದಂತೆ ಈ ಕೆಲಸವನ್ನು ಮಾಡುತ್ತಿದ್ದಾರೆ.


 • ಸಕ್ಸೇನಾ ಅವರ ಕಾಲು ಹಿಡಿಯುತ್ತಿದ್ದಾರೆ ದೇಶದ್ರೋಹಿಗಳು!

  ಸಕ್ಸೇನಾ ಅವರು ದೇಶ ದ್ರೋಹಿಗಳ ಜಾಲತಾಣಗಳ ಖಾತೆ ವಿವರವನ್ನು ಪೊಲೀಸ್ ಮತ್ತು ಸಂಬಂಧಿತ ಇಲಾಖೆಗೆ ನೀಡುತ್ತಿರುವುದಕ್ಕೆ ಬೆಚ್ಚಿಬಿದ್ದಿರುವ ದೇಶದ್ರೋಹಿಗಳು ಈಗ ಸಕ್ಸೇನಾ ಅವರ ಕಾಲು ಹಿಡಿಯುತ್ತಿದ್ದಾರೆ. ತಮ್ಮ ಖಾತೆ ಹ್ಯಾಕ್ ಆದ ನಂತರ ಸಕ್ಸೇನಾ ಅವರ ಜೊತೆ ಸಂಭಾಷಣೆ ನಡೆಸುತ್ತಿರುವ ಕೆಲವರು ತಪ್ಪಾಯ್ತು ಬಿಟ್ಟುಬಿಡಿ ಎಂದು ಗೋಗರೆಯುತ್ತಿದ್ದಾರೆ. ಆದರೆ, ಇದಕ್ಕೆ ಸೊಪ್ಪುಹಾಕದ ಸಕ್ಸೇನಾ ಅವರು ದೇಶದ್ರೋಹಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ.


 • ದೇಶದ್ರೋಹಿ ಯಾರೊಬ್ಬರನ್ನೂ ಬಿಡೋದಿಲ್ಲ

  ಉಗ್ರರ ಪರವಾಗಿ, ಸಿಆರ್ಪಿಎಫ್ ಜವಾನರ ಬಗ್ಗೆ ತಮಾಷೆಯಾಗಿ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಸಾಫ್ಟ್‌ವೇರ್ ಉದ್ಯೋಗಿಯಿಂದ ಹಿಡಿದು ಕಾಲೇಜು ಪ್ರಾಂಶುಪಾಲರಾದಿಯಾಗಿ ವಿದ್ಯಾರ್ಥಿಗಳು ಎಲ್ಲರೂ ಸಕ್ಸೇನಾ ಅವರ ಬಲೆಗೆ ಬಿದ್ದು ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಈ ಬಗ್ಗೆ ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ಸಕ್ಸೇನಾ, ನೀವು ನನ್ನ ಸ್ನೈಪರ್ ನ ಗುರಿಯಿಂದ ತಪ್ಪಿಸಿಕೊಳ್ಳಲು‌ ಸಾಧ್ಯವಿಲ್ಲ, ದೇಶದ್ರೋಹಿ ಯಾರೊಬ್ಬರನ್ನೂ ಬಿಡೋದಿಲ್ಲ ಎಂದು ಅಬ್ಬರಿಸಿದ್ದಾರೆ. ಇವರ ಈ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ, ಭಾರೀ ಬೆಂಬಲ ವ್ಯಕ್ತವಾಗಿದೆ.


 • ಹೇಳುವುದು

  ಎಥಿಕಲ್ ಹ್ಯಾಕರ್ ಆಗಿರುವ ಅಂಶುಲ್ ಈ ಕುರಿತು ಟ್ವೀಟ್ ಮತ್ತು ಫೇಸ್‌ಬುಕ್ ಪೋಸ್ಟ್‌ ಮಾಡಿದ್ದು, ಪಾಕಿಸ್ತಾನ ವಿರುದ್ಧ ಯುದ್ಧಭೂಮಿಯಲ್ಲಿ ಸೈನಿಕನಂತೆ ನಾನು ಹೋರಾಡಲು ಸಾಧ್ಯವಾಗುತ್ತಿಲ್ಲ. ಆದರೆ ನಮ್ಮ ಸೈನಿಕರ ಮಾರಣಹೋಮಕ್ಕೆ ತಕ್ಕ ಪ್ರತೀಕಾರ ಆಗಲೇಬೇಕಿದೆ. ಅದಕ್ಕಾಗಿ ಇದು ನನ್ನ ಸಣ್ಣ ಪ್ರಯತ್ನ. ಈಗಷ್ಟೇ ಆರಂಭ, ಪಾಪಿ ಪಾಕಿಸ್ತಾನಕ್ಕೆ ಇನ್ನೂ ಇದೆ. ನನ್ನ ಫೇಸ್‌ಬುಕ್ ಪೇಜ್ ಅನ್ನು ಬ್ಲಾಕ್ ಮಾಡಿಸಲು ದ್ರೋಹಿಗಳು ಪ್ರಯತ್ನಿಸಿದ್ದು ನಿಮ್ಮ ಬೆಂಬಲ ಬೇಕು ಎಂದು ಭಾರತೀಯರನ್ನು ಕೇಳಿಕೊಳ್ಳುತ್ತಿದ್ದಾರೆ.


 • ಸಕ್ಸೇನಾಗೆ ಭಾರೀ ಬೆಂಬಲ!

  ಸಾಮಾಜಿಕ‌ ಜಾಲತಾಣಗಳಲ್ಲಿ ಪಾಕಿಸ್ತಾನ ಪರವಾದ, ಉಗ್ರ ಪರವಾದ ಸ್ಟೇಟಸ್, ಪೋಸ್ಟ್ ಹಾಕಿದ್ದ ವ್ಯಕ್ತಿಗಳನ್ನು ಹುಡುಕಿ ಹುಡುಕಿ ಸರಿಯಾದ ಪಾಠ ಕಲಿಸುತ್ತಿರುವ ಅಂಶುಲ್ ಅವರ ಪರಿಶ್ರಮಕ್ಕೆ ಭಾರತೀಯರು ಭಾರೀ ಬೆಂಬಲ ನೀಡುತ್ತಿದ್ದಾರೆ. ಅಂಶುಲ್ ಸಕ್ಸೇನಾ ಅವರು ತೆರೆದಿರುವ ಪೇಜ್‌ ಅನ್ನು ಕೇವಲ 3 ದಿನಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡುವ ಮೂಲಕ ಅವರ ಬೆಂಬಲಕ್ಕೆ ನಿಂತಿದ್ದಾರೆ. ದ್ರೋಹಿಗಳು ಪೇಜ್ ಬಗ್ಗೆ ಕೆಟ್ಟ ರಿಪೋರ್ಟ್ ಮಾಡುತ್ತಿರುವುದರಿಂದ ಭಾರತಿಯರು ಪೇಜ್‌ ಬಗ್ಗೆ ಒಳ್ಳೆಯ ರಿಪೋರ್ಟ್ ಮಾಡುತ್ತಿದ್ದಾರೆ.


 • ಸರಿಯಾಗಿಯೇ ಪಾಠ ಕಲಿಸಿದ್ದಾರೆ

  ಭಾರತೀಯರಿಗೆ ಪುಲ್ವಾಮ ಉಗ್ರ ದಾಳಿ ಭಾರೀ ಹೊಡೆತ ನೀಡಿದೆ‌ ನಿಜ. ನಮ್ಮ ಅತ್ಯಮೂಲ್ಯ ಯೋಧರ ಬಲಿದಾನವಾಗಿದೆ. ದೇಶಕ್ಕೆ ದೇಶವೇ ಮರುಗಿದೆ. ಪ್ರತೀಕಾರದ ಕೂಗು ಭಾರತದ ಮೂಲೆ ಮೂಲೆಯಿಂದ ಕೇಳಿ ಬರುತ್ತಿದೆ. ಈ ಮಧ್ಯೆ ನಮ್ಮೊಳಗಿನ ಒಂದಷ್ಟು ಜನ ಉಗ್ರರ ಪರವಾಗಿ ಮಾತನಾಡುತ್ತಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರರ ಪರ ಕನಿಕರ ತೋರಿಸಿ ನಮ್ಮ ಸೈನಿಕರ ಮಹಾಬಲಿದಾನವನ್ನು ಅಣಕಿಸಿದ ಜನಗಳಿಗೆ ವೀರ ಯುವಕನೊಬ್ಬ ಸರಿಯಾಗಿಯೇ ಪಾಠ ಕಲಿಸಿದ್ದಾರೆ, ಪಾಕಿಸ್ತಾನಕ್ಕೂ ಬಿಸಿ ಮುಟ್ಟಿಸಿದ್ದಾನೆ. ಇಂತಹ ಟೆಕ್ಕಿಗೆ ನಮ್ಮದೊಂದು ಸಲಾಮ್.!
ಪಾಪಿ ಪಾಕಿಸ್ತಾನ ಸಾಕಿ ಸಲಹಿದ ಉಗ್ರರು ಭಾರತೀಯ ಸೈನಿಕರ ಮೇಲೆ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎನ್ನುವ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ನಮ್ಮ ಸೈನಿಕರ ಮಾರಣಹೋಮಕ್ಕೆ ತಕ್ಕ ಪ್ರತೀಕಾರ ಆಗಲೇಬೇಕು ಎಂದು ಪ್ರತಿಯೋರ್ವ ಭಾರತೀಯ ಕೂಡ ಅವಕಾಶಗಳಿಗಾಗಿ ಕಾಯುತ್ತಿದ್ದಾನೆ. ಅಂತಹ ಓರ್ವ ಭಾರತೀಯ ಅಂಶುಲ್ ಸಕ್ಸೇನಾ ಎಂಬುವವರು ಸದ್ದಿಲ್ಲದೇ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ದಾಳಿ ನಡೆಸಿದ್ದಾರೆ.

ಹೌದು, ಪಾಕಿಸ್ತಾನ ವಿರುದ್ಧ ಯುದ್ಧಭೂಮಿಯಲ್ಲಿ ಸೈನಿಕನಂತೆ ನಾನು ಹೋರಾಡಲು ಸಾಧ್ಯವಾಗುತ್ತಿಲ್ಲ. ಆದರೆ ನಮ್ಮ ಸೈನಿಕರ ಮಾರಣಹೋಮಕ್ಕೆ ತಕ್ಕ ಪ್ರತೀಕಾರ ಆಗಲೇಬೇಕಿದೆ. ಅದಕ್ಕಾಗಿ ಇದು ನನ್ನ ಸಣ್ಣ ಪ್ರಯತ್ನ. ಈಗಷ್ಟೇ ಆರಂಭ, ಪಾಪಿ ಪಾಕಿಸ್ತಾನಕ್ಕೆ ಇನ್ನೂ ಇದೆ ಎಂದು ಹೇಳಿ ಪಾಕಿಸ್ತಾನವನ್ನು ಕಾಡುತ್ತಿರುವ ಭಾರತದ ಎಥಿಕಲ್ ಹ್ಯಾಕರ್ ಆಗಿರುವ 'ಅಂಶುಲ್ ಸಕ್ಸೇನಾ' ಎಂಬುವವರು ಈಗ ಕೋಟ್ಯಾಂತರ ಭಾರತೀಯರ ಹೀರೋ ಆಗಿ ಹೊರಹೊಮ್ಮಿದ್ದಾರೆ.

ಸೈನಿಕರ ಮೇಲೆ ಉಗ್ರ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುತ್ತಿರುವ ಸಕ್ಸೇನಾ, ಜೊತೆಗೆ ನಮ್ಮ ಯೋಧರ ಸಾವನ್ನು ಸಂಭ್ರಮಿಸಿ ಫೇಸ್‌ಬುಕ್ ಪೋಸ್ಟ್‌ ಮತ್ತು ಟ್ವೀಟ್ ಮಾಡಿದವರ ಖಾತೆಗಳನ್ನು ಕೂಡ ಹ್ಯಾಕ್ ಮಾಡಿ ಅವರಿಗೂ ಏಟು ನೀಡುತ್ತಿದ್ದಾರೆ. ಹಾಗಾಗಿ, ಇಂದಿನ ಲೇಖನದಲ್ಲಿ ಓರ್ವ ಯಶಸ್ವಿ ಭಾರತೀಯ ಎಥಿಕಲ್ ಹ್ಯಾಕರ್ ಆಗಿರುವ 'ಅಂಶುಲ್ ಸಕ್ಸೇನಾ' ಅವರು ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪೂರ್ತಿ ಮಾಹಿತಿ ನೀಡುತ್ತಿದ್ದೇನೆ.

   
 
ಹೆಲ್ತ್