Back
Home » ಇತ್ತೀಚಿನ
'ರಿಯಲ್ ಮಿ ಸಿ1' ಫೋನ್ ಖರೀದಿಗೆ ಇದಕ್ಕಿಂತ ಬೆಸ್ಟ್ ಟೈಮ್ ಮತ್ತೆ ಸಿಗೊಲ್ಲ!!
Gizbot | 19th Feb, 2019 10:30 AM
 • ವಿನ್ಯಾಸ

  ರಿಯಲ್ ಮಿ C1 ಸ್ಮಾರ್ಟ್‌ಫೋನ್‌ ಓಷಿಯನ್ ಬ್ಲೂ ಮತ್ತು ಡೀಪ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಾಗಲಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹೊಂದಿದ್ದು, ಮುಂಭಾಗದದಲ್ಲಿ ಐಫೋನ್ X ಮಾದರಿಯ ನೋಚ್‌ನಲ್ಲಿ ಸೆಲ್ಫಿ ಕ್ಯಾಮೆರಾ ಹೊಂದಿದ್ದು, AI ಫೇಸ್‌ ಅನ್‌ಲಾಕ್ ಫೀಚರ್‌ ಇದೆ. ಯುನಿಬಾಡಿ ಗ್ಲಾಸ್ ವಿನ್ಯಾಸ ಹೊಂದಿದ್ದು, ಬೆಜಲ್‌ ಲೆಸ್‌ ಡಿಸ್‌ಪ್ಲೇ ಹೊಂದಿದೆ.


 • ಡಿಸ್‌ಪ್ಲೇ

  ರಿಯಲ್ ಮಿ C1 ಸ್ಮಾರ್ಟ್‌ಫೋನ್‌ 6.2 ಇಂಚಿನ HD+ ಗುಣಮಟ್ಟದ 19:9 ಅನುಪಾತನದ ಡಿಸ್‌ಪ್ಲೇ ಹೊಂದಿದೆ. ಐಫೋನ್ X ಮಾದರಿಯ ನೋಚ್ ಡಿಸ್‌ಪ್ಲೇ ಹಾಗೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ. ಇದು ಆಂಡ್ರಾಯ್ಡ್ 8.1 ಓರಿಯೋ ಬೆಂಬಲಿತ ColorOS 5.1 ನಿಂದ ಕಾರ್ಯನಿರ್ವಹಿಸುತ್ತಿದ್ದು, ಆಂಡ್ರಾಯ್ಡ್ 9.0 ಪೈ ಅಪ್‌ಡೇಟ್ ದೊರೆಯಲಿದೆ.


 • ಪ್ರೊಸೆಸರ್

  ರಿಯಲ್ ಮಿ C1 ನಲ್ಲಿ ಒಕ್ಟಾಕೋರ್‌ನ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 450 ಪ್ರೊಸೆಸರ್ ಅಳವಡಿಸಲಾಗಿದೆ. ಆಡ್ರಿನೋ 506 GPU ಕೂಡ ಕಾಣಬಹುದಾಗಿದ್ದು, ಗೇಮಿಂಗ್‌ ಮತ್ತೀತರ ಮಲ್ಟಿಮೀಡಿಯಾ ಅನುಭವಗಳನ್ನು ಉತ್ತಮಗೊಳಿಸಿತ್ತದೆ. ರಿಯಲ್‌ಮಿ C1 ನ ವೇಗ 1.8GHz ಇದ್ದು, ಇಷ್ಟು ಕಡಿಮೆ ಬೆಲೆಯಲ್ಲಿ ದೊರೆಯುವ ಬೆಸ್ಟ್‌ ಸ್ಮಾರ್ಟ್‌ಫೋನ್‌ ಆಗಿದೆ.


 • ಮೆಮೊರಿ

  ಈ ಮೊದಲು ರಿಯಲ್ ಮಿ C1 ಒಂದೇ ಆವೃತ್ತಿಯಲ್ಲಿ ದೊರೆಯುತ್ತಿತ್ತು, 2 GB RAM ಮತ್ತು 16 GB ಇಂಟರ್ನಲ್ ಮೆಮೊರಿಯೊಂದಿಗೆ ಲಭ್ಯವಿದ್ದ ಈ ಸ್ಮಾರ್ಟ್‌ಪೋನ್ ಇದೀಗ 3GB RAM ಮತ್ತು 32 GB ಮೆಮೊರಿಯ ಮಾದರಿಯಲ್ಲಿ ಕಾಣಿಸಿಕೊಂಡಿದೆ. ಎರಡೂ ಮಾದರಿಯ ಫೋನ್‌ಗಳ ಮೆಮೊರಿಯನ್ನು ಎಸ್‌ಡಿ ಕಾರ್ಡ್‌ ಮೂಲಕ 256 GBವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.


 • ಕ್ಯಾಮೆರಾ

  ರಿಯಲ್ ಮಿ C1ನಲ್ಲಿ ಅತಿ ಕಡಿಮೆ ಬೆಲೆಗೆ ಡ್ಯುಯಲ್‌ ಕ್ಯಾಮೆರಾ ನೀಡಿದ್ದು, ಹಿಂಭಾಗದಲ್ಲಿ 13 MP+2 MP ಲೆನ್ಸ್ ಅಳವಡಿಸಲಾಗಿದೆ. ಮುಂಭಾಗದಲ್ಲಿ 5 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, ಸೆಲ್ಫಿ ಕ್ಯಾಮೆರಾ AI ಬೆಂಬಲಿತವಾಗಿದ್ದು, ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ಕೃತಕ ಬುದ್ದಿಮತ್ತೆ ಆಧಾರಿತ ಕ್ಯಾಮೆರಾ ತಂತ್ರಜ್ಞಾನ ಅತ್ಯತ್ತಮವಾಗಿದೆ ಎಂದು ಹೇಳಬಹುದು.


 • ಬ್ಯಾಟರಿ ಮತ್ತು ಬೆಲೆ

  ರಿಯಲ್ ಮಿ C1 ಸ್ಮಾರ್ಟ್‌ಫೋನ್‌ 4230mAh ಬ್ಯಾಟರಿ ಹೊಂದಿದ್ದು. ಎರಡು ದಿನಗಳ ಕಾಲ ಬ್ಯಾಟರಿ ಲೈಫ್ ನೀಡುತ್ತದೆ. ಅಲ್ಲದೇ ಪವರ್ ಸೇವಿಂಗ್ ಮೋಡ್ ಇದ್ದು, ದೀರ್ಘ ಬ್ಯಾಟರಿ ಬಾಳಿಕೆಯನ್ನು ಕಾಣಬಹುದು. ಇನ್ನು 2 GB RAM ಮಾದರಿಯ ಫೋನ್ ಬೆಲೆ 6,999 ರೂ. ಗಳಾದರೆ, 3GB RAM ಮಾದರಿಯ ಸ್ಮಾರ್ಟ್‌ಫೋನ್ ಬೆಲೆಯು ಕೇವಲ 7,499 ರೂ.ಗಳಾಗಿವೆ.
ಭಾರತದ ಜನಪ್ರಿಯ ಆನ್​ಲೈನ್​ ಮಾರುಕಟ್ಟೆ ಪ್ಲಿಫ್​ಕಾರ್ಟ್​ನಲ್ಲಿ​ ಫೆಬ್ರವರಿ 19 ರಿಂದ 23ರ ತನಕ 'ಮೊಬೈಲ್​ ಬೊನಾಂಜಾ' ಸೇಲ್​ ಆಯೋಜನೆಯಾಗಿದ್ದು, ಈ ಸೇಲ್‌ನಲ್ಲಿ ಅತೀ ಕಡಿಮೆ ಅವಧಿಯಲ್ಲಿಯೇ ಭಾರೀ ಜನಪ್ರಿಯತೆ ಗಳಿಸಿರುವ 'ರಿಯಲ್ ಮಿ' ಸ್ಮಾರ್ಟ್‌ಫೋನ್‌ ಒಂದು ಅತ್ಯಂತ ಕಡಿಮೆ ಬೆಲೆಗೆ ದೊರೆಯುತ್ತಿದೆ. ಇತ್ತೀಚಿಗಷ್ಟೇ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ 'ರಿಯಲ್ ಮಿ ಸಿ 1' (2019) ಸ್ಮಾರ್ಟ್‌ಫೋನ್ ಅಪ್‌ಡೇಟ್‌ ಎಡಿಷನ್ ಇದೀಗ ಅತ್ಯಂತ ಕಡಿಮೆ ಬೆಲೆಗೆ ದೊರೆಯುತ್ತಿದೆ.

ಹೌದು, ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ ಆಗಿದ್ದರೂ ಅತ್ಯುತ್ತಮ ಫೀಚರ್ಸ್‌ಗಳಿಂದ ಭಾರೀ ಗಮನಸೆಳೆದಿದ್ದ 'ರಿಯಲ್ ಮಿ ಸಿ 1' ಸ್ಮಾರ್ಟ್‌ಫೋನ್ ಬೆಲೆ ಇದೀಗ 6,999 ರೂ.ಗಳಿಂದ ಶುರುವಾಗಿದೆ. ಮೊಬೈಲ್ ಮೇಲೆ 1000 ರೂ. ಬೆಲೆ ಕಡಿತವಾಗಿದ್ದು, ಇದರ ಜೊತೆಗೆ ಆಕ್ಸಿಸ್​ ಬ್ಯಾಂಕ್ ಬಳಕೆದಾರರು​ ಶೇ.10 ರಷ್ಟು ಇನ್‌ಸ್ಟಂಟ್ ಡಿಸ್ಕೌಂಟ್ ನೀಡುತ್ತಿರುವುದರಿಂದ 'ರಿಯಲ್ ಮಿ ಸಿ 1 ಸ್ಮಾರ್ಟ್‌ಫೋನ್ ಅತ್ಯಂತ ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿದೆ.

ಸ್ಯಾಮ್ಸಂಗ್​, ನೋಕಿಯಾ, ಆಸುಸ್​ ಮತ್ತು ಶಿಯೋಮಿ ಮೊಬೈಲ್ ಕಂಪೆನಿಗಳಿಗೆ ಸೆಡ್ಉ ಹೊಡೆಯುವಂತಹ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಇದಾಗಿದ್ದು, ಈಗಾಗಲೇ ರಿಯಲ್ ಮಿ ಸಿ 1' ಸ್ಮಾರ್ಟ್‌ಫೋನ್‌ ಭಾರತೀಯ ಗ್ರಾಹಕರನ್ನು ಆಕರ್ಷಿಸಿದೆ. ಹಾಗಾದರೆ, ಭಾರತೀಯ ಮಾರುಕಟ್ಟೆಯಲ್ಲಿ ಬಹುಬೇಗನೆ ಹೆಸರು ಗಳಿಸಿರುವ ರಿಯಲ್ ಮಿ ಸಿ 1' ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು?, ಸ್ಮಾರ್ಟ್‌ಫೋನ್ ಬೆಲೆಗಳು ಎಷ್ಟು ಎಂಬುದನ್ನು ಮುಂದೆ ಓದಿ ತಿಳಿಯಿರಿ.

   
 
ಹೆಲ್ತ್