Back
Home » ಆರೋಗ್ಯ
ಬಿಸಿ ಬಿಸಿ ಚಪಾತಿ ಮೇಲೆ ತುಪ್ಪ ಸವರಬೇಕೇ? ಬೇಡವೇ?
Boldsky | 19th Feb, 2019 10:37 AM
 • ತಂದೂರಿ ರೋಟಿ

  ನಮ್ಮ ತಾಯಂದಿರು ಮತ್ತು ಅಜ್ಜಿಯಂದಿರಿಗೆ ರೊಟ್ಟಿಯ ಮೇಲೆ ತುಪ್ಪವನ್ನು ಸವರಿ ಸೇವಿಸಿದರೆ ಆರೋಗ್ಯದ ಮೇಲೆ ಆಗುವ ಪರಿಣಾಮದ ಬಗ್ಗೆ ಅರಿವಿತ್ತು. ಆಹಾರ ತಜ್ಞರ ಪ್ರಕಾರ ತುಪ್ಪವನ್ನು ಸವರುವ ಮೂಲಕ ಚಪಾತಿಯ ಗ್ಲೈಸೆಮಿಕ್ ಗುಣಾಂಕವನ್ನು ಇಳಿಸಲು ಸಾಧ್ಯವಾಗುತ್ತದೆ. ಗ್ಲೈಸೆಮಿಕ್ ಗುಣಾಂಕ ಎಂದರೆ ಸೇವನೆಯ ಬಳಿಕ ಎಷ್ಟು ಕ್ಷಿಪ್ರವಾಗಿ ರಕ್ತಕ್ಕೆ ಬೆರೆಯುತ್ತದೆ ಎಂಬ ಅಳತೆಗೋಲು. ಇದು ಹೆಚ್ಚಿದ್ದಷ್ಟೂ ರಕ್ತಕ್ಕೆ ಅಷ್ಟೂ ಬೇಗನೇ ಲಭಿಸುತ್ತದೆ. ಹಾಗಾಗಿ ನಮ್ಮ ಆಹಾರದ ಗ್ಲೈಸೆಮಿಕ್ ಗುಣಾಂಕ ಕಡಿಮೆ ಮಟ್ಟದಲ್ಲಿಯೇ ಇರಬೇಕು. ಚಪಾತಿ, ತಂದೂರಿ ರೋಟಿಗಳ ಮೇಲೆ ಕೊಂಚ ತುಪ್ಪವನ್ನು ಸವರು ಮೂಲಕ ಈ ಆಹಾರ ಜೀರ್ಣಗೊಳ್ಳಲು ಕೊಂಚ ಹೆಚ್ಚಿನ ಸಮಯ ತೆಗೆದುಕೊಳ್ಳುವುದಲ್ಲದೇ ಹೆಚ್ಚಿನ ಹೊತ್ತು ಮೃದುವಾಗಿಯೇ ಇದ್ದು ಬೆಳಿಗ್ಗೆ ಮಾಡಿದ ಚಪಾತಿಗಳನ್ನು ಮಧ್ಯಾಹ್ನದ ಊಟದ ಸಮಯದಲ್ಲಿಯೂ ಸವಿಯಬಹುದು.


 • ಆಹಾರತಜ್ಞರು ವಿವರಿಸುವಂತೆ

  ಆಹಾರತಜ್ಞರು ವಿವರಿಸುವಂತೆ ಚಪಾತಿಯ ಮೇಲೆ ಕೊಂಚವೇ ತುಪ್ಪವನ್ನು ಸವರಬೇಕು. ಇತ್ತೀಚಿನ ಅಧ್ಯಯನದಲ್ಲಿ ವಿವರಿಸಿರುವ ಪ್ರಕಾರ ಪ್ರತಿ ಊಟದಲ್ಲಿ ಗರಿಷ್ಟ ನಾಲ್ಕು ದೊಡ್ಡ ಚಮಚದಷ್ಟು ಸಂತೃಪ್ತ ಕೊಬ್ಬುಗಳಿರಬೇಕು, ಇದರಲ್ಲಿ ಸುಮಾರು ಒಂದು ಶೇಖಡಾದಷ್ಟು ತುಪ್ಪದಂತಹ ಮೂಲದಿಂದ ಬಂದ ಕೊಬ್ಬಾಗಿರಬೇಕು. ಹಾಗಾಗಿ ಚಪಾತಿಯ ಮೇಲೆ ಕೊಂಚ ತುಪ್ಪವನ್ನು ಸವರಿ ಸೇವಿಸುವ ಮೂಲಕ ಈ ಅಗತ್ಯತೆಯನ್ನು ಪೂರ್ಣಗೊಳಿಸಬಹುದು.

  Most Read: ಚಪಾತಿ ಅಂದ್ರೆ ಕೇವಲ ಗೋಧಿಹಿಟ್ಟು ಕಲಸಿದರೆ ಸಾಲದು!


 • ರೀಫೈನ್ಡ್ ಎಣ್ಣೆಯನ್ನು ಬಳಸಿ

  ಇಂದಿನ ದಿನಗಳಲ್ಲಿ ತುಪ್ಪ ಅನಾರೋಗ್ಯಕರ, ಇದರ ಬದಲಿಗೆ ರೀಫೈನ್ಡ್ ಎಣ್ಣೆಯನ್ನು ಬಳಸಿ ಎಂದು ಸಾರುವ ಭರ್ಜರಿ ಜಾಹೀರಾತುಗಳು ಅಪ್ಪಟ ವ್ಯಾಪಾರಿ ಮನೋಭಾವದ ಸುಳ್ಳುಗಳ ಕಂತೆಯೇ ಆಗಿವೆ. ತಜ್ಷರು ವಿವರಿಸುವಂತೆ "ತುಪ್ಪದಲ್ಲಿ ಕೊಬ್ಬು ಕರಗುವ ವಿಟಮಿನ್ನುಗಳಿವೆ ಹಾಗೂ ಇವು ವಾಸ್ತವದಲ್ಲಿ ತೂಕ ಇಳಿಯಲು ನೆರವಾಗುತ್ತವೆ ಹಾಗೂ ದೇಹದಲ್ಲಿ ರಸದೂತಗಳ ಸಮತೋಲನ ಕಾಪಾಡಿಕೊಳ್ಳಲು ಮತ್ತು ರಕ್ತದಲ್ಲಿ ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟವನ್ನು ಕಾಯ್ದುಕೊಳ್ಳಲೂ ನೆರವಾಗುತ್ತವೆ. ಅಲ್ಲದೇ ಗಂಭೀರ ತೊಂದರೆಗಳಾದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ನಿರ್ವಹಣೆಗೂ ನೆರವಾಗುತ್ತವೆ. ತುಪ್ಪ ಹೆಚ್ಚಿನ ತಾಪಮಾನದಲ್ಲಿ ಕುದಿಯುವ ಕೊಬ್ಬು ಆಗಿರುವ ಕಾರಣ ನಮ್ಮ ದೇಹದ ಬಿಸಿಯಲ್ಲಿ ಅಷ್ಟು ಬೇಗನೇ ಬಿಸಿಯಾಗುವುದಿಲ್ಲ. ಪರಿಣಾಮವಾಗಿ ಈ ಕೊಬ್ಬಿನಿಂದ ಜೀವಕೋಶಗಳಿಗೆ ಹಾನಿ ಮತ್ತು ಕ್ಯಾನ್ಸರ್ ಉಂಟುಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳೂ ಉತ್ಪತ್ತಿಯಾಗುವುದಿಲ್ಲ


 • ತುಪ್ಪ ಸವರಿದ ಚಪಾತಿ

  ಖ್ಯಾತ ಬಾಲಿವುಡ್ ನಟಿ ಕರೀನಾ ಕಪೂರ್ ಸಹಾ ತುಪ್ಪ ಬೆರೆಸಿದ ಆಹಾರಗಳನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ. ಇವರು ತಮ್ಮ ಆಹಾರಕ್ರಮದ ಬಗ್ಗೆ ವಿವರಿಸುವಾಗ ತಮ್ಮ ಅಜ್ಜಿ ಎಂದೂ ತುಪ್ಪ ಸವರಿದ ಚಪಾತಿಯನ್ನೇ ತಮಗೆ ತಿನ್ನಲು ನೀಡುತ್ತಿದ್ದುದನ್ನು ಸ್ಮರಿಸುತ್ತಾರೆ. "ನನ್ನ ಅಜ್ಜಿಗೆ ಈಗ ಎಂಭತ್ತೈದು ವರ್ಷ ವಯಸ್ಸು ಹಾಗೂ ಆಕೆ ತನ್ನ ಎರಡನೇ ವಯಸ್ಸಿನಿಂದಲೂ ಈ ಅಭ್ಯಾಸವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆಕೆ ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ತೂಕವನ್ನು ಕಾಯ್ದುಕೊಂಡಿದ್ದಂತೆಯೇ ಎಂಭತ್ತರ ವಯಸ್ಸಿನಲ್ಲಿಯೂ ಕಾಪಾಡಿಕೊಂಡು ಬಂದಿದ್ದಾರೆ. ಇಂದಿಗೂ ಅವರು ಗಟ್ಟಿಮುಟ್ಟಾಗಿಯೇ ಇದ್ದಾರೆ ಹಾಗೂ ಯಾವುದೇ ಗಂಟುಗಳ ನೋವಿಲ್ಲದೇ ಚಟುವಟಿಕೆಯಿಂದ ಓಡಾಡುತ್ತಾರೆ. ಕರೀನಾರವರು ಗರ್ಭಾವಸ್ಥೆಯಲ್ಲಿದ್ದಾಗಲೂ ತಮ್ಮ ಧಾಲ್ ನಲ್ಲಿ ಒಂದು ಚಮಚ ತುಪ್ಪವಿರುವಂತೆ ನೋಡಿಕೊಂಡಿರುವುದನ್ನು ಹೇಳಿಕೊಂಡಿದ್ದಾರೆ. ಈ ವಿಷಯಗಳನ್ನು ರುಜುತಾ ದಿವೇಕರ್ ರವರು ಬರೆದ 'ಪ್ರಿಗ್ನೆಸ್ನಿ ನೋಟ್ಸ್' ಎಂಬ ಹೊತ್ತಿಗೆಯಲ್ಲಿಯೂ ಪ್ರಕಟಿಸಿದ್ದಾರೆ.

  Most Read: ಮೃದುವಾದ, ಪೂರಿಯಂತೆ ಉಬ್ಬಿರುವ ಚಪಾತಿ


 • ತುಪ್ಪ ಸವರಿದ ಚಪಾತಿ

  ತುಪ್ಪ ಆರೋಗ್ಯಕ್ಕೆಷ್ಟು ಒಳ್ಳೆಯದು ಎಂದು ಈಗ ಅರಿವಾಯಿತಲ್ಲವೇ? ಹಾಗಾದರೆ ಮುಂದಿನ ಆಹಾರದಲ್ಲಿ ತುಪ್ಪ ಸವರಿಗೆ ಚಪಾತಿಯನ್ನು ಒಳಗೊಂಡಿರುವುದನ್ನು ಖಾತರಿಪಡಿಸಿಕೊಳ್ಳಿ. ಆದರೆ ತುಪ್ಪದ ಕೊಬ್ಬು ಸಹಾ ಅತಿಯಾದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಪ್ರತಿ ಚಪಾತಿಗೆ ಒಂದು ಚಿಕ್ಕಚಮಚದಷ್ಟು ತುಪ್ಪವನ್ನು ಸವರಿದರೆ ಮಾತ್ರ ಸಾಕು.
ನಾವೆಲ್ಲರೂ ಯಾವುದೇ ವಿರೋಧವಿಲ್ಲದೇ ಒಪ್ಪುವ ಕೆಲವೇ ವಿಷಯಗಳಲ್ಲಿ ಒಂದು ಎಂದರೆ ಚಪಾತಿಯ ಮೇಲೆ ಕೊಂಚ ಹೆಚ್ಚೇ ತುಪ್ಪ ಸವರಿ ತಿನ್ನುವುದನ್ನು ಇಷ್ಟವಡುತ್ತೇವೆ ಎನ್ನುವುದು. ಭಾರತದಲ್ಲಿ, ವಿಶೇಷವಾಗಿ ಉತ್ತರ ಭಾರತದಲ್ಲಿ ಚಪಾತಿ ಮುಖ್ಯ ಆಹಾರವಾಗಿದ್ದು ಇದಕ್ಕೆ ಕೊಂಚ ತುಪ್ಪ ಸವರದೇ ತಿನ್ನುವುದು ಹೆಚ್ಚಿನವರಿಗೆ ಒಗ್ಗದೇ ಇರುವ ವಿಷಯವಾಗಿದೆ ಹಾಗೂ ಸಂಪ್ರದಾಯ ಎಂಬಂತೆ ತುಪ್ಪ ಸವರಿದ ಚಪಾತಿಯನ್ನು ಬಹುತೇಕ ಎಲ್ಲ ಮನೆಗಳಲ್ಲಿ ತಯಾರಿಸಲಾಗುತ್ತದೆ. ಇದು ಆರೋಗ್ಯಕ ಆಹಾರವೇ ಆದರೂ ಇದರರ್ಥ ಚಪಾತಿಯ ಮೇಲೆ ಸೌಟುಗಟ್ಟಲೇ ತುಪ್ಪವನ್ನು ಹಾಕಬೇಕೆಂದಲ್ಲ, ಬದಲಿಗೆ ಕೊಂಚವೇ ತುಪ್ಪವನ್ನು ಸವರಿ ತಿನ್ನುವುದು ಒಟ್ಟಾರೆ ಆರೋಗ್ಯದ ಮೇಲೆ ಅದ್ಭುತ ಪರಿಣಾಮವನ್ನೇ ಉಂಟುಮಾಡುತ್ತದೆ.

ನಮ್ಮ ಭಾರತೀಯ ಅಡುಗೆಯಲ್ಲಿ ತುಪ್ಪಕ್ಕೆ ಪ್ರಮುಖ ಸ್ಥಾನವಿದ್ದು ತುಪ್ಪದ ಪರಿಮಳ ಘಮಘಮಿಸುವ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇಂದಿನ ದಿನಗಳಲ್ಲಿ ಸ್ಥೂಲಕಾಯ ಹೆಚ್ಚಾಗಿ ಭಾರತೀಯದಲ್ಲಿ ಕಂಡುಬಂದಿದ್ದು ಇದಕ್ಕೆ ಕಾರಣವಾದ ಕೊಬ್ಬನ್ನು ನಿವಾರಿಸುವ ತೀರ್ಮಾನದ ಪರಿಣಾಮ ನೇರವಾಗಿ ಆಹಾರದಿಂದ ತುಪ್ಪವನ್ನು ನಿವಾರಿಸುವತ್ತ ಬೊಟ್ಟುಮಾಡುತ್ತದೆ. ಆದರೆ ಸ್ಥೂಲಕಾಯಕ್ಕೆ ತುಪ್ಪ ಕಾರಣವಲ್ಲ, ಬದಲಿಗೆ ದೈಹಿಕ ಶ್ರಮ ಕಡಿಮೆಯಾದ ನಮ್ಮ ಜೀವನಕ್ರಮ ಬದಲಾಗಿರುವುದೇ ಕಾರಣ. ಅಷ್ಟಲ್ಲದೇ ಇದ್ದರೆ ನಮ್ಮ ಹಿರಿಯರೆಲ್ಲಾ ನೂರಾರು ವರ್ಷಗಳಿಂದ ತುಪ್ಪವನ್ನು ಸೇವಿಸುತ್ತಾ ಬಂದಿರಲಿಲ್ಲವೇ? ಇವರಿಗೇಕೆ ಇಂದಿನಷ್ಟು ಸ್ಥೂಲಕಾಯದ ತೊಂದರೆ ಏಕೆ ಕಾಡಿರಲಿಲ್ಲ? ಬನ್ನಿ, ಈ ಬಗ್ಗೆ ಕೆಲವು ಅಗತ್ಯ ಮಾಹಿತಿಗಳನ್ನು ಅರಿಯೋಣ...

   
 
ಹೆಲ್ತ್