Back
Home » ಇತ್ತೀಚಿನ
ಗೂಗಲ್ ಹುಡುಕಾಟದಲ್ಲಿ ಪಾಕಿಸ್ತಾನದ ಬಾವುಟ ವಿಶ್ವದ ಅತ್ಯುತ್ತಮ ಟಾಯ್ಲೆಟ್ ಪೇಪರ್ ಆಗಿ ಬದಲಾವಣೆ
Gizbot | 19th Feb, 2019 11:21 AM

ಒಂದು ದೇಶದ ಬಾವುಟ ವಿಶ್ವದ ಉತ್ತಮ ಟಾಯ್ಲೆಟ್ ಪೇಪರ್ ಎಂದರೆ ನಿಮಗೆ ಏನನ್ನಿಸಬಹುದು? ನಾವು ಹೀಗೆ ಹೇಳುತ್ತಿದ್ದರೆ ನಿಮಗೆ ನಂಬಿಕೆ ಬರುತ್ತಿಲ್ಲವೆ? ಹಾಗಾದ್ರೆ ಒಮ್ಮೆ ಗೂಗಲ್ ನಲ್ಲಿ ಬೆಸ್ಟ್ ಟಾಯ್ಲೆಟ್ ಪೇಪರ್ ಇನ್ ದಿ ವರ್ಲ್ಡ್ ಎಂದು ಟೈಪ್ ಮಾಡಿ ಬರುವ ಇಮೇಜ್ ಗಳನ್ನು ಹುಡುಕಾಡಿ.

ಸದ್ಯ ಲಭ್ಯವಾಗುತ್ತಿರುವ ನೂತನ ಸರ್ಚ್ ರಿಸಲ್ಟ್ ನಲ್ಲಿ ಪಾಕಿಸ್ತಾನದ ಬಾವುಟವು ವಿಶ್ವದ ಬೆಸ್ಟ್ ಟಾಯ್ಲೆಟ್ ಪೇಪರ್ ಎಂದು ಗೂಗಲ್ ನಲ್ಲಿ ಲಭ್ಯವಾಗುತ್ತಿದೆ.

ಪಾಕಿಸ್ತಾನದ ಬಾವುಟವು ಯಾಕೆ ವಿಶ್ವದ ಉತ್ತಮ ಟಾಯ್ಲೆಟ್ ಪೇಪರ್ ಆಗಿದೆ?

ಗೂಗಲ್ ಸರ್ಚ್ ರಿಸಲ್ಟ್ ಅಂತರ್ಜಾಲದಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಆಧರಿಸಿ ಇರುತ್ತದೆ. ಯಾರೋ ಪಾಕಿಸ್ತಾನದ ಫ್ಲಾಗ್ ನ್ನು ಬೆಸ್ಟ್ ಟಾಯ್ಲೆಟ್ ಪೇಪರ್ ಇನ್ ದಿ ವರ್ಲ್ಡ್ ಎಂದು ಸರ್ಚ್ ಇಂಜಿನ್ನಿನ ಗ್ಲಿಚ್ಚಸ್ ನ್ನು ಬಳಸಿ ಮಾಡಿದ್ದಾರೆ ಮತ್ತು ಅದು ಗೂಗಲ್ ಸರ್ಚ್ ರಿಸಲ್ಟ್ ನಲ್ಲಿ ರಿಫ್ಲೆಕ್ಟ್ ಆಗಿದೆ.

ಇಂತಹ ಹಲವು ಉದಾಹರಣೆಗಳು ಗೂಗಲ್ ನಲ್ಲಿ ಇದೀಗ ಲಭ್ಯವಾಗುತ್ತಿದೆ. ಹಲವಾರು ಬಳಕೆದಾರರು ಈ ರೀತಿಯ ಬದಲಾವಣೆಗಳನ್ನು ಮಾಡಿದ್ದಾರೆ. ಹ್ಯಾಕರ್ ಗಳು ಗೂಗಲ್ ನ ಹಲವು ಕೀವರ್ಡ್ಸ್ ಗಳನ್ನು ಈ ರೀತಿ ಬದಲಾಯಿಸಿದ್ದಾರೆ. ಪುಲ್ವಾಮಾ ಟೆರರ್ ಅಟ್ಯಾಕ್ ನ ನಂತರ ಭಾರತದ 44 ಸೈನಿಕರು ವೀರ ಮರಣ ಹೊಂದಿರುವುದರ ಪ್ರತಿಕಾರವೆಂಬಂತೆ ಅಂತರ್ಜಾಲದಲ್ಲಿ ಹಲವು ಬದಲಾವಣೆಗಳು ಪಾಕಿಸ್ತಾನದ ವಿರುದ್ಧ ನಡೆಯುತ್ತಿದೆ.

ಕೆಲವರು ಪಾಕಿಸ್ತಾನಿ ವೆಬ್ ಸೈಟ್ ಗಳನ್ನು ಕೂಡ ಹ್ಯಾಕ್ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪುಲ್ವಾಮಾ ಅಟ್ಯಾಕ್ ಗೆ ಪ್ರತೀಕಾರವೆಂಬಂತೆ ಪಾಕಿಸ್ತಾನವನ್ನು ಬಗ್ಗುಬಡಿಯುವ ಪ್ರಯತ್ನಗಳು ಅಂತರ್ಜಾಲದಲ್ಲಿ ಸತತವಾಗಿ ನಡೆಯುತ್ತಿದೆ.

   
 
ಹೆಲ್ತ್