Back
Home » ಆರೋಗ್ಯ
ತುಪ್ಪ ಬೆರೆಸಿದ ಹಾಲಿನ ಸೇವನೆ- ಆರೋಗ್ಯಕ್ಕೆಷ್ಟು ಒಳ್ಳೆಯದು ಗೊತ್ತೇ?
Boldsky | 19th Feb, 2019 01:40 PM
 • ದೈಹಿಕ ಶಕ್ತಿಯನ್ನು ಒದಗಿಸುತ್ತದೆ

  ತುಪ್ಪ ಬೆರೆಸಿದ ಹಾಲಿನ ಸೇವನೆಯಿಂದ ಜೀರ್ಣಾಂಗಗಳಲ್ಲಿ ಜೀರ್ಣರಸ ಮತು ಕಿಣ್ವಗಳ ಉತ್ಪತ್ತಿ ಹೆಚ್ಚುವ ಮೂಲಕ ಜೀರ್ಣಶಕ್ತಿ ಹೆಚ್ಚುತ್ತದೆ. ಈ ಕಿಣ್ವಗಳು ನಮ್ಮ ಆಹಾರದ ಸಂಯುಕ್ತ ಘಟಕಗಳನ್ನು ಸುಲಭವಾಗಿ ಒಡೆದು ಸರಳ ಅಂಶಗಳನ್ನಾಗಿ ಪರಿವರ್ತಿಸಿ ಶೀಘ್ರ ಜೀರ್ಣಗೊಳ್ಳಲು ಮತ್ತು ದೇಹ ಹೀರಿಕೊಳ್ಳಲು ನೆರವಾಗುತ್ತವೆ. ಒಂದು ವೇಳೆ ನಿಮಗೆ ಮಲಬದ್ದತೆಯ ತೊಂದರೆ ಅಥವಾ ಜೀರ್ಣಾಂಗಗಳ ಕ್ಷಮತೆಯ ಕೊರತೆ ಇದ್ದರೆ ಈ ತೊಂದರೆಯನ್ನು ನೀಗಿಸಲು ನಿಮ್ಮ ಆಹಾರದಲ್ಲಿ ತುಪ್ಪ ಬೆರೆಸಿದ ಹಾಲನ್ನು ನಿತ್ಯವೂ ಸೇರಿಸಿಕೊಂಡರೆ ಉತ್ತಮ ಪರಿಹಾರ ದೊರಕುತ್ತದೆ.


 • ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ

  ತುಪ್ಪ ಬೆರೆಸಿದ ಹಾಲಿನ ಅದ್ಭುತ ಸಂಯೋಜನೆಯಿಂದ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ ಮತ್ತು ದೇಹದಲ್ಲಿ ಶಕ್ತಿ ಮತ್ತು ಚೈತನ್ಯವೂ ಹೆಚ್ಚುತ್ತದೆ. ಅಲ್ಲದೇ ದೇಹದಿಂದ ಕಲ್ಮಶಗಳು ಹೊರಹಾಕಲು ನೆರವಾಗುವ ಮೂಲಕ ದೇಹವನ್ನು ಕಲ್ಮಶರಹಿತವಾಗಿರಿಸುತ್ತದೆ.


 • ಮೂಳೆಸಂಧುಗಳಿಗೆ ಜಾರುಕದ್ರವ ಒದಗಿಸುತ್ತದೆ

  ಒಂದು ವೇಳೆ ನಿಮ್ಮ ಮೂಳೆಸಂಧುಗಳಲ್ಲಿ ನೋವು ಇದ್ದರೆ ಇದಕ್ಕೆ ಜಾರುಕದ್ರವದ ಕೊರತೆ ಕಾರಣವಾಗಿರಬಹುದು. ಇದನ್ನು ತಕ್ಷಣವೇ ನೀಗಿಸಲು ತುಪ್ಪ ಬೆರೆಸಿದ ಹಾಲಿನ ಸೇವನೆಯನ್ನು ನಿತ್ಯದ ಅಭ್ಯಾಸವಾಗಿಸಿದರೆ ಸಾಕು. ಈ ಸಂಯೋಜನೆಯಿಂದ ಮೂಳೆಗಳ ಸಂಧುಗಳಿಗೆ ಹೆಚ್ಚಿನ ಜಾರುಕದ್ರವ ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೇ ತುಪ್ಪ ಉತ್ತಮ ಉರಿಯೂತ ನಿವಾರಕವಾಗಿದ್ದು ಮೂಳೆಗಳ ಸಂಧುಗಳ ನೋವನ್ನು ನಿವಾರಿಸಲು ನೆರವಾಗುತ್ತದೆ ಹಾಗೂ ಹಾಲಿನಲ್ಲಿರುವ ಕ್ಯಾಲ್ಸಿಯಂ ಸವೆದಿದ್ದ ಮೂಳೆಗಳ ಭಾಗಗಳನ್ನು ಮರುದುಂಬಿಸಿ ಇನ್ನಷ್ಟು ಗಟ್ಟಿಗೊಳಿಸಲು ನೆರವಾಗುತ್ತದೆ. ಹಾಗಾಗಿ ಎಂದಿಗಾದರೂ ಮೂಳೆಸಂಧುಗಳಲ್ಲಿ ನೋವು ಎದುರಾದರೆ ತಕ್ಷಣದಿಂದಲೇ ನಿತ್ಯವೂ ಒಂದು ಲೋಟ ಹಾಲಿಗೆ ಒಂದು ಚಿಕ್ಕ ಚಮಚ ತುಪ್ಪ ಬೆರೆಸಿ ಸೇವಿಸುವುದರನ್ನು ಪ್ರಾರಂಭಿಸಿದರೆ ಸಾಕು, ನೋವು ಬಂದ ಹಾಗೇ ಕೆಲವೇ ದಿನಗಳಲ್ಲಿ ಹೊರಟೂ ಹೋಗುತ್ತದೆ.

  Most Read: ಬಿಸಿ ಬಿಸಿ ಚಪಾತಿ ಮೇಲೆ ತುಪ್ಪ ಸವರಬೇಕೇ? ಬೇಡವೇ?


 • ದೇಹದ ದಾರ್ಢ್ಯತೆಯನ್ನು ಹೆಚ್ಚಿಸುತ್ತದೆ

  ಹೆಚ್ಚಿನ ಕೆಲಸದ ಒತ್ತಡದಿಂದ ಸದಾ ಸುಸ್ತಾಗಿರುವ ಅನುಭವವಾಗುತ್ತಿದೆಯೇ? ಹಾಗಾದರೆ ದೇಹದಲ್ಲಿ ಚೈತನ್ಯವನ್ನು ಮೂಡಿಸುವ ಈ ಆಹಾರವನ್ನು ನಿಮ್ಮ ನಿತ್ಯದ ಆಹಾರದ ಅಂಗವಾಗಿಸಿಕೊಳ್ಳಲೇಬೇಕು. ವಿಶೇಷವಾಗಿ ಕಠಿಣ ವ್ಯಾಯಾಮ ಅಥವಾ ದೇಹದಂಡಿಸುವ ಕೆಲಸ ನಿರ್ವಹಿಸುವವರಿಗೆ ಈ ಆಹಾರ ಅದ್ಭುತವಾದ ಪ್ರಯೋಜನವನ್ನು ನೀಡಬಲ್ಲುದು. ಸಾಮಾನ್ಯವಾಗಿ ಕುಸ್ತಿಪಟುಗಳು ಗೂಳಿಯಂತೆ ಬಲಿಷ್ಠರಾಗಿರಲು ಅವರು ಸೇವಿಸುವ ತುಪ್ಪ ಬೆರೆಸಿದ ಹಾಲೇ ಕಾರಣ.


 • ಲೈಂಗಿಕ ಜೀವನವನ್ನು ಉತ್ತಮಗೊಳಿಸುತ್ತದೆ

  ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಈ ಅದ್ಭುತ ಆಹಾರವನ್ನು ನಿಯಮಿತವಾಗಿ ಸೇವಿಸುವಂತೆ ಲೈಂಗಿಕ ತಜ್ಞರು ಸಲಹೆ ನೀಡುತ್ತಾರೆ. ತುಪ್ಪ ಬೆರೆಸಿದ ಹಾಲಿನ ಸೇವನೆಯಿಂದ ಲೈಂಗಿಕ ಬಯಕೆ, ಲೈಂಗಿಕ ಶಕ್ತಿ ಮತ್ತು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತದೆ. ಈ ಅಧ್ಬುತ ಆಹಾರ ಸಂಯೋಜನೆ ದೇಹದ ಬಿಸಿಯನ್ನು ತಣಿಸುವ ಮೂಲಕ ಲೈಂಗಿಕ ಕ್ರೀಡೆಯ ಅವಧಿಯನ್ನು ಹೆಚ್ಚಿಸಲೂ ನೆರವಾಗುತ್ತದೆ ಹಾಗೂ ಈ ಮೂಲಕ ದಾಂಪತ್ಯಸರಸ ಸಮಯವನ್ನು ಇನ್ನಷ್ಟು ತೇಜೋಮಯ ಮತ್ತು ರಸಭರಿತವಾಗಿಸುತ್ತದೆ. ವಿಶೇಷವಾಗಿ ಶೀಘ್ರಸ್ಖಲನದ ತೊಂದರೆ ಇರುವ ಪುರುಷರಿಗೆ ಈ ಆಹಾರ ಹೆಚ್ಚಿನ ನೆರವು ನೀಡುತ್ತದೆ ಹಾಗೂ ಮುನ್ನಲಿವಿನ ಸಮಯವನ್ನು ಇನ್ನಷ್ಟು ವಿಸ್ತರಿಸಲು ನೆರವಾಗುತ್ತದೆ.


 • ನಿದ್ರಾರಾಹಿತ್ಯವನ್ನು ನಿವಾರಿಸುತ್ತದೆ

  ಉತ್ತಮ ನಿದ್ದೆಗಾಗಿ ಮಲಗುವ ಮುನ್ನ ಒಂದು ಲೋಟ ಬಿಸಿಹಾಲನ್ನು ಕುಡಿಯುವುದು ಉತ್ತಮ ಅಭ್ಯಾಸವಾಗಿದೆ. ಆದರೆ ಈ ಹಾಲಿಗೆ ಕೊಂಚ ತುಪ್ಪವನ್ನು ಬೆರೆಸಿದರೆ ಏನಾಗುತ್ತದೆ ಗೊತ್ತೇ? ಈ ಸಂಯೋಜನೆ ನಿದ್ದೆಯ ಮೇಲೆ ಹಲವಾರು ಧನಾತ್ಮಕ ಪರಿಣಾಮಗಳನ್ನು ಬೀರುತ್ತದೆ. ವಿಶೇಷವಾಗಿ ನಿದ್ರಾರಾಹಿತ್ಯದಿಂದ ಬಳಲುವ ವ್ಯಕ್ತಿಗಳಿಗೆ ಈ ಆಹಾರ ಅಮೃತಸಮಾನವಾಗಿದೆ. ಇಂದಿನ ದಿನಗಳಲ್ಲಿ ಯುವಜನತೆ ರಾತ್ರಿ ಬೇಗ ನಿದ್ದೆ ಬರದೇ ಬೆಳಿಗ್ಗೆ ಬೇಗ ಏಳಲು ಸಾಧ್ಯವಾಗದೇ ಇರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇವರು ನಿತ್ಯವೂ ಒಂದು ಚಿಕ್ಕ ಚಮಚ ತುಪ್ಪವನ್ನು ಸುಮಾರು ಮುನ್ನೂರು ಮಿಲೀ ಹಾಲಿನಲ್ಲಿ ಬೆರೆಸಿ ಸೇವಿಸುವ ಮೂಲಕ ಮಗುವಿನಂತೆ ರಾತ್ರಿ ಬೇಗನೇ ಮಲಗತೊಡಗುತ್ತಾರೆ.


 • ಆರೋಗ್ಯಕರ ತ್ವಚೆಯನ್ನು ನೀಡುತ್ತದೆ

  ಹಾಲು ಮತ್ತು ತುಪ್ಪದ ಅದ್ಭುತ ಸಂಯೋಜನೆಯಿಂದ ಚರ್ಮದ ಹಲವಾರು ಬಗೆಯ ತೊಂದರೆಗಳು ಗುಣಹೊಂದುತ್ತವೆ. ಒಣಚರ್ಮ, ನಿಸ್ತೇಜವಾದ ತ್ವಚೆ ಅಥವಾ ಚರ್ಮದ ವರ್ಣ ಅಸಮಾನವಾಗಿರುವುದು ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ. ತುಪ್ಪ ಬೆರೆಸಿದ ಹಾಲನ್ನು ವರ್ಷದ ಎಲ್ಲಾ ದಿನಗಳಲ್ಲಿ ಸೇವಿಸಬಹುದಾಗಿದ್ದು ವಿಶೇಷವಾಗಿ ಚಳಿಗಾಲದ ಒಣಹವೆಯ ದಿನಗಳಲ್ಲಿ ಹೆಚ್ಚಿನ ಆರೈಕೆ ದೊರಕುತ್ತದೆ.

  Most Read: ಕನಿಷ್ಠ ಪಕ್ಷ ವಾರದಲ್ಲಿ ಎರಡು ಬಾರಿಯಾದರೂ ಚಿಕನ್ ತಿಂದ್ರೆ-ಬರೋಬ್ಬರಿ 5 ಆರೋಗ್ಯ ಪ್ರಯೋಜನಗಳಿವೆ


 • ಬುದ್ದಿಮತ್ತೆಯನ್ನೂ ಹೆಚ್ಚಿಸುತ್ತದೆ

  ಸ್ಮರಣಶಕ್ತಿ, ತರ್ಕಬದ್ದತೆ ಹಾಗೂ ಏಕಾಗ್ರತೆಯನ್ನು ಹೆಚ್ಚಿಸುವ ಮೂಲಕ ಬುದ್ದಿಯಾಧಾರಿತ ಕೆಲಸಗಳನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುವ ಕಾರಣ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ತುಪ್ಪ ಬೆರೆಸಿದ ಹಾಲಿನ ಸೇವನೆಯಿಂದ ಹೆಚ್ಚಿನ ಪ್ರಯೋಜನವಿದೆ. ಈ ಮೂಲಕ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೇ ದೇಹದ ಎಲ್ಲಾ ಅಂಗಾಂಶಗಳು ಮತ್ತು ವಿಶೇಷವಾಗಿ ಪಂಚೇಂದ್ರಿಯಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಈ ಆಹಾರ ನೆರವಾಗುತ್ತದೆ.


 • ಗರ್ಭಿಣಿಯರಿಗಂತೂ ಅಗತ್ಯವಾಗಿ ಬೇಕಾದ ಆಹಾರ

  ಗರ್ಭಾವಸ್ಥೆಯ ಎಲ್ಲಾ ದಿನಗಳಲ್ಲಿಯೂ ಗರ್ಭಿಣಿಯರು ಈ ಅದ್ಭುತ ಆಹಾರವನ್ನು ಸೇವಿಸಲೇಬೇಕು. ಏಕೆಂದರೆ ತುಪ್ಪ ಮತ್ತು ಹಾಲಿನಲ್ಲಿರುವ ಅಂಶಗಳು ಗರ್ಭದಲ್ಲಿರುವ ಮಗುವಿನ ಮೂಳೆಗಳ ಬೆಳವಣಿಗೆಗೆ ನೆರವಾಗುತ್ತದೆ ಹಾಗೂ ವಿಶೇಷವಾಗಿ ಮೆದುಳು ಇನ್ನಷ್ಟು ಪುಷ್ಟಿಯಿಂದ ಬೆಳೆಯಲು ನೆರವಾಗುತ್ತದೆ. ಅಲ್ಲದೇ ಹೆರಿಗೆಯ ನಂತರವೂ ಬಾಣಂತನ ಮುಗಿಯುವವರೆಗೂ ನಿತ್ಯವೂ ಸೇವಿಸುತ್ತಿದ್ದರೆ ಇನ್ನಷ್ಟು ಹೆಚ್ಚಿನ ಪ್ರಯೋಜನ ಲಭಿಸುತ್ತದೆ.


 • ತೂಕವನ್ನು ಹೆಚ್ಚಿಸುತ್ತದೆ

  ಒಂದು ವೇಳೆ ನಿಮ್ಮ ದೇಹದ ತೂಕ ಅಗತ್ಯಕ್ಕಿಂದ ಕೊಂಚ ಕಡಿಮೆಯಿದ್ದರೆ ಅಥವಾ ಈಗಾಗಲೇ ಅಗತ್ಯ ತೂಕವಿದ್ದರೂ ಸಾಕಷ್ಟು ಹುರಿಗಟ್ಟಿಲ್ಲದಿದ್ದರೆ ಈ ಆಹಾರವನ್ನು ನಿತ್ಯವೂ ರಾತ್ರಿ ಮಲಗುವ ಮುನ್ನ ಸೇವಿಸಲು ಪ್ರಾರಂಭಿಸಬೇಕು. ಇದರಿಂದ ತೂಕದಲ್ಲಿ ಹೆಚ್ಚಳ ಮತ್ತು ವ್ಯಾಯಾಮದಿಂದ ಸ್ನಾಯುಗಳು ಹುರಿಗಟ್ಟುವ ಕೆಲಸಗಳು ಜೊತೆಜೊತೆಯಾಗಿ ನಡೆಯುತ್ತವೆ. ತುಪ್ಪದಲ್ಲಿರುವ ಕೊಬ್ಬು ನಿಮ್ಮ ವ್ಯಾಯಾಮದ ಪರಿಣಾಮದಿಂದ ಸ್ನಾಯುಗಳನ್ನು ಹುರಿಗಟ್ಟಿಸಲು ಹೆಚ್ಚಿನ ನೆರವು ನೀಡುತ್ತದೆ.


 • ಆದರೆ ಈ ಆಹಾರ ಯಾರಿಗೆ ಸಹ್ಯವಲ್ಲ?

  ಒಂದು ವೇಳೆ ನಿಮ್ಮ ದೇಹದಲ್ಲಿ ಈಗಾಗಲೇ ಅಧಿಕ ಕೊಲೆಸ್ಟ್ರಾಲ್ ನ ತೊಂದರೆ ಇದ್ದು ಎಣ್ಣೆ, ಜಿಡ್ದುಪದಾರ್ಥಗಳನ್ನು ಸೇವಿಸಬಾರದು ಎಂದು ವೈದ್ಯರು ಸಲಹೆ ನೀಡಿದ್ದರೆ ನಿಮಗೆ ತುಪ್ಪವೂ ವರ್ಜ್ಯವೇ ಸರಿ. ಈ ವ್ಯಕ್ತಿಗಳನ್ನು ಹೊರತುಪಡಿಸಿ ಉಳಿದವರಿಗೆಲ್ಲಾ ಈ ಅದ್ಭುತ ಆಹಾರ ಸಹ್ಯವಾವಾಗಿದೆ. ವಿಶೇಷವಾಗಿ ಸಾಕಷ್ಟು ವ್ಯಾಯಾಮ, ನಡಿಗೆ ಮೊದಲಾದ ದೈಹಿಕ ಶ್ರಮದಿಂದ ದಿನವನ್ನು ಕಳೆಯುವವರು ಈ ಆಹಾರವನ್ನು ನಿತ್ಯವೂ ಸೇವಿಸಬಹುದು. ಆದರೆ ದಿನವೊಂದರಲ್ಲಿ ಒಂದು ಲೋಟ ಹಾಲಿಗೆ ಒಂದು ಚಿಕ್ಕಚಮಚದಷ್ಟು ತುಪ್ಪವನ್ನು ಬೆರೆಸಿ ಸೇವಿಸಿದರೆ ಸಾಕು, ಇದಕ್ಕೂ ಹೆಚ್ಚು ಬೇಕೆಂದಿಲ್ಲ. ಅತ್ಯುತ್ತಮ ಪರಿಣಾಮಕ್ಕಾಗಿ ರಾತ್ರಿ ಮಲಗುವ ಮುನ್ನ ಈ ಹಾಲನ್ನು ಬಿಸಿಬಿಸಿಯಾಗಿ ಸೇವಿಸುವುದು ಉತ್ತಮ.
ತುಪ್ಪ, ಆಯುರ್ವೇದ ಸೂಚಿಸಿದ ಹಲವಾರು ಗುಣಪಡಿಸುವ ಗುಣಗಳನ್ನು ಹೊಂದಿರುವ ಅಧ್ಭುತ ಆಹಾರವಾಗಿದೆ. ಇದರ ರುಚಿ ಮತ್ತು ಪರಿಮಳ ನಮ್ಮ ಅಹಾರವನ್ನು ಇನ್ನಷ್ಟು ಇಷ್ಟವಾಗುವಂತೆ ಮಾಡುವ ಕಾರಣ ನಮ್ಮ ಹಲವಾರು ಸಾಂಪ್ರಾದಾಯಿಕ ಆಹಾರಗಳಲ್ಲಿ ಸ್ಥಾನ ಪಡೆದಿರುವುದು ಮಾತ್ರವಲ್ಲ, ಆಯುರ್ವೇದ ತುಪ್ಪವನ್ನು ಹಲವು ಕಾಯಿಲೆಗಳಿಗೆ ಔಷಧಿಯ ರೂಪದಲ್ಲಿಯೂ ಸೇವಿಸುವಂತೆ ಸೂಚಿಸಿದೆ.

ಹಸುವಿನ ಹಾಲಿನಿಂದ ತಯಾರಿಸಿದ ತುಪ್ಪದಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟ್ ಗುಣ, ಬ್ಯಾಕ್ಟೀರಿಯಾ ನಿವಾರಕ ಗುಣ ಮತ್ತು ಶಿಲೀಂಧ್ರನಿವಾರಕ ಗುಣಗಳಿವೆ. ಹಲವಾರು ಅವಶ್ಯಕ ಪೋಷಕಾಂಶಗಳು ಹಾಗೂ ಕೊಬ್ಬಿನ ಆಮ್ಲಗಳನ್ನೂ ಹೊಂದಿರುವ ಕಾರಣ ಇದಕ್ಕೆ ಸುಪರ್ ಫುಡ್ ಅಥವಾ ಅದ್ಭುತ ಆಹಾರವೆಂಬ ಗುಣವಾಚಕವನ್ನೂ ಒದಗಿಸಲಾಗಿದೆ.

ಆದರೆ ಇದರ ಗುಣಗಳನ್ನು ಪರಿಪೂರ್ಣವಾಗಿ ಪಡೆಯಬೇಕಾದರೆ ಇದನ್ನು ಹಾಲಿನಲ್ಲಿ ಮಿಶ್ರಣ ಮಾಡಿ ಸೇವಿಸಬೇಕು ಎಂದು ಆಯುರ್ವೇದ ಸೂಚಿಸುತ್ತದೆ. ಅಚ್ಚರಿ ಮೂಡಿತೇ? ಹೌದು, ಇದು ನಿಜ. ಪ್ರಾಚೀನ ಭಾರತದಲ್ಲಿ ತುಪ್ಪ ಕೇವಲ ಆಹಾರ ಪದಾರ್ಥವೊಂದೇ ಆಗಿರಲಿಲ್ಲ, ಬದಲಿಗೆ ಆಯುರ್ವೇದ ತಜ್ಞರು ಆರೋಗ್ಯಕ್ಕಾಗಿ ತುಪ್ಪ ಬೆರೆಸಿದ ಹಾಲನ್ನು ಕುಡಿಯುವಂತೆ ಸೂಚಿಸುತ್ತಿದ್ದರು. ದೃಢಕಾಯಕ್ಕಾಗಿ ರಾಜಮನೆತನದ ಸದಸ್ಯರ ಸಹಿತ ಯೋಧರಿಗೂ ತುಪ್ಪ ಬೆರೆಸಿದ ಹಾಲನ್ನು ನೀಡಲಾಗುತ್ತಿತ್ತು. ಬನ್ನಿ, ಈ ಹಾಲಿನ ಸೇವನೆಯಿಂದ ಪಡೆಯಬಹುದಾದ ಪ್ರಯೋಜನಗಳನ್ನು ನೋಡೋಣ:

 
ಹೆಲ್ತ್