Back
Home » ಆರೋಗ್ಯ
ವಾರಕ್ಕೊಂದು ಗ್ಲಾಸ್ 'ರೆಡ್ ವೈನ್‌' ಕುಡಿದರೂ ಸಾಕು-ಸೆಕ್ಸ್ ಪವರ್ ಹೆಚ್ಚಾಗುತ್ತದೆಯಂತೆ!!
Boldsky | 19th Feb, 2019 03:48 PM
 • ರೆಡ್ ವೈನ್ ಎಂದರೇನು?

  ರೆಡ್ ವೈನ್ ಎಂದರೆ ದ್ರಾಕ್ಷಿಯಿಂದ ಮಾಡಿರುವಂತಹ ಒಂದು ರೀತಿಯ ಪಾನೀಯ ಅಥವಾ ಆಲ್ಕೋಹಾಲ್ ಪಾನೀಯ. ಇದು ಕಡು ನೇರಳೆ, ಸ್ವಲ್ಪ ಕೆಂಪು ಅಥವಾ ಕಂದು ಬಣ್ಣ ಹೊಂದಿರು ವುದು. ಕಪ್ಪು ದ್ರಾಕ್ಷಿಗಳನ್ನು ಬಳಸಿಕೊಂಡು ಅದರ ಜ್ಯೂಸ್ ತೆಗೆಯಲಾಗುತ್ತದೆ. ಇದರ ಬಳಿಕ ಅದನ್ನು ಸ್ಟೈನ್ ಲೆಸ್ ಸ್ಟೀಲ್ ಟ್ಯಾಂಕ್ ನಲ್ಲಿ ಹಾಕಿ ಹುದುಗುವಿಕೆಗೆ ಇಡಲಾಗುತ್ತದೆ. ರೆಡ್ ವೈನ್ ನ ಸಂಸ್ಕರಣೆಗೆ ಬಳಸುವಂತಹ ಸಾಮಾನ್ಯ ವಸ್ತುವೆಂದರೆ ಅದು ಸಲ್ಫರ್ ಡೈಯಾಕ್ಸೈಡ್. ಇದು ಉತ್ಕರ್ಷಣವನ್ನು ತಡ ಮಾಡುವ ಮೂಲಕ ಹುದುಗುವಿಕೆಯನ್ನು ತಡ ಮಾಡುವುದು. ಸೂಕ್ಷ್ಮವಾಗಿರುವಂತಹ ಕಿಣ್ವಗಳು ಕೆಲವೊಂದು ಸಲ ವೈನ್ ಗೆ ಕೆಂಪು ಬಣ್ಣ ಬರುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಕೆಲವು ಜನರು ರೆಡ್ ವೈನ್ ನ ಹುದುಗುವಿಕೆಗಾಗಿ ಈಸ್ಟ್‌ನ್ನು ಕೂಡ ಬಳಕೆ ಮಾಡುವರು.


 • ರೆಡ್ ವೈನ್ ಮತ್ತು ಸೆಕ್ಸ್-ನಿಮ್ಮ ಸಂಗಾತಿಗೆ ರೆಡ್ ವೈನ್ ಚಿಕಿತ್ಸೆ ನೀಡಿ

  18ರಿಂದ 50ರ ಹರೆಯದ ಸುಮಾರು 800 ಮಂದಿ ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಿರುವಂತಹ ವೇಳೆ ಕಂಡುಕೊಂಡಿರುವ ಅಂಶವೆಂದರೆ, ರೆಡ್ ವೈನ್ ನಲ್ಲಿ ಇರುವಂತಹ ಅಂಶಗಳು ಲೈಂಗಿಕಾಸಕ್ತಿಯನ್ನು ಹೆಚ್ಚು ಮಾಡಿದೆ. ಇದು ಬೇರೆ ಯಾವುದೇ ಪಾನೀಯದಲ್ಲೂ ಇಲ್ಲದೆ ಇರುವಂತಹ ರಾಸಾಯನಿಕವನ್ನು ಹೊಂದಿದೆ. ಈ ಅಧ್ಯಯನ ವರದಿಯು ಜರ್ನಲ್ ಆಪ್ ಸೆಕ್ಸುಲ್ ಮೆಡಿಸಿನ್ ನಲ್ಲಿ ಪ್ರಕಟಗೊಂಡಿದೆ. ಅದಾಗ್ಯೂ, ಸಂಶೋಧನೆಗಳು ನಿಯಮಿತವಾಗಿ ರೆಡ್ ವೈನ್ ಸೇವನೆಯಿಂದಾಗಿ ಲೈಂಗಿಕಾಸಕ್ತಿ ಹೆಚ್ಚಾಗುವುದೇ ಎನ್ನುವ ಬಗ್ಗೆ ಯಾವುದೇ ಒಂದು ಅಂತಿಮ ನಿರ್ಧಾರಕ್ಕೆ ಬರಲು ವಿಫಲವಾಗಿದೆ. ಆದರೆ ಅಂಕಿಅಂಶಗಳು ಮಾತ್ರ ಇದಕ್ಕೆ ಸಾಕ್ಷಿಯಾಗಿ ನಿಂತಿವೆ. ರೆಡ್ ವೈನ್ ನಲ್ಲಿ ಇರುವಂತಹ ಕೆಲವೊಂದು ಅಂಶಗಳು ದೇಹದಲ್ಲಿನ ಅಂಗಾಂಗಗಳಿಗೆ ರಕ್ತ ಸಂಚಾರವನ್ನು ಉತ್ತಮ ಪಡಿಸುವುದು ಎಂದು ಅಧ್ಯಯನಗಳು ಹೇಳಿವೆ. ಇದರಿಂದಾಗಿ ಪುರುಷರು ಹಾಗೂ ಮಹಿಳೆಯರಲ್ಲಿ ಲೈಂಗಿಕಾಸಕ್ತಿಯು ಹೆಚ್ಚಾಗುತ್ತದೆ ಎಂದು ಕಂಡು ಕೊಳ್ಳಲಾಗಿದೆ.


 • ರೆಡ್ ವೈನ್ ನ ಪ್ರಯೋಜನಗಳು

  ಇದು ಲೈಂಗಿಕಾಸಕ್ತಿಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡುವುದು ಮಾತ್ರವಲ್ಲದೆ ಇದರಿಂದ ಇನ್ನು ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇದರಲ್ಲಿನ ಹೃದಯ ಮತ್ತು ಅಪಧಮನಿಯ ಆರೋಗ್ಯವನ್ನು ಸುಧಾರಣೆ ಮಾಡುವ ಮೂಲಕವಾಗಿ ರಕ್ತದೊತ್ತಡವನ್ನು ಸುರಕ್ಷಿತ ಮಟ್ಟದಲ್ಲಿ ಇಡುವುದು. ರೆಡ್ ವೈನ್ ನಲ್ಲಿ ಇರುವಂತಹ ಅಂಶವು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುವುದು. ಇದು ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಮೆದುಳಿನ ಶಕ್ತಿಯನ್ನು ಹೆಚ್ಚು ಮಾಡುವುದು. ಲೈಂಗಿಕಾಸಕ್ತಿ ಹೆಚ್ಚಿಸುವ ಜತೆಗೆ ಈ ಎಲ್ಲಾ ಲಾಭಗಳು ನಿಮಗೆ ಸಿಗಲಿದೆ. ನೀವು ರಾತ್ರಿ ಹಾಸಿಗೆ ಹತ್ತುವ ಮೊದಲು ಒಂದು ಗ್ಲಾಸ್ ರೆಡ್ ವೈನ್ ಕುಡಿದರೆ ತುಂಬಾ ಒಳ್ಳೆಯದು.


 • ರೆಡ್ ವೈನ್ ನಲ್ಲಿ ಇರುವಂತಹ ಪ್ರಮುಖ ಅಂಶಗಳು

  ರೆಡ್ ವೈನ್ ನಲ್ಲಿ ರೆಸ್ವೆರಾಟ್ರೊಲ್ ಎನ್ನುವ ಪ್ರಮುಖ ಅಂಶವಿದೆ. ಇದು ಅದ್ಭುತವಾಗಿರುವಂತಹ ಆ್ಯಂಟಿಆಕ್ಸಿಡೆಂಟ್ ಆಗಿದ್ದು, ಇದು ಇತಿಹಾಸದಲ್ಲಿನ ದೊಡ್ಡ ಮಟ್ಟದ ಸಂಶೋಧನೆ ಎಂದು ಹೇಳಲಾಗಿದೆ. ಸರಿಯಾದ ಕ್ರಮದಲ್ಲಿ ಇದನ್ನು ಪಡೆದಾಗ ರೆಸ್ವೆರಾಟ್ರೊಲ್ ಅಂಶವು 20 ಪಟ್ಟು ವಿಟಮಿನ್ ಸಿ ಗಿಂತಲೂ ಹೆಚ್ಚು ಮತ್ತು 50 ಪಟ್ಟು ವಿಟಮಿನ್ ಇ ಗಿಂತಲೂ ಅಧಿಕವಾಗಿರುವುದು. ವಯಸ್ಸಾಗುವಂತಹ ಲಕ್ಷಣವನ್ನು ತಡೆಯುವ ಜತೆಗೆ ರೆಸ್ವೆರಾಟ್ರೊಲ್ ಅಂಶವು ಪುರುಷರು ಹಾಗೂ ಮಹಿಳೆಯರಲ್ಲಿ ಸಂಪೂರ್ಣವಾಗಿ ಲೈಂಗಿಕ ಆರೋಗ್ಯವನ್ನು ಸುಧಾರಣೆ ಮಾಡುವುದು.


 • ರೆಡ್ ವೈನ್ ಸೆಕ್ಸ್ ನ್ನು ಹೇಗೆ ಸುಧಾರಣೆ ಮಾಡುವುದು?

  ಹಾವರ್ಡ್, ಜಾನ್ಸ್ ಹೊಪ್ಕಿನ್ಸ್ ಮತ್ತು ಯುಸಿ ಡೇವಿಸ್ ಮೆಡಿಕಲ್ ಸ್ಕೂಲ್ ನ ಸಂಶೋಧನೆಗಳು ಹೇಳುವ ಪ್ರಕಾರ ರೆಸ್ವೆರಾಟ್ರೊಲ್ ಅಂಶವು ಪುರುಷರಲ್ಲಿ ಗಡುಸಾದ ನಿಮಿರುವಿಕೆಯನ್ನು ನಿಯಮಿತವಾಗಿ ಉಂಟು ಮಾಡುವುದು. ಇದರಿಂದ ಅವರು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಹುದು. ಲೈಂಗಿಕ ಕ್ರಿಯೆಗೆ ಪ್ರಮುಖ ಕಾರಣವಾಗಿರುವಂತಹ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ಆರೋಗ್ಯಕರವಾದ ರೀತಿಯಲ್ಲಿರಿಸುವುದು. ಇದು ದೇಹದಲ್ಲಿರುವ ಎಲ್ಲಾ ಸ್ನಾಯುಗಳಿಗೆ ರಕ್ತ ಸಂಚಾರವನ್ನು ಉಂಟು ಮಾಡಿ ಲೈಂಗಿಕ ಶಕ್ತಿ ಮತ್ತು ಪ್ರದರ್ಶನವನ್ನು ಹೆಚ್ಚಿಸುವುದು. ಅಧ್ಯಯನಗಳು ಹೇಳುವ ಪ್ರಕಾರ ರೆಸ್ವೆರಾಟ್ರೊಲ್, ಬೇರೆಲ್ಲಾ ನಿಮಿರುವಿಕೆ ಉತ್ತೇಜನಕ್ಕೆ ತೆಗೆದುಕೊಳ್ಳುವ ಔಷಧಿಗಿಂತ ತುಂಬಾ ಪರಿಣಾಮಕಾರಿಯಾಗಿರುವುದು.


 • ರೆಡ್ ವೈನ್ ನ ನಕಾರಾತ್ಮಕ ಪರಿಣಾಮಗಳು

  ರೆಡ್ ವೈನ್ ನ್ನು ಮಿತವಾಗಿ ಸೇವನೆ ಮಾಡಿದರೆ ಅದರಿಂದ ಯಾವುದೇ ರೀತಿಯ ನಕಾರಾತ್ಮಕವಾದ ಪರಿಣಾಮಗಳು ಉಂಟಾಗುವುದಿಲ್ಲ. ಆದರೆ ಬೇರೆಲ್ಲದರಂತೆ ನಿಯಂತ್ರಣವಿಲ್ಲದೆ ರೆಡ್ ವೈನ್ ಸೇವನೆ ಮಾಡಿದರೆ ಅದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗುವುದು. ಅತಿಯಾದ ಆಲ್ಕೋಹಾಲ್ ನಿಂದ ಲೈಂಗಿಕ ಚಟುವಟಿಕೆ ವೇಲೆ ನಿಮಿರುವಿಕೆ ಉಂಟಾಗಲು ಮತ್ತು ಅದನ್ನು ಕಾಯ್ದುಕೊಳ್ಳಲು ತುಂಬಾ ಕಠಿಣವಾಗಬಹುದು. ಸಂಗಾತಿ ಜತೆಗೆ ನೀವು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತಹ ಸಾಮರ್ಥ್ಯ ಮತ್ತು ಶಕ್ತಿಯನ್ನು ಅದು ಕಸಿದುಕೊಳ್ಳಬಹುದು. ಹೆಚ್ಚಿನ ಆರೋಗ್ಯ ತಜ್ಞರು ಲೈಂಗಿಕ ಶಕ್ತಿ ಹೆಚ್ಚಿಸಲು ಬಯಸು ವವರಿಗೆ ಕೇವಲ ಎರಡು ಲೋಟ ಸಲಹೆ ಮಾಡುತ್ತಾರೆ.


 • ಅಂತಿಮ ನಿರ್ಣಯ

  ಹೆಚ್ಚಿನ ಅಧ್ಯಯನಗಳು ಮಹಿಳೆಯರಿಗೆ ರೆಡ್ ವೈನ್ ನೀಡಿ ಅವರ ಮೇಲೆ ಸಂಶೋಧನೆಗಳನ್ನು ಮಾಡಿವೆ. ಮಿತ ಪ್ರಮಾಣದಲ್ಲಿ ಪುರುಷರು ಕೂಡ ರೆಡ್ ವೈನ್ ಸೇವನೆ ಮಾಡಿದರೆ ಅವರಲ್ಲೂ ಲೈಂಗಿಕಾಸಕ್ತಿಯು ಹೆಚ್ಚಾಗುವುದು ಎಂದು ಇತ್ತೀಚಿನ ದಿನಗಳಲ್ಲಿ ತಿಳಿದುಬಂದಿದೆ. ಯಾಕೆಂದರೆ ಇದರಲ್ಲಿ ಇರುವಂತಹ ಪ್ರಬಲವಾಗಿರುವ ಆ್ಯಂಟಿಆಕ್ಸಿಡೆಂಟ್ ಇದಕ್ಕೆ ಕಾರಣವಾಗಿದೆ. ಆ್ಯಂಟಿ ಆಕ್ಸಿಡೆಂಟ್ ದೇಹದಲ್ಲಿ ಹಲವಾರು ಭಾಗಗಳ ಚಟುವಟಿಕೆಯನ್ನು ಉತ್ತೇಜಿಸುವುದು. ಅದರಲ್ಲೂ ಮುಖ್ಯವಾಗಿ ಮೆದುಳು ಹಾಗೂ ರಕ್ತನಾಳ ವ್ಯವಸ್ಥೆಯಲ್ಲಿ. ರೆಸ್ವೆರಾಟ್ರೊಲ್ ಎನ್ನುವ ಅಂಶದಿಂದಾಗಿ ರೆಡ್ ವೈನ್ ನಲ್ಲಿ ಲೈಂಗಿಕಾಸಕ್ತಿ ಹೆಚ್ಚಿಸುವ ಶಕ್ತಿ ಬಂದಿರುವುದು. ಒಂದು ಗ್ಲಾಸ್ ವೈನ್ ಸೇವನೆ ಮಾಡಿಕೊಂಡು ನೀವು ಹಾಸಿಗೆಯಲ್ಲಿ ನಗು ಬೀರಿ ಮತ್ತು ಸಂಗಾತಿ ಹಾಗೂ ಲೈಂಗಿಕ ಜೀವನದಲ್ಲಿ ಖುಷಿ ಖುಷಿಯಾಗಿರಿ.
ಸಾಮಾನ್ಯವಾಗಿ ಕೆಂಪು ವೈನ್ ಎಂದರೆ 'ಮಹಿಳೆಯರು ಕುಡಿಯುವ ಮದ್ಯ' ಎಂದೇ ಹೆಚ್ಚಿನವರು ಕುಹಕವಾಡುತ್ತಾರೆ. ಮಹಿಳೆಯರು ಮದ್ಯಕ್ಕೆ ವ್ಯಸನರಾಗುವ ಬದಲು ಕೆಂಪು ವೈನ್ ಅನ್ನೇ ಹೆಚ್ಚಾಗಿ ಬಯಸುವುದು ಈ ಕುಹಕಕ್ಕೆ ಕಾರಣವಾಗಿದೆ. ಕೆಂಪು ವೈನ್ ಗೆ ನೂರಾರು ವರ್ಷಗಳ ರೋಚಕ ಇತಿಹಾಸವಿದೆ. ಕೆಂಪು ವೈನ್ ಅನ್ನು ವಿವಿಧ ತಳಿಯ ಕಪ್ಪು ದ್ರಾಕ್ಷಿಯಿಂದ ತಯಾರಿಸಲಾಗುತ್ತದೆ. ಈ ದ್ರಾಕ್ಷಿಗಳು ಗಾಢ ಕೆಂಪು ಬಣ್ಣದಿಂದ ಹಿಡಿದು ನೇರಳೆ ಅಥವಾ ಇಟ್ಟಿಗೆಯ ಕೆಂಪು ಅಥವಾ ಗಾಢ ಕಂದು ಬಣ್ಣದವೂ ಆಗಿರಬಹುದು. ದ್ರಾಕ್ಷಿಗಳು ಚೆನ್ನಾಗಿ ಹಣ್ಣಾದ ಬಳಿಕ ಇವನ್ನು ಹಿಂಡಿ ರಸವನ್ನು ಸಂಗ್ರಹಿಸಲಾಗುತ್ತದೆ ಹಾಗೂ ನೈಸರ್ಗಿಕವಾಗಿ ಕೊಂಚವೇ ಹುಳಿ ಬರುವಂತೆ ಮಾಡಲಾಗುತ್ತದೆ. ಅದು ಏನೇ ಇರಲಿ ಆದರೆ, ಇತ್ತೀಚೆಗೆ ಅಧ್ಯಾಯನ ಕಂಡುಕೊಂಡ ಬರುವ, ಮಿತ ಪ್ರಮಾಣದಲ್ಲಿ, ವಾರದಲ್ಲಿ ಒಂದೊಂದು ಗ್ಲಾಸ್ ರೆಡ್ ವೈನ್ ಸೇವನೆ ಮಾಡಿದರೆ ಅದರಿಂದ ಲೈಂಗಿಕಾಸಕ್ತಿಯು ಹೆಚ್ಚಾಗುವುದಂತೆ! ಆದರೆ ಅತಿಯಾಗಿ ಆಲ್ಕೋಹಾಲ್ ಸೇವನೆ ಮಾಡಿದರೆ ಅದರಿಂದ ಹೆಚ್ಚಿನ ಪುರುಷರಲ್ಲಿ ಬಂಜೆತನವು ಉಂಟು ಮಾಡಬಹುದು.

ಆದರೆ ನೆನಪಿಡಿ ಒಂದು ವೇಳೆ ನೀವು ಮದ್ಯಪಾನ ಮಾಡುತ್ತಲಿದ್ದರೆ ಆಗ ನೀವು ಇದನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಿ. ಒಂದು ಲೋಟ ರೆಡ್ ವೈನ್ ದೇಹಕ್ಕೆ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡಲು ಬೇಕಾಗುವಂತಹ ಆ್ಯಂಟಿ ಆಕ್ಸಿಡೆಂಟ್ ನ್ನು ಒದಗಿಸುವುದು ಮತ್ತು ಲೈಂಗಿಕಾಸಕ್ತಿ ಹಾಗೂ ಪ್ರದರ್ಶನ ಹೆಚ್ಚಿಸುವುದು. ಈ ಬಗ್ಗೆ ಹೆಚ್ಚಿಗೆ ಚರ್ಚಿಸಲಾಗಿಲ್ಲ. ವೈನ್ ನಿಂದ ಒಂದು ರೀತಿಯ ಸಾಮಾಜಿಕ ಲ್ಯುಬ್ರಿಕೆಂಟ್ ಸಿಕ್ಕಿದಂತೆ ಆಗುವುದು. ಇದರಿಂದ ಜೋಡಿಯು ಹೊರಗಡೆ ಸುತ್ತಾಡಲು ಹೋಗಬಹುದು ಮತ್ತು ತಮ್ಮ ಭಾವನೆಗಳನ್ನು ಹಂಚಿಕೊಳ್ಳುವಂತಹ ವಿಶ್ವಾಸವು ಬರುವುದು.

   
 
ಹೆಲ್ತ್