Back
Home » ಇತ್ತೀಚಿನ
ಭಾರತದ ಕಂಪೆನಿಗಳಿಗೇಕೆ ಉತ್ತಮ ಸ್ಮಾರ್ಟ್‌ಫೋನ್ ತಯಾರಿಸುವುದಿಲ್ಲ?..ಇದು ಶಾಕಿಂಗ್ ಸತ್ಯ!!
Gizbot | 20th Feb, 2019 08:50 AM
 • ಭಾರತದಲ್ಲಿ ಚೀನಾ ಕಂಪನಿಗಳ ಆರ್ಭಟ!

  ಈಗ ಬಹುತೇಕ ಚೀನಾ ಕಂಪನಿಗಳೇ ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯನ್ನು ಆಳುತ್ತಿವೆ. ಶಿಯೋಮಿ, ಒನ್‌ಪ್ಲಸ್, ವಿವೊ , ಹಾನರ್ ಕಂಪೆನಿಗಳು ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಶೇ. 50 ಕ್ಕಿಂತ ಹೆಚ್ಚು ಮಾರುಕಟ್ಟೆಯನ್ನು ಹೊಂದಿದ್ದರೆ, ಒಟ್ಟಾರೆಯಾಗಿ ಚೀನಾ ಕಂಪೆನಿಗಳು ಶೇ. 70 ರಷ್ಟು ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯನ್ನು ಆವರಿಸಿಕೊಂಡಿವೆ. ಇನ್ನುಳಿದ ಅಲ್ಪಸ್ವಲ್ಪ ಮಾರುಕಟ್ಟೆ ದಕ್ಷಿಣ ಕೋರಿಯಾದ ಸ್ಯಾಮ್‌ಸಂಗ್ ಪಾಲಾಗಿದ್ದರೆ, ತೃಣ ಮಾತ್ರದಷ್ಟು ಭಾರತದ ಮೊಬೈಲ್ ಕಂಪೆನಿಗಳ ಪಾಲಿಗಿದೆ.


 • ಮೇಡ್ ಇನ್‌ ಇಂಡಿಯಾ ಟ್ಯಾಗ್‌ ಅಷ್ಟೇ!

  ಭಾರತೀಯ ಮೊಬೈಲ್ ಕಂಪೆನಿಗಳಿ ಎಂದು ಕರೆಸಿಕೊಳ್ಳುವ ಹಲವು ಮೊಬೈಲ್ ಕಂಪೆನಿಗಳು ಚೀನಾದಿಂದ ಬಿಡಿಭಾಗಗಳನ್ನು ತರಿಸಿಕೊಂಡು ಭಾರತದಲ್ಲಿ ಅಸೆಂಬಲ್‌ ಮಾಡಿ ಮಾರಾಟ ಮಾಡುತ್ತಿವೆ. ದೇಶದ ಮೊಬೈಲ್ ಕಂಪನಿಗಳು ಬಿಡಿಬಾಗಗಳನ್ನು ಅಸೆಂಬಲ್ ಮಾಡಿ, ಅದಕ್ಕೆ ಮೇಡ್‌ ಇನ್‌ ಇಂಡಿಯಾ ಟ್ಯಾಗ್‌ ಹಾಕಿ ಮಾರಾಟ ಮಾಡುತ್ತಿವೆ.. ವಾಸ್ತವವಾಗಿ ಇವು ಸ್ಮಾರ್ಟ್‌ಫೋನ್‌ನ ಹಿಂಬದಿ ಕವರನ್ನೂ ಉತ್ಪಾದಿಸುತ್ತಿರಲಿಲ್ಲ. ಎಲ್ಲವನ್ನೂ ಚೀನಾದಿಂದ ತಂದು ಅಸೆಂಬಲ್ ಮಾಡಿ ಮಾರುತ್ತಿವೆ.


 • ಭಾರತೀಯರ ಬಳಿ ತಂತ್ರಜ್ಞಾನವೇ ಇಲ್ಲ!

  ನಿಮಗೆ ಗೊತ್ತಾ?, ಭಾರತೀಯ ಮೊಬೈಲ್ ಕಂಪನಿಗಳು ಸ್ಮಾರ್ಟ್‌ಫೋನ್‌ನಲ್ಲಿನ ಆಧುನಿಕ ತಂತ್ರಜ್ಞಾನಗಳನ್ನು ಕಂಡುಕೊಳ್ಳಲು ಸಂಶೋಧನೆಗೆ ಕೈ ಹಾಕೇ ಇಲ್ಲ. ಸದ್ಯ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ಅಷ್ಟೂ ಪೇಟೆಂಟ್‌ ತೈವಾನ್‌, ಚೀನಾ ಹಾಗೂ ಯುರೋಪ್‌ ದೇಶಗಳಲ್ಲಿವೆ. ಸ್ಮಾರ್ಟ್‌ ಫೋನ್‌ಗೆ ಬೇಕಿರುವ ಚಿಪ್‌ಸೆಟ್‌ಗಳು ಬಿಡಿ. ಗುಣಮಟ್ಟದ ಪ್ಲಾಸ್ಟಿಕ್‌ ಇಲ್ಲಿ ಲಭ್ಯವಿಲ್ಲ. ಡಿಸ್‌ಪ್ಲೇ ಟೆಕ್ನಾಲಜಿಯೂ ಭಾರತದಲ್ಲಿಲ್ಲ ಎಂದರೆ ನೀವು ನಂಬಲೇಬೇಕು. ಹಾಗಾಗಿ, ಭಾರತದ ಒಂದು ಕಂಪನಿ ಈಗ ಭಾರತದಲ್ಲೇ ಸ್ಮಾರ್ಟ್‌ಫೋನ್‌ ಅನ್ನು ಸಂಪೂರ್ಣವಾಗಿ ಉತ್ಪಾದಿಸುತ್ತೇನೆ ಎಂದು ಹೊರಟರೆ ಅದು ಅಸಾಧ್ಯದ ಮಾತೇ ಸರಿ.


 • ಭಾರತದಲ್ಲಿ ಉತ್ಪಾದನೆ ಮರೀಚಿಕೆ!

  ಭಾರತದಲ್ಲೇ ಸ್ಮಾರ್ಟ್‌ಫೋನ್‌ ಅನ್ನು ಸಂಪೂರ್ಣವಾಗಿ ಉತ್ಪಾದಿಸುತ್ತೇನೆ ಎಂದು ಹೊರಟರೆ ಅದು ಅಸಾಧ್ಯದ ಮಾತೇ ಸರಿ ಎಂದು ಹೇಳುವುದು ಕೂಡ ತಪ್ಪೇ. ಏಕೆಂದರೆ, ಭಾರತದಲ್ಲಿ ಭಾರತದಲ್ಲಿ ಸ್ಮಾರ್ಟ್‌ಪೋನ್ ಉತ್ಪಾದನೆ ಮರೀಚಿಕೆ ಎನ್ನಬಹುದು. ಏಕೆಂದರೆ, ವಿದೇಶಗಳಿಂದ ಬಿಡಬಾಗಗಳನ್ನು ಆಮದು ಮಾಡಿಕೊಳ್ಳದೇ ಬೇರೆ ದಾರಿಯೇ ಭಾರತೀಯರರಿಗಿಲ್ಲ. ಒಂದು ವೇಳೆ ಎಲ್ಲ ತಂತ್ರಜ್ಞಾನಗಳ ಪೇಟೆಂಟ್‌ ತೆಗೆದುಕೊಂಡು ಬಂದು ಭಾರತದಲ್ಲಿ ಒಂದು ಸ್ಮಾರ್ಟ್‌ಪೋನ್ ಉತ್ಪಾದಿಸಲು ಹೊರಟರೆ ಸಾಮಾನ್ಯ ಸ್ಮಾರ್ಟ್‌ಫೋನಿಗೆ ಐಫೋನ್ ಬೆಲೆ ಇಟ್ಟರೂ ಕಂಪನಿ ನಷ್ಟಕ್ಕೊಳಗಾಗುತ್ತದೆ ಎಂಬುದು ವಾಸ್ತವ.


 • ತಂತ್ರಜ್ಞಾನ ಭಾರದಿದ್ದರೆ ಕಷ್ಟಕಷ್ಟ!

  ಈ ಜಾಗತಿಕ ಪೈಪೋಟಿಯಲ್ಲಿ ಭಾರತದಲ್ಲಿ ಒಂದು ಸ್ಮಾರ್ಟ್‌ಪೋನ್ ಉತ್ಪಾದಿಸಲು ಹೊರಟರೆ ಆ ಕಂಪನಿ ನಷ್ಟಕ್ಕೊಳಗಾಗುತ್ತದೆ ಎಂಬುದು ವಾಸ್ತವ. ಒಂದು ವೇಳೆ ಸ್ಮಾರ್ಟ್‌ಫೋನ್‌ ಉತ್ಪಾದನೆಯ ಒಂದಷ್ಟಾದರೂ ತಂತ್ರಜ್ಞಾನ ಭಾರದಲ್ಲಿದ್ದಿದ್ದರೆ ಭಾರತಿಯರ ಹಣ ಮತ್ತು ಸುರಕ್ಷತೆ ಎರಡೂ ಪೋಲು. ಒಂದು ವೇಳೆ ಭಾರತ ಕೂಡ ತಂತ್ರಜ್ಞಾನದಲ್ಲಿ ಮುನ್ನಡೆದರೆ, ಲಕ್ಷಗಟ್ಟಲೆ ಯುವಕರಿಗೆ ಉದ್ಯೋಗ ಕೊಡುವ ಉದ್ಯಮ ಕೋಟ್ಯಂತರ ವಿದೇಶಿ ವಿನಿಮಯವನ್ನೂ ಸಹ ಉಳಿಸುತ್ತದೆ.ಚೀನಾ ಫೋನ್ ಖರಿದಿಸುವುದಿಲ್ಲ ಎಂದು ಭಾರತೀಯರು ಪಣತೊಡಬಹುದಾಗಿದೆ.


 • ಭಾರತೀಯ ಕಂಪೆನಿಗಳಿಗೆ ಕೊನೆಗಾಲ!

  ನಾಲ್ಕು ವರ್ಷದ ಹಿಂದೆ ಸ್ಯಾಮ್‌ಸಂಗ್‌ ನೋಕಿಯಾ ಬಿಡುಗಡೆ ಮಾಡುವ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯುವಂತಹ ಭಾರತೀಯ ಮೊಬೈಲ್ ಕಂಪನಿಗಳು ಇದ್ದವು. ಕೆಲವೇ ತಿಂಗಳುಗಳಲ್ಲಿ ಅವುಗಳಿಗಿಂತ ಅರ್ಧದಷ್ಟು ಕಡಿಮೆ ಬೆಲೆಯಲ್ಲಿ ಅದೇ ರೀತಿಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದ್ದವು.! ನಿಮಗೆ ಗೊತ್ತಾ?, ಇದಕ್ಕೆ ನೆರವಾಗಿದ್ದೇ ಇದೇ ಚೀನಾ ಕಂಪನಿಗಳು. ಆದರೆ, ಈಗ ಚೀನಾ ಕಂಪೆನಿಗಳೇ ದೇಶದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿರುವುದರಿಂದ ಭಾರತೀಯ ಕಂಪೆನಿಗಳು ಕೊನೆಗಾಲಕ್ಕೆ ಬಂದಿವೆ.
ಇತ್ತೀಚಿನ ತಂತ್ರಜ್ಞಾನದ ವೇಗಕ್ಕೆ ತಕ್ಕಂತೆ ತಾನೂ ಮಾರ್ಪಾಡು ಮಾಡಿಕೊಳ್ಳದ ಅದೆಷ್ಟೇ ಅನುಭವವಿರುವ ಕಂಪೆನಿಯೊಂದು ಸಹ ನೆಲಕಚ್ಚುತ್ತದೆ ಎಂಬುದಕ್ಕೆ ಒಂದು ಕಾಲದ ಮೊಬೈಲ್ ದಿಗ್ಗಜ ಸಂಸ್ಥೆಯೇ ಉದಾಹರಣೆ ಎನ್ನಬಹುದು. ಸ್ಮಾರ್ಟ್‌ಫೋನ್ ಕಾಲದಲ್ಲೂ ತನ್ನದೇ ನಿರ್ಧಾರಗಳಿಗೆ ಅಂಟಿಕೊಂಡಿದ್ದ ನೋಕಿಯಾ, ಹೊಸ ಅನ್ವೇಷಣೆಗೆ ಕೈ ಹಾಕದ ಯಾಹೂವಿನಂಹ ಕಂಪೆನಿಗಳೆಲ್ಲವೂ ಇಂದು ಹೇಳ ಹೆಸರಿಲ್ಲದಂತೆ ಕಳೆದುಹೋಗಿವೆ. ಇದಕ್ಕೆ ಈಗ ಭಾರತ ದೇಶ ಕೂಡ ಸೇರ್ಪಡೆಯಾಗಿದೆ.!

ಹೌದು, ಸ್ಮಾರ್ಟ್‌ಫೋನ್‌ ತಯಾರಿಕೆ ಉದ್ಯಮ ಸಮಯಕ್ಕೆ ಸರಿಯಾಗಿ ದೇಶಕ್ಕೆ ಬಾರದೇ ಇದ್ದುದರಿಂದ ಭಾರತವಿಂದ ಸಂಪೂರ್ಣ ವಿದೇಶದ ಮೇಲೆಯೇ ಅವಲಂಬಿಸುವಂತಾಗಿದೆ. ಈಗ ನಾವು ಹೇಗೆ ತೈಲದ ಬಹುತೇಕ ಬೇಡಿಕೆಯನ್ನು ವಿದೇಶದಿಂದ ತರುತ್ತೇವೆಯೋ ಹಾಗೆಯೇ ವಿಶ್ವದಲ್ಲೇ ಅತಿಹೆಚ್ಚು ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ಹೊಂದಿರುವ ದೇಶವಾಗಿರುವ ನಾವು ಬಹುತೇಕ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ಬಿಡಿಭಾಗಗಳನ್ನು ವಿದೇಶದಿಂದ ತರುತ್ತಿದ್ದೇವೆ ಎಂದರೆ ನೀವು ನಂಬಲೇಬೇಕು.

ನಮ್ಮಲ್ಲಿ ತೈಲ ಸಿಗದೇ ಇರುವುದರಿಂದ ಅದನ್ನು ವಿದೇಶದಿಂದ ತರಲೇಬೇಕು. ಆದರೆ, ಈ ಸ್ಮಾರ್ಟ್‌ಫೋನ್‌ಗೆ ಭಾರತ ಹಣವನ್ನು ಪೋಲು ಮಾಡುತ್ತಿರುವುದು ಮಾತ್ರ ಖಂಡನೀಯ ಎನ್ನಬಹುದು. ಸಾಫ್ಟ್ವೇರ್ ಲೋಕದಲ್ಲಿ ನಡೆಯುತ್ತಿರುವ ಭಾರತೀಯರ ಆಟ ಹಾರ್ಡ್‌ವೇರ್‌ನಲ್ಲಿ ನಡೆಯದೇ ಇರುವುದು ಕೂಡ ಇದಕ್ಕೆ ಕಾರಣವಾಗಿರಬಹುದು. ಹಾಗಾಗಿ, ಇಂದಿನ ಲೇಖನದಲ್ಲಿ ಭಾರತ ಎಂಬ ರೊಟ್ಟಿ ಚೀನಾ ಮೊಬೈಲ್ ಕಂಪನಿಗಳ ತುಪ್ಪಕ್ಕೆ ಜಾರಿಬಿದ್ದದ್ದು ಹೇಗೆ ಎಂಬುದರ ಬಗ್ಗೆ ನಿಮಗೆ ನಾನು ತಿಳಿಸಿಕೊಡುತ್ತಿದ್ದೇನೆ.

   
 
ಹೆಲ್ತ್