Back
Home » ಇತ್ತೀಚಿನ
ಫ್ಲಿಪ್‌ಕಾರ್ಟ್ 'ಮೊಬೈಲ್ ಬೊನಾಂಜಾ' ಮೇಳದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ಡಿಸ್ಕೌಂಟ್‌!!
Gizbot | 20th Feb, 2019 10:40 AM
 • ರಿಯಲ್‌ ಮಿ 2 ಪ್ರೋ

  ಜನಪ್ರಿಯ ರಿಯಲ್‌ ಮಿ 2 ಪ್ರೋ ಸ್ಮಾರ್ಟ್‌ಫೋನ್‌ ಆಫರ್‌ನಲ್ಲಿದ್ದು, ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದೆ. 4GB ಸಾಮರ್ಥ್ಯದ RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯ ಸ್ಮಾರ್ಟ್‌ಫೋನ್‌ ಬೆಲೆ. 11,990ರೂ.ಗಳು ಹಾಗೂ 6GB RAM ಮತ್ತು 64GB ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್‌ಫೋನ್ ಬೆಲೆ 13,990ರೂ.ಗಳು ಆಗಿರಲಿವೆ.


 • ಶಿಯೋಮಿ ರೆಡ್ಮಿ 6 ಪ್ರೋ

  ಶಿಯೋಮಿ ಕಂಪನಿಯ ರೆಡ್ಮಿ 6 ಪ್ರೋ ಸ್ಮಾರ್ಟ್‌ಫೋನ್‌ ಎರಡು ವೇರಿಯಂಟ್‌ಗಳಲ್ಲಿ ದೊರೆಯಲಿದ್ದು, 1000ರೂ.ಗಳ ಬೆಲೆ ಕಡಿತವಾಗಿದೆ. 4GB ಸಾಮರ್ಥ್ಯದ RAM ಸಾಮರ್ಥ್ಯದ ವೇರಿಯಂಟ್ ಸ್ಮಾರ್ಟ್‌ಫೋನ್‌ ದರ 12,999 ರೂ.ಗಳಾಗಿದೆ. ಹಾಗೇ 6GB ಸಾಮರ್ಥ್ಯದ RAM ಸಾಮರ್ಥ್ಯದ ಸ್ಮಾರ್ಟ್‌ಫೋನ್‌ ಬೆಲೆಯು 14,999ರೂ.ಗಳು ಆಗಿದೆ.


 • ಆಸೂಸ್‌ ಝೆನ್‌ಪೋನ್ ಮ್ಯಾಕ್ಸ್‌ ಪ್ರೋ M2

  ಜನಪ್ರಿಯ ಆಸೂಸ್‌ ಕಂಪನಿಯ 'ಝೆನ್‌ಪೋನ್ ಮ್ಯಾಕ್ಸ್‌ ಪ್ರೋ M2' ಸ್ಮಾರ್ಟ್‌ಫೋನ್ ಬೆಲೆಯ ಮೇಲೆ 1000 ರೂ.ಗಳನ್ನು ಡಿಸ್ಕೌಂಟ್‌ ಮಾಡಲಾಗಿದ್ದು, 3GB RAM ಮತ್ತು 32GB ಆಂತರಿಕ ಶೇಖರಣಾ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್‌ಫೋನ್‌ ದರ 11,999ರೂ.ಗಳು, 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್‌ ಬೆಲೆಯು 13,999ರೂ.ಗಳು ಇರಲಿವೆ.


 • ಮೊಟೊರೊಲಾ ಒನ್ ಪವರ್‌

  ಮೊಟೊರೊಲಾ ಕಂಪನಿಯು ಮೊಟೊ ಎಂಬ ಹೆಸರಿನಿಂದ ಗ್ರಾಹಕರಿಗೆ ಪರಿಚಿತವಾಗಿದ್ದು, ಇದೀಗ ಮೊಟೊ ಕಂಪನಿಯ 'ಒನ್‌ ಪವರ್‌' ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ 1000 ದರ ಕಡಿತವಾಗಿದೆ. 4GB ಸಾಮರ್ಥ್ಯದ RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥವನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ ಬೆಲೆಯು 13,999ರೂ.ಗಳು


 • ನೋಕಿಯಾ 6.1 ಪ್ಲಸ್‌

  ಸ್ಮಾರ್ಟ್‌ಫೋನ್‌ ಪ್ರಿಯರ ಎವರ್‌ಗ್ರೀನ್ ಜನಪ್ರಿಯ ಕಂಪನಿ ನೋಕಿಯಾದ, 'ನೋಕಿಯಾ 6.1 ಪ್ಲಸ್‌' ಸ್ಮಾರ್ಟ್‌ಫೋನ್‌ ಬೆಲೆಯ ಮೇಲೆ ಆಫರ್‌ ನೀಡಲಾಗಿದೆ. ನೋಕಿಯಾದ ಈ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯ ಒಳಗೊಂಡಿದ್ದು, ಇದರ ಬೆಲೆಯು 13,999ರೂ.ಗಳು ಆಗಿವೆ.
ಇ ಕಾಮರ್ಸ್ ದೈತ್ಯ 'ಫ್ಲಿಪ್‌ಕಾರ್ಟ್' ಸದಾ ಆಫರ್‌ಗಳ ಮಳೆಯನ್ನು ಸುರಿಸುತ್ತ, ಆನ್‌ಲೈನ್‌ ಶಾಪಿಂಗ್ ಪ್ರಿಯರ ನೆಚ್ಚಿನ ತಾಣವಾಗಿದೆ. ಫ್ಯಾಶನ್, ಗೃಹ ಉಪಯೋಗಿ ಉತ್ಪನ್ನಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು ಮತ್ತು ಗ್ಯಾಜೆಟ್‌ ಹೀಗೆ ಒಂದಿಲ್ಲೊಂದು ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿ ಕೊಡುಗೆಯನ್ನು ನೀಡುತ್ತಾ ಬಂದಿರುವ ಫ್ಲಿಪ್‌ಕಾರ್ಟ್‌ ಇದೀಗ ಮೊಬೈಲ್ ಬೊನಾಂಜಾ ಆಫರ್‌ಅನ್ನು ಆರಂಭಿಸಿದೆ.

ಹೌದು, ಜನಪ್ರಿಯ ಇ ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್‌ 'ಮೊಬೈಲ್ ಬೊನಾಂಜಾ' ಹೆಸರಿನಲ್ಲಿ ರಿಯಾಯಿತಿ ಮೇಳ ಆಯೋಜಿಸಿದ್ದು, ಈ ಮೇಳದಲ್ಲಿ ಆಯ್ದ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್‌ ನೀಡಲಾಗುತ್ತಿದೆ. ಫೆಬ್ರುವರಿ 19 ರಿಂದ ಆರಂಭವಾಗಿರುವ ಮೊಬೈಲ್ ಬೊನಾಂಜ್ ಕೊಡುಗೆಯು ಇದೇ ಫೆಬ್ರುವರಿ 23ರ ವರೆಗೂ ಇರಲಿದೆ. ಆಫರ್‌ನಲ್ಲಿ ಗ್ರಾಹಕರು ಸ್ಮಾರ್ಟ್‌ಫೋನ್‌ ಖರೀದಿಸಬಹುದು. ಹಾಗಾದರೇ ಫ್ಲಿಪ್‌ಕಾರ್ಟ್‌ನ 'ಮೊಬೈಲ್ ಬೊನಾಂಜಾ' ಕೊಡುಗೆಯಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಆಫರ್‌ ನೀಡಲಾಗಿದೆ ಎಂಬುದನ್ನು ನೋಡೋಣ ಬನ್ನಿ.

   
 
ಹೆಲ್ತ್