Back
Home » ಇತ್ತೀಚಿನ
ಗೂಗಲ್ ಮ್ಯಾಪ್ ಬಳಸಿ 'ಬಾಗಾ ಬೀಚ್‌'ಗೆ ಹೋದ್ರೆ, ನೀವು ದಾರಿ ತಪ್ಪೊದು ಗ್ಯಾರಂಟಿ!!
Gizbot | 20th Feb, 2019 11:45 AM

ಗೂಗಲ್ ಮ್ಯಾಪ್‌ ಸಹಾಯದಿಂದ ಹೊಸ ಪ್ರದೇಶಗಳಿಗೆ ಭೇಟಿ ನೀಡುವುದು ಇದೀಗ ತುಂಬಾ ಸುಲಭ. ನೀವು ಗೋವಾ ರಾಜ್ಯಕ್ಕೆ ಭೇಟಿ ನೀಡಿ ಅಲ್ಲಿನ ಪ್ರಮುಖ 'ಬಾಗಾ ಬೀಚ್‌'ಗೆ ಹೋಗುವ ಮಾರ್ಗವನ್ನು ನೀವೆನಾದರೂ ಗೂಗಲ್‌ನಲ್ಲಿ ಹುಡುಕಿಕೊಂಡು ಹೋದರೆ, ಮೂರ್ಖರಾಗುವುದು ಗ್ಯಾರೆಂಟಿ.! ಹೌದು, ಸರಿ ದಾರಿ ತೋರುವ 'ಗೂಗಲ್ ಮ್ಯಾಪ್‌' ಗೋವಾದಲ್ಲಿ ನಿಮ್ಮ ದಾರಿ ತಪ್ಪಿಸಿ ನಿಮ್ಮನ್ನು ಪೇಚಿಗೆ ಸಿಲುಕಿಸಬಹುದು!

ಗೋವಾದ ಬಾಗಾ ಬೀಚ್‌ಗೆ ತೆರಳುವ ಮಾರ್ಗವನ್ನು ನೀವು ಗೂಗಲ್ ಮ್ಯಾಪ್‌ನಲ್ಲಿ ಹುಡುಕಿ ಆ ಮಾರ್ಗವಾಗಿ ಹೋಗಿ ನೋಡಿದರೇ 'ಬಾಗಾ ಬೀಚ್' ಕಾಣಿಸುವುದೇ ಇಲ್ಲಾ. ಬದಲಿದೆ ಒಂದು ಬ್ಯಾನರ್‌ನಲ್ಲಿ ಗೂಗಲ್ ಮ್ಯಾಪ್‌ ಮೂಲಕ ಹುಡುಕಿ ಬಂದು ಮೂರ್ಖರಾಗಿದ್ದಿರಾ. ಬಂದ ದಾರಿಯಲ್ಲಿ ಹಿಂದಕ್ಕೆ ಚಲಿಸಿ, ಎಡಗಡೆ ರಸ್ತೆಯಲ್ಲಿ ಸುಮಾರು 1 ಕಿ.ಮೀ ಪ್ರಯಾಣಿಸಿದರೇ ಬಾಗಾ ಬೀಚ್‌ಗೆ ತಲುಪುವಿರಿ ಎಂಬ ಮಾಹಿತಿ ತಿಳಿಸಲಾಗಿದೆ.

ಗೋವಾ ರಾಜ್ಯದ ಬಾಗಾ ಬೀಚ್ ವಿಶಾಲವಾದ ಕಿನಾರೆಯನ್ನು ಹೊಂದಿದ್ದು, ಈ ಸಮುದ್ರ ತೀರ ಹೆಚ್ಚು ಜನಪ್ರಿಯ ಪಡೆದಿದೆ. ಹೀಗಾಗಿ ಗೋವಾಕ್ಕೆ ಬರುವ ಪ್ರವಾಸಿಗರು ಬಾಗಾ ತೀರಕ್ಕೆ ಭೇಟಿ ನೀಡದೆ ಹೋಗೊದಿಲ್ಲ. ಆದರೆ 'ಗೂಗಲ್ ಮ್ಯಾಪ್‌'ನ ಈ ಅವಾಂತರದಿಂದ ಬಾಗಾ ಬೀಚ್‌ಗೆ ಬರಲು ಹೋಗಿ ಅನೇಕ ಪ್ರವಾಸಿಗರು ತಪ್ಪಾದ ದಾರಿಗೆ ಹೋಗಿ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲಿಯ ಬ್ಯಾನರ ನೋಡಿ ಮತ್ತೆ ಸರಿ ದಾರಿ ಮೂಲಕ ಬಾಗಾ ಬೀಚ್ ತಲುಪಿ ತಂಪಾಗಿದ್ದಾರೆ. ಈ ಕುರಿತು ಕೆಲವು ಪ್ರವಾಸಿಗರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ

   
 
ಹೆಲ್ತ್