Back
Home » ಆರೋಗ್ಯ
ಸೋರಿಯಾಸಿಸ್ ಎನ್ನುವ 'ಚರ್ಮ ರೋಗಕ್ಕೆ' ಪವರ್‌ಫುಲ್ ಮನೆಔಷಧಿಗಳು
Boldsky | 20th Feb, 2019 12:33 PM
 • ಕುರುಕಲು ತಿಂಡಿ, ಫಾಸ್ಟ್ ಫುಡ್

  ಇಂದಿನ ದಿನಗಳಲ್ಲಿ ಜನರು ಸಾಕಷ್ಟು ಕುರುಕಲು ತಿಂಡಿ, ಫಾಸ್ಟ್ ಫುಡ್, ಬಣ್ಣ ಮಿಶ್ರಿತ ಆಹಾರಗಳನ್ನು ಸೇವಿಸುವುದರಿಂದ ಅವು ನೇರವಾಗಿ ರಕ್ತಗಳ ಮೇಲೆ ಪರಿಣಾಮ ಬೀರುತ್ತವೆ. ಕಲುಷಿತವಾದ ರಕ್ತಗಳು ಚರ್ಮದ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ವಿವಿಧ ಬಗೆಯ ಚರ್ಮ ಸಂಬಂಧಿ ಆರೋಗ್ಯ ಸಮಸ್ಯೆಗಳು ಉದ್ಭವ ಆಗುತ್ತವೆ ಎಂದು ಹೇಳಲಾಗುವುದು. ಚರ್ಮ ರೋಗಗಳಲ್ಲಿ ಕೆಲವು ರೋಗಗಳು ಬಹಳ ದೀರ್ಘ ಸಮಯಗಳ ಕಾಲ ಉಳಿದುಕೊಳ್ಳುತ್ತದೆ. ಅವುಗಳ ಆರೈಕೆ ವಿಧಾನವೂ ಕೊಂಚ ಜಠಿಲವಾಗಿರುವುದು. ಅವುಗಳ ಜೊತೆಗೆ ರೋಗ ನಿವಾರಣೆ ಉಂಟಾಗದೆ ಇರುವುದಕ್ಕೆ ಮಾನಸಿಕವಾಗಿಯೂ ಒಂದು ಬಗೆಯ ಕಿರಿಕಿರಿಯನ್ನು ಅನುಭವಿಸಬೇಕಾಗುವುದು. ಅಂತಹ ಒಂದು ಚರ್ಮ ರೋಗಗಳಲ್ಲಿ ಸೋರಿಯಾಸಿಸ್ ಕೂಡಾ ಒಂದು.


 • ಸೋರಿಯಾಸಿಸ್ ಎನ್ನುವ ಚರ್ಮ ರೋಗ

  ಸೋರಿಯಾಸಿಸ್ ಎನ್ನುವ ಚರ್ಮ ರೋಗವು ಇಂದು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಕಾಡುವ ಒಂದು ಸಮಸ್ಯೆಯಾಗಿದೆ. ಇತ್ತೀಚೆಗೆ ಸೋರಿಯಾಸಿಸ್ ಸಮಸ್ಯೆಗೆ ಅಧಿಕ ಜನರು ಒಳಗಾಗುತ್ತಿದ್ದಾರೆ ಎಂದು ಹೇಳಲಾಗುವುದು. ಸೋರಿಯಾಸಿಸ್ ಎನ್ನುವುದು ಅತಿಯಾದ ಪ್ರತಿರಕ್ಷಣಾ ವ್ಯವಸ್ಥೆಯಿಂದ ಉಂಟಾಗುವ ದೀರ್ಘಕಾಲದ ಚರ್ಮ ರೋಗ ಎನ್ನಲಾಗುವುದು. ಇದು ಒಮ್ಮೆ ದೇಹಕ್ಕೆ ಆಕ್ರಮಿಸಿತು ಎಂದರೆ ಅದರ ನಿವಾರಣೆಗೆ ಸಾಕಷ್ಟು ಸಮಯ ಬೇಕಾಗುವುದು. ಇದು ಚರ್ಮದಲ್ಲಿ ಉರಿಯೂತ, ತುರಿಕೆ, ಚರ್ಮವು ಒರಟಾಗುವುದು, ತೇವಾಂಶ ಕಳೆದುಕೊಳ್ಳುವುದು, ಚರ್ಮದ ಬಣ್ಣವು ಬಿಳಿ, ಬೆಳ್ಳಿಯ ಬಣ್ಣ ಅಥವಾ ಕೆಂಪು ಕಲೆಯಂತೆ ಗೋಚರವಾಗುತ್ತದೆ.


 • ವಿಭಿನ್ನವಾದ ಗುಣ ಲಕ್ಷಣಗಳಿಂದ ಕೂಡಿರುತ್ತವೆ!

  ಸೋರಿಯಾಸಿಸ್ ಒಬ್ಬರಿಂದ ಒಬ್ಬರಿಗೆ ವಿಭಿನ್ನವಾದ ಗುಣ ಲಕ್ಷಣಗಳಿಂದ ಕೂಡಿರುತ್ತವೆ ಎನ್ನಲಾಗುವುದು. ಸೋರಿಯಾಸಿಸ್ ಅಲ್ಲಿ ವಿವಿಧ ಬಗೆಯಿರುವುದರಿಂದ ಅದರ ಉಪಶಮನವು ಅಥವಾ ನಿವಾರಣೆಯ ಸಮಯವು ವಿಭಿನ್ನತೆಯಿಂದ ಕೂಡಿರುತ್ತದೆ. ಕೆಲವು ಸೋರಿಯಾಸಿಸ್ ಸಮಸ್ಯೆಯು ಒಂದು ವಾರ, ತಿಂಗಳು ಅಥವಾ ಒಂದು ವರ್ಷಗಳ ಕಾಲ ಸಮಯವನ್ನು ತೆಗೆದುಕೊಳ್ಳಬಹುದು. ಸೋರಿಯಾಸಿಸ್ ಸಮಸ್ಯೆಗೆ ಇಂತಹದ್ದೇ ಕಾರಣ ಎಂದು ನಿಖರವಾಗಿ ಕಂಡು ಹಿಡಿಯಲು ಸಾಧ್ಯವಾಗಲಿಲ್ಲ. ಆದರೆ ಅದು ದೇಹದಲ್ಲಿ ಇರುವ ಟಿ ಕೋಶಗಳು ಮತ್ತು ಬಿಳಿ ರಕ್ತಕಣಗಳೊಂದಿಗೆ ನಿರೋಧಕ ವ್ಯವಸ್ಥೆಯ ಸಮಸ್ಯೆ ಉಂಟಾದಾಗ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆ ಎಂದು ಭಾವಿಸಲಾಗಿದೆ.


 • ಇದಕ್ಕೆ ಪರಿಹಾರವೇನು?

  ಟಿ ಕೋಶಗಳು ಸಾಮಾನ್ಯವಾಗಿ ವೈರಸ್, ಬ್ಯಾಕ್ಟೀರಿಯಾ ಸೇರಿದಂತೆ ಇನ್ನಿತರ ಬಾಹ್ಯ ಸಮಸ್ಯೆಗಳಿಂದ ರಕ್ಷಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ಟಿ ಕೋಶದ ಸಮಸ್ಯೆ ಉಂಟಾದಾಗ ದೇಹಕ್ಕೆ ತಗುಲುವ ಸೋಂಕುಗಳನ್ನು ನಿಯಂತ್ರಿಸುವಲ್ಲಿ ಅಸಹಾಯಕವಾಗಿರುತ್ತದೆ. ಆಗ ಸೋರಿಯಾಸಿಸ್‍ನಂತಹ ಸಮಸ್ಯೆ ಉದ್ಭವ ಆಗುತ್ತವೆ ಎಂದು ಹೇಳಲಾಗುವುದು. ಸೋರಿಯಾಸಿಸ್ ವ್ಯಕ್ತಿಯ ದೇಹದ ಯಾವ ಭಾಗದಲ್ಲಿಯಾದರೂ ಗೋಚರವಾಗಬಹುದು ಎನ್ನಲಾಗುವುದು. ಈ ಸಮಸ್ಯೆಗೆ ಆಯುರ್ವೇದದಲ್ಲಿ ಸಾಕಷ್ಟು ಪರಿಹಾರಗಳನ್ನು ಕಂಡು ಕೊಳ್ಳಬಹುದು. ಮನೆಯಲ್ಲಿಯೇ ಕೆಲವು ಕ್ರಮವನ್ನು ಕೈಗೊಳ್ಳುವುದರ ಮೂಲಕ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು. ಹಾಗಾದರೆ ಆ ಆರೈಕೆಯ ವಿಧಾನಗಳು ಯಾವವು? ಎನ್ನುವುದನ್ನು ತಿಳಿಯಲು ಲೇಖನದ ಮುಂದಿನ ಭಾಗವನ್ನು ಪರಿಶೀಲಿಸಿ.

  Most Read: ಏನಿದು ಸೋರಿಯಾಸಿಸ್ ಕಾಯಿಲೆ? ವೈದ್ಯರು ಇದರ ಬಗ್ಗೆ ಏನು ಹೇಳುತ್ತಾರೆ?


 • ಸೋರಿಯಾಸಿಸ್‍ಗೆ ಕಾರಣಗಳು

  ಸೋರಿಯಾಸಿಸ್ ಸಮಸ್ಯೆಗೆ ಬಹು ಮುಖ್ಯ ಕಾರಣಗಳಿವೆ. ಅವುಗಳಿಂದಲೇ ನಮ್ಮನ್ನು ಬಾಧಿಸುವ ಸಾಧ್ಯತೆಗಳು ಹೆಚ್ಚು ಎಂದು ಹೇಳಲಾಗುವುದು. ಹಾಗಾಗಿ ಅಂತಹ ಕಾರಣಗಳಿಂದ ಸಾಕಷ್ಟು ರಕ್ಷಣೆ ಹಾಗೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಸಮಸ್ಯೆಯನ್ನು ನಿಯಂತ್ರಣದಲ್ಲಿ ಅಥವಾ ಸನಸ್ಯೆಯಿಂದ ದೂರ ಉಳಿಯಬಹುದು.


 • ಆನುವಂಶಿಕವಾಗಿ ಬರಬಹುದು

  ಈ ಕಾರಣವು ಒಂದು ಅಪಯಾಕಾರಿ ಎಂದು ಹೇಳಬಹುದು. ಈ ಸಮಸ್ಯೆಯು ಕುಟುಂಬದಲ್ಲಿ ಒಬ್ಬರಿಗೆ ಮೊದಲು ಬಂದಿದ್ದರೆ ಅದರ ನಂತರದ ಬೀಳಿಗೆಯ ವ್ಯಕ್ತಿಗಳಿಗೆ ಅಥವಾ ಮಕ್ಕಳಿಗೂ ಬರಬಹುದು ಎಂದು ಹೇಳಲಾಗುವುದು. ಒಬ್ಬರಿಂದ ಒಬ್ಬರಿಗೆ ಹರುವ ಸಾಧ್ಯತೆಯು ಹೆಚ್ಚಾಗಿ ಇರುತ್ತದೆ. ಹಾಗಾಗಿ ಈ ಕಾರಣವು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗುವುದು.


 • ವೈರಸ್ ಮತ್ತು ಬ್ಯಾಕ್ಟೀರಿಯಾದ ಸೋಂಕು

  ರೋಗ ನಿರೋಧಕ ಶಕ್ತಿಯು ಕಡಿಮೆ ಇರುವವರಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುವುದು. ಅದರಲ್ಲೂ ಎಚ್‍ಐವಿ ಸೋಂಕು ಇರುವ ವ್ಯಕ್ತಿಗಳಲ್ಲಿ ಸೋರಿಯಾಸಿಸ್ ಸೋಂಕು ಅಭಿವೃದ್ಧಿ ಹೊಂದುವುದು. ಈ ಸೋಂಕು ಸಾಮಾನ್ಯವಾಗಿ ಗಂಟಲುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು. ಇದರ ಹರಡುವಿಕೆಯು ಮಕ್ಕಳು ಹಾಗೂ ಯುವಕರಲ್ಲಿ ಹೆಚ್ಚಿನ ಅಪಾಯ ತರುವುದು ಎಂದು ಹೇಳಲಾಗುತ್ತದೆ.


 • ಒತ್ತಡ

  ಒತ್ತಡವು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದರಿಂದ ಹೆಚ್ಚಿನ ಆರೋಗ್ಯ ಸಮಸ್ಯೆ ಉಂಟಾಗುವುದು. ಒತ್ತಡದ ಮಟ್ಟ ಹೆಚ್ಚಿದಂತೆ ಸೋರಿಯಾಸಿಸ್‍ನ ಅಪಾಯವು ಹೆಚ್ಚುವುದು ಎನ್ನಲಾಗುತ್ತದೆ.

  Most Read: ನಿದ್ರೆ ಇಲ್ಲದ ವ್ಯಕ್ತಿಯಲ್ಲಿ ಉಂಟಾಗಬಹುದಾದ ಸಮಸ್ಯೆಗಳು


 • ಸ್ಥೂಲಕಾಯ

  ಹೆಚ್ಚುವರಿ ತೂಲವು ಸೋರಿಯಾಸಿಸ್‍ನ ಅಪಾಯವನ್ನು ಹೆಚ್ಚಿಸುತ್ತದೆ. ಎಲ್ಲಾ ವಿಧದ ಸೋರಿಯಾಸಿಸ್‍ನೊಂದಿಗೆ ಸಂಬಂಧಿಸಿದ ಲೆಸಿಯಾನ್‍ಗಳು (ದದ್ದುಗಳು) ಚರ್ಮದ ಮಡಿಕೆ ಹಾಗೂ ಸಂಧಿಯ ಜಾಗದಲ್ಲಿ ಬೆಳವಣಿಗೆಯನ್ನು ಕಾಣುತ್ತವೆ.


 • ಧೂಮಪಾನ

  ಧೂಮಪಾನ ತಂಬಾಕು ಸೋರಿಯಾಸಿಸ್‍ನ ಅಪಾಯವನ್ನು ಹೆಚ್ಚಿಸುತ್ತದೆ. ಅದು ರೋಗದ ತೀವ್ರತೆಯನ್ನು ಹೆಚ್ಚಿಸುತ್ತದೆ. ರೋಗದ ಆರಂಭಿಕ ಬೆಳವಣಿಗೆಯಲ್ಲಿ ಧೂಮಪಾನವು ಮಹತ್ತರವಾದ ಪಾತ್ರ ವಹಿಸುತ್ತದೆ.


 • ಮನೆಯ ಆರೈಕೆಯ ವಿಧಾನ

  ಪೆಟ್ರೋಲಿಯಂ ಜೆಲ್ಲಿಯ ಲೇಪನ
  ಸೋರಿಯಾಸಿಸ್ ಗಾಯವನ್ನು ನಿಯಂತ್ರಿಸಲು ಒಂದು ಉತ್ತಮ ಮನೆ ಪರಿಹಾರ ಎಂದರೆ ಪೆಟ್ರೋಲಿಯಂ ಜೆಲ್ಲಿಯ ಲೇಪನ. ಪೆಟ್ರೋಲಿಯಂ ಜೆಲ್ಲಿಯನ್ನುದಪ್ಪಗೆ ಪೀಡಿತ ಪ್ರದೇಶಕ್ಕೆ ಅನ್ವಯಿಸುವುದರಿಂದ ನೀರಿನಂಶವು ಚರ್ಮದೊಳಗೆ ಉಳಿದುಕೊಳ್ಳುವಂತೆ ನಮಾಡುವುದು. ಆಗ ತೇವಾಂಶದಿಂದ ಕೂಡಿದ ಚರ್ಮವು ಸಮಸ್ಯೆಯನ್ನು ಶಮನಗೊಳಿಸಲು ಸಹಾಯ ಮಾಡುವುದು.


 • ಆಪಲ್ ಸೈಡರ್ ವಿನೆಗರ್

  ಆಪಲ್ ಸೈಡರ್ ವಿನೆಗರ್‍ಅನ್ನು ಸಲಾಡ್‍ಗಳಲ್ಲಿ ಬಳಕೆ ಮಾಡಲು ಸಾಮಾನ್ಯವಾಗಿ ಬಳಸಲಾಗುವುದು. ಇದನ್ನು ನೀವು ತಲೆಯ ಭಾಗದಲ್ಲಿ ಉಂಟಾದ ಸೋರಿಯಾಸಿಸ್‍ನ ಆರೈಕೆಗೆ ಬಳಸಬಹುದು. ವಾರದಲ್ಲಿ ಕೆಲವು ಬಾರಿ ಆಪಲ್ ಸೈಡರ್ ವಿನೆಗರ್‍ಅನ್ನು ನೆತ್ತಿಯ ಮೇಲೆ ಹಾಕುವುದರಿಂದ ಸೋರಿಯಾಸಿಸ್ ಕೆರೆತದಿಂದ ಉಪಶಮನ ನೀಡುವುದು. ಸೋರಿಯಾಸಿಸ್ ಪೀಡಿತ ಪ್ರದೇಶವು ರಕ್ತ ಸ್ರಾವದಿಂದ ಬಿರುಕುಗೊಂಡಾಗ ವಿನೆಗರ್ ಬಳಸಬಾರದು. ಹಾಗೊಮ್ಮೆ ಬಳಸಿದರೆ ಸುಡುವಂತಹ ಅನುಭವ ಆಗುವುದು.


 • ಸ್ವಲ್ಪ ಸೂರ್ಯನ ಕಿರಣಕ್ಕೆ ತೆರೆದುಕೊಳ್ಳಿ

  ಮುಂಜಾನೆಯ ಬಿಸಿಲು ನಮ್ಮ ದೇಹಕ್ಕೆ ಅತ್ಯುತ್ತಮವಾದದ್ದು. ಚರ್ಮದ ಆರೈಕೆಗೆ ಅಗತ್ಯವಾದ ವಿಟಮಿನ್ ಡಿಯನ್ನು ನೀಡುವುದು. ಸೂರ್ಯನ ನೇರಳಾತೀತ ಬಿ ಕಿರಣವು ಸೋರಿಯಾಸಿಸ್ ನಿಯಂತ್ರಿಸಲು ಅಥವಾ ಕಡಿಮೆ ಮಾಡಲು ಸಹಾಯಮಾಡುತ್ತದೆ. ದಿನಕ್ಕೆ 5 ರಿಂದ 10 ನಿಮಿಷಗಳ ಕಾಲ ಸೂರ್ಯನ ಕಿರಣವನ್ನು ಪಡೆದುಕೊಳ್ಳಲು ಪ್ರಯತ್ನಿಸಿ. ಅತಿಯಾದ ಸೂರ್ಯನ ಕಿರಣಕ್ಕೆ ತೆರೆದುಕೊಳ್ಳುವುದರಿಂದ ಚರ್ಮದ ಕ್ಯಾನ್ಸರ್ ಅಂತಹ ಅಪಾಯವು ಎದುರಾಗುವುದು ಎಂದು ಹೇಳಲಾಗುತ್ತದೆ.


 • ಉಪ್ಪು ನೀರಿನ ಸ್ನಾನ

  ಉಪ್ಪು ನೀರಿನಿಂದ ಕೂಡಿರುವ ನದಿ ನೀರು ಅಥವಾ ಬೆಚ್ಚಗಿನ ನೀರಿಗೆ ಎಪ್ಸಮ್ ಉಪ್ಪನ್ನು ಬೆರೆಸಿ. ಆ ನೀರಿನಲ್ಲಿ ಕುಳಿತು ಕೊಳ್ಳುವುದು ಅಥವಾ ಪೀಡಿತ ಪ್ರದೇಶವನ್ನು ನೆನೆಯಿಡುವಂತೆ ಮಾಡುವುದರಿಂದ ಸಮಸ್ಯೆ ಗುಣಮುಖವಾಗುವುದು. 15 ನಿಮಿಷಗಳ ಕಾಲ ನೆನೆಸಿಕೊಂಡ ಮೇಲೆ ತಿಳಿನೀರಿನಿಂದ ಸ್ವಚ್ಛಗೊಳಿಸಿ, ಮಾಯ್ಚುರೈಸ್ ಕ್ರೀಮ್‍ಅನ್ನು ಬಳಸಿ.


 • ಕ್ಯಾಪ್ಸಿಕಮ್ ಮೆಣಸಿನಕಾಯಿ

  ಮೆಣಸಿನ ಕಾಯಿ ಬಿಸಿಯಾದ ಅಂಶವನ್ನು ಒಳಗೊಂಡಿದೆ. ಸೋರಿಯಾಸಿಸ್ ಸಮಸ್ಯೆ ಇದ್ದವರು ಅವರ ಚೀಲದಲ್ಲಿ ಕ್ಯಾಪ್ಸಿಕಮ್ ಮೆಣಸಿನಕಾಯಿ ಇಟ್ಟುಕೊಂಡರೆ ಉರಿಯೂತ ಹಾಗೂ ಕೆಂಪು ಬಣ್ಣದಿಂದ ಕೂಡಿರುವ ಕೆರೆತವು ಗುಣಮುಖವಾಗುವುದು ಎಂದು ಸಂಶೋಧಕರು ತಿಳಿಸಿದ್ದಾರೆ. ಅದೇ ಮೆಣಸಿನ ಕಾಯನ್ನು ತ್ವಚೆಯ ಮೇಲೆ ಅಥವಾ ಪೀಡಿತ ಪ್ರದೇಶದ ಮೇಲೆ ಇಟ್ಟರೆ ಸುಡುವ ಅನುಭವ ಆಗುವುದು. ಹಾಗಾಗಿ ಆದಷ್ಟು ಕಾಳಜಿಯಿಂದ ನಿರ್ವಹಿಸಬೇಕು.

  Most Read: ಬಿಸಿ ಬಿಸಿ ಚಪಾತಿ ಮೇಲೆ ತುಪ್ಪ ಸವರಬೇಕೇ? ಬೇಡವೇ?


 • ಅರಿಶಿನ

  ಅತ್ಯಂತ ಔಷಧೀಯ ಗುಣವನ್ನು ಹೊಂದಿರುವ ಅರಿಶಿನವು ಚರ್ಮದ ಸಮಸ್ಯೆಗಳಿಗೆ ಅತ್ಯುತ್ತಮ ಔಷಧಿ ಎನ್ನಲಾಗುವುದು. ಸೋರಿಯಾಸಿಸ್ ನಿವಾರಿಸಲು ಸಹಾಯ ಮಾಡುವ ಅರಿಶಿನವನ್ನು ಆಹಾರದಲ್ಲಿ ಹೆಚ್ಚಾಗಿ ಸೇರಿಸಿ ಸೇವಿಸಬೇಕು. ಊಟದಲ್ಲಿ ಪೂರಕವಾದ ಒಂದು ಘಟಕವನ್ನಾಗಿ ಉಪಯೋಗಿಸಿ. ಬಹುಬೇಗ ನಿಯಂತ್ರಣಕ್ಕೆ ತರುವುದು.


 • ಟೀ ಟ್ರೀ ಎಣ್ಣೆ

  ಆಸ್ಟ್ರೇಲಿಯಾದ ಒಂದು ಸ್ಥಳೀಯ ಸಸ್ಯ. ಈ ಸಸ್ಯದಿಂದ ತಯಾರಿಸುವ ಎಣ್ಣೆ ಅತ್ಯುತ್ತಮ ಪೋಷಣಾ ಶಕ್ತಿಯನ್ನು ಒಳಗೊಂಡಿರುತ್ತದೆ. ಇದನ್ನು ಬಳಸಿದ ಶ್ಯಾಂಪು ಹಾಗೂ ಎಣ್ಣೆಯನ್ನು ಬಳಸುವುದರಿಂದ ಸಮಸ್ಯೆಗೆ ಉಪಶಮನ ದೊರೆಯುವುದು. ಕೆಲವರಿಗೆ ಅಲರ್ಜಿ ಉಂಟಾಗುವ ಸಾಧ್ಯತೆಗಳಿವೆ. ಹಾಗಾಗಿ ಮೊದಲು ನಿಮಗೆ ಒಗ್ಗುತ್ತದೆಯೇ ಎನ್ನುವುದನ್ನು ಪರೀಕ್ಷಿಸಿ ಉಪಯೋಗಿಸುವುದು ಉತ್ತಮ.


 • ಓಟ್ಸ್ ಅಲ್ಲಿ ನೆನೆಸಿ

  ಚರ್ಮದ ಆರೋಗ್ಯ ಕಾಪಾಡಲು ಇರುವ ನೈಸರ್ಗಿಕ ಮಾರ್ಗ ಎನ್ನಬಹುದು. ಸ್ನಾನದ ನೀರಿಗೆ ಸ್ವಲ್ಪ ಓಟ್ಸ್‍ಅನ್ನು ಬೆರೆಸಿ. ನೀರು ಉಗುರು ಬೆಚ್ಚಗಿರುವಂತೆ ನೋಡಿಕೊಳ್ಳಬೇಕು. ನಂತರ ಆ ನೀರಿನಲ್ಲಿ ನಿಮ್ಮ ದೇಹವನ್ನು ನೆನೆಯಿಡಿ. ತ್ವಚೆಗೆ ಕಿರಿಕಿರಿ ಆಗುತ್ತಿದೆ ಎಂದರೆ ಪ್ರಯತ್ನಿಸದಿರಿ. ಈ ಕ್ರಮವು ನಿಮಗೆ ಒಗ್ಗುತ್ತದೆ ಎಂದಾದರೆ ಗಣನೀಯವಾಗಿ ಮುಂದುವರಿಸಿ, ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.


 • ಧ್ಯಾನ ಮತ್ತು ಯೋಗ

  ಮಾನಸಿಕ ಮತ್ತು ದೈಹಿಕ ಒತ್ತಡವು ಮನುಷ್ಯನಿಗೆ ಸಾಕಷ್ಟು ಆರೋಗ್ಯ ಸಮಸ್ಯೆಯನ್ನು ನೀಡುವುದು ಅಥವಾ ಸೃಷ್ಟಿಸುವುದು. ನಿಯಮಿತವಾಗಿ ಧ್ಯಾನ ಮತ್ತು ಯೋಗ ಮಾಡುವುದರಿಂದ ಮನಸ್ಸು ಒತ್ತಡದಿಂದ ದೂರವಾಗುವುದು. ದೇಹಕ್ಕೆ ಇರುವ ಆರೋಗ್ಯ ಸಮಸ್ಯೆಗಳು ನಿಧಾನವಾಗಿ ಪರಿಹಾರ ಕಾಣುವವು.


 • ಒಮೆಗಾ-3 ಫ್ಯಾಟಿ ಆಸಿಡ್ಸ್

  ಒಮೆಗಾ-3 ಫ್ಯಾಟಿ ಆಸಿಡ್ಸ್ ಉರಿಯೂತ ಹಾಗೂ ಚರ್ಮಕ್ಕೆ ಸಂಬಮಧಿಸಿದ ಸಮಸ್ಯೆಗಳನ್ನು ಬಗೆಹರಿಸುತ್ತವೆ. ಸಲ್‍ಮೊನ್, ಮೆಕೆರೆಲ್, ಟ್ಯೂನ್ ಅಂತಹ ಮೀನುಗಳು ಅತ್ಯುತ್ತಮಾದದ್ದು. ಆಹಾರದಲ್ಲಿ ಬಳಸುವುದು ಅಥವಾ ಅವುಗಳ ತೈಲವನ್ನು ಬಳಸುವುದರಿಂದ ಸೊರಿಯಾಸಿಸ್ ಸಮಸ್ಯೆ ನಿವಾರಣೆಯಾಗುವುದು. ಮೀನಿನ ಎಣ್ಣೆಯು ಸೋರಿಯಾಸಿಸ್‍ಗೆ ಉತ್ತಮವಾದದ್ದು. ನೀವು ಇದನ್ನು ನೇರವಾಗಿ ಬಳಸುವ ಮೊದಲು ನಿಮ್ಮ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ.


 • ರೆಗಾನ್ ಗ್ರೇಪ್

  ಇದರ ಹೆಸರು ಸ್ವಲ್ಪ ನಿಮಗೆ ತಪ್ಪಾದ ಮಾಹಿತಿ ನೀಡಿದಂತೆ ಅನಿಸಬಹುದು. ನಿತ್ಯಹರಿದ್ವರ್ಣ ಕಾಡಿನಲ್ಲಿ ಸಿಗುವ ಸಸ್ಯ. ಇದರ ಔಪಚಾರಿಕ ಹೆಸರು ಮಹೋನಿಯಾ ಅಕ್ವಿಫೋಲಿಯಮ್. ಇದನ್ನು ಸಾಕಷ್ಟು ಕ್ರೀಮ್ ಹಾಗೂ ಔಷಧಗಳಲ್ಲಿ ಶೇ.10ರಷ್ಟು ಪ್ರಮಾಣದಲ್ಲಿ ಬಳಸುತ್ತಾರೆ. ಇದು ಚರ್ಮ ಸಮಸ್ಯೆ ನಿವಾರಿಸುವಲ್ಲಿ ಸಹಾಯಮಾಡುವುದು.


 • ಮೆಡಿಟರೇನಿಯನ್ ಆಹಾರ

  ಈ ಆಹಾರ ಪದಾರ್ಥದ ಯೋಜನೆಯು ಮೀನು, ತರಕಾರಿ, ಹಣ್ಣು, ಧಾನ್ಯಗಳ ಮೇಲೆ ಹೆಚ್ಚಿನ ಗಮನ ನೀಡುತ್ತದೆ. ಒಂದು ಸಣ್ಣ ಅಧ್ಯಯನವು ಸೋರಿಯಾಸಿಸ್ ನಿವಾರಣೆಗೆ ಈ ಆಹಾರ ಕ್ರಮ ಅತ್ಯುತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ತೋರಿಸಿದೆ.

  Most Read: ಜಾಂಡೀಸ್ ರೋಗ: ವೈದ್ಯರಿಗೆ ಸವಾಲೆಸೆಯುವ ಹಳ್ಳಿ ಮದ್ದು!


 • ಲೊಳೆಸರ

  ಕೆಲವು ಅಧ್ಯಯನಗಳು ಲೊಳೆಸರ/ಅಲೊವೆರಾ ಸೊರಿಯಾಸಿನ್ ನಿವಾರಣೆಗೆ ಸಹಾಯ ಮಾಡುವುದು ಎಂದು ತಿಳಿಸಿವೆ. ಲೊಳೆಸರ ಉರಿಯೂತ ಹಾಗೂ ಕೆಂಪು ಗಾಯದಿಂದ ಉಂಟಾಗುವ ತುರಿಕೆಯನ್ನು ನಿಯಂತ್ರಿಸುತ್ತದೆ. ಲೋಳೆಸರವನ್ನು ನೇರವಾಗಿ ಅಥವಾ ಕ್ರೀಮ್ ರೂಪದಲ್ಲಿ ಬಳಸಿ. ಇದರ ಮಾತ್ರೆಗಳು ಅಥವಾ ಇನ್ನಿತರ ಚಿಕಿತ್ಸೆ ಪಡೆಯುವ ಮುನ್ನ ವೈದ್ಯರ ಸಲಹೆ ಪಡೆಯಿರಿ.
ಆರೋಗ್ಯ ಎನ್ನುವುದು ಮನುಷ್ಯನಿಗೆ ಇರುವ ಅತ್ಯಂತ ದೊಡ್ಡ ಆಸ್ತಿ ಎಂದು ಹೇಳಬಹುದು. ಆರೋಗ್ಯ ಎನ್ನುವ ಆಸ್ತಿ ಇಲ್ಲ ಎಂದಾದರೆ ವ್ಯಕ್ತಿಯು ನಿತ್ಯವೂ ಕಣ್ಣಿರಿನಲ್ಲಿಯೇ ಕೈತೊಳೆಯಬೇಕಾಗುವುದು. ಹಣದಿಂದ ಎಂತಹ ಆರೋಗ್ಯ ಸಮಸ್ಯೆಯನ್ನಾದರೂ ಗುಣ ಪಡಿಸಬಹುದು ಎನ್ನುವ ಕಲ್ಪನೆ ಕೆಲವರಲ್ಲಿ ಇರಬಹುದು. ಆದರೆ ಔಷಧಿಯೇ ಇಲ್ಲದ ಕಾಯಿಲೆ ಬಂದರೆ ಅದೆಷ್ಟು ಹಣವಿದ್ದರೂ ಉಪಯೋಗಕ್ಕೆ ಬರುವುದಿಲ್ಲ. ಅದಕ್ಕಾಗಿಯೇ ಮನುಷ್ಯ ಎಷ್ಟು ದಿನದ ವರೆಗೆ ಬದುಕುಳಿಯುತ್ತಾನೋ ಅಷ್ಟು ದಿನಗಳ ಕಾಲ ಆರೋಗ್ಯ ಎನ್ನುವ ಆಸ್ತಿಯನ್ನು ಹೊಂದಿರಬೇಕು ಎಂದು ಹೇಳಲಾಗುವುದು.

ಇತ್ತೀಚಿನ ದಿನಗಳಲ್ಲಿ ವ್ಯಕ್ತಿ ಅನುಭವಿಸುವ ಸಮಸ್ಯೆಗಳು, ಮಾನಸಿಕ ಒತ್ತಡ, ಅನುಚಿತವಾದ ಆಹಾರ ಪದ್ಧತಿ, ಆರೋಗ್ಯ ಪೂರ್ಣ ಆಹಾರದ ಕೊರತೆ, ಮಾಲಿನ್ಯ, ಸಾಂಕ್ರಾಮಿಕ ರೋಗ, ಕೆಟ್ಟ ಹವ್ಯಾಸಗಳು ಹೀಗೆ ವಿವಿಧ ಕಾರಣಗಳಿಂದಾಗಿ ವಿಚಿತ್ರ ಬಗೆಯ ಆರೋಗ್ಯ ಸಮಸ್ಯೆಗಳು ತಲೆದೂರುತ್ತಿವೆ. ಅದರಲ್ಲೂ ಚರ್ಮಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಅಧಿಕವಾಗುತ್ತಿದೆ ಎಂದು ಹೇಳಲಾಗುವುದು. ದೇಹದಲ್ಲಿ ಉಂಟಾಗುವ ಕೆಲವು ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ಗುರುತಿಸಿ, ಔಷಧಗಳನ್ನು ಪಡೆಯಬಹುದು. ಆದರೆ ಚರ್ಮಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿದ್ದರೆ ಅವುಗಳನ್ನು ಗುರುತಿಸುವುದು ಮತ್ತು ಆರೈಕೆ ಮಾಡುವುದು ಬಹಳ ಕಷ್ಟದ ಸಂಗತಿ ಎಂದು ಹೇಳಲಾಗುವುದು.

   
 
ಹೆಲ್ತ್