Back
Home » ಇತ್ತೀಚಿನ
ಶಿಯೋಮಿ ರೆಡ್ಮಿ 7 ಟ್ವೀಟರ್ ಚಾಲೆಂಜ್ – ನಿಮಗೆ ಉತ್ತರಿಸಲು ಸಾಧ್ಯವೇ?
Gizbot | 20th Feb, 2019 03:01 PM
 • ಟ್ವೀಟ್ ನಲ್ಲಿ ಹೀಗೆ ಬರೆಯಲಾಗಿದೆ

  "You know what to do! Find the answer in this #ǝɟᴉ7ƃnɥʇ 7 and share in comments to win goodies. #RedmiNote7",


 • ಅಂದರೆ

  "ನೀವೇನು ಮಾಡಬೇಕು ಗೊತ್ತಾ! ಇದಕ್ಕೆ ಉತ್ತರ ಕಂಡುಹಿಡಿಯಿರಿ #ǝɟᴉ7ƃnɥʇ 7 ಮತ್ತು ಕಮೆಂಟ್ ನಲ್ಲಿ ಹಂಚಿಕೊಂಡು ಗುಡ್ಡೀಸ್ ನ್ನು ಗಳಿಸಿರಿ. #RedmiNote7"

  ಕೆಲವು ಬಳಕೆದಾರರು 48ಎಂಪಿ ಕ್ಯಾಮರಾವಾಗಿರುವುದರಿಂದಾಗಿ 48 ಮಂದಿ ಇದ್ದಾರೆ ಎಂದು ಉತ್ತರ ಕೊಟ್ಟಿದ್ದಾರೆ.


 • ರೆಡ್ಮಿ ನೋಟ್ 7 ನ ವೈಶಿಷ್ಟ್ಯತೆಗಳು :

  ರೆಡ್ಮಿ ನೋಟ್ 7 ಈಗಾಗಲೇ ಚೀನಾದಲ್ಲಿ ಲಭ್ಯವಿದೆ ಮತ್ತು ವಿಭಿನ್ನ ಮೆಮೊರಿ ವೇರಿಯಂಟ್ ನಲ್ಲಿ ಲಭ್ಯವಾಗುತ್ತದೆ -- 3GB, 4GB ಮತ್ತು 6GB. ಇದು 2.2GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 660 ಪ್ರೊಸೆಸರ್ ಮತ್ತು MIUI 9 ಆಧಾರಿತ ಆಂಡ್ರಾಯ್ಡ್ ಓರಿಯೋ ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್ ಆಗುತ್ತದೆ.

  32GB ಮತ್ತು 64GB ಇಂಟರ್ನಲ್ ಸ್ಟೋರೇಜ್ ಆಯ್ಕೆಗಳಿದೆ ಮತ್ತು 256ಜಿಬಿ ವರೆಗಿನ ಮೈಕ್ರೋ ಎಸ್ ಡಿ ಕಾರ್ಡ್ ಗೆ ಬೆಂಬಲ ನೀಡುತ್ತದೆ. ಹ್ಯಾಂಡ್ ಸೆಟ್ 4,000mAh ಬ್ಯಾಟರಿ ಮತ್ತು ಕ್ವಿಕ್ ಚಾರ್ಜ್ 4 ಗೆ ಬೆಂಬಲ ನೀಡುತ್ತದೆ.251 ಘಂಟೆಗಳ ಸ್ಟ್ಯಾಂಡ್ ಬೈ ಸಮಯವನ್ನು ಮತ್ತು 23 ತಾಸುಗಳ ಟಾಕ್ ಟೈಮ್, 13 ತಾಸುಗಳ ವೀಡಿಯೋ ಪ್ಲೇ ಬ್ಯಾಕ್ ಮತ್ತು 7 ತಾಸುಗಳ ಗೇಮಿಂಗ್ ಗೆ ಇದು ಬೆಂಬಲಿಸುತ್ತದೆ ಎಂದು ಹೇಳುತ್ತಿದೆ.

  ರೆಡ್ಮಿ ನೋಟ್ 7 6.3-ಇಂಚಿನ ಫುಲ್ HD+ LTPS ಡಿಸ್ಪ್ಲೇ ಜೊತೆಗೆ 1080x2340 ಪಿಕ್ಸಲ್ ರೆಸಲ್ಯೂಷನ್ ಜೊತೆಗೆ 19.5:9 ಅನುಪಾತವನ್ನು ಹೊಂದಿದೆ. ಡಿಸ್ಪ್ಲೇ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ನ್ನು ಹೊಂದಿದೆ.

  ಕ್ಯಾಮರಾ ವಿಚಾರಕ್ಕೆ ಬಂದರೆ 48ಎಂಪಿ ಪ್ರೈಮರಿ ಕ್ಯಾಮರಾವನ್ನು ಹೊಂದಿದೆ. ಸೆಲ್ಫೀ ತೆಗೆದುಕೊಳ್ಳುವುದಕ್ಕೆ 13ಎಂಪಿ ಮುಂಭಾಗದ ಕ್ಯಾಮರಾವು ಎಐಗೆ ಬೆಂಬಲ ನೀಡುತ್ತದೆ ಜೊತೆಗೆ ಫೇಸ್ ಅನ್ ಲಾಕ್, ಸ್ಮಾರ್ಟ್ ಬ್ಯೂಟಿ, ಸಿಂಗರ್ ಶಾಟ್ ಬ್ಲರ್ ಮತ್ತು ಇತ್ಯಾದಿ ಆಯ್ಕೆಗಳನ್ನು ಹೊಂದಿದೆ.
ಫೆಬ್ರವರಿ 28 ಕ್ಕೆ ಶಿಯೋಮಿ ರೆಡ್ಮಿ ನೋಟ್ 7 ನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಇದು 48 ಮೆಗಾಪಿಕ್ಸಲ್ ಕ್ಯಾಮರಾವಿರುವ ಕಂಪೆನಿಯ ಮೊದಲ ಸ್ಮಾರ್ಟ್ ಫೋನ್ ಆಗಿದೆ. ಈಗಾಗಲೇ ಬಿಡುಗಡೆಯ ಕಾರ್ಯಕ್ರಮಕ್ಕಾಗಿ ರಿಜಿಸ್ಟ್ರೇಷನ್ ನ್ನು ಕೂಡ ಆರಂಭಿಸಿ ಆಗಿದೆ. 480 ರುಪಾಯಿ ಟಿಕೆಟ್ ನ್ನು ಕೂಡ ಇದಕ್ಕಾಗಿ ಮಾರಾಟ ಮಾಡಲಾಗುತ್ತಿದೆ. ಇದೀಗ ಚೀನಾ ಮೂಲದ ಕಂಪೆನಿ ಟ್ವೀಟರ್ ನಲ್ಲಿ ಬಳಕೆದಾರರಿಗೆ ಚಾಲೆಂಜ್ ನ್ನು ಪೋಸ್ಟ್ ಮಾಡಿದೆ.

ರೆಡ್ಮಿ ಇಂಡಿಯಾ ಟೀಸರ್ ಇಮೇಜ್ ವೊಂದನ್ನು ಪೋಸ್ಟ್ ಮಾಡಿದ್ದು ಅದರಲ್ಲಿ ವಿಭಿನ್ನ ಇಮೇಜ್ ಗಳನ್ನು ತುಂಬಿರುವ 7 ಲೆಟರ್ ಗಳನ್ನು ಹಾಕಲಾಗಿದೆ. ಅದರಲ್ಲಿ ಎಷ್ಟು ಮಂದಿ ಇದ್ದಾರೆ ಎಂದು ಗುರುತಿಸುವುದಕ್ಕೆ ಹೇಳಲಾಗುತ್ತಿದೆ.

   
 
ಹೆಲ್ತ್