Back
Home » ಇತ್ತೀಚಿನ
ಸ್ಯಾಮ್‌ಸಂಗ್ 'S10' ಮತ್ತು 'S10+' ಸ್ಮಾರ್ಟ್‌ಫೋನ್ ರಿಲೀಸ್! ಆಪಲ್ ಕಂಪನಿ 'ಖೇಲ್ ಬಂದ್'!!
Gizbot | 21st Feb, 2019 07:03 PM
 • ಫಿಂಗರ್‌ಪ್ರಿಂಟ್ ಸ್ಕ್ಯಾನರ್

  ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಲ್ಲಿ 'ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೆನ್ಸಾರ್' ಹೊಸ ಅಪ್‌ಡೇಟ್‌ ಫೀಚರ್ ಆಗಿದ್ದು, ಹೈ ಎಂಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾದ ಫೀಚರ್ಸ್‌ ಆಗಿದೆ. ಈ ಹೊಸ 'ಡಿಸ್‌ಪ್ಲೇಯಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಫೀಚರ್ಸ್‌' ಅನ್ನು ಇದೀಗ ಸ್ಯಾಮ್‌ಸಂಗ್ ತನ್ನ 'ಗ್ಯಾಲ್ಯಾಕ್ಸಿ ಎಸ್‌10 ಸರಣಿ ಸ್ಮಾರ್ಟ್‌ಫೋನ್‌ಗಳಾದ 'ಎಸ್‌10' ಮತ್ತು 'ಎಸ್‌10+' ಗಳಲ್ಲಿ ಪರಿಚಯಿಸಿದೆ.


 • ಡ್ಯುಯಲ್ ಸೆಲ್ಫೀ ಕ್ಯಾಮೆರಾ

  ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎಸ್‌10' ಸರಣಿಯ ಎಸ್‌10 ಮತ್ತು ಎಸ್‌10+ ಸ್ಮಾರ್ಟ್‌ಫೋನ್‌ಗಳಲ್ಲಿ ಹಿಂಬದಿಯಲ್ಲಿ ಒಟ್ಟು ಮೂರು ಕ್ಯಾಮೆರಾಗಳನ್ನು ನೀಡಲಿದೆ. ಎಸ್‌10+ ಸ್ಮಾರ್ಟ್‌ಫೋನ್‌ನಲ್ಲಿ ಸೆಲ್ಫೀಗಾಗಿ ಮುಂಭಾಗದಲ್ಲಿ ಎರಡು ಕ್ಯಾಮೆರಾಗಳನ್ನು ಪರಿಚಯಿಸಿದ್ದು, ಎಸ್‌10 ಸ್ಮಾರ್ಟ್‌ಫೋನ್‌ನಲ್ಲಿ ಒಂದೇ ಸೆಲ್ಫೀ ಕ್ಯಾಮೆರಾ ಇರಲಿದೆ. ಅತ್ಯುತ್ತಮ ಹೈ ರೆಸಲ್ಯೂಶನ್ ಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾಗಳಿದ್ದು, ಫೋಟೋಗಳು ಉತ್ತಮವಾಗಿ ಮೂಡಿಬರಲಿವೆ.


 • ಗ್ಯಾಲ್ಯಾಕ್ಸಿ ಎಸ್‌10 ಡಿಸ್‌ಪ್ಲೇ

  ಈ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇಯು ಸೂಪರ್ AMOLED ಯೊಂದಿಗೆ, 1440 x 2960 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ 6.1 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಬಾಡಿಯಿಂದ ಡಿಸ್‌ಪ್ಲೇ ನಡುವಿನ ಅನುಪಾತವು ಶೇ 89.85 ಇದೆ. ಇದರ ಡಿಸ್‌ಪ್ಲೇ ಬೆಜಲ್ ಲೆಸ್(ಅಂಚುರಹಿತ) ಆಗಿದ್ದು, ಸ್ಮಾರ್ಟ್‌ಫೋನಿನ ಸ್ಕ್ರೀನ್‌ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ಒದಗಿಸಲಾಗಿದೆ.


 • ಗ್ಯಾಲ್ಯಾಕ್ಸಿ ಎಸ್‌10 ಕ್ಯಾಮೆರಾ

  ಸ್ಯಾಮ್‌ಸಂಗ್‌ನ ಗ್ಯಾಲ್ಯಾಕ್ಸಿ ಎಸ್‌10 ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ನೀಡಲಾಗಿದ್ದು, ಈ ಮೂರು ಕ್ಯಾಮೆರಾಗಳು ಕ್ರಮವಾಗಿ 12MP + 16MP + 13MP ಸಾಮರ್ಥ್ಯವನ್ನು ಹೊಂದಿವೆ. ಇನ್ನೂ ಫೋಟೋ 4000 x 3000 ಪಿಕ್ಸಲ್ ರೆಸಲ್ಯೂಶನ್‌ಯನ್ನು ಹೊಂದಿರಲಿದ್ದು, ಫೋಟೋ ಕ್ವಾಲಿಟಿ ಅತ್ಯುತ್ತಮವಾಗಿ ಮೂಡಿಬರುತ್ತವೆ. ಸ್ಮಾರ್ಟ್‌ಫೋನ್ ಮುಂಬದಿ ಸೆಲ್ಫೀಗಾಗಿ 10 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ನೀಡಲಾಗಿದೆ.


 • ಗ್ಯಾಲ್ಯಾಕ್ಸಿ ಎಸ್‌10 ಪ್ರೊಸೆಸರ್

  ಸ್ಯಾಮ್‌ಸಂಗ್‌ನ ಈ ಹೊಸ ಸ್ಮಾರ್ಟ್‌ಫೋನಿನಲ್ಲಿ 'ಸ್ಯಾಮ್‌ಸಂಗ್ Exynos 9 ಆಕ್ಟಾಕೋರ್ 9820' ಸಾಮರ್ಥ್ಯದ ಪ್ರೊಸೆಸರ್ ಇದ್ದು, ಮಲ್ಟಿ ಟಾಸ್ಕ್ ಕೆಲಸಗಳನ್ನು ವೇಗವಾಗಿ ನಿರ್ವಹಿಸುವ ಶಕ್ತಿಯನ್ನು ಹೊಂದಿದೆ. ಸ್ಮಾರ್ಟ್‌ಫೋನಿನಲ್ಲಿ ಗ್ರಾಫಿಕ್‌ಗಾಗಿ G76MP12 ಸಾಮರ್ಥ್ಯದ ಶಕ್ತಿ ಒದಗಿಸಲಾಗಿದೆ ಯಾವುದೇ ತರಹದ ಗೇಮ್ಸ್ ಆಟವಾಡಲು ಸಹಕರಿಸುತ್ತದೆ. 6GB RAM ಜೊತೆಗೆ 128 GB ಆಂತರಿಕ ಶೇಖರಣೆಯ ಸಾಮರ್ಥ್ಯವನ್ನು ನೀಡಲಾಗಿದೆ.


 • ಗ್ಯಾಲ್ಯಾಕ್ಸಿ ಎಸ್‌10 ಬ್ಯಾಟರಿ

  ಸ್ಮಾಮ್‌ಸಂಗ್‌ ಎಸ್‌ ಸರಣಿಯ 'ಗ್ಯಾಲ್ಯಾಕ್ಸಿ ಎಸ್10' ಸ್ಮಾರ್ಟ್‌ಫೋನ್‌ 3,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಈ ಬ್ಯಾಟರಿ ದೀರ್ಘ ಬಾಳಕೆಯ ಶಕ್ತಿ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಫಾಸ್ಟ್‌ ಚಾರ್ಜರ್ ಸಹ ಒದಗಿಸಲಾಗಿರುವುದು ಇದರ ಸಹಾಯದಿಂದ ನಿಮ್ಮ ಸ್ಮಾರ್ಟ್‌ಫೋನ್‌ ವೇಗವಾಗಿ ಚಾರ್ಜ್ ಆಗುತ್ತದೆ. ಇನ್ನೂ ಈ ಸ್ಮಾರ್ಟ್‌ಪೋನ್ ವೈಯರ್ ಲೆಸ್‌ ಚಾರ್ಜರ್ ಅನ್ನು ಸಹ ಹೊಂದಿದೆ.


 • ಗ್ಯಾಲ್ಯಾಕ್ಸಿ ಎಸ್‌10+ ಡಿಸ್‌ಪ್ಲೇ

  ಸೂಪರ್ AMOLEDನೊಂದಿಗೆ, 1440 x 2960 ಪಿಕ್ಸಲ್ ಸಾಮರ್ಥ್ಯದ ರೆಸಲ್ಯೂಶನ್‌ ಒಳಗೊಂಡ 6.4 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಈ ಗ್ಯಾಲ್ಯಾಕ್ಸಿ ಎಸ್‌10+ ಸ್ಮಾರ್ಟ್‌ಫೋನ್ ಹೊಂದಿದೆ. ಡಿಸ್‌ಪ್ಲೇ ನಿಂದ ಫೋನಿನ್ ಬಾಹ್ಯ ಬಾಡಿಯ ನಡುವಿನ ಅಂತರವು ಶೇ 89.06ರಷ್ಟು ಇದೆ. ಡಿಸ್‌ಪ್ಲೇಯ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಅನ್ನು ಒದಗಿಸಲಾಗಿದೆ. ಈ ಸ್ಮಾರ್ಟ್‌ಪೋನಿನಲ್ಲಿ ಅಂಚುರಹಿತ ಡಿಸ್‌ಪ್ಲೇಯನ್ನು ನೀವು ಕಾಣಬಹುದು.


 • ಗ್ಯಾಲ್ಯಾಕ್ಸಿ ಎಸ್‌10+ ಪ್ರೊಸೆಸರ್

  ಗ್ಯಾಲ್ಯಾಕ್ಸಿ ಎಸ್‌10+ ಸ್ಮಾರ್ಟ್‌ಫೋನ್ ಅತೀ ಮುಂದುವರಿದ ಪ್ರೊಸೆಸರ್ ಆದ 'ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 855' ಸಾಮರ್ಥ್ಯದ ಪ್ರೊಸೆಸರ್ ಒಳಗೊಂಡಿದ್ದು, ಇದರೊಂದಿಗೆ ಅಂಡ್ರಿನೊ 640 ಸಿಪಿಯು ಸಾಮರ್ಥ್ಯವನ್ನು ಸಹ ಒಳಗೊಂಡಿದೆ. ಮಲ್ಟಿಟಾಸ್ಕ ಕೆಲಸಗಳನ್ನು ಅತೀ ಸರಳವಾಗಿ ನಿರ್ವಹಿಸುವ ಶಕ್ತಿ ಹೊಂದಿದೆ. 12GB ಸಾಮರ್ಥ್ಯದ RAM ಜೊತೆಗೆ 1000GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ನೀಡಲಾಗಿದೆ.


 • ಗ್ಯಾಲ್ಯಾಕ್ಸಿ ಎಸ್‌10+ ಕ್ಯಾಮೆರಾ

  ಸ್ಯಾಮ್‌ಸಂಗ್‌ನ ಹೈ ಎಂಡ್‌ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಒಟ್ಟು ಮೂರು ಕ್ಯಾಮೆರಾಗಳಿದ್ದು, ಮೆನ್ ಕ್ಯಾಮೆರಾ 12 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದ್ದು, ಅಪರ್ಚರ್ ಗಾತ್ರವು F1.5/F2.4 ಆಗಿರಲಿದೆ. ಸೆಕೆಂಡರಿ ಕ್ಯಾಮರದಲ್ಲಿಯೂ ಸಹ 12 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ನೀಡಿದ್ದು, ಇದರಲ್ಲಿ ಟೆಲಿಫೋಟೋ ಲೆನ್ಸ್ ಇರಲಿದೆ ಇದರ ಅಪರ್ಚರ್ ಗಾತ್ರವು F2.4 ಆಗಿರಲಿದೆ. ಇನ್ನೂ ಮುಂಭಾಗದಲ್ಲಿ ಸೆಲ್ಫೀಗಾಗಿ 10ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಒದಗಿಸಲಾಗಿದೆ.


 • ಗ್ಯಾಲ್ಯಾಕ್ಸಿ ಎಸ್‌10+ ಬ್ಯಾಟರಿ ಪವರ್

  ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಎಸ್‌10+ ಸ್ಮಾರ್ಟ್‌ಫೋನ್‌ 4100mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಹೊಂದಿದ್ದು, ಸುಮಾರಿ ಎರಡು ದಿನಗಳ ಕಾಲ ಬ್ಯಾಟರಿ ಬಾಳಿಕೆ ಬರಲಿದೆ. ಇದರೊಂದಿಗೆ ಫಾಸ್ಟ್‌ ಚಾರ್ಜರ್ ಅನ್ನು ಒದಗಿಸಲಾಗಿದ್ದು, ಸ್ಮಾರ್ಟ್‌ಫೋನ್ ಅತೀ ವೇಗವಾಗಿ ಚಾರ್ಜಿಂಗ್ ಆಗುತ್ತದೆ. ವೈಯರ್‌ಲೆಸ್ ಚಾರ್ಜಿಂಗ್ ವ್ಯೆವಸ್ಥೆಯನ್ನು ಸಹ ಒಳಗೊಂಡಿದೆ.
ಸ್ಯಾಮ್‌ಸಂಗ್‌ ಕಂಪನಿಯು ಇತ್ತೀಚಿಗೆ 'ಗ್ಯಾಲ್ಯಾಕ್ಸಿ ಎಸ್‌ ಸರಣಿ'ಯಲ್ಲಿ ಹೈ ಎಂಡ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿ ಭಾರೀ ಗಮನ ಸೆಳೆದಿತ್ತು. ಇದೀಗ ಕಂಪನಿಯು ಗ್ರಾಹಕರನ್ನು ಹೆಚ್ಚಿಗೆ ಕಾಯಿಸದೆ ತನ್ನ ಬಹುನಿರೀಕ್ಷಿತ 'ಗ್ಯಾಲ್ಯಾಕ್ಸಿ ಎಸ್‌10' ಮತ್ತು 'ಎಸ್‌10+' ಹೆಸರಿನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಮಾಡಿದೆ. ಗ್ಯಾಲ್ಯಾಕ್ಸಿ ಎಸ್‌ ಸರಣಿಯ ಈ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಠಿಸಲಿವೆ!

ಹೌದು, ಸ್ಯಾಮ್‌ಸಂಗ್ ಕಂಪನಿಯ 'ಗ್ಯಾಲ್ಯಾಕ್ಸಿ ಎಸ್‌10 ಮತ್ತು ಎಸ್‌10+' ಸ್ಮಾರ್ಟ್‌ಫೋನ್‌ಗಳು ಇದೆ ಫೆಬ್ರುವರಿ 20ಕ್ಕೆ(ನಿನ್ನೆ) ಗ್ಯ್ರಾಂಡ್‌ ಆಗಿ ರಿಲೀಸ್‌ ಆಗಿದ್ದು, ಇವು 8GB ಸಾಮರ್ಥ್ಯದ RAM, ಹೈ ರೆಸಲ್ಯೂಶನ್‌ ಇರುವ ತ್ರಿವಳಿ ಕ್ಯಾಮೆರಾ, ಸೆಲ್ಫಿಗಾಗಿ ಡ್ಯುಯಲ್ ಕ್ಯಾಮೆರಾ, ಒಳಗೊಂಡಂತೆ ಹೇ ಸ್ಪೀಡ್‌ ಪ್ರೊಸೆಸರ್ ಫೀಚರ್ ಅನ್ನು ಸಹ ಒಳಗೊಂಡಿರುವ ಸ್ಯಾಮ್‌ಸಂಗ್‌ ಸಂಸ್ಥೆಯ ಹೈ ಎಂಡ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳಾಗಿವೆ.

ಹೊಸ 'ಗ್ಯಾಲ್ಯಾಕ್ಸಿ ಎಸ್‌ ಸರಣಿಯ' ಎಸ್‌10 ಮತ್ತು ಎಸ್‌10+' ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿಯ ಬಾಳಿಕೆ ಸಾಮರ್ಥ್ಯವನ್ನು ವೃದ್ಧಿಸಿದೆ. ಇದರೊಂದಿಗೆ ಫೇಸ್‌ಲಾಕ್, ಫಿಂಗರ್‌ ಸೆನ್ಸಾರ್‌ಗಳಂತಹ ಟಾಪ್‌ ಫೀಚರ್ಸ್‌ಗಳನ್ನು ಪರಿಚಯಿಸಿರುವುದು ಗ್ರಾಹಕರಲ್ಲಿ ಮಂದಹಾಸ ಮೂಡಿಸಿದೆ. ಹಾಗಾದರೇ ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎಸ್‌10' ಮತ್ತು 'ಎಸ್‌10+' ಸ್ಮಾರ್ಟ್‌ಫೋನ್‌ಗಳು ಇತರೆ ಏನೆಲ್ಲಾ ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿವೆ ಎಂಬುದನ್ನು ನೋಡೋಣ ಬನ್ನಿರಿ.

   
 
ಹೆಲ್ತ್