Back
Home » ಇತ್ತೀಚಿನ
ಗ್ಯಾಲ್ಯಾಕ್ಸಿ S10e ರಿಲೀಸ್.! ಆಪಲ್‌ ನೊಂದಿಗೆ ಸ್ಪರ್ಧೆ ಕನ್‌ಫರ್ಮ್.!!
Gizbot | 21st Feb, 2019 07:04 PM
 • ವಿನ್ಯಾಸ

  ಸ್ಯಾಮ್‌ಸಂಗ್‌ನ ಹೊಸ ಎಸ್‌10e ಸ್ಮಾರ್ಟ್‌ಫೋನ್ ಆಕರ್ಷಕ ರಚನೆಯನ್ನು ಹೊಂದಿದ್ದು, ಮೊದಲ ನೋಟದಲ್ಲಿಯೇ ಕನ್ಮನ ಸೆಳೆಯುವ ಗ್ಲಾಸಿ ಲುಕ್ ಅನ್ನು ಹೊಂದಿದೆ. ಫೋನಿನ ನಾಲ್ಕು ಮೂಲೆಗಳು ಅರ್ಧವೃತ್ತಾಕಾರದ ರಚನೆಯನ್ನು ಹೊಂದಿದ್ದು, ಸ್ಮಾರ್ಟ್‌ಫೋನಿಗೆ ಸೌಂದರ್ಯವನ್ನು ಒದಗಿಸಿವೆ. ಅತೀ ಕಡಿಮೆ ಅಂಚನ್ನು ಡಿಸ್‌ಪ್ಲೇ ಹತ್ತಿರ ಕಾಣಬಹುದಾಗಿದ್ದು, ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಅಡ್ಡಲಾಗಿ ನೀಡಿದ್ದಾರೆ.


 • ಡಿಸ್‌ಪ್ಲೇ

  ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್‌10e ಸ್ಮಾರ್ಟ್‌ಫೋನ್ 5.8 ಇಂಚಿನ ಫುಲ್‌ ಹೆಚ್‌ಡಿ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ಮಾರ್ಟ್‌ಟಿವಿಗಳಲ್ಲಿ ಬಳಸುವ OLED ಡಿಸ್‌ಪ್ಲೇಯನ್ನು ಇದರಲ್ಲಿ ನೀಡಲಾಗಿರುವುದು ವಿಶೇಷ. ಸಂಪೂರ್ಣ ಹೊಸತನದ OLED ಡಿಸ್‌ಪ್ಲೇಯಲ್ಲಿ ದೃಶ್ಯಗಳು ಅತ್ಯಂತ ಕ್ಲಿಯರ್ ಹಾಗೂ ಹೆಚ್ಚು ಪರಿಣಾಮಕಾರಿಯಾಗಿ ಇರುತ್ತದೆ. ಗ್ರಾಹಕರ ವೀಕ್ಷಣೆಯ ಅನುಭವವನ್ನು ರೋಚಕವಾಗಿಸುತ್ತದೆ.


 • ಪ್ರೊಸೆಸರ್

  ಗ್ಯಾಲ್ಯಾಕ್ಸಿ ಎಸ್‌10e ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 855 ಸಾಮರ್ಥ್ಯ ಪ್ರೊಸೆಸರ್ ನೊಂದಿಗೆ 2.7 ಗಿಗಾಹರ್ಡ್ಸ್ ಆಕ್ಆಕೋರ್ ಹಾಗೂ ಕಂಪನಿಯ Exynos 9820 ಪ್ರೊಸೆಸರ್ ಅನ್ನು ಅಳವಡಿಸಲಾಗಿದ್ದು, ಸ್ಮಾರ್ಟ್‌ಫೋನ್ ಕಾರ್ಯದಕ್ಷತೆ ಅತ್ಯುತ್ತಮವಾಗಿರಲಿದೆ. ಅಧಿಕ ಡೇಟಾ ಬೇಡುವ ಯಾವುದೇ ತರಹದ ಗೇಮ್ಸ್ ಅನ್ನು ಅಡೆ ತಡೆ ಇಲ್ಲದೇ ಆಡುವ ಸಾಮರ್ಥ್ಯವನ್ನು ಈ ಪ್ರೊಸೆಸರ್ ನೀಡುತ್ತದೆ.


 • ಕ್ಯಾಮೆರಾ

  ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್‌ 10e ಸ್ಮಾರ್ಟ್‌ಫೋನ್ ಹಿಂಬದಿ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದ್ದು, 16 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ, f/2.2 ಅಪರ್ಚರ್ ಜೊತೆಗೆ ಅಲ್ಟ್ರಾ ವೈಲ್ಡ್‌ ಲೆನ್ಸ್ ಇನ್ನು ಸೆಕೆಂಡರಿ ಕ್ಯಾಮೆರಾವು 12 ಮೆಗಾಪಿಕ್ಸಲ್ ಸಾಮರ್ಥ್ಯದೊಂದಿಗೆ ವೈಲ್ಡ್‌ ಲೆನ್ಸ್ ಹೊಂದಿದೆ ಅದರ ಅಪರ್ಚರ್ f/1.5, OIS ಆಗಿದೆ. ಸೆಲ್ಫಿ ಕ್ಯಾಮೆರಾ 10 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದ್ದು, ಈ ಲೆನ್ಸ್‍ f/1.9, ಅಪರ್ಚರ್ ಹೊಂದಿದೆ.


 • ಬ್ಯಾಟರಿ ಶಕ್ತಿ

  ಸ್ಯಾಮ್‌ಸಂಗ್‌ನ ಗ್ಯಾಲ್ಯಾಕ್ಸಿ ಎಸ್‌ 10e ಸ್ಮಾರ್ಟ್‌ಫೋನ್ 3,100mAh ಸಾಮರ್ಥ್ಯದ ದಕ್ಷ ಬ್ಯಾಟರಿಯನ್ನು ಹೊಂದಿದ್ದು, ಈ ಬ್ಯಾಟರಿಯು ದೀರ್ಘಕಾಲದವರೆಗೂ ಬಾಳುವ ಶಕ್ತಿಯನ್ನು ಹೊಂದಿದೆ. ಇದರೊಂದಿಗೆ ಫಾಸ್ಟ್ ಚಾರ್ಜರ್‌ ನೀಡಲಾಗಿದ್ದು, ಇದರ ಸಹಾಯದಿಂದ ಸ್ಮಾರ್ಟ್‌ಫೋನ್‌ ಅನ್ನು ಬೇಗನೆ ಚಾರ್ಜ್ ಮಾಡಿಕೊಳ್ಳಬಹುದು. ಚಾರ್ಜರ್ ಗುಣಮಟ್ಟವು ಅತ್ಯುತ್ತಮವಾಗಿದೆ.


 • 5 ಬಣ್ಣಗಳಲ್ಲಿ ಲಭ್ಯ!

  ಸ್ಯಾಮ್‌ಸಂಗ್ ಈ ಹೊಸ ಸ್ಮಾರ್ಟ್‌ಫೋನ್ ಹಳದಿ, ಕಪ್ಪು, ಬಿಳಿ, ಹಸಿರು ಮತ್ತು ನೀಲ ಬಣ್ಣ ಸೇರಿದಂತೆ ಒಟ್ಟು ಐದು ಬಣ್ಣಗಳ ಆಯ್ಕೆಯನ್ನು ಹೊಂದಿದ್ದು, ಈ ಮೂಲಕ ಗ್ರಾಹಕರಿಗೆ ಬಣ್ಣದ ಆಯ್ಕೆಗೆ ಅವಕಾಶ ನೀಡಿದೆ.
ಸ್ಯಾಮ್‌ಸಂಗ್ ಕಂಪನಿಯು ಒಂದು ಸ್ಮಾರ್ಟ್‌ಫೋನ್ ಸರಣಿಯನ್ನು ಪರಿಚಯಿಸಿದರೇ ಆ ಸರಣಿಯಲ್ಲಿಯೇ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಹೀಗೆ 'ಗ್ಯಾಲ್ಯಾಕ್ಸಿ ಎಸ್‌ ಸರಣಿ'ಯನ್ನು ಮುಂದುವರೆಸಿದ್ದು, ಇದರ ಮುಂದುವರಿದ ಭಾಗವಾಗಿ 'ಗ್ಯಾಲ್ಯಾಕ್ಸಿ ಎಸ್‌ 10E' ಹೆಸರಿನ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಅನ್ನು ಕಂಪನಿಯು ರಿಲೀಸ್ ಮಾಡಿದ್ದು, ಈ ಸ್ಮಾರ್ಟ್‌ಫೋನ್ ಆಪಲ್ ಐಫೋನ್ XRಗೆ ಟಾಂಗ್ ನೀಡಲಿದೆ.

ಸ್ಯಾಮ್‌ಸಂಗ್‌ ಕಂಪನಿಯು (ನೆನ್ನೆ) ಫೆಬ್ರುವರಿ 20 ರಂದು ಏಕಕಾಲಕ್ಕೆ ಐದು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ 'ಗ್ಯಾಲ್ಯಾಕ್ಸಿ ಎಸ್‌10E' ಸ್ಮಾರ್ಟ್‌ಫೋನ್ ಸಹ ಒಂದು. ಇದೊಂದು ಪ್ರೀಮಿಯಮ್ ಸ್ಮಾರ್ಟ್‌ಫೋನ್ ಆಗಿದ್ದು, ಈ ಸ್ಮಾರ್ಟ್‌ಫೋನ್ 6GB ಮತ್ತು 8GB ಸಾಮರ್ಥ್ಯ RAM ಆಯ್ಕೆಯೊಂದಿಗೆ 128GB ಮತ್ತು 256GB ಆಂತರಿಕ ಶೇಖರಣೆಯ ಸಾಮರ್ಥ್ಯದ ಎರಡು ಆಯ್ಕೆಗಳಲ್ಲಿ ಲಭ್ಯವಿದೆ.

ವಿನೂತನ ಫೀಚರ್ಸ್‌ಗಳನ್ನು ಹೊಂದಿರುವ ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎಸ್‌10e' ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಸೌಂಡ್ ಮಾಡಲಿದ್ದು, ಆಪಲ್ ಸಂಸ್ಥೆಯ ಹನ್ನೊಂದನೇ ಆವೃತ್ತಿಯ ಐಫೋನ್ ಮಾದರಿಗಳಿಗೆ ಪ್ರಬಲ ಪ್ರತಿಸ್ಪರ್ಧಿ ಆಗಲಿದೆ. ಹಾಗಾದರೇ ಸ್ಯಾಮ್‌ಸಂಗ್ 'ಎಸ್‌10e' ಸ್ಮಾರ್ಟ್‌ಫೋನ್ ಏನೆಲ್ಲಾ ನೂತನ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

   
 
ಹೆಲ್ತ್