Back
Home » ಇತ್ತೀಚಿನ
ವಿಶ್ವದ ಮೊಟ್ಟ ಮೊದಲ ಗ್ರಾಹಕ ಬಳಕೆಯ 5G ಸ್ಮಾರ್ಟ್‌ಫೋನ್ ಹೇಗಿದೆ ಗೊತ್ತಾ?!
Gizbot | 22nd Feb, 2019 12:00 PM
 • ಹೇಗಿದೆ 'ಗ್ಯಾಲಾಕ್ಸಿ ಎಸ್10 5G'

  ಗ್ಯಾಲಾಕ್ಸಿ ಎ10 ಮತ್ತು ಎಸ್‌10 ಸ್ಮಾರ್ಟ್‌ಪೋನ್‌ಗಳನ್ನೇ ಹೋಲುತ್ತಿರುವ 'ಗ್ಯಾಲಾಕ್ಸಿ ಎಸ್10 5G' ಸ್ಮಾರ್ಟ್‌ಫೋನ್ ಫೀಚರ್ಸ್‌ಗಳಲ್ಲಿ ಮಾತ್ರ ಬದಲಾವಣೆಗಳನ್ನು ಹೊಂದಿದೆ ಎಂದು ಹೇಳಬಹುದು. ಕ್ವಾಡ್ ಲೆನ್ಸ್ ರಿಯರ್ ಕ್ಯಾಮೆರಾ, ಸೆಲ್ಪೀ ಕ್ಯಾಮೆರಾಗೆ ಮಾತ್ರ ನೋಚ್ ಅನ್ನು ಹೊಂದಿರುವ ವಿನ್ಯಾಸದಲ್ಲಿ 'ಗ್ಯಾಲಾಕ್ಸಿ ಎಸ್10 5G' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ.


 • 'ಗ್ಯಾಲಾಕ್ಸಿ ಎಸ್10 5G' ಡಿಸ್‌ಪ್ಲೇ!

  ಗ್ಯಾಲಾಕ್ಸಿ ಎ10 ಮತ್ತು ಎಸ್‌10 ಸ್ಮಾರ್ಟ್‌ಪೋನ್‌ಗಳನ್ನೇ ಹೋಲುತ್ತಿರುವ 'ಗ್ಯಾಲಾಕ್ಸಿ ಎಸ್10 5G' ಸ್ಮಾರ್ಟ್‌ಫೋನ್ ಫೀಚರ್ಸ್‌ಗಳಲ್ಲಿ ಮಾತ್ರ ಬದಲಾವಣೆಗಳನ್ನು ಹೊಂದಿದೆ ಎಂದು ಹೇಳಬಹುದು. ಕ್ವಾಡ್ ಲೆನ್ಸ್ ರಿಯರ್ ಕ್ಯಾಮೆರಾ, ಸೆಲ್ಪೀ ಕ್ಯಾಮೆರಾಗೆ ಮಾತ್ರ ನೋಚ್ ಅನ್ನು ಹೊಂದಿರುವ ವಿನ್ಯಾಸದಲ್ಲಿ 'ಗ್ಯಾಲಾಕ್ಸಿ ಎಸ್10 5G' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ.


 • 'ಗ್ಯಾಲಾಕ್ಸಿ ಎಸ್10 5G' ಡಿಸ್‌ಪ್ಲೇ!

  ಗ್ಯಾಲಾಕ್ಸಿ ಎ10 ಮತ್ತು ಎಸ್‌10 ಸ್ಮಾರ್ಟ್‌ಪೋನ್‌ಗಳಿಗಿಂತಲೂ ದೊಡ್ಡದಾದ ಡಿಸ್‌ಪ್ಲೇಯನ್ನು ಹೊಂದಿರುವುದು 'ಗ್ಯಾಲಾಕ್ಸಿ ಎಸ್10 5G' ಸ್ಮಾರ್ಟ್‌ಫೋನಿನ ಮತ್ತೊಂದು ವಿಶೇಷತೆಯಾಗಿದೆ. 'ಗ್ಯಾಲಾಕ್ಸಿ ಎಸ್10 5G'ನಲ್ಲಿ ಕ್ವಾಡ್ HD + ರೆಸೊಲ್ಯೂಷನ್ ಸಾಮರ್ಥ್ಯದ 6.7 ಇಂಚುಗಳ ಕರ್ವ್ಡ್ ಡೈನಾಮಿಕ್ AMOLED ಡಿಸ್‌ಪ್ಲೇ ಪೂರ್ಣ ಸ್ಕ್ರೀನ್ ಹೊಂದಿರುವುದನ್ನು ನೋಡಬಹುದು.


 • 'ಗ್ಯಾಲಾಕ್ಸಿ ಎಸ್10 5G' ಪ್ರೊಸೆಸರ್!

  'ಗ್ಯಾಲಾಕ್ಸಿ ಎಸ್10 5G' ಸ್ಮಾರ್ಟ್‌ಫೋನಿನಲ್ಲಿ 2.8 GHz ಒಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಎಕ್ಸ್50 ಮೊಡೆಮ್ ಅತ್ಯಾವಶ್ಯಕ ಎಂದು ಹೇಳಲಾಗಿದೆ. ಇನ್ನು 8GB RAM ಮತ್ತು 256 GB ಆಂತರಿಕ ಸ್ಟೋರೆಜ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಮೈಕ್ರೋ ಎಸ್‌ಡಿ ಕಾರ್ಡ್ ಬೆಂಬಲವನ್ನು ಹೊಂದಿಲ್ಲದಿರುವುದು ಆಶ್ಚರ್ಯವಾಗಿದೆ.


 • 'ಗ್ಯಾಲಾಕ್ಸಿ ಎಸ್10 5G' ಬ್ಯಾಟರಿ ಶಕ್ತಿ!

  4500 mAh ಬ್ಯಾಟರಿ ಶಕ್ತಿಯನ್ನು ಹೊಂದಲಿರುವ 'ಗ್ಯಾಲಾಕ್ಸಿ ಎಸ್10 5G' ಸ್ಮಾರ್ಟ್‌ಫೋನ್ ಬ್ಯಾಟರಿ ತಂತ್ರಜ್ಞಾನಗಳು ಗ್ಯಾಲಾಕ್ಸಿ ಎಸ್‌10 ಸ್ಮಾರ್ಟ್‌ಫೋನ್ ಅನ್ನು ಹೋಲುತ್ತವೆ. ಆದರೆ, ಎಸ್10 5G ಬ್ಯಾಟರಿ ಮಾತ್ರ ಅವುಗಳಿಗಿಂತ ದೀರ್ಘ ಬಾಳಕೆಯ ಶಕ್ತಿ ಸಾಮರ್ಥ್ಯವನ್ನು ಹೊಂದಿದ್ದು, ಇದರೊಂದಿಗೆ ಫಾಸ್ಟ್‌ ಚಾರ್ಜರ್ ಮತ್ತು ವೈಯರ್ ಲೆಸ್‌ ತಂತ್ರಜ್ಞಾನವನ್ನು ತರಲಾಗಿದೆ.


 • 'ಗ್ಯಾಲಾಕ್ಸಿ ಎಸ್10 5G' ಇತರೆ ಫೀಚರ್ಸ್?

  'ಗ್ಯಾಲಾಕ್ಸಿ ಎಸ್10 5G' ಸ್ಮಾರ್ಟ್‌ಫೋನಿನ ಪ್ರಮುಖ ವಿಶೇಷತೆ ಎಂದರೆ 5G ತಂತ್ರಜ್ಞಾನವೇ ಆಗಿದೆ. ಇದರ ಜೊತೆಗೆ ಕ್ವಾಡ್ ಲೆನ್ಸ್ ರಿಯರ್ ಕ್ಯಾಮೆರಾ, ಡ್ಯುಯಲ್ ಲೆನ್ಸ್ ಸೆಲ್ಫಿ ಕ್ಯಾಮೆರಾ ಸೆಟಪ್, 502 ಪಿಪಿಐ ಪಿಕ್ಸೆಲ್ ಡೆನ್ಸಿಟಿ ಇನ್ಫಿನಿಟಿ ಒ ಡಿಸ್‌ಪ್ಲೇ, ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಫೀಚರ್, ಫೇಸ್‌ ಅಂಡ್ ಐರಿಸ್ ಅನ್‌ಲಾಕ್ ವೈಶಿಷ್ಟ್ಯಗಳನ್ನು ನಾವು ಕಾಣಬಹುದಾಗಿದೆ.
ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆದ 2019ನೇ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ವಿಶ್ವದ ಮೊಟ್ಟ ಮೊದಲ ಸಾರ್ವಜನಿಕ ಬಳಕೆಯ 5G ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಟೆಕ್ನಾಲಜಿ ದೈತ್ಯ ಸ್ಯಾಮ್‌ಸಂಗ್ ಕಂಪೆನಿ ಅತಿ ನೂತನ 5ಜಿ ಸಾಮರ್ಥ್ಯವುಳ್ಳ 'ಗ್ಯಾಲಾಕ್ಸಿ ಎಸ್10 5G' ಸ್ಮಾರ್ಟ್‌ಫೋನ್ ಅನ್ನು ಅನಾವರಣಗೊಳಿಸಿದ್ದು, ವಿಶ್ವದಾದ್ಯಂತ ಮೊಬೈಲ್ ಪ್ರಿಯರಲ್ಲಿ ಭಾರೀ ಕುತೋಹಲ ಮೂಡಿಸುವಲ್ಲಿ ಮೊಟ್ಟ ಮೊದಲ ಗ್ರಾಹಕ ಬಳಕೆಯ 5G ಸ್ಮಾರ್ಟ್‌ಫೋನ್ ಸಫಲವಾಗಿದೆ.

ಈಗಲೂ ಸಾರ್ವಜನಿಕ ಬಳಕೆಯ 5G ತಂತ್ರಜ್ಞಾನದ ನಿರೀಕ್ಷೆಯಲ್ಲಿರುವ ವಿಶ್ವ ಮೊಬೈಲ್ ಜಗತ್ತಿಗೆ 5ಜಿ ಸಾಮರ್ಥ್ಯವುಳ್ಳ ಸ್ಮಾರ್ಟ್‌ಫೋನ್ ಎಂಟ್ರಿ ನೀಡುತ್ತಿರುವುದು ಒಂದು ರೀತಿಯಲ್ಲಿ ಕುತೋಹಲ ಮೂಡಿಸಿದರೂ ಸಹ, 2.8 GHz ಒಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್, 6.7 ಇಂಚುಗಳ ಕರ್ವ್ಡ್ ಡೈನಾಮಿಕ್ AMOLED ಡಿಸ್‌ಪ್ಲೇ, 8GB RAM ಮತ್ತು 256 GB ಆಂತರಿಕ ಸ್ಟೋರೆಜ್ ನಂತಹ ಫೀಚರ್ಸ್ ಹೊತ್ತ ವಿಶ್ವದ ಮೊದಲ 5ಜಿ ಸಾಮರ್ಥ್ಯವುಳ್ಳ ಸ್ಮಾರ್ಟ್‌ಫೋನ್ ಗಮನಸೆಳೆಯುತ್ತಿದೆ.

ಇನ್ನು 5ಜಿ ಸಾಮರ್ಥ್ಯವುಳ್ಳ 'ಗ್ಯಾಲಾಕ್ಸಿ ಎಸ್10 5G' ಸ್ಮಾರ್ಟ್‌ಫೋನ್ ಬಿಡುಗಡೆಯಾದರೂ ಭಾರತೀಯ ಮೊಬೈಲ್ ಪ್ರೇಮಿಗಳಿಗೆ ಮಾತ್ರ ನಿರಾಸೆ ಕಾದಿದೆ. ಏಕೆಂದರೆ ಸದ್ಯಕ್ಕಂತೂ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್10 5ಜಿ ಸ್ಮಾರ್ಟ್‌ಫೋನ್ ದೇಶವನ್ನು ಪ್ರವೇಶಿಸುವುದಿಲ್ಲ ಎಂಬುದು ತಿಳಿದುಬಂದಿದೆ. ಹಾಗಾದರೂ ಸಹ, ವಿಶ್ವದ ಮೊಟ್ಟ ಮೊದಲ ಸಾರ್ವಜನಿಕ ಬಳಕೆಯ 5G ಸಾಮರ್ಥ್ಯದ ಗ್ಯಾಲಾಕ್ಸಿ ಎಸ್10 5ಜಿ ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ನಾವು ಒಮ್ಮೆ ಓದಿ ತಿಳಿಯಲೇಬೇಕು.

   
 
ಹೆಲ್ತ್