Back
Home » ಇತ್ತೀಚಿನ
ಇನ್ಮುಂದೆ ನೀವು 'ಫೇಸ್‌ಬುಕ್ ಲೊಕೇಷನ್ ಆಫ್' ಮಾಡಬಹುದು! ಹೇಗೆ ಗೊತ್ತಾ?
Gizbot | 22nd Feb, 2019 12:30 PM

ಸ್ಮಾರ್ಟ್‌ಫೋನ್ ಹೊಂದಿರುವರೆಲ್ಲಾ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಸೆಳೆತಕ್ಕೆ ಒಳಗಾಗಿರುವರೇ ಆಗಿದ್ದು, ಆದರೂ ಬಳಕೆದಾರರ ಸಂಖ್ಯೆಯು ಹೆಚ್ಚುತ್ತಲೇ ಇದೆ. ಫೇಸ್‌ಬುಕ್ ತನ್ನ ಬಳಕೆದಾರರಿಕೆ ಅನುಕೂಲವಾಗುವಂತಹ ಮತ್ತು ಬಳಕೆದಾರರ ವೈಯಕ್ತಿಕ ಮಾಹಿತಿಗೆ ಸುರಕ್ಷತೆ ಒದಗಿಸುವ ಕುರಿತು ಸಾಕಷ್ಟು ಬದಲಾವಣೆಗಳನ್ನು ಈಗಾಗಲೇ ಪರಿಚಯಿಸಿದೆ. ಇದೀಗ ಫೇಸ್‌ಬುಕ್‌ ಮತ್ತೊಂದು ಹೊಸ ಫೀಚರ್ ಅನ್ನು ಅಳವಡಿಸಿದೆ.

ಹೌದು, ಫೇಸ್‌ಬುಕ್ 'ಬಳಕೆದಾರರ ಲೊಕೇಷನ್ ಟ್ರಾಕ್‌' ಆಫ್‌ ಮಾಡುವ ಆಯ್ಕೆ ಇದ್ದು, ಇದೀಗ ಫೇಸ್‌ಬುಕ್ ಬಳಕೆದಾರರು ತಮ್ಮ ಅಕೌಂಟ್‌ನಲ್ಲಿ ಲೊಕೇಷನ್ ಆಫ್ ಮಾಡಿಕೊಳ್ಳಬಹುದಾಗಿದೆ. ಜಾಹಿರಾತು ಕಂಪನಿಗಳಿಗೆ ಫೇಸ್‌ಬುಕ್ ಮೂಲಕ ಬಳಕೆದಾರರ ಅಭಿರುಚಿ, ಅವರ ಪ್ರದೇಶ, ಭಾಷೆ ಹೀಗೆ ಸಾಕಷ್ಟು ಮಾಹಿತಿಗಳು ತಿಳಿದುಕೊಳ್ಳಲು ಅನುಕೂಲವಾಗಿದ್ದು, ಈ ಆಧಾರದ ಮೇಲೆ ಫೇಸ್‌ಬುಕ್‌ನಲ್ಲಿ ಜಾಹಿರಾತುಗಳು ಬರುತ್ತವೆ.

ಇದೀಗ ಫೇಸ್‌ಬುಕ್‌ ಲೊಕೇಷನ್ ಆಫ್‌ ಮಾಡುವ ಅವಕಾಶ ಇರುವುದರಿಂದ ನಿಮಗೆ ಬಳಕೆ ಇಲ್ಲದಾಗ ನೀವು ಆಫ್‌ ಮಾಡಿಕೊಳ್ಳಬಹುದಾಗಿದ್ದು, ಇದರಿಂದ ನಿಮ್ಮ ಲೊಕೇಷನ ಮಾಹಿತಿಯನ್ನು ಸುರಕ್ಷಿತವಾಗಿಡಲು ಅನುಕೂಲವಾಗಿದೆ. ಈ ಫೀಚರ್ಸ್ ಬಳಸಿ ನೀವು ಲೊಕೇಷನ್ ಆಫ್ ಮಾಡಿದರೆ ಇತರರಿಗೆ ನಿಮ್ಮ ಲೊಕೇಷನ್ ಟ್ರಾಕ್ ಮಾಡಲು ಸಾಧ್ಯವಾಗುವುದಿಲ್ಲ. ಆಂಡ್ರಾಯ್ಡ್ ಮತ್ತು ಐಓಎಸ್ ಆಪರೇಟಿಂಗ್ ಸಿಸ್ಟಂ ಬಳಕೆದಾರರಿಬ್ಬರಿಗೂ ಈ ಫೀಚರ್ ಲಭ್ಯವಿದೆ. ಹಾಗಾದರೇ ಫೇಸ್‌ಬುಕ್‌ನಲ್ಲಿ ಲೊಕೇಷನ್ ಆಫ್ ಮಾಡುವುದು ಹೇಗೆ ಎಂಬುದನ್ನು ನೋಡೋಣ ಬನ್ನಿರಿ.

ಈ ಕೆಳಗಿನ ಹಂತಗಳನ್ನು ಅನುಸರಿಸಿ ನಿಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಲೊಕೇಷನ್

* ಫೇಸ್‌ಬುಕ್ ಆಪ್‌ ತೆರೆಯಿರಿ.

* ಬಲಗಡೆ ಕಾಣಿಸುವ (ಮೂರು ಅಡ್ಡಗೇರೆಗಳಿರುವ) ಮೆನು ಆಯ್ಕೆಯನ್ನು ಒತ್ತಿರಿ.

* ಕಾಣಿಸುವ ಆಯ್ಕೆಗಳಲ್ಲಿ "ಸೆಟ್ಟಿಂಗ್ಸ್ ಮತ್ತು ಪ್ರೈವಸಿ" ಆಯ್ಕೆಯನ್ನು ತೆರೆಯಿರಿ.

* "ಪ್ರೈವಸಿ ಶಾರ್ಟ್‌ಕಟ್‌" ಆಯ್ಕೆಯನ್ನು ಒತ್ತಿರಿ.

* "ಮ್ಯಾನೆಜ್ ಯುವರ್ ಲೊಕೇಷನ್ ಸೆಟ್ಟಿಂಗ್ಸ್" ಆಯ್ಕೆಗೆ ಕ್ಲಿಕ್ ಮಾಡಿ.

* "ಲೊಕೇಷನ್ ಆಫ್‌" ಆಯ್ಕೆ ಮಾಡಿರಿ.

   
 
ಹೆಲ್ತ್