Back
Home » ಆರೋಗ್ಯ
ಕಿಡ್ನಿ ಕ್ಯಾನ್ಸರ್ ಇದ್ದರೆ ಪೋಷಕಾಂಶಗಳ ಆಹಾರ ಸೇವನೆ ಹೇಗಿರಬೇಕು? ಏನು ತಿನ್ನಬೇಕು-ಏನು ತಿನ್ನಬಾರದು?
Boldsky | 7th Mar, 2019 12:54 PM
 • ಹೀಗೆ ಮಾಡಿ: ವಿವಿಧ ಬಗೆಯ ಆರೋಗ್ಯಕಾರಿ ಆಹಾರ ಸೇವಿಸಿ

  ಕಿಡ್ನಿ ಕ್ಯಾನ್ಸರ್ ಇರುವಂತಹ ಜನರು ತುಂಬಾ ಸಂವೇದನಶೀಲವಾಗಿರುವಂತಹ ಆಹಾರ ಕ್ರಮವನ್ನು ಆಯ್ಕೆ ಮಾಡಿಕೊಳ್ಳಬೇಕು. ಆರೋಗ್ಯಕರವಾಗಿರುವ ಆಹಾರದಿಂದಾಗಿ ಸಾಮಾನ್ಯ ಅಂಗಾಂಶಗಳು ಪುನರ್ಶ್ಚೇತನ ಪಡೆಯುವುದು, ಸೋಂಕು ತಡೆಯುವುದು ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡಲು ಶಕ್ತಿ ಪಡೆಯಲು ನೆರವಾಗುವುದು. ಸಮತೋಲಿತ ಆಹಾರ ಕ್ರಮವೆಂದರೆ ತುಂಬಾ ಹಣ್ಣುಗಳು ಮತ್ತು ತರಕಾರಿಗಳು, ಅದೇ ರೀತಿಯಾಗಿ ಇಡೀ ಧಾನ್ಯಗಳು ಮತ್ತು ತುಂಬಾ ಕಡಿಮೆ ಪ್ರಮಾಣದಲ್ಲಿ ಕೆಂಪು ಮಾಂಸ ಸೇವನೆ ಮಾಡಬೇಕು. ಕ್ಯಾನ್ಸರ್ ಹಂತ ಮತ್ತು ಅದಕ್ಕೆ ಸಂಬಂಧಿಸಿದ ಚಿಕಿತ್ಸೆಗೆ ಅನುಗುಣವಾಗಿ ನೀವು ಕೆಲವೊಂದು ವಿಶೇಷ ಆಹಾರವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕೆ ನೀವು ವೈದ್ಯರು ಅಥವಾ ಆಹಾರ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಿರಿ.


 • ಹೀಗೆ ಮಾಡಬೇಡಿ: ಅತಿಯಾಗಿ ನೀರು ಮತ್ತು ದ್ರವಾಹಾರ ಸೇವನೆ

  ಕಿಡ್ನಿಯು ಮೂತ್ರವನ್ನು ಉತ್ಪತ್ತಿ ಮಾಡುವುದು ಇದರಿಂದಾಗಿ ದೇಹದಲ್ಲಿನ ದ್ರವದ ಪ್ರಮಾಣವು ನಿಯಂತ್ರಿಸಲು ನೆರವಾಗುವುದು. ಕಿಡ್ನಿ ಕ್ಯಾನ್ಸರ್ ಇದ್ದರೆ ಆಗ ಕಿಡ್ನಿಯ ಕಾರ್ಯವು ಕೂಡ ಅಷ್ಟು ಸೂಕ್ತವಾಗಿರುವುದಿಲ್ಲ ಮತ್ತು ಇದರಿಂದಾಗಿ ದೇಹವು ಸರಿಯಾದ ಪ್ರಮಾಣದಲ್ಲಿ ಮೂತ್ರ ಉತ್ಪತ್ತಿ ಮಾಡಲು ಸಾಧ್ಯವಾಗದು. ಅತಿಯಾಗಿ ನೀರು ಸೇವನೆ ಮಾಡಿದರೆ ಅದರಿಂದ ಊತ, ಅಧಿಕ ರಕ್ತದೊತ್ತಡ ಮತ್ತು ಉಸಿರು ಕಟ್ಟುವ ಸಮಸ್ಯೆ ಕಾಣಿಸುವುದು. ಇದರಿಂದ ನೀವು ದೇಹವನ್ನು ತೇವಾಂಶದಿಂದ ಇಟ್ಟುಕೊಳ್ಳಿ. ಆದರೆ ಅತಿಯಾಗಿ ಹೀಗೆ ಮಾಡಬೇಡಿ.

  Most Read: ಖತರ್ನಾಕ್ ಕಿಡ್ನಿ ಕ್ಯಾನ್ಸರ್‌ನ ಕೆಲವೊಂದು ಲಕ್ಷಣಗಳು ಮತ್ತು ಚಿಹ್ನೆಗಳು


 • ಹೀಗೆ ಮಾಡಿ: ತಿನ್ನುವ ಪ್ರೋಟೀನ್ ಕಡೆ ಗಮನಹರಿಸಿ

  ಸಸ್ಯಗಳಲ್ಲಿ ಸಿಗುವಂತಹ ಪ್ರೋಟೀನ್ ಗಿಂತ ಪ್ರಾಣಿಜನ್ಯವಾಗಿರುವಂತಹ ಪ್ರೋಟೀನ್ ನ್ನು ಅತಿಯಾಗಿ ಬಳಕೆ ಮಾಡುವುದು ಕೂಡ ಕಿಡ್ನಿ ಕ್ಯಾನ್ಸರ್ ಗೆ ಸಂಬಂಧ ಹೊಂದಿದೆ. ಇದಕ್ಕೆ ಯಾವುದೆ ಅಂತಿಮ ಮೊಹರು ಹಾಕಲಾಗಿಲ್ಲ. ಆದರೆ ಇದು ತುಂಬಾ ಅಪಾಯಕಾರಿ. ಮಾಂಸಖಂಡಗಳಿಗಾಗಿ ಪ್ರೋಟೀನ್ ಎನ್ನುವುದು ಅತೀ ಅಗತ್ಯವಾಗಿ ಆಹಾರದಲ್ಲಿ ಬೇಕೇಬೇಕು. ಆದರೆ ನೀವು ಎಷ್ಟು ತಿನ್ನುತ್ತಿದ್ದೀರಿ ಎನ್ನುವುದನ್ನು ಗಮನಿಸಬೇಕು. ಕಿಡ್ನಿಯು ದೇಹದಲ್ಲಿರುವಂತಹ ಕಲ್ಮಷವನ್ನು ಹೊರಗೆ ಹಾಕುವುದು. ಆದರೆ ಈ ಕಲ್ಮಷವು ರಕ್ತನಾಳದಲ್ಲಿ ಜಮೆ ಆಗಬಾರದು. ಕಿಡ್ನಿ ಸಮಸ್ಯೆ ಇದ್ದರೆ ರಕ್ತನಾಳಗಳಲ್ಲಿ ಕಲ್ಮಷವು ಜಮೆ ಆಗುವುದು. ಇದರಿಂದಾಗಿ ನಿಮ್ಮ ಪರಿಸ್ಥಿತಿಗೆ ಅನುಗುಣವಾಗಿ ಎಷ್ಟು ಮಟ್ಟದ ಪ್ರಾಣಿಜನ್ಯ ಪ್ರೋಟೀನ್ ಸೇವಿಸಬಹುದು ಎಂದು ವೈದ್ಯರಲ್ಲಿ ಕೇಳಿ ನೋಡಿ.


 • ಹೀಗೆ ಮಾಡಬೇಡಿ: ಅತಿಯಾಗಿ ಉಪ್ಪು ಸೇವಿಸುವುದು

  ಯಾವುದೇ ಆಹಾರ ಕ್ರಮವಾಗಿದ್ದರೂ ಉಪ್ಪನ್ನು ತುಂಬಾ ಮಿತವಾಗಿ ಬಳಕೆ ಮಾಡಬೇಕು. ಆದರೆ ಇದನ್ನು ಕಿಡ್ನಿ ಕ್ಯಾನ್ಸರ್ ಇರುವಂತಹ ಜನರು ತಪ್ಪದೇ ಪಾಲಿಸಬೇಕು. ಒಂದು ಕಿಡ್ನಿ ತೆಗೆದಿರುವವರು ಕೂಡ ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಸೋಡಿಯಂನಿಂದಾಗಿ ಅಧಿಕ ರಕ್ತದೊತ್ತಡ ಬರುವುದು. ಇದರಿಂದ ಕಿಡ್ನಿ ಸಮಸ್ಯೆಗಳು ತೀವ್ರವಾಗುವುದು. ಇದರಿಂದ ನೀವು ಉಪ್ಪಿಗೆ ಪರ್ಯಾಯವಾಗಿ ಬೇರೆ ಯಾವುದೇ ಗಿಡಮೂಲಿಕೆಗಳು ಅಥವಾ ಲಿಂಬೆರಸ ಬಳಕೆ ಮಾಡಿ. ಸಂಸ್ಕರಿತ ತಿಂಡಿಗಳು ಮತ್ತು ಮಾಂಸ, ಕ್ಯಾನ್ ನಲ್ಲಿರುವ ಆಹಾರ ಮತ್ತು ಫಾಸ್ಟ್ ಫುಡ್ ನಿಂದ ಆದಷ್ಟು ದೂರವಿರಿ. ಇದರಲ್ಲಿ ಉಪ್ಪು ಅತಿಯಾಗಿ ಬಳಕೆ ಮಾಡಲಾಗುತ್ತದೆ.


 • ಹೀಗೆ ಮಾಡಬೇಡಿ: ಮಿತ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವನೆ ಬಗ್ಗೆ ಭೀತಿ

  ಕೆಲವೊಂದು ಅಧ್ಯಯನಗಳು ಹೇಳುವ ಪ್ರಕಾರ ಮಿತ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವನೆ ಮಾಡುವುದರಿಂದ ಕಿಡ್ನಿಯ ಕ್ಯಾನ್ಸರ್ ನಿಂದ ರಕ್ಷಣೆ ಸಿಗುವುದು. ಆದರೆ ಅತಿಯಾಗಿ ಸೇವನೆ ಮಾಡುವುದು ಯಾವಾಗಲೂ ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಒಂದು ಕಿಡ್ನಿಯಲ್ಲಿದ್ದರೆ ಆಗ ಮಿತ ಪ್ರಮಾಣದಲ್ಲಿ ಸೇವನೆ ಮಾಡಬಹುದು. ಅದಾಗ್ಯೂ, ನೀವು ಆಹಾರ ಕ್ರಮದಲ್ಲಿ ಇದನ್ನು ಸೇರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ, ಅವರಿಂದ ಮಾಹಿತಿ ಪಡೆಯಿರಿ. ಯಾಕೆಂದರೆ ಇದರಿಂದ ಚಿಕಿತ್ಸೆಗೆ ಅಡ್ಡಿಯಾಗಬಹುದು.

  Most Read: ಕಿಡ್ನಿ ಕ್ಯಾನ್ಸರ್ ಗೆ ತುತ್ತಾಗಿರುವ ಬಾಲಕಿಯ ಹಾಡು ಕೇಳಿ...


 • ಹೀಗೆ ಮಾಡಿ: ಸಪ್ಲಿಮೆಂಟ್ ಸೇವನೆ ಮಾಡುವುದನ್ನು ಪರಿಗಣಿಸಿ

  ಸೇವಿಸುತ್ತಿರುವಂತಹ ಸಮತೋಲಿತ ಆಹಾರವು ಎಲ್ಲಾ ರೀತಿಯ ಪೋಷಕಾಂಶಗಳನ್ನು ನೀಡುತ್ತದೆಯಾ ಮತ್ತು ಅದು ಕಿಡ್ನಿಗಳಿಗೆ ಒಳ್ಳೆಯದಾ ಎಂದು ವೈದ್ಯರನ್ನು ಕೇಳಿ ನೋಡಿ. ಆಹಾರ ಕ್ರಮಕ್ಕೆ ಅನುಗುಣವಾಗಿ ವೈದ್ಯರು ವಿಟಮಿನ್ ಗಳು ಮತ್ತು ಖನಿಜಾಂಶಗಳ ಸಪ್ಲಿಮೆಂಟ್ ನ್ನು ನೀಡಬಹುದು. ಸಪ್ಲಿಮೆಂಟ್ ಎನ್ನುವುದು ಯಾವಾಗಲೂ ಅಗತ್ಯವಲ್ಲ, ಆದರೆ ವೈದ್ಯರನ್ನು ಸಂಪರ್ಕಿಸಿ, ಅವರೊಂದಿಗೆ ಸಮಾಲೋಚಿಸಿ ನೀವು ಇದನ್ನು ಸೇವಿಸಿ.


 • ಹೀಗೆ ಮಾಡಿ: ಸಣ್ಣ ಪ್ರಮಾಣದಲ್ಲಿ ಆಹಾರವನ್ನು ದಿನವಿಡಿ ಸೇವಿಸಿ

  ಕಿಡ್ನಿ ಕ್ಯಾನ್ಸರ್ ವೇಳೆ ಇದು ಅಗತ್ಯವೇನಿಲ್ಲ. ಆದರೆ ಕೆಲವು ಜನರಿಗೆ ಬೇಕಾಗಿರುವ ಪೋಷಕಾಂಶಗಳನ್ನು ಪಡೆಯಲು ಯಾವುದೇ ರೀತಿಯ ಹೊಟ್ಟೆಯ ಸಮಸ್ಯೆ ಬರದಂತೆ ಮಾಡಲು ಈ ರೀತಿಯ ಕ್ರಮ ತೆಗೆದುಕೊಳ್ಳಬೇಕು. ಕಿಡ್ನಿ ಕ್ಯಾನ್ಸರ್ ಗೆ ನೀಡುವ ಚಿಕಿತ್ಸೆಯಿಂದಾಗಿ ವಾಕರಿಕೆ, ಭೇದಿ ಮತ್ತು ಮಲಬದ್ಧತೆ ಉಂಟಾಗಬಹುದು. ಇದರಿಂದಾಗಿ ಯಾವಾಗ ಮತ್ತು ಎಷ್ಟು ತಿನ್ನಬೇಕು ಎಂದು ನೀವು ಹೊಂದಾಣಿಕೆ ಮಾಡಿಕೊಳ್ಳಬೇಕು. ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ವೇಳೆ ದೊಡ್ಡ ಪ್ರಮಾಣದ ಆಹಾರ ಸೇವಿಸುವ ಬದಲು ಸಣ್ಣ ಸಣ್ಣ ಪ್ರಮಾಣದಲ್ಲಿ ದಿನವಿಡಿ ತಿಂದರೆ ಒಳ್ಳೆಯದು. ಇದರಿಂದ ಹೊಟ್ಟೆಗೆ ತುಂಬಾ ಒಳ್ಳೆಯ ಭಾವನೆಯಾಗುವುದು.


 • ಹೀಗೆ ಮಾಡಬೇಡಿ: ಎಲ್ಲಾ ಕಾಯಿಲೆಗಳು ಒಂದೇ ರೀತಿಯ ಆಹಾರದಿಂದ ಬರುವುದು

  ಕಿಡ್ನಿ ಕ್ಯಾನ್ಸರ್ ಬಗ್ಗೆ ನೀವು ಆಹಾರ ಕ್ರಮದ ಬಗ್ಗೆ ಸ್ವಲ್ಪ ವಿವರ ಪಡೆಯಲು ಬಯಸುತ್ತಿದ್ದರೆ ಆಗ ನೀವು ಕಿಡ್ನಿ ಕ್ಯಾನ್ಸರ್ ಗೆ ಪೋಷಕಾಂಶ ತಜ್ಞರು ಹೇಳಿರುವಂತಹ ಆಹಾರ ಕ್ರಮದ ಬಗ್ಗೆ ನೀವು ತುಂಬಾ ಎಚ್ಚರಿಕೆ ವಹಿಸಬೇಕು. ಕಿಡ್ನಿ ಕ್ಯಾನ್ಸರ್ ಮತ್ತು ನೀಡುತ್ತಿರುವಂತಹ ಚಿಕಿತ್ಸೆಯು ತುಂಬಾ ಭಿನ್ನವಾಗಿ ಇರಬಹುದು. ಕಿಡ್ನಿ ಕಾಯಿಲೆಗೆ ಸೂಚಿಸಿರುವಂತಹ ಆಹಾರ ಕ್ರಮವು ತುಂಬಾ ಭಿನ್ನವಾಗಿ ಇರಬಹುದು. ಕಿಡ್ನಿ ಕ್ಯಾನ್ಸರ್ ಮತ್ತು ಇತರ ಕ್ಯಾನ್ಸರ್ ಗೆ ಸೂಚಿಸಿರುವಂತಹ ಆಹಾರ ಕ್ರಮವು ಭಿನ್ನವಾಗಿರುವುದು. ಇದು ಪ್ರತಿಯೊಂದು ಪರಿಸ್ಥಿತಿಗೆ ಹೊಂದಿಕೊಂಡು ಸೂಚಿಸಲಾಗಿದೆ. ಇದರಿಂದಾಗಿ ನೀವು ಕಿಡ್ನಿ ಕ್ಯಾನ್ಸರ್ ಗೆ ಸಂಬಂಧಿಸಿದ ಆಹಾರ ಕ್ರಮದ ಬಗ್ಗೆ ಮಾತ್ರ ವಿವರ ಪಡೆಯಿರಿ.


 • ಹೀಗೆ ಮಾಡಿ: ಪೋಷಕಾಂಶ ತಜ್ಞರ ನೆರವು ಪಡೆಯಿರಿ

  ಕಿಡ್ನಿ ಕ್ಯಾನ್ಸರ್ ನಿಂದಾಗಿ ವಾಕರಿಕೆ, ಭೇದಿ ಮತ್ತು ಮಲಬದ್ಧತೆ ಸಮಸ್ಯೆಯು ಕಾಣಿಸಿಕೊಳ್ಳುವುದು. ಇದರಿಂದ ನೀವು ಅನಾರೋಗ್ಯಕ್ಕೆ ಒಳಗಾಗದಂತೆ ಇರಲು ಕೆಲವೊಂದು ಪೋಷಕಾಂಶಗಳು ಇರುವಂತಹ ಆಹಾರವನ್ನು ಪೋಷಕಾಂಶ ತಜ್ಞರು ಸೂಚಿಸುವರು. ಚಿಕಿತ್ಸೆಯ ಕಾರಣದಿಂದಾಗಿ ಕೆಲವೊಂದು ಆಹಾರದ ರುಚಿಯು ನಿಮಗೆ ಹಿಡಿಸದೆ ಇರಬಹುದು. ಹೀಗಾಗಿ ನೀವು ಒಬ್ಬ ನೋಂದಾಯಿತ ಆಹಾರತಜ್ಞರನ್ನು ಭೇಟಿ ಮಾಡಿ ನಿಮಗೆ ಬೇಕಿರುವಂತಹ ಮಾಹಿತಿ ಪಡೆದುಕೊಳ್ಳಿ. ಆಕೆ ಅಥವಾ ಆತ ನಿಮ್ಮ ಯೋಜನೆಗಳನ್ನು ಸರಿಯಾದ ಕ್ರಮದಲ್ಲಿ ಇಡುವರು ಮತ್ತು ಕಿಡ್ನಿ ಕ್ಯಾನ್ಸರ್ ಚಿಕಿತ್ಸೆಗೆ ಬೇಕಾಗಿರುವಂತಹ ಕೆಲವೊಂದು ಬದಲಾವಣೆಗಳನ್ನು ಅವರು ಸೂಚಿಸುವರು.


 • ಹೀಗೆ ಮಾಡಬೇಡಿ: ವ್ಯಾಯಾಮ ಬಿಟ್ಟುಬಿಡುವುದು

  ಕಿಡ್ನಿ ಕ್ಯಾನ್ಸರ್ ಚಿಕಿತ್ಸೆ ವೇಳೆ ನಿಮ್ಮ ದೇಹವು ನಿಶ್ಯಕ್ತಿಯಿಂದ ಬಳಲುತ್ತಾ ಇರಬಹುದು. ಕಿಡ್ನಿಯ ಭಾಗ ಅಥವಾ ಕಿಡ್ನಿ ಶಸ್ತ್ರಚಿಕಿತ್ಸೆ ಮಾಡಿದ ವೇಳೆ ಕೂಡ ನಿಮಗೆ ಹೀಗೆ ಆಗಬಹುದು. ಈ ವೇಳೆ ನೀವು ಸ್ವಲ್ಪ ವ್ಯಾಯಾಮ ಮಾಡಿ. ನಿಮಗೆ ಯಾವ ರೀತಿಯ ವ್ಯಾಯಾಮ ಹೊಂದಿಕೊಳ್ಳುವುದು ಎಂದು ವೈದ್ಯರಲ್ಲಿ ಕೇಳಿನೋಡಿ. ಅವರು ಹೇಳಿದಂತೆ ನೀವು ಲಘು ವ್ಯಾಯಾಮ ಮಾಡಿಕೊಳ್ಳಿ. ಅತಿಯಾಗಿ ಬೇಡ.
ಕ್ಯಾನ್ಸರ್ ನಲ್ಲಿ ಹಲವಾರು ವಿಧಗಳು ಇವೆ. ಈಗೀಗ ದಿನಕ್ಕೊಂದು ಹೊಸ ರೀತಿಯ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಅದರಲ್ಲೂ ಕಿಡ್ನಿ ಕ್ಯಾನ್ಸರ್ ಬಗ್ಗೆ ನೀವು ಕೇಳಿರಬಹುದು. ಇದು ತುಂಬಾ ಅಪಾಯಕಾರಿ. ಆದರೆ ನಾವು ತಿನ್ನುವಂತಹ ಆಹಾರ ಮತ್ತು ಕಿಡ್ನಿ ಕ್ಯಾನ್ಸರ್ ಬರುವುದಕ್ಕೆ ಯಾವುದೇ ಸಂಬಂಧವಿಲ್ಲವೆಂದು ಹೇಳಲಾಗುತ್ತಿದೆ. ಆದರೆ ಅಧ್ಯಯನಗಳು ಹೇಳುವ ಪ್ರಕಾರ, ನಾವು ತಿನ್ನುವಂತಹ ಆಹಾರ ಮತ್ತು ಇತರ ಕೆಲವೊಂದು ಆರೋಗ್ಯ ವಿಚಾರಗಳಾಗಿರುವಂತಹ ನಾವು ವ್ಯಾಯಾಮ ಮಾಡುತ್ತೇವೆಯಾ? ಇಲ್ಲವಾ ಎನ್ನುವುದು ಕೂಡ ಕ್ಯಾನ್ಸರ್ ಬರುವುದನ್ನು ಅಲವಂಬಿಸಿದೆ.

ಆರೋಗ್ಯಕರವಾಗಿರುವಂತಹ ಆಹಾರ ಕ್ರಮದಲ್ಲಿ ಸರಿಯಾದ ಪ್ರಮಾಣದಲ್ಲಿ ಪ್ರತಿಯೊಂದು ಆಹಾರದ ಸೇವನೆ ಮಾಡಿದರೆ ಅದರಿಂದ ಗಂಭೀರವಾದ ವೈದ್ಯಕೀಯ ಸಮಸ್ಯೆಗಳ ನಿವಾರಣೆ ಮಾಡಲು ನೆರವಾಗುವುದು. ಕಿಡ್ನಿ ಸಮಸ್ಯೆ ಇರುವವರು ಆರೋಗ್ಯಕರ ಆಯ್ಕೆ ಮಾಡಿಕೊಳ್ಳುವುದಿದ್ದರೆ ಆಗ ಯಾವ ಪೋಷಕಾಂಶಗಳನ್ನು ಸೇವಿಸಬಹುದು ಮತ್ತು ಯಾವುದನ್ನು ಸೇವಿಸಬಾರದು ಎನ್ನುವುದರ ಬಗ್ಗೆ ಮುಖ್ಯವಾಗಿ ಗಮನಹರಿಸಬೇಕು.

   
 
ಹೆಲ್ತ್