Back
Home » ಆರೋಗ್ಯ
ಆಯುರ್ವೇದ ಮನೆ ಔಷಧಿಗಳು- ಅರ್ಧ ಗಂಟೆಯಲ್ಲಿಯೇ 'ಲೂಸ್ ಮೋಷನ್' ಸಮಸ್ಯೆ ನಿಯಂತ್ರಣಕ್ಕೆ
Boldsky | 7th Mar, 2019 04:45 PM
 • ಭೇದಿ ಸಮಸ್ಯೆಗೆ ಆಯುರ್ವೇದ ಚಿಕಿತ್ಸೆ

  • ಅಜ್ವೈನ್ ತೈಲ, ಫೆನ್ನೆಲ್ ತೈಲ, ಸಾ ತೈಲ ಮತ್ತು ಕರ್ಪೂರವನ್ನು ಸಮ ಪ್ರಮಾಣದಲ್ಲಿ ಬೆರೆಸಿಕೊಳ್ಳಬೇಕು. ಈ ಮಿಶ್ರಣದ ಒಂದು ಹನಿಯನ್ನು ಮೊಸರಿನೊಂದಿಗೆ ಅಥವಾ ಸಕ್ಕರೆ ತುಂಡು ಅಥವಾ ಒಂದು ಚಮಚ ಸಕ್ಕರೆ ಜತೆಗೆ ಮಿಶ್ರಣ ಮಾಡಿ. ಇದಕ್ಕೆ ನೀರು ಹಾಕಿಕೊಂಡು ಕುಡಿಯಿರಿ. ಇದನ್ನು ವಾಖರಿಕೆ ಮತ್ತು ವಾಂತಿಗೆ ತುಂಬಾ ಜನಪ್ರಿಯ ಚಿಕಿತ್ಸಾ ವಿಧಾನವಾಗಿದೆ.
  • ತ್ರಿಕಾತು, ಇಂಗು, ಶುಂಠಿ, ಜಾಯಿಕಾಯಿ, ಕಪ್ಪು ಉಪ್ಪು ಮತ್ತು ಲಿಂಬೆರಸವನ್ನು ಸಮ ಪ್ರಮಾಣದಲ್ಲಿ ಹಾಕಿಕೊಂಡು ಸುಮಾರು 300 ಗ್ರಾಂನಷ್ಟು ಮಿಶ್ರಣ ಮಾಡಿಕೊಳ್ಳಿ.


 • ದಾಳಿಂಬೆ ಹಣ್ಣಿನ ಸಿಪ್ಪೆ

  *ಭೇದಿ ಸಮಸ್ಯೆ ನಿವಾರಣೆ ಮಾಡಲು ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಬಳಸಿಕೊಳ್ಳಬಹುದು. ಒಣಗಿಸಿದ ದಾಳಿಂಬೆ ಸಿಪ್ಪೆಯ 3-4 ತುಂಡುಗಳನ್ನು ತೆಗೆದುಕೊಳ್ಳಿ ಮತ್ತು ಇದನ್ನು 2 ಕಪ್ ನೀರಿಗೆ ಹಾಕಿ. ಮಧ್ಯಮ ಬೆಂಕಿಯಲ್ಲಿ ಪಾತ್ರೆಯ ಮುಚ್ಚಳ ಹಾಕಿ ಇದನ್ನು ಕುದಿಸಿ. ಇದಕ್ಕೆ ನೀವು ಎರಡು ತುಂಡು ಸಕ್ಕರೆ ಅಥವಾ ಸಕ್ಕರೆ ಬಳಸಬಹುದು. ಪಾತ್ರೆಯಲ್ಲಿ ಅರ್ಧದಷ್ಟು ಆಗುವಷ್ಟು ಕುದಿಸಿಕೊಳ್ಳಿ. ಊಟ ಮಾಡಿದ ಅರ್ಧ ಗಂಟೆ ಬಳಿಕ ನೀವು ಇದನ್ನು ಕುಡಿಯಿರಿ.
  *ದಾಳಿಂಬೆಯ ಒಣ ಸಿಪ್ಪೆಯ ಹುಡಿಯನ್ನು ಮೊಸರಿನೊಂದಿಗೆ ಕೂಡ ಬಳಸಿಕೊಳ್ಳಬಹುದು. ಒಂದು ಚಮಚ ದಾಳಿಂಬೆ ಸಿಪ್ಪೆಯ ಹುಡಿ ಮತ್ತು ಒಂದು ಕಪ್ ದಪ್ಪ ಮೊಸರು ಬಳಸಿಕೊಳ್ಳಿ. ಇದನ್ನು ನೀವು ಖಾಲಿ ಹೊಟ್ಟೆಯಲ್ಲಿ ಸೇವಿಸಿಕೊಳ್ಳಿ.
  *ಲವಣಭಾಸ್ಕರ ಚೂರ್ಣದ 60 ಗ್ರಾಂ ಹುಡಿ, 5 ಗ್ರಾಂ ಶಂಖಭೂಸಮ್ ಮತ್ತು ಬಿಳಿ ಜೀರಿಗೆ ಮತ್ತು 3 ಗ್ರಾಂ ಲೋಧ್ರಾ ಮತ್ತು ಸೊಂತ ತೆಗೆದುಕೊಳ್ಳಿ. ಈ ಮಿಶ್ರಣದ 16 ಸಮ ಭಾಗವನ್ನಾಗಿ ಮಾಡಿಕೊಳ್ಳಿ ಮತ್ತು ಒಂದು ಭಾಗವನ್ನು ಪ್ರತನಿತ್ಯ ಮೊಸರಿನೊಂದಿಗೆ ಸೇವಿಸಿ.

  Most Read: ಹೆಸರಿನ ಮೊದಲ ಅಕ್ಷರದಲ್ಲಿ ಅಡಗಿರುವ ರಹಸ್ಯವೇನು? ನಿಮ್ಮದೂ ಪರಿಶೀಲಿಸಿಕೊಳ್ಳಿ


 • ಎಳೆನೀರು ಕುಡಿಯಿರಿ

  ಸಮುದ್ರತೀರದ ಬೆಳೆಯಾದ ತೆಂಗಿನ ಮರವನ್ನು ಕಲ್ಪವೃಕ್ಷವೆಂದು ನಮ್ಮ ಹಿರಿಯರು ಪರಿಗಣಿಸಿ ಪ್ರತಿ ಮನೆಯಲ್ಲಿಯೂ ನೆಟ್ಟಿದ್ದರಿಂದ ಇಂದು ಇಡಿಯ ಭಾರತದಲ್ಲಿ ತೆಂಗಿನ ಮರಗಳು ಇಲ್ಲದ ಊರೇ ಇಲ್ಲವೆಂದು ಹೇಳಬಹುದು. ಗಾತ್ರದಲ್ಲಿ ಕೊಂಚ ಚಿಕ್ಕ ದೊಡ್ಡದಾಗಿರಬಹುದಷ್ಟೇ ಹೊರತು ಎಳನೀರು ಪ್ರತಿ ಊರಿನಲ್ಲಿಯೂ ಬಹುತೇಕ ಇಡಿಯ ವರ್ಷ ದೊರಕುತ್ತದೆ. ನವಿರಾದ ಸಿಹಿ, ನೀರಿನಷ್ಟೇ ಗಾಢವಾದ ಎಳನೀರು ದೇಹಕ್ಕೆ ಅಗತ್ಯವಾದ ಬಹಳಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಪೋಷಕಾಂಶಗಳನ್ನು ಪಡೆದ ದೇಹ ಶೀಘ್ರ ತನ್ನ ಚಟುವಟಿಕೆಗಳನ್ನು ಪೂರ್ಣ ಕ್ಷಮತೆಯಲ್ಲಿ ನಿರ್ವಹಿಸಲು ಸಬಲಗೊಳ್ಳುತ್ತದೆ. ಅದರಲ್ಲೂ ಮೂತ್ರವನ್ನು ಸ್ವಚ್ಛಗೊಳಿಸಲು ಮತ್ತು ದೇಹದಲ್ಲಿ ನೀರು ಮತ್ತು ಶಕ್ತಿಯ ಕೊರತೆಯಾದಾಗ ಕುಡಿಯಬಹುದಾದ ಅತ್ಯುತ್ತಮ ದ್ರವ ಎಂದರೆ ಎಳನೀರು. ಅಷ್ಟೇ ಅಲ್ಲದೆ ಅತಿಸಾರ ಮತ್ತು ನಿರ್ಜಲೀಕರಣದಿಂದ ಪರಿಹಾರ ಪಡೆಯಲು ಮತ್ತೊಂದು ಆರೋಗ್ಯಕರ ಹಾಗೂ ಪೋಷಕಾಂಶಯುಕ್ತ ಪಾನೀಯವೆಂದರೆ ಎಳನೀರು. ಕಳಕೊಂಡಿರುವ ವಿದ್ಯುದ್ವಿಚ್ಛೇದ್ಯಗಳನ್ನು ಮರುಹೊಂದಿಸುವುದು ಮಾತ್ರವಲ್ಲದೆ ಹೊಟ್ಟೆಯಲ್ಲಿ ಪಿಎಚ್ ಮಟ್ಟವನ್ನು ಕಡಿಮೆ ಮಾಡಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಶಾಂತವಾಗಿಡುತ್ತದೆ


 • ಕೋಕಂ ಜ್ಯೂಸ್

  ಒಂದು ಲೋಟ ನೀರಿಗೆ ಒಂದು ಚಮಚ ಕೋಕಮ್ ಜ್ಯೂಸ್, ಸ್ವಲ್ಪ ಸಕ್ಕರೆ ಹಾಗೂ ಉಪ್ಪನ್ನು ಹಾಕಿ ಬೆರೆಸಿಕೊಳ್ಳಿ. ಇದರಲ್ಲಿ ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣ ಹೊಂದಿರುವ ಗಾರ್ಸಿನೊಲ್ ಇರುವುದರಿಂದ ಹೊಟ್ಟೆ ಸರಿಯಿಲ್ಲದಾಗ ಇದನ್ನು ಕುಡಿಯಿರಿ.


 • ದಾಳಿಂಬೆ ಜ್ಯೂಸ್

  ದಾಳಿಂಬೆಯಲ್ಲಿ ವಿವಿಧ ಆಂಟಿ ಆಕ್ಸಿಡೆಂಟುಗಳು, ಪಾಲಿಫೆನಾಲ್ ಗಳು ಅತಿ ಹೆಚ್ಚಿನ ಪ್ರಮಾಣದಲ್ಲಿದ್ದು ವಿಶೇಷವಾಗಿ oxidative stress ಅಥವಾ ರಕ್ತದಲ್ಲಿ ಬರುವ ವಿಷಕಾರಿ ವಸ್ತುಗಳನ್ನು ಅಥವಾ ಕಣಗಳನ್ನು ನಿಷ್ಪಲಗೊಳಿಸುವ ಕ್ಷಮತೆ ಕುಂಠಿತವಾಗುವ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ದಾಳಿಂಬೆಯಲ್ಲಿ ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳು ಹೇರಳವಾಗಿದೆ, ಇದು ಕೆಟ್ಟ ಬ್ಯಾಕ್ಟೀರಿಯಾಗಳ ನಿವಾರಣೆ ಮಾಡುತ್ತದೆ. ಇದು ಭೇದಿಗೆ ಒಳ್ಳೆಯ ಮನೆಮದ್ದು. ಇದರ ಜ್ಯೂಸ್ ನ್ನು ಒಂದು ಲೋಟ ಕುಡಿಯಿರಿ.

  Most Read: ತನ್ನ ಮಗಳ ಮನಸ್ಸನ್ನು ಗೆಲ್ಲುವ ವ್ಯಕ್ತಿಗೆ ಮನೆ, ಹತ್ತು ಕಾರು, 1.28 ಮಿಲಿಯನ್ ಹಣ ನೀಡಲಿರುವ ಉದ್ಯಮಿ!!


 • ಶುಂಠಿ

  ಹಿಂದಿನಿಂದಲೂ ಆಯುರ್ವೇದವು ಹಲವಾರು ರೀತಿಯ ಗಿಡಮೂಲಿಕೆಗಳನ್ನು ಬಳಸಿಕೊಂಡು ಹಲವಾರು ರೋಗಗಳಿಗೆ ಚಿಕಿತ್ಸೆ ನೀಡುತ್ತಾ ಬಂದಿದೆ. ಆಯುರ್ವೇದದ ಹಲವಾರು ಔಷಧಿಗಳಿಗೆ ವಿಜ್ಞಾನವು ಬೆಂಬಲ ನೀಡಿದ್ದು, ಪರಿಣಾಮಕಾರಿ ಎಂದು ಹೇಳಿದೆ. ಹೆಚ್ಚಿನ ಖಾದ್ಯಗಳಿಗೆ ಬಳಸಲಾಗುವ ಶುಂಠಿಯು ಹಲವಾರು ರೀತಿಯ ಕಾಯಿಲೆಗಳ ನಿವಾರಣೆ ಮಾಡುವುದು. ಶುಂಠಿಯು ಖಾದ್ಯದ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ, ಜೀರ್ಣಕ್ರಿಯೆ ಸಮಸ್ಯೆ, ಮಲಬದ್ಧತೆ, ಹೊಟ್ಟೆನೋವು, ವಾಕರಿಕೆ ಇತ್ಯಾದಿಗಳನ್ನು ತಡೆಯುವುದು. ಇದು ಅಧಿಕ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು, ತೂಕ ಇಳಿಸಲು, ಕ್ಯಾನ್ಸರ್ ಬರದಂತೆ ತಡೆಯಲು ಇತ್ಯಾದಿಗಳಿಗೆ ಪರಿಣಾಮಕಾರಿ. ಅಂತೆಯೇ ಶುಂಠಿ ಭೇದಿ ಸಮಸ್ಯೆಗೂ ಪರ್ಫೆಕ್ಟ್ ಮನೆಮದ್ದು ಶುಂಠಿಯಲ್ಲಿ ಶಮನಕಾರಿ ಗುಣಗಳಿದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸುವುದು. ಒಂದು ತುಂಡು ಶುಂಠಿಯನ್ನು ನೀರಿನಲ್ಲಿ ಬಿಸಿ ಮಾಡಿ ಆ ನೀರನ್ನು ಕುಡಿಯಿರಿ. ಅಥವಾ ಒಂದು ಚಿಕ್ಕ ಪಾತ್ರೆಯಲ್ಲಿ ಈ ತುಂಡುಗಳನ್ನು (ಅಥವಾ ಜಜ್ಜಿಯೂ ಹಾಕಬಹುದು) ಹಾಕಿ ಕುದಿಸಿ. ಕುದಿಯಲು ಪ್ರಾರಂಭವಾದೊಡನೆ ಉರಿಯನ್ನು ತೀರಾ ಚಿಕ್ಕದಾಗಿಸಿ ಇಪ್ಪತ್ತು ನಿಮಿಷ ಕುದಿಸಿ. ಬಳಿಕ ಉರಿ ಆರಿಸಿ ಐದರಿಂದ ಹತ್ತು ನಿಮಿಷ ತಣಿಯಲು ಬಿಡಿ. ಬಳಿಕ ಈ ನೀರನ್ನು ಸೋಸಿ ಲೋಟದಲ್ಲಿ ಸಂಗ್ರಹಿಸಿ ಕುಡಿಯಿರಿ


 • ಮೊಸರು

  ನಮ್ಮ ದೇಹ ಅತಿ ಸುಲಭವಾಗಿ ಜೀರ್ಣಿಸಿಕೊಳ್ಳುವ ಆಹಾರವೆಂದರೆ ನೀರು. ಅದು ಬಿಟ್ಟರೆ ಮೊಸರು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಏಕೆಂದರೆ ಹಾಲನ್ನು ಮೊಸರನ್ನಾಗಿಸುವ ಕ್ರಿಯೆಯಲ್ಲಿ ನಮ್ಮ ಜೀರ್ಣಾಂಗಗಳು ಮಾಡುವ ಮುಕ್ಕಾಲುಪಾಲು ಕೆಲಸವನ್ನು ಮೊಸರಿನಲ್ಲಿರುವ ಬ್ಯಾಕ್ಟೀರಿಯಾಗಳೇ ಮುಗಿಸಿರುತ್ತವೆ. ಹಾಗಾಗಿ ಮೊಸರು ನಮಗೆ ಅತ್ಯುತ್ತಮವಾದ ಆಹಾರವಾಗಿದೆ. ವೈದ್ಯರೂ ಜೀರ್ಣ ಸಮಸ್ಯೆ ಇರುವ ರೋಗಿಗಳಿಗೆ ಮೊಸರನ್ನೇ ಆಹಾರವನ್ನಾಗಿ ಸ್ವೀಕರಿಸಲು ಸಲಹೆ ಮಾಡುತ್ತಾರೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಊಟದ ಕೊನೆಯಲ್ಲಿ ಮೊಸರು ಇಲ್ಲವಾದಲ್ಲಿ ಊಟ ಎಂಬುದು ಯಾವತ್ತಿಗೂ ಪರಿಪೂರ್ಣವಾಗುವುದಿಲ್ಲ. ಒಂದು ಒಳ್ಳೆಯ ಊಟಕ್ಕೆ ಉಪಸಂಹಾರ ಆಡುವುದೇ ಮೊಸರು. ಊಟದ ಕೊನೆಯಲ್ಲಿ ನೀವು ಸೇವಿಸುವ ಮೊಸರನ್ನವು ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ನಿತ್ಯವೂ ಮೊಸರನ್ನು ಆಹಾರದ ಒಂದು ಭಾಗವಾಗಿ ಸೇವಿಸುವ ವ್ಯಕ್ತಿಗಳಲ್ಲಿ ಕರುಳು ಹಾಗೂ ಜಠರದ ತೊಂದರೆಗಳು ಆವರಿಸುವ ಸಾಧ್ಯತೆ ಇತರ ವ್ಯಕ್ತಿಗಳಿಗಿಂತ ಕಡಿಮೆ ಇರುತ್ತದೆ. ಒಂದು ವೇಳೆ ಹೊಟ್ಟೆಯೊಳಗೆ ಬಿಸಿಯಾಗಿರುವಂತೆ ಅನ್ನಿಸಿದರೆ ಬಿಳಿ ಅನ್ನಕ್ಕೆ ಮೊಸರು ಕಲಸಿಕೊಂಡು ಸೇವಿಸಬೇಕು. ಇನ್ನು ಭೇದಿ ಸಮಸ್ಯೆ ಇದ್ದಾಗ ನೀವು ದಿನಕ್ಕೆ ಎರಡು ಸಲ ಮೊಸರು ತಿನ್ನಿ.

  Most Read: ಇದು ಕೆಮ್ಮಿನ ಔಷಧ- ಒಂದೇ ದಿನದಲ್ಲಿ ಕೆಮ್ಮು ಮಂಗಮಾಯ!


 • ಕೆಫಿನ್ ಮತ್ತು ಸೋಡಾದಿಂದ ದೂರವಿರಿ

  *ಭೇದಿಯಿಂದಾಗಿ ಜುಲಾಬು ಕಾಣಿಸಿಕೊಂಡಿದ್ದರೆ ಆಗ ನೀವು 5 ಗ್ರಾಂ ಹರಿತಕಿ ಮತ್ತು ಒಂದು ಗ್ರಾಂ ಸೋಂಪು ಹಾಕಿಕೊಂಡು 50 ಮಿ.ಲೀ. ಕಷಾಯ ಮಾಡಿ. ಬಾಯಾರಿಕೆ ಆದಾಗ ಇದನ್ನು ರೋಗಿಗೆ ನೀಡಿ. ತುಂಬಾ ಭೇದಿ ತೀವ್ರವಾಗಿದ್ದರೆ ಆಗ ಮೂರು ದಿನಗಳ ಕಾಲ ನೀವು ಇದನ್ನು ನೀಡಬೇಕು. 100 ಗ್ರಾಂ ರಾಸ್ನಾಟ್, 1 ಗ್ರಾಂ ಕುತಜ್, 5 ಗ್ರಾಂ ಬೇಲ್, 5 ಗ್ರಾಂ ಇಸಬುಗೋಲ್ ಮತ್ತು 1 ಗ್ರಾಂ ಗೊಂಡ ಕೇತಿ ಬಳಸಿಕೊಂಡು 200 ಮಿ.ಲೀ.ನಷ್ಟು ಕಷಾಯ ಮಾಡಿಕೊಳ್ಳಿ. ಇದನ್ನು ನೀವು ನೀರಿಗೆ ಹಾಕಿ ಕುಡಿಯಿರಿ.
  *ಭೇದಿಯಿಂದಾಗಿ ದೇಹವು ನಿರ್ಜಲೀಕರಣಕ್ಕೆ ಒಳಗಾಗುವುದು. ಮೇಲೆ ಹೇಳಿರುವಂತಹ ಎಲ್ಲಾ ರೀತಿಯ ಆಯುರ್ವೇದದ ಮನೆಮದ್ದುಗಳನ್ನು ಭೇದಿಗೆ ಬಳಸಿಕೊಳ್ಳಿ. ಭೇದಿ ಸಮಸ್ಯೆ ಇರುವ ವೇಳೆ ನೀವು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಿ ಮತ್ತು ಜ್ಯೂಸ್ ಸೇವನೆ ಮಾಡಿ. ಅದಾಗ್ಯೂ, ಕೆಫಿನ್ ಮತ್ತು ಸೋಡಾದಿಂದ ನೀವು ದೂರವಿರುವುದು ತುಂಬಾ ಮುಖ್ಯ.
ಭೇದಿ ಸಮಸ್ಯೆ ಕಾಡಿದರೆ ಅದರಿಂದ ಹೊರಬರುವುದು ಯಾವಾಗಪ್ಪ ಎಂದು ಮನದಲ್ಲೇ ಯೋಚಿಸುತ್ತಿರುತ್ತೇವೆ. ಪದೇ ಪದೇ ಶೌಚಾಲಯಕ್ಕೆ ಹೋಗುವುದು, ಹೋದರೂ ಮತ್ತೆ ಮತ್ತೆ ಬರುತ್ತಿದೆಯಾ ಎನ್ನುವಂತೆ ಆಗುವುದು ಭೇದಿ ಉಂಟು ಮಾಡುವ ಸಮಸ್ಯೆಗಳು. ಭೇದಿಗೆ ಮುಖ್ಯ ಕಾರಣ ಅತಿಸಾರ. ಭೇದಿ ಶುರವಾದರೆ ಆಗ ಶೌಚಾಲಯಕ್ಕೆ ಐದಾರು ಸಲವಾದರೂ ಹೋಗಬೇಕಾಗುತ್ತದೆ. ಮಲವು ತುಂಬಾ ನೀರಾಗಿ ಹೋಗುವುದು ಮಾತ್ರವಲ್ಲದೆ ಕೆಲವೊಂದು ಸಲ ಹೊಟ್ಟೆಯಲ್ಲಿ ನೋವು, ಉಬ್ಬರ, ಜ್ವರ ಮತ್ತು ನಿಶ್ಯಕ್ತಿ ಕಾಡಬಹುದು.

ಆಗಾಗ ಶೌಚಾಲಯಕ್ಕೆ ಹೋಗುವುದರಿಂದ ಬ್ಯಾಕ್ಟೀರಿಯಾ ಸೋಂಕಿನಿಂದಾಗಿ ಗುದದ್ವಾರ ಸುಟ್ಟಂತೆ ಆಗಬಹುದು ಮತ್ತು ಇದರಿಂದ ಕಿರಿಕಿರಿಯಾಗಬಹುದು. ಸೋಂಕಿನಿಂದಾಗಿ ಕರುಳಿನ ಕ್ರಿಯೆಗೆ ಸಮಸ್ಯೆಯಾಗಬಹುದು. ಪರಾವಲಂಬಿಗಳು, ಕಲುಷಿತ ಆಹಾರ, ಬ್ಯಾಕ್ಟೀರಿಯಾ ಮತ್ತು ವೈರಸ್ ಭೇದಿಗೆ ಪ್ರಮುಖ ಕಾರಣವಾಗಿದೆ. ಮೂರು ದಿನಕ್ಕಿಂತ ಹೆಚ್ಚು ಕಾಲ ಭೇದಿ ಕಾಡುತ್ತಿದ್ದರೆ ಆಗ ವೈದ್ಯರನ್ನು ಭೇಟಿಯಾಗುವುದು ಅನಿವಾರ್ಯ. ಇಲ್ಲಿ ಸೂಚಿಸಲಾಗಿರುವ ಕೆಲವೊಂದು ಮನೆಮದ್ದುಗಳನ್ನು ನೀವು ಪ್ರಯತ್ನಿಸಿ ನೋಡಬಹುದು. ಇನ್ನು ಭೇದಿ ಸಮಸ್ಯೆ ಇರುವಂತಹ ವ್ಯಕ್ತಿಗೆ ಚಿಕಿತ್ಸೆ ನೀಡುವ ವೇಳೆ ಕಾಡುವ ಚಿಂತೆ ಎಂದರೆ ಅದು ನಿರ್ಜಲೀಕರಣವಾಗುವುದು. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದೆ ಇದ್ದರೆ ಆಗ ಭೇದಿಯಿಂದಾಗಿ ದೇಹದಿಂದ ಹೊರಹೋದ ದ್ರವ ಮತ್ತು ಉಪ್ಪಿನಾಂಶವು ಗಂಭೀರವಾದ ಸಮಸ್ಯೆ ಉಂಟು ಮಾಡಬಹುದು. ತುಂಬಾ ಗಂಭೀರ ಪರಿಸ್ಥಿತಿಯಲ್ಲಿ ರೋಗಿಗೆ ಡ್ರಿಪ್ಸ್ ನಲ್ಲಿ ಇಡಬೇಕಾಗಬಹುದು. ಆಯುರ್ವೇದ ಚಿಕಿತ್ಸಾ ಕ್ರಮದ ಪ್ರಕಾರ ನೀರಿಗೆ ಉಪ್ಪು, ಒಂದು ಚಮಚ ಗ್ಲೂಕೋಸ್ ಮತ್ತು ಲಿಂಬೆ ಹಾಕಿರುವಂತಹ ಬಿಸಿ ನೀರನ್ನು ಕುಡಿಸಬೇಕು. ಆಹಾರ ಸೇವನೆ ಬಳಿಕ ವಾಂತಿ ಮಾಡುತ್ತಲಿದ್ದರೆ ಆಗ ಈ ಪಾನೀಯವು ತುಟಿಗಳಲ್ಲಿ ತೇವಾಂಶವನ್ನು ಕಾಪಾಡುವುದು. ನೀರಿನ ಬದಲು ಗಂಜಿ ನೀರನ್ನು ನೀಡಿ. ಆಯುರ್ವೇದ ಔಷಧಿಯಿಂದ ಭೇದಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

   
 
ಹೆಲ್ತ್