Back
Home » ಆರೋಗ್ಯ
ಹೃದಯ ವೈಫಲ್ಯದ ಸೂಚನೆ ಸಿಕ್ಕ ಕೂಡಲೇ ಏನು ಮಾಡಬೇಕು
Boldsky | 9th Mar, 2019 08:01 AM
 • ಹೃದಯ ವೈಫಲ್ಯದ ಲಕ್ಷಣಗಳು-ಇವುಗಳಲ್ಲಿ ಪ್ರಮುಖವಾದ ಲಕ್ಷಣಗಳೆಂದರೆ

  *ಉಸಿರು ಎಳೆದುಕೊಳ್ಳಲು ಕಷ್ಟವಾಗುವುದು
  *ಅಪಾರ ಸುಸ್ತು ಮತ್ತು ಅಶಕ್ತಿ
  *ಅನಿಯಮಿತವಾದ ಅಥವಾ ಅತಿ ತೀವ್ರವಾದ ಹೃದಯ ಬಡಿತ
  *ಥಟ್ಟನೇ ದೇಹದ ತೂಕ ಏರುವುದು
  *ಹಸಿವಿಲ್ಲದಿರುವುದು
  *ಹೊಟ್ಟೆಯ ಭಾಗ ಊದಿಕೊಳ್ಳುವುದು
  *ಯಾವುದೇ ವಿಷಯದಲ್ಲಿ ಏಕಾಗ್ರತೆ ಸಾಧಿಸಲಾಗದೇ ಹೋಗುವುದು
  *ಎದೆಯ ಭಾಗದಲ್ಲಿ (ಕೇವಲ ಎಡಭಾಗವಲ್ಲ) ನೋವು
  *ಮೊಣಕಾಲಿನ ಕೆಳಭಾಗ, ವಿಶೇಷವಾಗಿ ಮಣಿಗಂಟಿನ ಭಾಗದಲ್ಲಿ ಊತ ಕಾಣಿಸಿಕೊಳ್ಳುವುದು

  Most Read: ಹೃದಯಾಘಾತದ 7 ಲಕ್ಷಣಗಳು-ಯಾವುದಕ್ಕೂ ಎಚ್ಚರಿಕೆಯಿಂದಿರಿ!


 • ಹೃದಯ ವೈಫಲ್ಯವನ್ನು ತಡೆಗಟ್ಟುವುದು ಹೇಗೆ?

  ಹೃದಯ ವೈಫಲ್ಯಕ್ಕೆ ನಿಸರ್ಗ ನಿಯಮದಿಂದ ಹೊರಳಿರುವ ಜೀವನಕ್ರಮವೇ ಪ್ರಮುಖ ಕಾರಣ. ಚಟುವಟಿಕೆಯಿಲ್ಲದ ಹಾಗೂ ಜಡ ಶರೀರ ಈ ವೈಫಲ್ಯದ ಸಾಧ್ಯತೆಯನ್ನು ಖಂಡಿತವಾಗಿಯೂ ಹೆಚ್ಚಿಸುತ್ತದೆ. ನಮ್ಮ ಶರೀರ ನಿಸರ್ಗ ನಿಯಮದ ಪ್ರಕಾರ ಕೇವಲ ವಿಶ್ರಾಂತ ಸ್ಥಿತಿಯಲ್ಲಿಯೇ ಸದಾ ಇರಬಾರದು, ಬದಲಿಗೆ ನಡುನಡುವೆ ಹೃದಯದ ಬಡಿತವೂ ಹೆಚ್ಚಾಗುತ್ತಿರಬೇಕು. ಹೀಗೆ ಮಾಡದೇ ಇದ್ದಲ್ಲಿ ಹೃದಯಕ್ಕೆ ಅಗತ್ಯವಾದ ವ್ಯಾಯಾಮದ ಕೊರತೆಯುಂಟಾಗಿ ಸಾಕಷ್ಟು ಹುರಿಗಟ್ಟುವುದೇ ಇಲ್ಲ. ತಾರುಣ್ಯದಲ್ಲಿ ಈ ಹುರಿಗಟ್ಟದ ಹೃದಯದ ಸ್ನಾಯುಗಳಿಂದ ಹೆಚ್ಚಿನ ತೊಂದರೆಯಿಲ್ಲವಾದರೂ ನಡುವಯಸ್ಸು ದಾಟಿದ ಬಳಿಕ ಇನ್ನಷ್ಟು ಶಿಥಿಲವಾಗುತ್ತಾ ಹೋಗುವ ಮೂಲಕ ಹೃದಯದ ವೈಫಲ್ಯದ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ.ಆರೋಗ್ಯಕರ ಜೀವನಶೈಲಿಯಿಂದ ಮಾತ್ರವೇ ಆರೋಗ್ಯಕರ ಹೃದಯ ಇರುವುದು ಸಾಧ್ಯ. ನಿಮ್ಮ ಜೀವನಶೈಲಿ ಆರೋಗ್ಯಕರವಾಗಿಲು ಹಾಗೂ ಈ ಮೂಲಕ ಹೃದಯ ಸಂಬಂಧಿ ತೊಂದರೆಗಳ ಸಾಧ್ಯತೆಯನ್ನು ತಗ್ಗಿಸಲು ತಜ್ಞರು ನೀಡುವ ಕೆಲವು ಸಲಹೆಗಳು ಇಂತಿವೆ.


 • ಹೃದಯದ ವೈಫಲ್ಯದ ಲಕ್ಷಣಗಳನ್ನು ತಕ್ಷಣವೇ ವೈದ್ಯರಿಗೆ ತಿಳಿಸಿ ಚಿಕಿತ್ಸೆ ಪ್ರಾರಂಭಿಸಿ

  ಒಂದು ವೇಳೆ ನಿಮಗೆ ಈಗಾಗಲೇ ಈ ಲಕ್ಷಣಗಳು ಕಾಣಬರುತ್ತಿದ್ದರೆ ಆದಷ್ಟೂ ಬೇಗನೇ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯವಾಗಿದ್ದು ಇವು ದಿನಗಳೆದಂತೆ ಇನ್ನಷ್ಟು ಉಲ್ಬಣಗೊಂಡು ಪ್ರಾಣಾಪಾಯದ ಭೀತಿ ಎದುರಾಗಬಹುದು. ಈ ಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸದೇ ಇರಲು ರಕ್ತದ ಒತ್ತಡವನ್ನು ನಿಯಂತ್ರಿಸುವುದು ಹಾಗೂ ಕೊಲೆಸ್ಟಾಲ್ ಮಟ್ಟಗಳನ್ನು ಇಳಿಸಬೇಕಾಗುತ್ತದೆ. ಅಲ್ಲದೇ ಔಷಧಿಗಳ ಮೇಲಿನ ಅವಲಂಬನೆಯನ್ನೂ ಮೀರಬೇಕಾಗುತ್ತದೆ. ಒಂದು ವೇಳೆ ಹೃದಯಾಘಾತದ ಸೂಚನೆಗಳೇನಾದರೂ ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಬಳಿ ಸಲಹೆ ಪಡೆದುಕೊಳ್ಳಬೇಕು ಏಕೆಂದರೆ ಈ ಸೂಚನೆಯೂ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು.


 • ಕೇವಲ ನಿಮಗೆ ಸೂಕ್ತವಾದ ಆಹಾರವನ್ನು ಮಾತ್ರವೇ ಸೇವಿಸಿ

  ಹೃದಯ ವೈಫಲ್ಯದ ಸಾಧ್ಯತೆ ಹೆಚ್ಚುವುದನ್ನು ತಪ್ಪಿಸಿಕೊಳ್ಳಲು ನಿಮ್ಮ ಆರೋಗ್ಯ ಹೆಚ್ಚು ಹೃದಯಸ್ನೇಹಿಯಾಗಿರಬೇಕು. ಹಾಗಾಗಿ ಕೊಬ್ಬು, ಅಧಿಕಾಂಶ ಸಕ್ಕರೆ ಹಾಗೂ ಉಪ್ಪನ್ನು ಆದಷ್ಟೂ ಮಿತಗೊಳಿಸಬೇಕು. ಆರೊಗ್ಯಕರ ಕೊಬ್ಬು ಹೆಚ್ಚು ಇರುವ ಮತ್ತು ತಾಜಾ ಹಣ್ಣು ಮತ್ತು ತರಕಾರಿಗಳನ್ನೇ ಹೆಚ್ಚು ಹೆಚ್ಚಾಗಿ ಸೇವಿಸಬೇಕು. ಹೃದಯಸ್ನೇಹಿ ಆಹಾರಗಳಲ್ಲಿ ಹಸಿರು ಮತ್ತು ದಪ್ಪನೆಯ ಎಲೆಗಳು, ಸೊಪ್ಪುಗಳು,ಹಸಿಯಾಗಿ ತಿನ್ನಬಹುದಾದ ತರಕಾರಿಗಳು, ಇಡಿಯ ಧಾನ್ಯಗಳು, ಒಣಫಲಗಳು ಮತ್ತು ಬೀಜಗಳು ಹಾಗೂ ವಿಶೇಷವಾಗಿ ಅಲ್ಪ ಪ್ರಮಾಣದ ಕಪ್ಪು ಚಾಕಲೇಟು.

  Most Read: ಎಚ್ಚರ: ಎದೆ ನೋವು ಎನ್ನುವುದು ಸಾಮಾನ್ಯ ಕಾಯಿಲೆ ಅಲ್ಲ..!


 • ಧೂಮಪಾನ ನಿಲ್ಲಿಸಿ

  ಹೃದಯದ ಕಾಯಿಲೆಗಳಿಗೆ ಧೂಮಪಾನ ಒಂದು ಪ್ರಮುಖ ಕಾರಣ. ರಕ್ತದಲ್ಲಿ ನಿಕೋಟಿನ್ ಸೇರಿದಾಗ ಇದು ರಕ್ತನಾಳಗಳನ್ನು ಸಂಕುಚಿಸುತ್ತದೆ ಹಾಗೂ ಈ ಸಂಕುಚಿತ ನರಗಳ ಮೂಲಕ ರಕ್ತವನ್ನು ಹಾಯಿಸಲು ಹೃದಯಕ್ಕೆ ಹೆಚ್ಚಿನ ಒತ್ತಡ ಹೇರಬೇಕಾಗುತ್ತದೆ. ಸಿಗರೇಟಿನ ಹೊಗೆಯಲ್ಲಿರುವ ಕಾರ್ಬನ್ ಮಾನಾಕ್ಸೈಡ್ ಮಾರಕ ಅನಿಲವಾಗಿದ್ದು ಸೇದಿದ ಕೆಲವೇ ಕ್ಷಣಗಳಲ್ಲಿ ರಕ್ತಕ್ಕೆ ಸೇರಿಬಿಡುತ್ತದೆ. ಇದು ರಕ್ತನಾಳಗಳ ಒಳಪದರವನ್ನು ಕೊರೆಯುತ್ತಾ ರಕ್ತನಾಳಗಳನ್ನು ಶಿಥಿಲಗೊಳಿಸುತ್ತದೆ. ಹಾಗಾಗಿ ಧೂಮಪಾನದ ಚಟವಿರುವವರು ಈ ದುರಭ್ಯಾಸವನ್ನು ಬಿಡುವ ದೃಢನಿಶ್ಚಯ ಮತ್ತು ಇವುಗಳನ್ನು ಸಾಧಿಸುವ ಆರೋಗ್ಯಕರ ಕ್ರಮಗಳ ಬಗ್ಗೆ ವೈದ್ಯರಲ್ಲಿ ಸಲಹೆ ಪಡೆದೇ ಮುಂದುವರೆಯಬೇಕು. (ಏಕಾ ಏಕಿ ನಿಲ್ಲಿಸಿದರೆ ಇನ್ನಷ್ಟು ಅಪಾಯವಿದೆ)


 • ಹೆಚ್ಚು ಕಾಲ ಕುಳಿತೇ ಇರದಿರಿ

  ಕಾರ್ಯನಿಮಿತ್ತ ದಿನದ ಹೆಚ್ಚಿನ ಸಮಯ ಕುಳಿತೇ ಇರುವ ಅನಿವಾರ್ಯತೆಯೂ ಈ ತೊಂದರೆಗೆ ಇನ್ನೊಂದು ಕಾರಣವಾಗಿದೆ. ಅಲ್ಲದೇ ಇಂದಿನ ದಿನಚರಿಯಲ್ಲಿ ಹೆಚ್ಚಿನವರಿಗೆ ವ್ಯಾಯಾಮಕ್ಕೆ ಸಮಯ ಮೀಸಲಿಡಲೇ ಸಾಧ್ಯವಾಗುವುದಿಲ್ಲ. ಆದರೆ ಈ ಸ್ಥಿತಿಗಳು ಹೃದಯ ವೈಫಲ್ಯವನ್ನು ದೂರದಿಂದ ಆಹ್ವಾನಿಸುತ್ತವೆ. ಹಾಗಾಗಿ ಕುಳಿತೇ ಇರುವ ಕೆಲಸದ ಅನಿವಾರ್ಯತೆಯೇ ಇದ್ದರೂ ಯಾವುದಾದರೊಂದು ನೆಪ ಹುಡುಕಿ ಕನಿಷ್ಟ ಘಂಟೆಗೊಮ್ಮೆಯಾದರೂ ಎದ್ದು ಕೊಂಚ ನಡೆದಾಡುವುದು ಅಗತ್ಯ. ಅಲ್ಲದೇ ಊಟ ಮತ್ತು ಉಪಾಹಾರದ ಬಳಿಕವೂ ಕೊಂಚ ನಡೆದಾಡಬೇಕು. ಅಲ್ಲದೇ ಚಲಿಸದಷ್ಟು ವ್ಯಸ್ತರಿದ್ದು ಈ ಮೂಲಕ ಗಳಿಸುವ ಹಣ ನಿಮಗೆ ಆರೋಗ್ಯವೇ ಇಲ್ಲದಿದ್ದಾಗ ಲಭಿಸಿದರೆ ಏನು ಪ್ರಯೋಜನ? ಹಾಗಾಗಿ ದಿನದಲ್ಲಿ ಕೊಂಚ ಹೊತ್ತು ವ್ಯಾಯಾಮಕ್ಕಾಗಿ ಮೀಸಲಿಡಬೇಕು.

  Most Read: ಹೃದಯಘಾತ ಸೂಚನೆ- ಪುರುಷರಿಗೂ ಮಹಿಳೆಯರಿಗೂ ಬೇರೆ ಬೇರೆಯಾಗಿರುತ್ತದೆಯೇ?


 • ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ

  ಒಂದು ವೇಳೆ ನಿಮ್ಮ ತೂಕ ನಿಮ್ಮ ಎತ್ತರಕ್ಕೆ ತಕ್ಕಂತಿಲ್ಲದೇ ಹೆಚ್ಚಿದ್ದರೆ ಇಂದಿನಿಂದಲೇ ಇದನ್ನು ಆರೋಗ್ಯಕರ ಮಿತಿಗಳಿಗೆ ತರಲು ಪ್ರಾಮಾಣಿಕ ಯತ್ನ ನಡೆಸಬೇಕು. ಏಕೆಂದರೆ ಸ್ಥೂಲಕಾಯ ಅನಾರೋಗ್ಯವಲ್ಲದಿದ್ದರೂ ಹೃದಯ ವೈಫಲ್ಯಕ್ಕೆ ಮಾತ್ರ ನಿಜವಾದ ಕಾರಣವಾಗಿದೆ. ಅಲ್ಲದೇ ಸ್ಥೂಲದೇಹಿಗಳಲ್ಲಿ ರಕ್ತವನ್ನು ತುದಿಭಾಗಗಳಿಗೆ ತಲುಪಿಸಲು ಹೃದಯ ಸದಾ ಅತಿ ಒತ್ತಡದಲ್ಲಿಯೇ ಕಾರ್ಯನಿರ್ವಹಿಸಬೇಕಾಗುತ್ತದೆ ಹಾಗೂ ಇದು ಶಿಥಿಲವಾಗಿರುವ ಹೃದಯದ ಸ್ನಾಯುಗಳನ್ನು ಇನ್ನಷ್ಟು ಶಿಥಿಲವಾಗಿಸುತ್ತಾ ಹೃದಯದ ವೈಫಲ್ಯದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ತೂಕ ಇಳಿಸಲು ಅಗತ್ಯವಾದ ಆಹಾರಕ್ರಮ ಮತ್ತು ವ್ಯಾಯಾಮವನ್ನು ಅಳವಡಿಸಿಕೊಳ್ಳಲು ಮತ್ತು ನಿಮಗೆ ಇದುವರೆಗೆ ಇಷ್ಟವಾಗಿದ್ದ ಆಹಾರಗಳನ್ನು ಅನಿವಾರ್ಯವಾಗಿಯಾದರೂ ಸರಿ, ವರ್ಜಿಸಬೇಕು. ಹೃದಯ ಆರೋಗ್ಯವಾಗಿರಲು ಕೆಲವು ಸುಲಭ ವಿಧಾನಗಳೇ ಸಾಕಾಗುತ್ತದೆ. ಜೀವನಕ್ರಮವನ್ನು ಕೊಂಚ ಬದಲಿಸುವುದು, ಕೊಂಚ ವ್ಯಾಯಾಮವನ್ನು ಅಳವಡಿಸಿಕೊಳ್ಳುವುದು, ಆಹಾರಕ್ರಮ ಬದಲಿಸಿಕೊಳ್ಳುವುದು ಹಾಗೂ ಅತಿಯಾಗಿ ಔಷಧಿಗಳಿಗೆ ಅವಲಂಬಿತರಾಗದೇ ಇರುವುದು ಮೊದಲಾದ ಸುಲಭಕ್ರಮಗಳೇ ಸಾಕಾಗುತ್ತವೆ.
ಹೃದಯ ವೈಫಲ್ಯ ಎಂದರೆ ನಮ್ಮ ಶರೀರಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ರಕ್ತವನ್ನು ಪೂರೈಸಲು ಸಾಧ್ಯವಾಗದೇ ಇರುವ ಸ್ಥಿತಿಯಾಗಿದೆ. ಹೃದಯಾಘಾತಕ್ಕೂ ಹೃದಯವೈಫಲ್ಯಕ್ಕೂ ತುಂಬಾ ವ್ಯತ್ಯಾಸವಿದೆ. ಹೃದಯಾಘಾತದಲ್ಲಿ ಹೃದಯಕ್ಕೆ ಅಗತ್ಯವಿರುವ ರಕ್ತದ ಪೂರೈಕೆ ಸ್ಥಗಿತಗೊಂಡರೆ ಇದು ಕಾರ್ಯ ಎಸಗುವುದನ್ನೇ ನಿಲ್ಲಿಸಿ ಸಾವು ಸಂಭವಿಸುತ್ತದೆ.

ಆದರೆ ಹೃದಯ ವೈಫಲ್ಯದಲ್ಲಿ ಹೃದಯದ ಮಿಡಿತ ಇದ್ದರೂ ಇದು ಕ್ಷೀಣವಾಗಿರುತ್ತದೆ. ಹಾಗಾಗಿ ದೇಹದ ತುದಿಭಾಗಗಳಿಗೆ ರಕ್ತ ತಲುಪುವುದೇ ಇಲ್ಲ. ಈ ಸ್ಥಿತಿ ಹೃದಯದ ಸ್ನಾಯುಗಳು ಶಿಥಿಲವಾಗಿರುವುದನ್ನು ಪ್ರಮುಖವಾಗಿ ಸೂಚಿಸುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಆರೋಗ್ಯಸ್ಥಿತಿ ಉಲ್ಬಣಗೊಳ್ಳುವ ಸ್ಪಷ್ಟ ಸೂಚನೆಯೂ ಆಗಿದೆ.

   
 
ಹೆಲ್ತ್