Back
Home » ಆರೋಗ್ಯ
ಏಳು ದಿನಗಳ ಕಾಲ ಬ್ರೇಕ್‌ಫಾಸ್ಟ್‌ಗೆ ಕೇವಲ ಮೊಟ್ಟೆಗಳನ್ನು ಮಾತ್ರ ತಿಂದ ಮಹಿಳೆಗೆ ಏನಾಯಿತು ಗೊತ್ತೇ?
Boldsky | 11th Mar, 2019 03:26 PM
 • ಮೊಟ್ಟೆಯನ್ನು ದ್ವೇಷಿಸುತ್ತಿದ್ದೆ

  ನಾನು ಒಂದು ಪಾರ್ಸಿ ಕುಟುಂಬದಿಂದ ಬಂದವಳಾಗಿರುವ ಕಾರಣದಿಂದಾಗಿ ಮೊಟ್ಟೆಯು ನಮ್ಮ ಆಹಾರದ ಅವಿಭಾಜ್ಯ ಅಂಗವಾಗಿರುತ್ತಿತ್ತು. ಆದರೆ ನಾನು ಜೀವಮಾನವಿಡಿ ಮೊಟ್ಟೆಯನ್ನು ದ್ವೇಷಿಸುತ್ತಿದ್ದೆ. ನಮ್ಮ ಪುಲಾವ್ ನಿಂದ ಹಿಡಿದು ಮಾಂಸದ ಖಾದ್ಯದ ತನಕ ಪ್ರತಿಯೊಂದಕ್ಕೂ ಮೊಟ್ಟೆ ಹಾಕಲಾಗುತ್ತದೆ. ಹಾಗಾದರೆ ನೀವು ಈಗ ಒಂದು ಮಾತನ್ನು ಅರ್ಥ ಮಾಡಿಕೊಂಡಿರಬಹುದು. ಅದೇನೇಂದರೆ ಭೂಮಿ ಮೇಲೆ ಎರಡು ರೀತಿಯ ಪಾರ್ಸಿಗಳು ಇದ್ದಾರೆ ಎಂದು. ಒಂದು ಪಂಗಡವು ಮೊಟ್ಟೆಯನ್ನು ಪ್ರೀತಿಸುತ್ತದೆ. ಅದು ಎಷ್ಟೆಂದರೆ ಪಂಜಾಬಿಗಳು ಮಸಾಲೆ ಇಷ್ಟಪಡುವಂತೆ. ಎರಡನೇ ಪಂಗಡವು ನನ್ನ ರೀತಿಯದ್ದಾಗಿದೆ. ಅವರು ಯಾವತ್ತೂ ಮೊಟ್ಟೆಯನ್ನು ಇಷ್ಟಪಡಲ್ಲ.


 • ಒಂದು ಪ್ರಯೋಗ

  ನಾನೊಂದು ಬಯಸಿದರೆ ವಿಧಿ ಮಾತ್ರ ಅದಕ್ಕೆ ವ್ಯತಿರಿಕ್ತವಾಗಿದನ್ನು ಬಯಸುತ್ತಿತ್ತು. ಅದೇನೇಂದರೆ ನಾನು ಕುಟುಂಬದಿಂದ ದೂರವಾಗಿ ಉಳಿದು ನನ್ನ ದೀರ್ಘಕಾಲದ ಶತ್ರು ಮೊಟ್ಟೆಯ ನೆನಪಿನಲ್ಲಿ ಬದುಕಲು ಆರಂಭಿಸಿದೆ. ನಾನು ದೆಹಲಿಯಲ್ಲಿ ವಾಸಿಸಲು ಆರಂಭಿಸಿದೆ ಮತ್ತು ಈ ವೇಳೆ ನನ್ನ ತೂಕದಲ್ಲಿ ವಿಪರೀತ ಏರಿಕೆಯಾಯಿತು ಮತ್ತು 25ರ ಹರೆಯದಲ್ಲಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ನನಗೆ ಕಾಣಿಸಿಕೊಂಡವು. ನನ್ನ ದೇಹವು ಹೊಂದಿಕೊಂಡಿದ್ದ ಆಹಾರವನ್ನು ತ್ಯಜಿಸಿರುವುದು ನನಗೆ ನೆರವಾಗಿಲ್ಲ ಎಂದು ನನಗೆ ಆಗ ತಿಳಿದುಬಂತು. ಇದರಿಂದಾಗಿ ನಾನು ನನ್ನ ಪಾರ್ಸಿ ಆಹಾರ ಕ್ರಮಕ್ಕೆ ಮರಳಬೇಕಾಯಿತು ಮತ್ತು ಬೆಳಗ್ಗೆ ಉಪಾಹಾರಕ್ಕೆ ಆದರೂ ನಾನು ಮೊಟ್ಟೆ ಸೇವನೆ ಮಾಡಬೇಕು ಎಂದು ಬಯಸಿದೆ. ಬೇರೆ ಊಟದ ಸಮಯದಲ್ಲಿ ಇದು ಬೇಡವೆಂದು ನಿರ್ಧಾರ ಮಾಡಿದೆ. ಈ ಪ್ರಯೋಗ ಮಾಡುವ ಮೊದಲು ನಿಮಗೆ ಒಂದು ಎಚ್ಚರಿಕೆ ಕೊಡುತ್ತಿದ್ದೇನೆ. ಅದು ಏನೆಂದರೆ ನಾನು ಇದನ್ನು ಪ್ರಯೋಗ ಮಾಡುವ ವೇಳೆ ದಿನನಿತ್ಯವು ಸರಿಯಾಗಿ ವ್ಯಾಯಾಮ ಮಾಡುತ್ತಲಿದ್ದೆ.

  Most Read: ದಿನಕ್ಕೊಂದು ಬೇಯಿಸಿದ ಮೊಟ್ಟೆ ತಿಂದ್ರೆ ಸಾಕು, ಆರೋಗ್ಯವಾಗಿರುವಿರಿ


 • ಪ್ರತಿನಿತ್ಯ ಎರಡು ಬೇಯಿಸಿದ ಮೊಟ್ಟೆ

  ಒಂದು ವಾರ ತನಕ ಪ್ರತಿನಿತ್ಯ ಬೆಳಗ್ಗೆ ಉಪಾಹಾರಕ್ಕೆ ಎರಡು ಮೊಟ್ಟೆಗಳನ್ನು ಸೇವನೆ ಮಾಡುವುದು ನನಗೆ ದೊಡ್ಡ ವಿಚಾರವಾಗಿರಲಿಲ್ಲ ಮತ್ತು ಇದು ತುಂಬಾ ವಾಸ್ತವಿಕ ಗುರಿಯಾಗಿದ್ದು, ನಾನು ಇದನ್ನು ಸಾಧಿಸಬಲ್ಲೆ ಎಂದು ತಿಳಿದಿತ್ತು. ಏಳು ದಿನಗಳಲ್ಲಿ ನಾನು ಕಂಡುಕೊಂಡಿರುವಂತಹ ಬದಲಾವಣೆಯು ತುಂಬಾ ಅದ್ಭುತವಗಿತ್ತು ಮತ್ತು ಇದರಿಂದಾಗಿ ನಾನು ಇದನ್ನು ಜೀವನಶೈಲಿ ಬದಲಾವಣೆ ಮಾಡಿಕೊಂಡು ಶಾಶ್ವತವಾಗಿ ಅಳವಡಿಸಿಕೊಳ್ಳಲು ಬಯಸಲು ನಿರ್ಧಾರ ಮಾಡಿಕೊಂಡೆ. ಒಂದು ವಾರ ಕಾಲ ಪ್ರತಿನಿತ್ಯ ಉಪಾಹಾರಕ್ಕೆ ಎರಡು ಮೊಟ್ಟೆ ಸೇವನೆ ಮಾಡಿದಾಗ ಕಂಡು ಬಂದ ಐದು ಪರಿಣಾಮಗಳು.


 • ಸಂತೃಪ್ತಿ ಮಟ್ಟ

  ಮನೆಯಿಂದ ಹೊರಗೆ ಅಂದರೆ ಕುಟುಂಬದಿಂದ ದೂರವಾಗಿ ಒತ್ತಡ ಜೀವನ ನಡೆಸುತ್ತಾ, ಜಂಕ್ ಫುಡ್ ಸೇವನೆ ಮಾಡುವುದು ಇವರಿಗೆ ಒಂದು ರೀತಿಯಲ್ಲಿ ಅಭ್ಯಾಸವಾಗಿ ಹೋಗಿರುವುದು. ಬೆಳಗ್ಗೆ ಉಪಾಹಾರಕ್ಕೆ ಎರಡು ಮೊಟ್ಟೆ ಸೇವನೆಯನ್ನು ಒಂದು ವಾರ ಕಾಲ ಮಾಡಿದರೆ, ನಾನು ಕಂಡುಕೊಂಡಿರುವ ವಿಚಾರವೆಂದರೆ ಆಗ ನನಗೆ ಸಂತೃಪ್ತಿ ಮಟ್ಟವು ತುಂಬಾ ಹೆಚ್ಚಾಗಿದೆ. ಯಾಕೆಂದರೆ ಪ್ರತೀ ದಿನ ಬೆಳಗ್ಗೆ ನಾನು ಎರಡು ಮೊಟ್ಟೆ ಸೇವಿಸುತ್ತಿದೆ. ಮೂರನೇ ದಿನ ಕರಿದ ತಿಂಡಿಗಳಿಂದ ನನ್ನ ಕೈಗಳು ತುಂಬಾ ದೂರವಾಗಿ ಹೋದವು. ಸಂಜೆ 4 ಗಂಟೆ ವೇಳೆ ನನಗೆ ಹಸಿವು ಆಗುವುದು ಕಡಿಮೆ ಆಯಿತು. ಈ ವೇಳೆ ನಾನು ಯಾವಾಗಲೂ ಹಸಿವಾಗಿ ಸ್ಯಾಂಡ್ ವಿಚ್ ತಿನ್ನುತ್ತಿದ್ದೆ.


 • ಶಕ್ತಿಯ ಮಟ್ಟ ಹೆಚ್ಚಾಯಿತು

  ದಿನಕ್ಕೆ ಎರಡು ಮೊಟ್ಟೆ ತಿನ್ನಲು ಆರಂಭಿಸಿದ ಐದನೇ ದಿನಕ್ಕೆ ನಾನು ಬೆಳಗ್ಗೆ ತುಂಬಾ ತಾಜಾವಾಗಿ ಏಳಲು ಆರಂಭಿಸಿದೆ. ಮೊಟ್ಟೆಯ ಆಹಾರ ಕ್ರಮ ಪಾಲಿಸುವ ಮೊದಲು ನಾನು ತುಂಬಾ ಉದಾಸೀನ ಮತ್ತು ಅಸಂತೋಷದಿಂದ ಏಳುತ್ತಿದ್ದೆ. ಏಳು ದಿನಗಳ ಬಳಿಕ ಇದು ನನಗೆ ಸಂಪೂರ್ಣವಾಗಿ ಮನವರಿಕೆ ಆಯಿತು.

  Most Read: ಪ್ರತಿ ದಿನ ಬೆಳಿಗ್ಗೆ ಎರಡು ಬೇಯಿಸಿದ ಮೊಟ್ಟೆ ತಿಂದರೆ ತೂಕ ಇಳಿಸಬಹುದಂತೆ !


 • ಇಂಚು ಕಳಕೊಂಡೆ

  ನಾನು ಪ್ರತಿನಿತ್ಯ ಉಪಾಹಾರಕ್ಕೆ ಮೊಟ್ಟೆ ಸೇವನೆ ಮಾಡಲು ಆರಂಭಿಸಿದ ಬಳಿಕ ಸೊಂಟದ ಸುತ್ತಳತೆಯಲ್ಲಿ ಒಂದು ಇಂಚು ಕಳಕೊಂಡೆ. ಯಾಕೆಂದರೆ ಮೊಟ್ಟೆಯಲ್ಲಿ ಪ್ರೋಟೀನ್ ಅಂಶವು ಅಧಿಕವಾಗಿದೆ ಮತ್ತು ಇದು ತೂಕ ಇಳಿಸಿಕೊಳ್ಳಲು ನೆರವಾಗುವುದು. ಇದನ್ನು ನೀವು ನಿಯಮಿತವಾಗಿ ಪಾಲಿಸಿಕೊಂಡು ಹೋಗಬೇಕು.


 • ಮೊಡವೆಗಳು ಕಡಿಮೆಯಾದವು

  ಇದಕ್ಕೆ ಮೊದಲು ನಾನು ಹಲವಾರು ಲೇಖನಗಳನ್ನು ಓದುತ್ತಿರುವ ವೇಳೆ ಮೊಟ್ಟೆಯು ಚರ್ಮಕ್ಕೆ ತುಂಬಾ ಒಳ್ಳೆಯದು ಎಂದು ತಿಳಿದುಕೊಂಡಿದ್ದೆ. ಆದರೆ ಇದನ್ನು ನಾನು ನಂಬುತ್ತಿರಲಿಲ್ಲ. ನನ್ನ ಜೀವನಶೈಲಿಯಿಂದಾಗಿ ಮುಖದ ಮೇಲೆ ತುಂಬಾ ಬೊಕ್ಕೆಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಈಗ ಅದು ಎಲ್ಲವೂ ಮಾಯವಾಗಿದೆ. ಆದರೆ ಹಿಂದೆ ಇದನ್ನು ಮೇಕಪ್ ಬಳಸಿಕೊಂಡು ಅಡಗಿಸುತ್ತಿದ್ದೆ. ಅದಾಗ್ಯೂ, ಏಳು ದಿನ ಬಳಿಕ ನಾನು ಎದ್ದಾಗ ಮುಖದ ಮೇಲೆ ಇದ್ದ ಮೊಡವೆಗಳ ಸಂಖ್ಯೆಯು ಗಣನೀಯವಾಗಿ ತಗ್ಗಿತ್ತು. ಪ್ರತಿನಿತ್ಯ ಎರಡು ಬೇಯಿಸಿದ ಮೊಟ್ಟೆ ಸೇವನೆ ಮಾಡಿದರೆ ಚರ್ಮದ ಸಮಸ್ಯೆಯನ್ನು ದೂರ ಮಾಡಬಹುದು ಎಂದು ನಾನು ಇದರಿಂದಾಗಿ ಕಂಡುಕೊಂಡೆ.

  Most Read: ದೇಹದ ತೂಕ ಇಳಿಸಬೇಕೇ? ಬೇಯಿಸಿದ ಮೊಟ್ಟೆಯ ಟ್ರಿಕ್ಸ್ ಅನುಸರಿಸಿ!


 • ಹೊಟ್ಟೆ ಉಬ್ಬರ ಈಗ ಇಲ್ಲ

  ನಗರದಲ್ಲಿ ನಾನು ಏಕಾಂಗಿಯಾಗಿ ವಾಸಿಸುತ್ತಿದ್ದ ಹುಡುಗಿಯಾಗಿದ್ದ ಕಾರಣದಿಂದಾಗಿ ಹೊರಗಡೆ ಸುತ್ತಾಡಲು ಹೋಗುವುದು ಸಾಮಾನ್ಯ ವಿಚಾರವಾಗಿತ್ತು. ಹೊರಗಡೆ ಸುತ್ತಾಡಲು ಹೋಗುವುದು ಎಂದರೆ ಆಗ ಹೊರಗಡೆ ಆಹಾರ ಸೇವನೆ ಮಾಡುವುದು. ಇದರಿಂದ ಕೆಲವೊಂದು ಹೊಟ್ಟೆಯ ಸಮಸ್ಯೆಯಾಗಿರುವಂತಹ ಅಜೀರ್ಣ ಮತ್ತು ಹೊಟ್ಟೆ ಉಬ್ಬರವು ಕಾಣಿಸಿಕೊಳ್ಳುತ್ತಾ ಇತ್ತು. ಹೊರಗಡೆ ಊಟ ಮಾಡದೆ ಇದ್ದರೂ ಆಗ ಹೊಟ್ಟೆ ಉಬ್ಬರ ಮಾತ್ರ ಕಾಣಿಸಿಕೊಳ್ಳುತ್ತಾ ಇತ್ತು. ಏಳು ದಿನಗಳ ಕಾಲ ಬೇಯಿಸಿದ ಮೊಟ್ಟೆ ಸೇವಿಸಿದ ಬಳಿಕ ನಾನು ಜಂಕ್ ಫುಡ್ ನಿಂದ ದೂರ ಉಳಿದೆ. ಈಗ ಹೊಟ್ಟೆ ಉಬ್ಬರದ ಸಮಸ್ಯೆಯು ಕಡಿಮೆ ಆಗಿದೆ. ಈಗ ನನ್ನ ತೂಕ ಕೂಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ನಾನು ತುಂಬಾ ಹಗುರ ಹಾಗೂ ಆರೋಗ್ಯಕರ ಭಾವನೆ ಹೊಂದಿರುವೆನು.
ಆರೋಗ್ಯವಿದ್ದರೆ ಆಗ ಎಲ್ಲಾ ಸಂಪತ್ತು ಇದ್ದ ಹಾಗೆ ಎನ್ನುವ ಮಾತಿದೆ. ಇದು ನಿಜ ಕೂಡ. ನಮ್ಮ ಆರೋಗ್ಯವು ಸರಿಯಾಗಿ ಇರದೆ ಇದ್ದರೆ ಆಗ ಸಂಪಾದಿಸಿದ ಹಣವನ್ನೆಲ್ಲಾ ಆಸ್ಪತ್ರೆಗೆ, ಔಷಧಿಗೆ ಹಾಕಬೇಕಾಗುತ್ತದೆ. ಇಂತಹ ಸಮಯದಲ್ಲಿ ಮುಖ್ಯವಾಗಿ ಆರೋಗ್ಯ ಇದ್ದರೆ ಆಗ ಸಂಪಾದನೆ ಕೂಡ ಎರಡು ಪಟ್ಟು ಹೆಚ್ಚು ಮಾಡಬಹುದು. ಆದರೆ ನಾವು ಕೆಲವೊಂದು ಸಲಹೆಗಳನ್ನು ವೈದ್ಯರಿಂದ ಪಡೆಯುವ ಬದಲು ನಮ್ಮ ನೆರೆಮನೆಯವರು ಅಥವಾ ಸ್ನೇಹಿತರು ಹೇಳಿರುವುದನ್ನು ಕೇಳಿ ಪಾಲಿಸಿಕೊಂಡು ಹೋಗುತ್ತೇವೆ.

ಭೂಮಿ ಮೇಲಿರುವ ಪ್ರತಿಯೊಬ್ಬರ ದೇಹ ಪ್ರಕೃತಿಯು ಭಿನ್ನವಾಗಿರುವ ಕಾರಣದಿಂದ ಒಬ್ಬರಿಗೆ ಅನುಸರಿಸಿದ ವೈದ್ಯಕೀಯ ವಿಧಾನವು ಮತ್ತೊಬ್ಬರಿಗೂ ಅನ್ವಯ ಆಗುವುದು ಎಂದು ಹೇಳಲು ಆಗದು. ಅವರು ಆರೋಗ್ಯವಾಗಿರಲು ಪಾಲಿಸುತ್ತಿರುವಂತಹ ಕೆಲವೊಂದು ವಿಧಾನಗಳು ನಿಮ್ಮ ಮೇಲೂ ಪರಿಣಾಮ ಬೀರಬೇಕು ಎಂದೇನಿಲ್ಲ. ಸ್ನೇಹಿತರು ಅಥವಾ ನಿಮ್ಮ ಪರಿಚಯದವರು ಹೇಳಿರುವಂತಹ ಕೆಲವೊಂದು ಆರೋಗ್ಯ ವಿಧಾನಗಳು ನಿಮಗೂ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಬಹುದು. ಈ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಮಹಿಳೆಯೊಬ್ಬರು ಬೆಳಗ್ಗಿನ ಉಪಾಹಾರಕ್ಕೆ ಒಂದು ವಾರ ಕಾಲ ಬೇಯಿಸಿದ ಮೊಟ್ಟೆ ತಿನ್ನಲು ಆರಂಭಿಸಿದರು. ಮುಂದೆ ಏನಾಯಿತು ನೀವೇ ಓದಿ.....

   
 
ಹೆಲ್ತ್