Back
Home » ಇತ್ತೀಚಿನ
ಶಿಯೋಮಿ 'ಪೊಕೊ ಎಫ್ 1' ಬೆಲೆ ಇಳಿಕೆ!
Gizbot | 14th Mar, 2019 04:03 PM
 • ಪರ್ಫಾರ್ಮೆನ್ಸ್ ಸ್ಮಾರ್ಟ್‌ಫೋನ್

  ಪೊಕೊ FI ಸ್ಮಾರ್ಟ್‌ಫೋನ್ ಅನ್ನು ಮಲ್ಟಿಮೀಡಿಯಾ ಹಾಗೂ ಗೇಮರ್‌ಗಳಿಗೆ ವಿನ್ಯಾಸ ಮಾಡಲಾಗಿದ್ದು, ಇದಕ್ಕಾಗಿ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಅನ್ನು ನೀಡಲಾಗಿದೆ. ಮಾರುಕಟ್ಟೆಯಲ್ಲಿ ಕೆಲವೇ ಸ್ಮಾರ್ಟ್‌ಫೋನ್‌ಗಳು ಈ ಪ್ರೊಸೆಸರ್ ಹೊಂದಿರುವ 2.8GHz CPU ಮತ್ತು ಆಡ್ರಿನೋ 630 GPU ಬಳಕೆದಾರರಿಗೆ ವೇಗದ ಕಾರ್ಯಚರಣೆಯನ್ನು ನೀಡಲಿವೆ.


 • ಲಿಕ್ವಿಡ್ ಕೂಲಿಂಗ್ ಟೆಕ್ನಾಲಜಿ!

  ಹೆಚ್ಚಿನ ಗೇಮ್ ಆಡುವ ಸಂದರ್ಭದಲ್ಲಿ ಬಿಸಿಯಾಗಬಾರದು ಎನ್ನುವ ಕಾರಣಕ್ಕಾಗಿ ಲಿಕ್ವೀಡ್ ಕೂಲಿಂಗ್ ಟೆಕ್ನಾಲಜಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇದು ಸ್ಮಾರ್ಟ್‌ಫೋನ್ ಬಿಸಿಯನ್ನು ಕಡಿಮೆ ಮಾಡಲಿದೆ. ಈ ಹೊಸ ತಂತ್ರಜ್ಞಾನ 300% ವೇಗದಲ್ಲಿ ಬಿಸಿಯನ್ನು ತಡೆಯಲಿದೆ. ಈ ವಿಚಾರದಲ್ಲಿ ಒನ್‌ಪ್ಲಸ್ 6 ಗಿಂತಲೂ ಬೆಸ್ಟ್ .


 • ಇನ್‌ಫ್ರಾರೆಡ್ ಫೇಸ್‌ ಅನ್‌ಲಾಕ್

  ಸ್ಮಾರ್ಟ್‌ಪೋನಿನಲ್ಲಿ ಇನ್‌ಫಾರೆಡ್ ಫೇಸ್‌ ಆನ್‌ಲಾಕ್ ಅನ್ನು ಇದರಲ್ಲಿ ನೀಡಲಾಗಿದೆ. ಕತ್ತಲೆಯಲ್ಲಿಯೂ ನಿಮ್ಮ ಫೇಸ್‌ ಅನ್ನು ಗುರುತಿಸಿ ಫೇಸ್‌ಆನ್‌ಲಾಕ್ ಮಾಡಲು ಶಕ್ತವಾಗಿರುವ ಸ್ಮಾರ್ಟ್‌ಫೋನ್ ಇದಕ್ಕಾಗಿ ಕ್ಯಾಮೆರಾವನ್ನು ಬಳಕೆ ಮಾಡಿಕೊಂಡಿಲ್ಲ. ಇನ್ನು ನೋಚ್ ಬೇಡ ಎಂದರೆ ತೆಗೆದು ಬಿಡುವ ಆಯ್ಕೆಯನ್ನು ಸಹ ನೀಡಲಾಗಿದೆ.


 • ಸ್ಮಾರ್ಟ್‌ಫೋನ್ ಡಿಸೈನ್

  ಪೊಕೊ FI ಸ್ಮಾರ್ಟ್‌ಫೋನಿನಲ್ಲಿ ಹಾರ್ಡ್ ಕೋಟೆಡ್ ಪಾಲಿಕೋರ್ನೆಟ್ ಯೂನಿಬಾಡಿ ವಿನ್ಯಾಸವನ್ನು ಮಾಡಲಾಗಿದ್ದು, 6.18 ಇಂಚಿನ FHD+ ಗುಣಮಟ್ಟದ ಡಿಸ್‌ಪ್ಲೇಯನ್ನು ನೀಡಲಾಗಿದೆ. ಸ್ಮಾರ್ಟ್‌ಪೋನ್ ಡಿಸ್‌ಪ್ಲೇ ಬಹುಬೇಗ ಒಡೆಯದ ರಿತಿಯಲ್ಲಿ ಫೈಬರ್ ರಕ್ಷಣೆಯನ್ನು ಹೊಂದಿದೆ. 3.5mm ಹೆಡ್‌ಪೋನ್ ಜಾಕ್ ಅನ್ನು ಹೊಂದಿರುವುದನ್ನು ನೋಡಬಹುದು


 • 8GB RAM- 256GB ಮೆಮೊರಿ

  LPDDR4X 8GB RAM ಅನ್ನು ಪೊಕೊ FI ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದ್ದು, 256GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಇದರಿಂದಾಗಿ ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸುವುದಲ್ಲದೇ, ಹೆಚ್ಚು ಪ್ರಮಾಣದಲ್ಲಿ ಮೆಮೊರಿ ಸೇವ್ ಮಾಡಿಕೊಳ್ಳುವ ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ 256GB ವರೆಗೆ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.


 • ಬ್ಯಾಟರಿ ಶಕ್ತಿ

  ಪೊಕೊ FI ಸ್ಮಾರ್ಟ್‌ಫೋನ್ ಬ್ಯಾಟರಿ ಅತ್ಯುತ್ತಮವಾಗಿದೆ. ಇದಕ್ಕಾಗಿ ಇದರಲ್ಲಿ ಮಾರುಕಟ್ಟೆಯಲ್ಲಿ ಟಾಪ್‌ ಎಂಡ್‌ ಫೋನ್‌ಗಳಲ್ಲಿ ಇದರದಂತಹ 4000mAh ಬ್ಯಾಟರಿಯನ್ನು ನೀಡಿದ್ದು, ಇದು ಹೆಚ್ಚಿನ ಪ್ರಮಾಣದ ಬಾಳಿಕೆಯನ್ನು ನೀಡಲಿದೆ. ಫುಲ್ ಡೇ ಲೈಫ್ ನೀಡಲಿರುವ ಸ್ಮಾರ್ಟ್‌ಫೋನ್ ವೇಗವಾಗಿ ಚಾರ್ಜ್ ಆಗುವ ಸಲುವಾಗಿ ಕ್ವಿಕ್ ಚಾರ್ಜ್ 3.0ವನ್ನು ನೀಡಲಾಗಿದೆ.


 • 4G + ಸೇವೆ

  ಭಾರತೀಯ ಮಾರುಕಟ್ಟೆಯಲ್ಲಿ 4G ಸೇವೆಯನ್ನು ಕಾಣಬಹುದಾದ್ದು, ಪೊಕೊ FI ಸ್ಮಾರ್ಟ್‌ಫೋನಿನಲ್ಲಿ 4G + ಸೇವೆಯನ್ನು ಮೊದಲ ಬಾರಿಗೆ ನೀಡಲಾಗಿದೆ. ಇದರಿಂದಾಗಿ ಬಳಕೆದಾರರು ಅತೀ ಹೆಚ್ಚು ವೇಗದ ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಡ್ಯುಯಲ್ VoLTE ಸೇವೆಯನ್ನು ಇದರಲ್ಲಿ ನೀಡಲಾಗಿದೆ.
ಅಂಟಂಟು ಬೆಂಚ್ ಮಾರ್ಕ್‌ನಲ್ಲಿ 2,91,302 ಅಂಕವನ್ನು ಪಡೆದುಕೊಂಡಿದ್ದ, ಭಾರತದ ಬೆಸ್ಟ್ ಮಿಡ್‌ ರೇಂಜ್ ಸ್ಮಾರ್ಟ್‌ಫೋನ್ ಶಿಯೋಮಿ 'ಪೊಕೊ ಎಫ್ 1' ಬೆಲೆ ಭಾರೀ ಇಳಿಕೆಯಾಗಿದೆ. ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್‌ನಿಂದ ಚಾಲಿತವಾಗಲಿರುವ ವಿಶ್ವದಲ್ಲೇ ಅತ್ಯಂತ ಅಗ್ಗದ ಸ್ಮಾರ್ಟ್‌ಫೋನ್ ಬೆಲೆ ಈಗ ಕೇವಲ 16,499 ರೂಪಾಯಿಗಳಿಂದ ಶುರುವಾಗಿದ್ದು, ಒಟ್ಟು 5,500 ರೂ.ವರೆಗಿನ ಸೀಮಿತ ಸಮಯದ ಡಿಸ್ಕೌಂಟ್ ಪಡೆದುಕೊಂಡು ಗ್ರಾಹಕರನ್ನು ಆಕರ್ಷಿಸುತ್ತಿದೆ.

ಹೌದು, ಮಾರ್ಚ್ 16 ರ ವರೆಗೂನಡೆಯುವ ಫ್ಲಿಪ್ಕಾರ್ಟ್‌ನ ಪೊಕೊ ಡೇಸ್ ಮಾರಾಟದಲ್ಲಿ ಶಿಯೋಮಿ 'ಪೊಕೊ ಎಫ್ 1' ಸ್ಮಾರ್ಟ್‌ಪೋನನ್ನು ಕಡಿಮೆ ಬೆಲೆಗೆ ಖರಿದೀಸಬಹುದಾಗಿದ್ದು, 6GB RAM / 64GB ಸಂಗ್ರಹ ಮಾದರಿಯ ಶಿಯೋಮಿ 'ಪೊಕೊ ಎಫ್ 1' ಫೋನ್ 16,499 ರೂ.ಗಳಿಗೆ ಮಾರಾಟವಾಗುತ್ತಿದ್ದರೆ, 6 ಜಿಬಿ RAM / 128 ಜಿಬಿ ಮಾದರಿ ಫೋನ್ ಬೆಲೆ ಕೇವಲ 19,499 ರೂ. ಮತ್ತು 8 ಜಿಬಿ RAM / 256 ಜಿಬಿ ಮಾದರಿ ಫೋನ್ ಬೆಲೆ 23,499 ರೂ.ಗಳಿಗೆ ಲಭ್ಯವಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿಯೇ ಅತೀ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವ ಮಿಡ್‌ರೇಂಜ್ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಇದಾಗಿದ್ದು, ಇದೇ ಮೊದಲ ಬಾರಿಗೆ 8 ಜಿಬಿ RAM / 256 ಜಿಬಿ ಮಾದರಿ ಸ್ಮಾರ್ಟ್‌ಪೋನ್ ಒಂದು 25 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ಸಿಗುತ್ತಿದೆ. ಹಾಗಾದರೆ, ಪ್ರೀಮಿಯಮ್ 'ಪೊಕೊ ಎಫ್ 1' ಸ್ಮಾರ್ಟ್‌ಫೋನ್ ಹೇಗಿದೆ? 'ಪೊಕೊ ಎಫ್ 1' ಸ್ಮಾರ್ಟ್‌ಫೋನಿನ ಬೆಸ್ಟ್ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನ್ ಬೆಲೆಗಳು ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

   
 
ಹೆಲ್ತ್