Back
Home » ಇತ್ತೀಚಿನ
ನೀವು ಬಳಸುತ್ತಿರುವ ಈ ಚೀನಾ ಆಪ್‌ಗಳ ಅಸಲಿ ಕಥೆ ಗೊತ್ತಾದ್ರೆ ಬೆಚ್ಚಿಬೀಳ್ತೀರಾ!!
Gizbot | 16th Mar, 2019 04:01 PM
 • ದೇಶದಲ್ಲಿ ಜನಪ್ರಿಯ ಚೀನಾ ಆಪ್‌ಗಳಿವು!

  2012ರಲ್ಲಿ ವಿಚ್ಯಾಟ್ ಎಂಬ ಆಪ್ ದೇಶದಲ್ಲಿ ಸದ್ದು ಮಾಡಿದರೂ ನಂತರ ಅದಕ್ಕೆ ಯಶಸ್ಸು ದೊರೆಯಲಿಲ್ಲ. ಆದರೆ, ಅದಾದ ನಂತರ ದೇಶದಲ್ಲಿ ಶೇರ್‌ಇಟ್, ನ್ಯೂಸ್‌ಡಾಗ್, ಬೈಟ್‌ಡಾನ್ಸ್, ಲೈವ್‌ಮಿ ಹೆಲೋ, ಟಿಕ್‌ಟಾಕ್‌ನಂತಹ ಆಪ್‌ಗಳು ಕಾಲಿಟ್ಟು ಯಶಸ್ಸನ್ನು ಗಳಿಸಿಕೊಂಡಿವೆ. ಜಾಹಿರಾತು ಮತ್ತು ವಿಶೇಷತೆಗಳ ಮೂಲಕ ದೇಶದ ಜನರನ್ನು ತಲುಪಲು ಯಶಸ್ವಿಯಾಗಿವೆ.


 • ಹೆಚ್ಚೆಚ್ಚು ಆಕರ್ಷಿಸುತ್ತಿವೆ ಚೀನಾ ಆಪ್‌ಗಳು!

  ಭಾರತೀಯರಿಗೆ ವಾಟ್ಸ್‌ಆಪ್‌, ಗೂಗಲ್ ಹಾಗೂ ಯೂಟ್ಯೂಬ್ ಎಂದರೆ ಶ್ರೇಷ್ಠ. ಆದರೆ ಆಗಷ್ಟೇ ಕೈಗೆ ಸ್ಮಾರ್ಟ್‌ಫೋನ್‌ ಸಿಕ್ಕಿರುವ ಜನರಿಗೆ ಹೊಸದರ ಬಗ್ಗೆ ಕುತೂಹಲವಿರುತ್ತದೆ. ಹೀಗಾಗಿ ಇವರನ್ನೇ ಇಂತಹ ಆಪ್‌ಗಳು ಗುರಿಯಾಗಿಸಿಕೊಂಡಿವೆ. ಅದರಲ್ಲೂ ಹಲೋ, ಲೈವ್‌ಮಿ, ಟಿಕ್‌ಟಾಕ್‌ನಂತಹ ಅಪ್ಲಿಕೇಶನ್‌ಗಳು ಇವರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿವೆ ಎನ್ನುತ್ತವೆ ವರದಿಗಳು.


 • ಅಶ್ಲೀಲತೆಯ ಪ್ರಚೋದನೆ ಹೆಚ್ಚಾಗಿದೆ!

  ಚೀನಾದ ಬಹುತೇಕ ಅಪ್ಲಿಕೇಶನ್‌ಗಳು ತಮ್ಮಲ್ಲಿ ಪ್ರಕಟವಾಗುವ ಕಂಟೆಂಟ್ ಮೇಲೆ ಸರಿಯಾದ ನಿಯಂತ್ರಣ ಹೊಂದಿಲ್ಲ. ಅದರಲ್ಲೂ ಕೆಲವು ವೀಡಿಯೋ ಕಂಟೆಂಟ್ ಅಪ್ಲಿಕೇಶನ್‌ಗಳಂತೂ ಡೇಟಿಂಗ್ ಹೆಸರಿನಲ್ಲಿ ಅಶ್ಲೀಲ ವೀಡಿಯೋ ಅಥವಾ ಚಾಟ್‌ ಮಾಡುವುದನ್ನೇ ಪ್ರಚೋದಿಸುತ್ತಿವೆ ಎಂಬ ದೂರಿದೆ. ಇದು ಕಾಲೇಜುಯುವಕ ಯುವತಿ ಯುವಕರನ್ನು ದಾರಿ ತಪ್ಪಿಸುತ್ತಿವೆ.


 • ತುಂಬಾ ಅಡಿಕ್ಟಿವ್ ಆಗಿವೆ!

  ಇತ್ತೀಚಿಗೆ ತಂತ್ರಜ್ಞಾನ ಪರಿಣಿತರೆಲ್ಲರಿಗೂ ಚೀನಾ ಅಪ್ಲಿಕೇಶನ್‌ ದಂಧೆ ಬೆಳೆಯುತ್ತಿರುವ ಬಗ್ಗೆ ಆತಂಕವಿದೆ. ಆದರೆ, ಅವುಗಳ ಟೆಕ್ನಾಲಜಿಯ ಬಗ್ಗೆ ಮೆಚ್ಚುಗೆಯೂ ಇದೆ. ಸದ್ಯ ನಮ್ಮಲ್ಲಿರುವ ಬಹುತೇಕ ಅಪ್ಲಿಕೇಶನ್‌ಗಳಲ್ಲಿ ಇಲ್ಲದ ಟೆಕ್ನಾಲಜಿ ಈ ಅಪ್ಲಿಕೇಶನ್‌ಗಳಲ್ಲಿದೆ. ಅವುಗಳ ಜಾಹೀರಾತು ಕ್ಯಾಂಪೇನ್ ತುಂಬಾ ಅಡಿಕ್ಟಿವ್ ಆಗಿರುವುದು ಹೆಚ್ಚು ಭಾರತೀಯರನ್ನು ಸೆಳೆಯುತ್ತಿದೆ.


 • ಡೇಟಾ ಮನೆ ಹಾಳಾಯ್ತು!

  ಚೀನಾದ ಯಾವ ಅಪ್ಲಿಕೇಶನ್‌ಗಳೂ ಸಹ ಡೇಟಾ ಸೆಕ್ಯುರಿಟಿಯ ಚಿಂತೆಯಿಲ್ಲ. ಇದನ್ನು ಬಳಸುವವರಿಗಂತೂ ಮೊದಲೇ ಇಲ್ಲ. ಇವುಗಳ ಡೇಟಾ ನೇರವಾಗಿ ಚೀನಾದಲ್ಲಿರುವ ಸರ್ವರ್‌ಗಳಲ್ಲಿ ಉಳಿಯುತ್ತವೆ. ಹೀಗಾಗಿ ಇವುಗಳ ದುರ್ಬಳಕೆಯಂತೂ ಯಾವುದೇ ಸಮಯದಲ್ಲಿ ಸಂಭವಿಸಬಹುದು. ಆದರೆ ಸರ್ಕಾರ ಈ ಬಗ್ಗೆ ಕಠಿಣ ನಿಯಮಗಳು ತೆಗೆದುಕೊಳ್ಳುತ್ತಿಲ್ಲ ಎನ್ನುತ್ತಿದ್ದಾರೆ ತಜ್ಞರು.


 • ಶೇರ್‌ಇಟ್ ಈಗ ಕಂಟೆಂಟ್ ಆಪ್!

  ಮೊದಲು ಕೇವಲ ಅಪ್ಲಿಕೇಶನ್‌ ಅಥವಾ ಫೈಲ್‌ ಹಂಚಿ ಕೊಳ್ಳುವ ಅಪ್ಲಿಕೇಶನ್‌ ಆಗಿ ಜನಪ್ರಿಯತೆ ಪಡೆದ ಶೇರ್‌ಇಟ್ ಈಗ ಕಂಟೆಂಟ್ ವಹಿವಾಟಿಗೆ ಇಳಿದಿದೆ. ಸುಮಾರು 300 ಜನರ ತಂಡ ಚೀನಾ, ಬೆಂಗಳೂರು ಹಾಗೂ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದ ಪ್ರಾಂತೀಯ ಭಾಷೆಗಳಲ್ಲೇ ಕಂಟೆಂಟ್ ನೀಡುವ ಮೂಲಕ ಇದು ಹೆಚ್ಚು ಭಾರತೀಯರನ್ನು ಸೆಳೆಯುತ್ತಿದೆ.


 • ನ್ಯೂಸ್‌ಡಾಗ್‌ ಎಂಬ ಸುದ್ದಿನಾಯಿ!

  2016ರಲ್ಲಷ್ಟೇ ಭಾರತಕ್ಕೆ ಕಾಲಿಟ್ಟಿರುವ ನ್ಯೂಸ್‌ಡಾಗ್‌ ಕಂಟೆಂಟ್ ಆಪ್ ಆಗಿ ಗಮನಸೆಳೆಯುತ್ತಿದೆ. ಆರಂಭದಲ್ಲಿ ಇಂಗ್ಲಿಷ್‌ನಲ್ಲೇ ಕಂಟೆಂಟ್ ಪ್ರಕಟಿಸುತ್ತಿದ್ದ ಈ ನ್ಯೂಸ್‌ಡಾಗ್‌ ಈಗ ಎಲ್ಲ ಭಾಷೆಯಲ್ಲೂ ತನ್ನ ಆಪ್ ಹೊಂದಿದೆ.ಪ್ರಮುಖ ಭಾಷೆಗಳಲ್ಲಿ ಕಂಟೆಂಟ್ ನೀಡುತ್ತಿರುವ ಆಪ್ ವೀಡಿಯೋಗಳನ್ನು ಹೊಂದಿರುವ ಅಪ್ಲಿಕೇಶನ್‌ ಅನ್ನು ಸಹ ಅಭಿವೃದ್ಧಿಪಡಿಸುತ್ತಿದೆ.


 • ಹೆಲೋ ಮತ್ತು ಬೈಟ್‌ಡ್ಯಾನ್ಸ್

  ಸಾಮಾಜಿಕ ಜಾಲತಾಣಿಗರ ನೆಚ್ಚಿನ ಆಪ್‌ ಆಗಿ ಕರೆಸಿಕೊಳ್ಳುತ್ತಿರುವ ಹೆಲೋ ಆಪ್‌ನ ಬಹುದೊಡ್ಡ ತಂಡವೇ ದೆಹಲಿಯಲ್ಲಿ ಬಂದು ಕುಳಿತಿದೆ. ಹೊಸ ಹೊಸ ಕಂಟೆಂಟ್‌ಗಳನ್ನು ಪರಿಚಯಿಸುವ ಮೂಲಕ ಯುವಜನತೆಯನ್ನು ಹೆಚ್ಚೆಚ್ಚು ಸೆಳೆಯುತ್ತಿದೆ. ಇದೇ ರೀತಿಯಲ್ಲೂ ಬೈಟ್‌ಡಾನ್ಸ್ ಎಂಬ ಆಪ್‌ ಕೂಡ ಕಂಟೆಂಟ್ ಅನ್ನು ನೀಡುವ ಸಲುವಾಗಿ ಒಂದು ದೊಡ್ಡ ತಂಡವನ್ನೇ ಕಟ್ಟಿಕೊಂಡಿದೆ.
ಭಾರತೀಯರಿಗೆ ಚೀನಾದ ಉತ್ಪನ್ನಗಳು ಎಂಬುದು ಎರಡನೇ ದರ್ಜೆ ಉತ್ಪನ್ನ ಎಂಬ ಭಾವ ಈಗಾಗಲೇ ಇದೆಯಾದರೂ, ಜನರಿಗೆ ಆ ಉತ್ಪನ್ನ ಚೀನಾ ಮೂಲದ್ದು ಎಂಬುದಕ್ಕಿಂತ ಅವರ ಕುತೂಹಲ ತಣಿಸುವುದೇ ಪ್ರಮುಖ ಅಂಶವಾಗಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಚೀನಾ ಕಂಪೆನಿಗಳು ಹೆಚ್ಚು ಭಾರತೀಯರನ್ನು ಸುಲಭವಾಗಿ ಸೆಳೆಯುವಲ್ಲಿ ಯಶಸ್ವಿಯಾಗಿವೆ.

ವಿಶ್ವದ ಜನಪ್ರಿಯ ಕಂಪೆನಿಗಳ ವೈಫಲ್ಯವನ್ನು ಬಳಸಿಕೊಳ್ಳುತ್ತಿರುವ ಚೀನಾದ ಕೆಲವು ಕಂಪನಿಗಳು ದೇಶದಲ್ಲಿ ನ್ಯೂಸ್, ವಿಡಿಯೋ, ಮೆಸೇಂಜಿಗ್‌ನಂಹ ಹಲವು ಕ್ಷೇತ್ರಗಳಲ್ಲಿ ಈಗ ಹೆಚ್ಚು ಸದ್ದು ಮಾಡುತ್ತಿವೆ. ಭಾರತೀಯರು ಈಗ ಚೀನಾ ಕಂಪೆನಿಯ ಮೊಬೈಲ್‌ಗಳು ಮಾತ್ರವಲ್ಲ, ಚೀನಾ ಕಂಪೆನಿಗಳು ಅಭಿವೃದ್ದಿಪಡಿಸಿರುವ ಅಪ್ಲಿಕೇಶನ್‌ಗಳ ದಾಸರೂ ಕೂಡ ಆಗಿದ್ದಾರೆ.

ನ್ಯೂಸ್‌ಡಾಗ್‌, ಶೇರ್ಇಟ್, ಹೆಲೋ, ಟಿಕ್‌ಟಾಕ್‌ನಂತಹ ಆಪ್‌ಗಳು ಈಗ 100 ಮಿಲಿಯನ್‌ಗಿಂತ ಹೆಚ್ಚು ಭಾರತಿಯರನ್ನು ಬುಟ್ಟಿಗೆ ಹಾಕಿಕೊಳ್ಳಲು ಹೆಜ್ಜೆ ಇಡುತ್ತಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ಭಾರತದಲ್ಲಿ ಸದ್ದು ಮಾಡುತ್ತಿರುವ ಚೀನಾ ಮೂಲದ ಕೆಲವು ಆಪ್‌ಗಳ ಬಗ್ಗೆ ಮತ್ತು ಆ ಆಪ್‌ಗಳ ಕಾರ್ಯನಿರ್ವಹಣೆ ಬಗ್ಗೆ ನಿಮಗೆ ತಿಳಿಸುವ ಕೆಲಸವನ್ನು ನಾವು ಮಾಡುತ್ತೇವೆ.

   
 
ಹೆಲ್ತ್